President of India Election ಚುನಾವಣೆ ಚುನಾವಣಾ ರೀತಿ Kannada medium mains

ರಾಷ್ಟ್ರಪತಿ


ವಿಧಿ-52 ರಾಷ್ಟ್ರಪತಿಯ ಸ್ಥಾನ

ಸಂವಿಧಾನದಲ್ಲಿ ಭಾರತ ದೇಶಕ್ಕೆ ಒಂದು ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಹುದ್ದೆಯನ್ನು ಬ್ರಿಟನ್ ದೊರೆಯ ಹುದ್ದೆಗೆ ಹೋಲಿಸಲಾಗಿದೆ.


ವಿಧಿ-53 ಕಾರ್ಯಾಂಗೀಯ ಅಧಿಕಾರ

ರಾಷ್ಟ್ರಪತಿಯವರ ಕಾರ್ಯಾಂಗೀಯ ಅಧಿಕಾರದ ಕುರಿತು ಈ ವಿಧಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.


ವಿಧಿ-54 ಚುನಾವಣೆ

ಇವರ ಚುನಾವಣೆಯು ಪರೋಕ್ಷ ಮತದಾನದ ಮೂಲಕ ನಡೆಯುತ್ತದೆ.

ಇವರ ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುತ್ತದೆ.

ಯಾವುದೇ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಸಹ ಇವರ ಚುನಾವಣೆ ನಡೆಯುತ್ತದೆ.

ಇವರ ಚುನಾವಣೆಯಲ್ಲಿ ಮತದಾನ ಮಾಡುವವರೆಂದರೆ


1ಲೋಕಸಭೆಯ ಚುನಾಯಿತ ಸದಸ್ಯರು

2.ರಾಜ್ಯಸಭೆಯ ಚುನಾಯಿತ ಸದಸ್ಯರು

3.ಎಲ್ಲಾ ರಾಜ್ಯಗಳ ವಿಧಾನಸಭೆಯ

ಚುನಾಯಿತ ಸದಸ್ಯರು

4.ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯ ಚುನಾಯಿತ ಸದಸ್ಯರು


ವಿಧಿ-55 : ಚುನಾವಣಾ ರೀತಿ

ಈ ವಿಧಿಯಲ್ಲಿ ರಾಷ್ಟ್ರಪತಿಯವರ ಚುನಾವಣಾ ರೀತಿ ಮತ್ತು ಮತದಾನದ ಮೌಲ್ಯದ ಕುರಿತು ಮಾಹಿತಿ ನೀಡಲಾಗುತ್ತದೆ.

ವಿಧಿ-56 ರಾಷ್ಟ್ರಪತಿಯವರ ಅಧಿಕಾರ ಅವಧಿ 5 ವರ್ಷ


ವಿಧಿ-57 ಮರು ಚುನಾವಣೆಯ ಅರ್ಹತೆ

 ರಾಷ್ಟ್ರಪತಿಯವರು ಎಷ್ಟು ಬಾರಿಯಾದರು ಚುನಾವಣೆ ಯಲ್ಲಿ ಸ್ಪರ್ಧಿಸಬಹುದು. ಜೊತೆಗೆ ಎಷ್ಟು ಬಾರಿಯಾದರೂ ಆಯ್ಕೆಯಾಗಬಹುದು. 


ವಿಧಿ-58 ಅರ್ಹತೆಗಳು

1.ಭಾರತದ ಪ್ರಜೆಯಾಗಿರಬೇಕು.

2. ಕನಿಷ್ಠ 35 ವಯಸ್ಸಾಗಿರಬೇಕು.

3.ಲೋಕಸಭೆಯ ಸದಸ್ಯನಾಗಲು ಹೊಂದಿರುವ ಅರ್ಹತೆ ಹೊಂದಿರತಕ್ಕದ್ದು ಆದರೆ ಲೋಕಸಭೆಯ ಸದಸ್ಯನಾಗುವಂತಿಲ್ಲ.


ವಿಧಿ-59 ಷರತ್ತು ಮತ್ತು ಸವಲತ್ತುಗಳು

1.ಇವರು ಸಂಸತ್ತಿನ ಸದಸ್ಯರಾಗಿರಬಾರದು.

2.ಇವರ ವೇತನವು ಸಂಚಿತ ನಿಧಿಯಿಂದ ನೀಡಲಾಗುತ್ತದೆ.


ವಿಧಿ-60 ಪ್ರಮಾಣ ವಚನ

ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ.

ವಿಧಿ-61 ಮಹಾಭಿಯೋಗ

ರಾಷ್ಟ್ರಪತಿಯವರು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಲು ವಿಫಲವಾದರೆ ಅವರ ಮೇಲೆ ದೋಷಾ ರೋಪ ಪಟ್ಟಿ ಸಲ್ಲಿಸಲು ಸದನದ 1/4 ರಷ್ಟು ಜನ ಸದಸ್ಯರ ಸಹಿ ಇರಬೇಕು.

 ನಂತರ 14 ದಿನಗಳು ಕಳೆದ ಮೇಲೆ ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಸಾಬೀತುಪಡಿಸುವುದರ ಮೂಲಕ ರಾಷ್ಟ್ರಪತಿಯವರನ್ನು ಹುದ್ದೆಯಿಂದ ಕೆಳಗಿಳಿಸಬಹುದು.


ವಿಧಿ-62 ಹುದ್ದೆ ಖಾಲಿಯಾದ ನಂತರ ಚುನಾವಣೆ ನಡೆಸತಕ್ಕದ್ದು

ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಅವರ ಸ್ಥಾನವನ್ನು ಉಪರಾಷ್ಟ್ರಪತಿಗಳು ತುಂಬುತ್ತಾರೆ.

ಅವರೂ ಇಲ್ಲದ ವೇಳೆಯಲ್ಲಿ ರಾಷ್ಟ್ರಪತಿಯವರ ಕಾರ್ಯವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ನಿರ್ವಹಿಸುತ್ತಾರೆ.

ರಾಷ್ಟ್ರಪತಿ ಹುದ್ದೆ ಖಾಲಿಯಾದ 6 ತಿಂಗಳ ಒಳಗಾಗಿ ಚುನಾವಣೆ ನಡೆಸತಕ್ಕದ್ದು.

ರಾಜೀನಾಮೆ

ರಾಷ್ಟ್ರಪತಿಯವರು ತಮ್ಮ ರಾಜೀನಾಮೆಯನ್ನು ಉಪರಾಷ್ಟ್ರಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆಯನ್ನು ಖಾಲಿ ಮಾಡುತ್ತಾರೆ.



Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions