100 A2 ಇತಿಹಾಸ ಮುಖ್ಯ ಪರೀಕ್ಷೆಯ ಪ್ರಶ್ನೆ 21 Feb
ಪ್ರಶ್ನೆ1. ಗಾಂಧೀಜಿಯವರ ನುಡಿಯನ್ನೆ ಜವಾಹರ್ ಲಾಲ್ ನೆಹರು ನುಡಿಯುತ್ತಿದ್ದರೆ? ಇವರಿಬ್ಬ ನಡುವಿನ ಸಾಮ್ಯತೆ ಮತ್ತು ವೈರತೆಯನ್ನು ವಿವರಿಸಿ.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ (1919)ದ ನಂತರ ಗಾಂಧೀಜಿವರ ಸಮ್ಮುಖದಲ್ಲಿ ಸತ್ಯಾಗ್ರಹಕ್ಕೆ ಒಮ್ಮತವನ್ನು ಸೂಚಿಸಿ, ಸತ್ಯಾಗ್ರಹ ಪ್ರಾಣಾಳಿಕೆಗೆ ಮೊಟ್ಟ ಮೊದಲನೆಯವರಾಗಿ ಸಹಿಮಾಡಿ ಭಾರತೀಯ ರಾಜಕೀಯ ರಂಗಕ್ಕೆ ಜವಾಹಲ್ ಲಾಲ್ ನೆಹರು ಪ್ರವೇಶಿಸಿದರು, ನೆಹರು ಗಾಂಧೀಜಿಯವರನ್ನು ಹೃತ್ಪೂವ೯ಕವಾಗಿ ಗೌರವಿಸುತ್ತಿದ್ದರು. ಗಾಂಧೀ ಮುಖಂಡತ್ವದಲ್ಲಿ ನೆಹರುಗೆ ನಂಬಿಕೆಯಿತ್ತು.
ಇಬ್ಬರು ದೇಶದ ಸ್ವಾತಂತ್ತ್ಯಕ್ಕೆ ಹೊರಾಡಿದವರು. ಜವಾಹಲ್ ಲಾಲ್ ನೆಹರುವರು ಗಾಂಧೀಜಿಯವರ ಗ್ರಾಮಸ್ವರಾಜ್ಯ ಸಿದ್ದಾಂತವನ್ನು ಒಪ್ಪಿ, ರಾಷ್ರೀಯ ಚಳುವಳಿಗೆ ಗ್ರಾಮೀಣ ಜನತೆಯ ಸಕ್ರಿಯ ಪಾಲ್ಗೊಳ್ಲೂವಿಕೆಯನ್ನು ಸಮಥಿ೯ಸಿದ್ದರು.
ಅಸಹಕಾರ ಚಳುವಳಿ, ಕಾಯಿದೆ ಭಂಗ ಚಳುವಳಿ, ವ್ಯಕ್ತಿಗತ ಸತ್ಯಾಗ್ರಹ ಹಾಗೂ ಇತರ ರೀತಿಯ ಗಾಂಧಿಜಿ ತತ್ವಗಳನ್ನು ಒಪ್ಪಿದ್ದರು . ಸ್ವದೇಶಿ ಚಳುವಳಿ, ರಚಾನಾತ್ಮಕ ಕಾಯ೯ಕ್ರಮಗಳನ್ನು ಬೆಂಬಲಿಸಿದ್ದರು.
ಗಾಂಧೀಜಿಯ ಬಹುತೇಕ ತತ್ವಗಳನ್ನು ಒಪ್ಪಿದ್ದರೂ. ಅವರೊಂದಿಗೆ ಮತ ಭಿನ್ನವಾದ ಇತರ ಸಿದ್ದಾಂತಗಳನ್ನು ಅಳವಡಿಸಿಕೊಂಡು ಭಿನ್ನವಾಗಿದ್ದರು. ಗಾಂದೀಜಿಯ ಅಸಹಕಾರ ಚಳುವಳಿ ಹಿಂತೆಗೆದುಕೊಂಡಿದ್ದನ್ನು ನೆಹರು ವಿರೋಧಿಸಿದ್ದರು.
ಗಾಂಧಿಜಿ ಸಿದ್ದಾಂತವನ್ನು ಒಪ್ಪದಿರೂ ಸಹ ಅವರ ಅಳವಡಿಕೆಯ ವಿಧವನ್ನು ಒಪ್ಪಿರಲಿಲ್ಲ. ಗಾಂಧೀಜಿ ಬ್ರಿಟಿಷರನ್ನು ಸಂಪೂಣ೯ ನಂಬಿ ಕಾಯ೯ಚರಣೆ ಮಾಡುತ್ತಿದ್ದುನ್ನು ವಿರೋಧಿಸುತ್ತಿದ್ದರು.ನೆಹರು ಸಮಾಜವಾದದ ಕಡೆಗೆ ವಾಲಿದ್ದರು.
ಭಾರತದ ವಿಭಜನೆತೆ ತಮ್ಮ ಒಮ್ಮತ ಸೂಚಿಸಿ, ಪಾಕಿಸ್ತಾನ ಉದಯದ ವಿಷಯಕ್ಕೆ ಬೆಂಬಲಿಸಿದರು ವೈಜ್ನಾನಿಕ ಅಭಿವೃಧ್ಧಿಯು ಅತ್ಯವಶ್ಯಕವೆಂದು ಒಪ್ಪದ ಗಾಂಧಿಜಿಯ ಶೈಕ್ಷಣಿಕ ನಿಲುವನನ್ನು ಒಪ್ಪಿದರೂ ಸಹ, ಭಿನ್ನತೆಯನ್ನು ಹೊಂದಿದ್ದರು.
ಗಾಂಧೀಜಿಯವರಂತೆ ಧಮ೯ವನ್ನು ರಾಜಕೀಯದಲ್ಲಿ ಬಳಸಲು ಒಪ್ಪದೆ ನೆಹರು ಧಮ೯ವನ್ನು ರಾಜಕೀಯದಿಂದ ಹೊರಗಿಡಬೇಕೆಂದಿದ್ದರು.ಮೇಲ್ಕಂಡ ಅನೇಕ ವೈರುದ್ಯತೆಗಳಿದ್ದರೂ ಸಹ ಇಬ್ಬರು ಒಟ್ಟಿಗೆ ದುಡಿದು, ಭಾರತದ ಸ್ವಾತಂತ್ರ ಚಳುವಳಿಗೆ ನಾಯಕತ್ವ ನೀಡಿದ್ದರು.
ನೆಹರು ಗಾಂಧೀಜಿಯ ವಿಚಾರಗಳೊಂದಿಗೆ ಅನೇಕ ವೈರುತ್ವಗಳಿದ್ದರೂ ಗಾಂಧಿಜಿಯವರನ್ನು ಗೌರವಿಸಿ ತಮ್ಮ ಸಿದ್ದಾಂತಗಳನ್ನು ರಾಜೀ ಮಾಡಿಕೊಳ್ಳದೆ ಪ್ರತ್ಯೇಕವಾಗಿಯೇ ಉಳಿದರು.
ಪ್ರಶ್ನೆ 2 .ಆರಂಭಿಕ ರಾಷ್ರವಾದಿ ನಾಯಕರಲ್ಲಿ ಆಥಿ೯ಕ ರಾಷ್ರಿಯತೆಯು ಹೀಗೆ ಪ್ರತಿಫಲಿಸಿದೆ?
ಬ್ರಿಟಿಷ್ ಅಳ್ವಿಕೆಯಲ್ಲಿನ ಲೊಪದೋಷಗಳನ್ನು ಹೊರಗಳೆಯಲು ಆರಂಭಿಕ ರಾಷ್ಟೀಯವಾದಿ ನಾಯಕರು, ಸಕಾ೯ರದ ಇತರ ನೀತಿಗಳೊಂದದಿಗೆ ಆಥಿ೯ಕ ನೀತಿಗಳನ್ನು ಖಂಡಿಸಿ, ಜನಸಾಮಾನ್ಯರಲ್ಲಿ ರಾಷ್ರೀಯತೆಯನ್ನು ಜಾಗೃತಗೊಳಿಸಿದರು.
ಭಾರತದ ಜನಸಾಮಾನ್ಯರು ಅನೇಕ ವಿಷಯಗಳಿಂದಾಗಿ ವೈವಿಧ್ಯತೆಯನ್ನು ಹೊಂದಿದ್ದ ಕಾರಣ ಎಲ್ಲಾರಿಗೂ ಅನ್ವಯಿಸುವ ಆಥಿ೯ಕ ಶೊಷಣೆಯ ವಿಷಯಕ್ಕೆ ಪ್ರಾಧಾನ್ಯತೆ ನೀಡಿದ್ದರು.
' ಭಾರತದ ವೃದ್ದ ಪಿತಾಮಹ " ಎಂದು ಖ್ಯಾತರಾದ " ದಾದಾಬಾಯಿ ನವರೋಜಿಯವರು ʼತಮ್ಮ್ : ಪಾವಟಿ೯ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ : ಕೃತಿಯಲ್ಲಿ ಬ್ರಿಟಿಷ್ ಸಕಾ೯ರದ ಅಥಿ೯ಕ ಶೋಷಣೆಯನ್ನು ಜಾಗೃತಗೊಳಿಸಿದರು.
ಈ ಕೃತಿಯಲ್ಲಿ ಮೊದಲ ಬಾರಿಗೆ ʼಆಥಿ೯ಕ ಸೋರಿಕೆ ಸಿದ್ದಾಂತ" ವನ್ನು ಪ್ರಕಟಿಸಿದರು. ಈ ಕೃತಿಯಲ್ಲಿ ಬ್ರಿಟಿಷರು ಭಾತರದ ಶೋಷಣೆಯ ಮೂಲಕ ಇಂಗ್ಲೇಂಡಿನ ಕೈಗಾರಿಕೆ ಬೆಳವಣಿಗೆ ಮಾಡುತ್ತಿದ್ದಾರೆ ಎಂದು ತೋರಿಸಿದರು.
ಬ್ರಿಟಿಷರು ತಮ್ಮ ಕೈಗಾರಿಕೆಯ ಬೆಂಬಲಕ್ಕಾಗಿ ಭಾರತದ ಗುಡಿಕೈಗಾರಿಕೆ, ಕೃಷಿ , ವ್ಯಾಪಾರ ಮತ್ತು ವಾಣಿಜ್ಯವನ್ನು ನಾಶಗೊಳಿಸುತ್ತಿರುವುದನ್ನು ಅಂಕಿ- ಅಂಶಗಳ ಮೂಲಕ ಪ್ರಕಟಿಸಿದರು.
ಕೇವಲ ದಾದಭಾಯಿ ನವರೋಜಿ ಅಲ್ಲದೆ , ʼರೋಮೇಶ್ ಚಂದ್ರ ದತ್ತರು ʼ ಸಹ ತಮ್ಮ ʼ ಎಕಾನಾಮಿಕ್ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾʼ ಕೃತಿಯ ಮೂಲಕ ಭಾರತದ ಆಥಿ೯ಕ ಸ್ಥಿತಿಯನ್ನು ಮೂರು ಹಂತಗಳಲ್ಲಿ ವಿವರಿಸಿದರು
ಇದರಲ್ಲಿ ಭಾರತವನ್ನು ಆಥಿ೯ಕವಾಗಿ ಶೋಷಿಸುತ್ತಿರುವುದನ್ನು ಮತ್ತು ಭಾರತದಲ್ಲಿ ಬಂಡವಾಳ ಹೂಡುವ ಮೂಲಕ ಬ್ರಿಟಿಷ್ ರಫ್ತುಗೆ ಭಾರತವನ್ನು ಹೇಗೆ ಮಾರುಕಟ್ಟೆಯನ್ನಾಗಿ ಪರಿವತಿ೯ಸಿ ಹೊಂದಿದೆ ಎಂಬುದನ್ನು ತೋರಿಸಿದರು.
ರೋಮೇಶ್ ಚಂದ್ರ ದತ್ತರು ಭಾರತವನ್ನು ಶೋಷಣೆಗೆ ಒಳಪಡಿಸುವ ಮೂಲಕ ಬ್ರಿಟಿಷ್ ಕೈಗಾರಿಕೆ ಕ್ರಾಂತಿಗೆ ಒಳಪಟ್ಟಿತು ಎಂಬುದನ್ನು ಪ್ರತಿಪಾದಿಸಿದರು.
ಇವರೊಂದಿಗೆ ಫಿರೋಜ್ ಷಾ ಮೆಹ್ತಾ, ಗೋಖಲೆ, ತಿಲಕ್, ಎಸ್. ಎನ್. ಬ್ಯಾನಜಿ೯ ಇತರರೂ ಸಹ ಧ್ವನಿಗೂಢಿಸಿದರು.
ಇದೇ ರೀತಿ ಭಾರತದ ಆಥಿ೯ಕ ಷೋಷಣೆಯನ್ನು ಬಹಿರಂಗಗೂಳಿಸುವ ಮೂಲಕ ರಾಷ್ರೀಯ ಚಳುವಳಿಗೆ ಆರಂಭಿಕ ಹಂತದಲ್ಲಿ ಭದ್ರ ಬುನಾದಿ ಹಾಕಿದರು. ಆಥಿ೯ಕ ಶೊಷಣೆಯನ್ನು ಪ್ರತಿಭಟಿಸುವ ಮೂಲಕ ಎಲ್ಲಾ ವಗ೯ದವರನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಮಾಡಿದರು.