97 A 2 ಭಾರತದ ಸಂವಿಧಾನ ಮುಖ್ಯ ಪರಿಕ್ಷೆ 24 Feb
ಪ್ರಶ್ನೆ 1. ಸಂಕ್ಷಿಪ್ತವಾಗಿ ಮೂಲಭೂತ ಹಕ್ಕುಗಳು ಹಕ್ಕು ಮತ್ತು ನಿದೇಶ೯ನ ತತ್ವಗಳು ಬೆಳೆದು ಬಂದ ವಿವಿಧ ಹಂತಗಳನ್ನು ಕುರಿತು ತಿಳಿಸಿರಿ?
ಭಾರತದ ಸಂವಿಧಾನವನ್ನು ರಚಿಸುವ ಕಾಲದಿಂದಲೂ ಭಾಗ ಮೂರು ಮೂಲಭೂತ ಹಕ್ಕುಗಳನ್ನು ಒಳಗೊಂಡಿದ್ದು.ಈ ಹಕ್ಕುಗಳನ್ನು ರಾಜ್ಯದ ವಿರುದ್ದ ಕೂಡ ನ್ಯಾಯ ಪಡೆಯಲು ಶಾಸನ ಸಭೆಗಳಿಂದ ರೂಪಿಸಲಾದ ಶಾಸನಗಳು ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವಂತೆ ಇದ್ದಾಗ ಮಾತ್ರ ಪ್ರಯೋಗಿಸಬಹುದು. ಹೀಗೆಂದಾಗ ಸಂವಿಧಾನದ 13 ನೆಯವಿಧಿಗೆ ವ್ಯತಿರಿಕ್ತವಾಗಿದ್ದಲ್ಲಿ ಅಂತಹ ಶಾಸನಗಳು ಸಂವಿಧಾನ ಶಾಸನ ಬಾಹಿರ ಎಂದೇ ಸಾರಬಹುದು.
ಆದರೆ ವಿಧಿ 37 ರಲ್ಲಿ ಸ್ಪಷ್ಟವಾಗಿ ತಿಳಿಸುವುದೇನೆಂದರೆ ರಾಜ್ಯ ನಿದೇ೯ಶನ ತತ್ವಗಳನ್ನು ರಾಷ್ಟ್ರದ ಆಡಳಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅವುಗಳನ್ನು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನಿಸುವಂತಿಲ್ಲ.
ಆದರೆ ಸರಕಾರವು ಭಾಗ ನಾಲ್ಕರಲ್ಲಿ ಹೇಳಲಾದ ನಿರ್ದೇಶನ ತತ್ವಗಳನ್ನು ಜಾರಿಗೊಳಿಸುವಲ್ಲಿ ಮೂಲ ಭೂತಹಕ್ಕುಗಳು ಹಲವು ಅಡಚಣೆಗಳಿಗೆ ಆಸ್ಪದ ನೀಡಬಲ್ಲವು.
ಈ ನಿಟ್ಟಿನಲ್ಲಿ ಸಕಾ೯ರವು ಮೂಲಭೂತ ಹಕ್ಕುಗಳ ತಿದ್ದುಪಡಿಗೆ 24 ಹಾಗೂ 42ನೇ ತಿದ್ದುಪಡಿಗಳ ಮುಖಾಂತರ ಪ್ರಯತ್ನ ಮಾಡಿದ ಸಮಯದಲ್ಲಿ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವ ಅಧಿಕಾರ ಸರಕಾರಕ್ಕೆ ಇಲ್ಲಎಂದೇ ಸಾರಲಾಯಿತು.
ವಿಧಿ 39 (ಬ) ಮತ್ತು (ಸಿ) ಗಳ ಅಡಿಯಲ್ಲಿ ಬರುವ ನಿದೇ೯ಶನ ತತ್ವಗಳಿಗೆ ಸಂಸತ್ತು ವಿಧಿ 14 ಮತ್ತು 19 ರಲ್ಲಿ ಅಡಕವಾದ ಮೂಲಭೂತ ಹಕ್ಕುಗಳಿಗಿಂತ ಹೆಚ್ಚಿನ ಸ್ಥಾನ ನೀಡಿತು. ಅದನ್ನು ನ್ಯಾಯಲಯವು ಎತ್ತಿ ಹಿಡಿಯಿತು. ಆದರೆ ಎಲ್ಲಾಮೂಲಭೂತ ಹಕ್ಕುಗಳಿಗಿಂತ ನಿದೇ೯ಶನದ ತತ್ವಗಳಿಗೆ ನೀಡಿದ ಅಧಿಕ ಮಹತ್ವದ 42 ನೆಯ ತಿದ್ದುಪಡಿಯ ವಿಧಿಗಳನ್ನು ಅನೂಜಿ೯ತಗೂಳಿಸಿತು.
1980ರ ಮಿನವ೯ ಮಿಲ್ ಪ್ರಕರಣದಲ್ಲಿ ಸವೋ೯ಚ್ಚ ನ್ಯಾಯಾಲಯವು ಮೂಲಭೂತ ಹಕ್ಕುಗಳ ಹಾಗೂ ನಿದೇ೯ಶನದ ತತ್ವಗಳ ಮದ್ಯೆ ಸಾಮರಸ್ಯ ಭಾವನೆಗಳನ್ನು ಮುಂದುವರಿಸಿಕೊಂಡು ಹೋಗುವಂತಹ ವಾತಾವರಣ ಇರಬೇಕೆಂದುಹೇಳಿತು. ಒಟ್ಟಿನಲ್ಲಿ ಮೂಲಭೂತ ಹಕ್ಕುಗಳು ಮತ್ತು ನಿದೇ೯ಶನ ತತ್ವಗಳ ನಡುವೆ ಸಂಘಷ೯ ಉಂಟು ಮಾಡುವಂತಹ ಕಾನೂನುಗಳನ್ನು ಹೋಗಲಾಡಿಸುವ ಪ್ರಯತ್ನಮಾಡಬೇಕು.
ಪ್ರಶ್ನೆ.2 ಭಾರತದ ಸಂವಿಧಾನದ 73 ನೆಯ ತಿದ್ದುಪಡಿಯ ಪ್ರಾಮುಖ್ಯತೆಯನ್ನು ವಿವರಿಸಿ?
1992 ರ 73ನೆಯ ತಿದ್ದುಪಡಿ ಕಾಯಿದೆಯು ಭಾರತದ ಸಂವಿಧಾನದಲ್ಲಿ 9ನೇ ಭಾಗವು 16 ಪರಿವಿದಿಗಳನ್ನು ಒಳಗೊಂಡಿದೆ. ಅವು ವಿಧಿ 243 ಯಿಂದ 243 (ಒ) ವರೆಗೆ ಇವೆ. ಅನುಸೂಚಿ -11 ನ್ನು ನೂತನವಾಗಿ ಸೇರಿಸಿದೆ. ಈ ಭಾಗವನ್ನು ಪಂಚಾಯತ್‌ಎಂದು ಹೆಸರಿಸಿ ಸಂವಿಧಾನಿಕವಾಗಿ ಹಲವಾರು ವಿಧಿಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಹಾಗೂ ಕೆಳಸ್ತರದ ಮಟ್ಟದಲ್ಲಿ ಉತ್ತಮ ಆಡಳಿತವನ್ನು ನೀಡಲು ಅವಕಾಶವನ್ನು ರೂಪಿಸಿದೆ. ಇದು ಮೂರು ರೀತಿಯ ಸ್ತರಗಳನ್ನು ಹೊಂದಿದೆ. ಗ್ರಾಮೀಣ ಮಟ್ಟದಲ್ಲಿ ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾಯ೯ನಿವ೯ಹಿಸುತ್ತದೆ. ಸಂವಿಧಾನದ ವಿಧಿ 40ರ ಅಡಿಯಲ್ಲಿನ ಮಾಗ೯ದಶ೯ನಗಳಂತೆ ಈ ತಿದ್ದುಪಡಿಯನ್ನು ತರಲಾಗಿದೆ. ಇದರ ಅನ್ವಯ ಪ್ರಮುಖ ಉದ್ದೇಶಗಳೆಂದರೆ ಸ್ಥಳೀಯ ಸಕಾ೯ರಗಳ ರಚನೆ,ಕೌಶಲ್ಯ ರಚನೆ, ರಾಜಕೀಯ ಶಿಕ್ಷಣ ಮತು ಸ್ವಯಂ ಆಡಳಿತಗಳಾಗಿವೆ. ಇದರಿಂದಾಗಿ ಗ್ರಾಮೀಣ ಮಟ್ಟದಲ್ಲಿ ಆಥಿ೯ಕ ಅಭಿವರದ್ದಿಗೆ ಯೋಜನೆಗಳನ್ನು ನಿಯೋಜಿಸಲು ಸಾಧ್ಯವಾಗಿದೆ. ಸಂವಿಧಾನಾತ್ಮಕವಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸ್ವಯಂ ಆಡಳಿತ ನಡೆಸಲುಗ್ರಾಮೀಣ ಮಟ್ಟದಲ್ಲಿ ಸಾಧ್ಯವಾಗಿದೆ. ಇದರ ಅನ್ವಯ ಸ್ಥಳೀಯ ಮಟ್ಟದಲ್ಲಿ ಸ್ಥಾಯೀ ಸಮಿತಿಗಳನ್ನು ರಚಿಸಿ ಅದನ್ನು ಕಾಯೊ೯ನ್ಮುಖ ಮಾಡುವಂತೆ ಮಾಡಿ ಉತ್ತಮ ಹಾಗೂ ಸ್ಥಿರ ವ್ಯವಸ್ಥೆಯನ್ನು ರೂಪಿಸಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹೆಳೆಯರ ಅಭಿವೃದ್ದಿಯನ್ನು ಇದು ಜಾರಿಗೆ ತರಲು ಅವಕಾಶ ನೀಡಿದೆ. ಪಂಚಾಯತ್ ರಾಜ್ ವ್ಯವಸ್ಥೆಯಡಿಯಲ್ಲಿ ಗ್ರಾಮ ಸಭಾಗಳ ಬುನಾದಿಯನ್ನು ಹಾಕಿ ಗ್ರಾಮೀಣ ಅಭಿವೃದ್ದಿಗೆ ನಾಂದಿಯಾಡಿದೆ.