ಪ್ರಶ್ನೆ1.. ಭಾರತದ ಸ್ವಾತಂತ್ರಯ ಸಮರದಲ್ಲಿ ಮಂದಗಾಮಿತಳು ಏಕೆ ವಿಫಲರಾದರು ಹಾಗೂ ಬ್ರಿಟಿಷರಿಂದ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಸಫಲತೆ ಹೊಂದಲು ಕಾರಣಗಳೇನು?
ಮಂದಗಾಮಿಗಳು ಜನಮನ್ನಣೆಯನ್ನು ಕಳೆದು ಕೊಳ್ಲಲು ಕೆಳಗಿನ ಅಂಶಗಳು ನೆರವಾದವು.
ವಿಧಾನ : ಸಂವಿದಾನತ್ಮಕವಾದ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಸಮಸ್ಯೆಗಳನ್ನು ಬೇಡಿಕಡಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿದರೂ, ಫಲಪ್ರದವಾಗಲಿಲ್ಲ. ಜನಸಮೂಹವುಮಂದಗಾಮಿಗಳ ಈ ರೀತಿಯ ತತ್ವಗಳನ್ನ "ಭಿಕ್ಷೆ ಬೇಡುವ ಹಾಗೂ ಭಾರತಮಾತೆಗೆ ಕಳಂಕ ತರುವ ವಿಪಯಾ೯ಸಶೈಲಿ " ಎಂದು ನೊಂದಿಸಿದರು.
ಜನಸಮೂಹವು ಭಾಗವಹಿಸದೇ ಇರುವುದರಿಂದ ಮಂದಗಾಮಿಗಳು ಬೃಹತ್ ಜನ ಸಮೂಹದ ಚಳುವಳಿಗೆ ಇನ್ನು ಕಾಲ ಒದಗಿ ಬಂದಿಲ್ಲ ಎಂದು ನಂಬಿದ್ದರು. ಇದರ ಚಳುವಳಿ ಕೇವಲ ವಿದ್ಯಾವಂತರಿಗೆ ಸೀಮಿತವಾಗಿತ್ತು.ಸಂವಿಧಾನಬದ್ದವಾದ ಹಾಗೂ ಕಾನೂನು ಬದ್ದವಾದ ಚಳುವಳಿಗೆ ಜನರು ಸಿದ್ದರಾಗಿರಲಿಲ್ಲ.
ಉಗ್ರಗಾಮಿಗಳ ಉದಯ : ಪ್ರತ್ಯಕ್ಷವಾಗಿ ವಿರೋಧಿಸುವ ಭಾವನೆಯನ್ನು ಸ್ವಾವಲಂಬಿಕೆಯನ್ನು ಹಾಗೂ ರಚನಾತ್ಮಕ ಕಾಯ೯ಕ್ರಮಗಳ ಮೂಲಕ ಜನರನ್ನು ಚಳುವಳಿಯಲ್ಲಿ ಪಾಲ್ಗೋಳ್ಲಲು ಪ್ರೋತ್ಸಾಹಿಸಿದರು ಇವರ ಪ್ರಭಾವವು ಮಂದಗಾಮಿಗಳನ್ನು ನಿನಾ೯ಮಗೊಳಿಸಿತು.
ಸ್ವಾವಲಂಬಿ ಗ್ರಾಮಗಳು ನಿಧಾನವಾಗಿ ಕಾಮಿ೯ಕರ ಸಮುದಾಗಳಾಗಿ ಮಾಪಾ೯ಡಾದವು ಮತ್ತು ಸಣ್ಣ ಕೈಗಾರಿಕೆಗಳು ತಮ್ಮ ಅಸ್ತತ್ವವನ್ನೇ ಕಳೆದುಕೊಂಡವು.
ಭಾರತದ ಆಥಿ೯ಕತೆಯು ಮುಕ್ತ ವ್ಯಾಪಾರ ನೀತಿಯಿಂದಾಗಿ ಶೋಷಣೆಗೆ ಒಳಪಟ್ಟಿತು ರೈಲ್ವೇ ಸಾರಿಗೆಯ ಅಭಿವೃದ್ದಿಐೊದಾಗಿ ವ್ಯಾಪಾರದ ಸರಕು ಭಾರತದ ಮೂಲೆ ಮೂಲೆಗಲನ್ನು ತಲುಪಲು
ಸಾಧ್ಯವಾಯಿತು. ಇವೆಲ್ಲದರ ಪರಿಣಾಮವಾಗಿ ವಿದೇಶಿ ಆಮದು ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದವು.
ಬ್ರಿಟಿಷರ ಧೋರಣೆಗಳಲ್ಲಿ ಇರುವಂತಹ ನಂಬಿಕೆ, ಜನ ಸಮೂಹಗಳ ಅಸಹಕಾರ ಹಾಗೂ ಅಲ್ಪ ಸಂಖ್ಯಾತರರುಗಳು ನಿರೀಕ್ಷಿತ ಮಟ್ಟದಲ್ಲಿ ಮಂದಗಾಮಿಗಳಿಗೆ ಫಲವನ್ನು ನೀಡಲು ಆಗಲಿಲ್ಲ.ಬ್ರಿಟಿಷರ ಉದ್ದೇಶಗಲನ್ನು ಹಾಗು ಸಕಾ೯ರದ ಆಥಿ೯ಕ ಶೊಷಣೆಯ ( economic exploitaion) ಸಿದ್ದಾಂತಗಣನ್ನು ಮನವರಿಕೆಮಾಡಿಕೋಳ್ಲುಲು ವಿಫಲರಾದರು.
ಪ್ರಶ್ನೆ 2 ಹತೋಂಭತ್ತನೆಯ ಶತಮಾನದ ಕಾಲದಲ್ಲಿ ಮುಕ್ತ ವ್ಯಾಪಾರ ನೀತಿಯು ಜವಳಿ ಮತ್ತು ಇತರ ಉದ್ಯಮಗಳ ಮೇಲೆ ಯಾವ ರೀತಿಯ ದುಷ್ಪರಿಣಾಮವನ್ನು ಬೀರಿತು?
ಬಂಡವಾಳಶಾಹಿ ವ್ಯವಸ್ಥೆಯು ಜಾಗತಿಕವಾಗಿ ಅದರಲಲ್ಲೂ ಇಂಗ್ಲೇಂಡಿನಲ್ಲಿ ಬೃಹತ್ ಮಟ್ಟದ ಉತ್ಪಾದನಗೆ ದಾರಿ ಮಾಡಿಕೊಟ್ಟಿತು. ಇದರಿಂದಾಗಿ ಹೀಗೆ ಉತ್ಪಾದಿಸಿದ
ವಸ್ತುಗಳನ್ನು ಮಾರಾಟ ಮಾಡಲು ದೊಡ್ಡ ಮಾರುಕಟ್ಟಗಳ ಅವಶ್ಯಕತೆ ಉಂಟಾಯಿತು. ಇದು ಹೆಚ್ಚಿನ ಕಚ್ಚಾ ಪದಾಥ೯ಗಳನ್ನು ಕೊಳ್ಲಲು ಅಗತ್ಯವು ಆಗಿತ್ತು.
ತಮ್ಮ ಮಾರುಕಟ್ಟೆ ಮತ್ತು ಕಚ್ಚಾ ಪದಾಥ೯ಗಳ ಅವಶ್ಯಕತರಯನ್ನು ಪೂರೈಸಿಕೊಳ್ಳಲು ಬಂಡವಾಳಶಾಹಿಗಳು ಸಂಸತ್ ಸದದ್ಯರನ್ನು ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರದ ಏಕಸ್ವಾಮ್ಯವನ್ನು ತೊಡೆದು ಹಾಕಿ ಮುಕ್ತ ವ್ಯಾಪಾರ ನೀತಿಯನ್ನು ಭಾರತದಲ್ಲಿ ಜಾರಿಗೆ ತರಲು ಒತ್ತಡ ತಂದರು.
ಇದರ ಪರಿಣಾಮವಾಗಿ 1813 ರ ಸನ್ನದು ಕಾಯಿದೆಯು ಜಾರಿಗೆ ಬಂದಿತು. ನಂತರ ಸಿದ್ದಪಡಿಸಿದ ಖಾದಿ ಉಡುಪುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದವು. ಇದರ ವಿರುದ್ದವಾಗಿ ಸ್ಪಧಿ೯ಸುವುದಲ್ಲಿ ಭಾರತದ ಗ್ರಾಮೀಣ ನೇಕಾರರು ಹಾಗೂ ಸಣ್ಣಕೈಗಾರಿಕೆಗಳು ವಿಫಲವಾದವು.
ಒಂದು ಕಾಲದಲ್ಲಿ ಅತೀ ದೊಡ್ಡ ರಫ್ತು ದೇಶವಾಗಿದ್ದ ಭಾರತವು ಈಗ ಸಂಪೂಣ೯ವಾಗಿ ಹತ್ತಿ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲಾರಂಭಿಸಿತು.
19ನೇ ಶತಮಾನದ ಉತ್ತರಾಧ೯ದಲ್ಲಿ ಮುಕ್ತ ವ್ಯಾಪಾರ ನೀತಿಯು ಕೆಟ್ಟ ಪರಿಣಾಮವನ್ನು ಬೀರಲಾರಂಭಿಸಿತು.ಸ್ವಾವಲಂಬಿ ಗ್ರಾಮಗಳು ನಿಧಾನವಾಗಿ ಕಾಮಿ೯ಕರ ಸಮುದಾಯಗಳಾಗಿ ಮಾಪಾ೯ಡಾದವು ಮತ್ತು ಸಣ್ಣ ಕೈಗಾರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಂಡವು.
ಭಾರತದ ಆಥಿ೯ಕತೆಯು ಮುಕ್ತ ವ್ಯಾಪಾರ ನೀತಿಯಿಂದಾಗಿ ಶೋಷಣೆಗೆ ಒಳಪಟ್ಟಿತು . ರೈಲ್ವೇ ಸಾರಿಗೆಯ ಅಭಿವೃದ್ದಿಯಿಂದಾಗಿ ವ್ಯಾಪಾರದ ಸರಕು ಭಾರತದ ಮೂಲೆ ಮೂಲೆಗಳನ್ನು ತಲುಪಲುಸಾಧ್ಯವಾಯಿತು. ಇವೆಲ್ಲದರ ಪರಿಣಾಮವಾಗಿ ವಿದೇಶಿ ಆಮದು ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದವು.