President ಶಾಸಕಾಂಗೀಯ ಕಾರ್ಯಗಳು ವಿಟೋ ಅಧಿಕಾರಿಗಳು ತುರ್ತು ಪರಿಸ್ಥಿತಿ Kannada medium mains
ರಾಷ್ಟ್ರಪತಿ
1) ಶಾಸಕಾಂಗೀಯ ಕಾರ್ಯಗಳು
ವಿಧಿ-80 ಇದರ ಅನ್ವಯ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ 12 ಜನರನ್ನು ರಾಜ್ಯ ಸಭೆಗೆ ನಾಮಕರಣ ಮಾಡುತ್ತಾರೆ.
ವಿಧಿ-85ಇದರ ಅನ್ವಯ ಸಂಸತ್ತಿನ ಅಧಿವೇಶನ ಕರೆಯುವ, ಅಧಿವೇಶನ ಮುಂದೂಡುವ, ಅಧಿವೇಶನ ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ.
ವಿಧಿ-86 ಇದರ ಅನ್ವಯ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವ ಅಧಿಕಾರ ಹೊಂದಿದ್ದಾರೆ
ವಿಧಿ-108 ಇದರ ಅನ್ವಯ ಜಂಟಿ ಅಧಿವೇಶನ ಕರೆಯುತ್ತಾರೆ.
ವಿಧಿ-123 ಇದರ ಅನ್ವಯ ಅಧಿವೇಶನ ಇಲ್ಲದಿದ್ದಾಗ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. (6 ವಾರಗಳ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕ್ಕದ್ದು)
2. ವಿಟೋ ಅಧಿಕಾರಿಗಳು
1) ಪಾಕೇಟ್ ವಿಟೋ : ಒಂದು ಮಸೂದೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದು.
2) ಸೂಪರ್ ವಿಟೋ ::ಒಂದು ಮಸೂದೆಯನ್ನು ಮರು ಪರಿಶೀಲನೆಗೆ ಕಳುಹಿಸುವುದು.
3) ನಿರಂಕುಶ ವಿಟೋ : ಒಂದು ಮಸೂದೆಗೆ ಕಡ್ಡಾಯವಾಗಿ ಒಪ್ಪಿಗೆ ನೀಡುವುದು
ತುರ್ತು ಪರಿಸ್ಥಿತಿ
1) ರಾಷ್ಟ್ರೀಯ ತುರ್ತು ಪರಿಸ್ಥಿತಿ
ಪ್ರಧಾನ ಮಂತ್ರಿ ಮತ್ತು ಕೇಂದ್ರ ಮಂತ್ರಿ ಮಂಡಲವು ಲಿಖಿತ ರೂಪದಲ್ಲಿ ಶಿಫಾರಸ್ಸು ಮಾಡಿದಾಗ ರಾಷ್ಟ್ರಪತಿಗಳು ಸಂವಿಧಾನದ 352ನೇ ವಿಧಿಯನ್ವಯ ಈ ತುರ್ತು ಪರಿಸ್ಥಿತಿಯನ್ನು ಹೊರಡಿಸುತ್ತಾರೆ. ಈ ತುರ್ತು ಪರಿಸ್ಥಿತಿ ಘೋಷಣೆಯಾದ ನಂತರ ಅಧಿವೇಶನ ಸೇರಿದ 30 ದಿನಗಳ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕ್ಕದ್ದು ನಂತರ ಪ್ರತಿ 6 ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯುವುದರ ಮೂಲಕ ಅನಿರ್ಧಿಷ್ಟ ಅವಧಿಯವರೆಗೂ ಜಾರಿಯಲ್ಲಿರುತ್ತದೆ.
1/10ರಷ್ಟು ಸದಸ್ಯರ ಬಹುಮತದ ಮೂಲಕ ಲಿಖಿತ ರೂಪದ ಪತ್ರವನ್ನು ಅಧಿವೇಶನ ಇದ್ದರೆ ಸಭಾಪತಿಯವರಿಗೆ, ಇಲ್ಲದಿದ್ದರೆ ರಾಷ್ಟ್ರಪತಿಗಳಿಗೆ ಸಲ್ಲಿಸಿ ರದ್ದು ಮಾಡುವಂತೆ ಕೇಳಿದಾಗ 14 ದಿನಗಳ ಒಳಗಾಗಿ ಇದನ್ನು ರದ್ದು ಮಾಡಲಾಗುತ್ತದೆ.
2) ರಾಜ್ಯ ತುರ್ತು ಪರಿಸ್ಥಿತಿ
ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಾಗ, ಸಂವಿಧಾನಾ ತ್ಮಕವಾಗಿ ಆಡಳಿತ ನಡೆಯದೇ ಇದ್ದಾಗ, ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೇ ಇದ್ದಾಗ ಈ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುವುದು.
ಸಂವಿಧಾನದ 356ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಈ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ಈ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಅಧಿವೇಶನ ಸೇರಿದ 2 ತಿಂಗಳ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕ್ಕದ್ದು. ನಂತರ ಪ್ರತಿ 6 ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯುದರ ಮೂಲಕ ಗರಿಷ್ಠ 3 ವರ್ಷದವರೆಗೂ ಜಾರಿಯಲ್ಲಿರುತ್ತದೆ.
3) ಹಣಕಾಸು ತುರ್ತು ಪರಿಸ್ಥಿತಿ
ದೇಶದಲ್ಲಿ ಹಣಕಾಸಿನ ತೊಂದರೆಯುಂಟಾದಾಗ ಸಂವಿಧಾನ 360ನೇ ವಿಧಿಯನ್ವಯ ರಾಷ್ಟ್ರಪತಿಗಳು ಈ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ನಂತರ ಅಧಿವೇಶನ ಸೇರಿದ 2 ತಿಂಗಳ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕ್ಕದ್ದು. ನಂತರ ಪ್ರತಿ 6 ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯುದರ ಮೂಲಕ ಅನಿರ್ಧಿಷ್ಟ ಅವಧಿಯವರೆಗೂ ಜಾರಿಯಲ್ಲಿರುತ್ತದೆ.