96 A 2 ಭಾರತದ ಸಂವಿಧಾನ ಮುಖ್ಯ ಪರೀಕ್ಷೆ 25 Feb
ಪ್ರಶ್ನೆ.1. ವಿಧಾನ ಪರಿಷತ್ತುಗಳನ್ನು ಯಾವ ಆಧಾರದ ಮೇಲೆ ಸಮಥಿ೯ಸಬಹುದು? ಅದನ್ನು ರಾಜ್ಯವೊಂದರಲ್ಲಿ ಹೇಗೆ ರಚಿಸಬಹುದು ಅಥವಾ ತೆಗೆದು ಹಾಕಬಹುದು?
ಭಾರತದಲ್ಲಿ ಕೇಂದ್ರ ಸಕಾ೯ರವು ದ್ವಿಸದನ ಸಂಸದೀಯ ಪದ್ದತಿಯನ್ನು ಹೊಂದಿದೆ. ಆದುದರಿಂದ ರಾಜ್ಯಗಳು ವಿಧಾನ ಪರಿಷತ್ ಅನ್ನು ಹೊಂದಿರಬಹುದು. ಆದರೆ ಕೇವಲ 4 ರಾಜ್ಯಗಳು ಅಂದರೆ ಬಿಹಾರ, ಮಹಾರಾಷ್ರ, ಕನಾ೯ಟಕ, ಉತ್ತರ ಪ್ರದೇಶ
ಮಾತ್ರ ವಿಧಾನ ಪರಿಷತ್ನನ್ನು ಹೊಂದಿದೆ. ಆದಾಗ್ಯೂ ವಿಧಾನ ಪರಿಷತ್ನ್ನು ಹೊಂದಬಹುದಾದ ಹಾಗೂ ಅದರ ಮಾಹತ್ವ ಚಚಾ೯ಸ್ಪದ ವಿಷಯ. ಈ ಕಾರಣಗಳು ಅಂದರೆ.
1. ಅದು ವಿಶೇಷ ಹಾಗೂ ವಿಶಿಷ್ಟ ಜ್ನಾನ ಹೊಂದಿದೆ. ಪ್ರತಿನಿಧಿಗಳಿಂದಲೂ ಹಾಗೂ ವಿವಿಧ ವಗ೯ಗಳ ಪ್ರತಿನಿಧಿಗಳಿಂದ ಕೂಡಿರುವುದರಿಂದ ಧೋರಣೆಗಳ ನಿರೂಪಣೆಗೆ ಸಹಕಾರಿ.
2. ಅದರ ಸದಸ್ಯರು ಅಧಿಕ ರಾಜಕಾರಣಿಗಳಾಗಿರದೇ ಇರುವುದರಂದ ಅವರು ಧೋರಣೆಗಳ ಬಗೆಗೆ ನಿಲಿ೯ಪ್ತ ಮನೋಭಾವನೆಯಿಂದ ಪರಿಶೀಲಿಸಲು ಸಹಕಾರಿಯಾಗಬಹುದು.
3. ಅಲ್ಲದೇ ಅದು ವಿಸಜ೯ನೆಗೆ ಗುರಿಯಾಗದೇ ಇರುವ ಶಾಶ್ವತ ಸದನವಾಗಿದೆ.
4. ಹೀಗಾಗಿ ಅದು ಮಸೂದೆಗಳನ್ನು ನಿರಂತರವಾಗಿ ಪರಿಶೀಲಿಸಬಹುದು ಆದರೆ ವಿಧಾನ ಸಭೆಗೆ ಸಮಯದ ಅಭಾವ ಹಾಗೂ ರಾಜಕೀಯ ಅಸ್ಥಿರತೆಯ ತೊಂದರೆ ಇದೆ.
5. ಹಣಕಾಸಿನ ಮಸೂದೆಗಳನ್ನು ಹರತು ಪಡಿಸಿ ಮಿಕ್ಕ ಎಲ್ಲಾ ಅಧಿಕಾರ ಪರಿಷತ್ ಗೆ ಇದೆ. ಹೀಗಾಗಿ ಅದು ವಿಧಾನ ಸಭೆಯಂತೆಯೇ ಮಹತ್ವ ಪಾತ್ರವನ್ನು ಹೊಂದಿದೆ. ಅಲ್ಲದೆ ಮಸೂದೆಗಳನ್ನು ಮಂಡಿಸಿಲು ಈ ಸಭೆಯು ತುಂಬಾ ಸಹಕಾರಿಯಾಗಿದೆ.
6. ಸಂವಿಧಾನದ 169 ನೆಯ ವಿಧಿಯ ಅಡಿಯಲ್ಲಿ ಸಂಸತ್ತು, ರಾಜ್ಯದ ವಿಧಾನಸಭೆಯ ಗೊತ್ತುವಳಿಯ ಆಧಾರದ ಮೇಲೆ ಈ ಪರಿಷತ್ತನ್ನು ಸೃಷ್ಟಿಸಬಹುದು. ಅದರಂತೆಯೇ ವಿಸಜಿ೯ಸಬಹುದು.ಆದರೆ ಅಂಥ ಒಂದು ಮಸೂದೆ ವಿಧಾನ ಸಭೆಯ 2/3 ಅಧಿಕ ಬಹುಮತ ಹಾಜರಿ ಸದಸ್ಯರ ಬೆಂಬಲ ಹೊಂದಿರ ಬೇಕಾಗುತ್ತದೆ. ಹೀಗೆ ರಾಜ್ಯದ ವಿಧಾನ ಸಭೆಯಿಂದ ಅಂಗೀಕಾರ ಹೊಂದಿದ ನಿಣ೯ಯವನ್ನು ಸಂಸತ್ತು ಸರಳ ಬಹುಮತದಿಂದ
ಜಾರಿಗೊಳಿಸುವ ಹಾಗೂ ವಿಸಜಿ೯ಸುವ ಅಧಿಕಾರವನ್ನು ಪಡೆದಿದೆ.
ಪ್ರಶ್ನೆ.2 ಸಾಮಾನ್ಯ ಚುನಾವಣೆ, ಮಧ್ಯಂತರ ಚುನಾವಣೆ ಹಾಗೂ ಉಪಚುನಾವಣೆಗೆ ಮಧ್ಯ ಇರಬಹುದಾದ ವ್ಯತ್ಯಾಸವನ್ನು ಮತ್ತು ಅವುಗಳ ಮಹತ್ವವನ್ನು ತಿಳಿಸಿ?
ಭಾರತ ಸಕಾ೯ರದ ಸಂಸದೀಯ ವ್ಯವಸ್ಥೆಯಲ್ಲಿ ಮೂರು ಬಗೆಯ ಚುನಾವಣೆಗಳ ಮೂಲಕ ಶಾಸನ ಸಭೆಗಳಿಗೆ ಸದಸ್ಯರು ಆಯ್ಕೆ ಹೊಂದುತ್ತಾರೆ.
ಸಾಮಾನ್ಯ ಚುನಾವಣೆಯನ್ನು ಶಾಸನಸಭೆಗಳು ತಮ್ಮ ಅವಧಿಯನ್ನು ಅಂದರೆ 5 ವಷ೯ ಪೂಣ೯ಗೊಳಿಸಿದಾಗ ನಡೆಸಲಾಗುವುದು. ಇದು ಅಧಿಕ ವೆಚ್ಚದಾಯಕ ಕಾಯ೯ವಾದುದರಿಂದ
ಸಾಕಷ್ಟು ಗಂಭೀರವಾಗಿಯೇ ರಾಷ್ಟಾದ್ಯಂತ ಬಹು ಎಚ್ಚರವಹಿಸಿನಡೆಸಲಾಗುವುದು.
ಮಧ್ಯಂತರ ಚುನಾವಣೆ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಾಗ ಲೋಕ ಸಭೆಗೆ ಹೀಗೆಯೇ ವಿಧಾನ ಸಭೆಗೆ ಮಧ್ಯಂತರ ಚುನಾವಣೆ ನಡೆಸಲಾಗುವುದು. ಯಾವ ಪಕ್ಷಕ್ಕೂ ಬಹುಮತ ದೊರೆಯದೇ ಸಕಾ೯ರ ರಚನೆಯಾಗದ ಸಮಯದಲ್ಲಿ ಮಧ್ಯಂತರ ಚುನಾವಣೆ ಅನಿವಾಯ೯ ಈಚಿನ ದಿನಗಳಲ್ಲಿ ಪಕ್ಷಾಂತರ ಪಿಡುಗು, ಬಹುಮತದ ಕೊರೆತೆಯಿಂದಾಗಿ ಇದು ಅನಿವಾಯ೯ವಾಗಿದೆ. ಇದು ತುಂಬಾ ಖಚಿ೯ನ ಕಾಯ೯, ಹೀಗಾಗಿ ಸಕಾ೯ರದ ಬೊಕ್ಕಸಕ್ಕೆ ಹಾನಿ.
ಮರುಚುನಾವಣೆಯು ಶಾಸನಸಭೆಗಳಲ್ಲಿ ತೆರವುಗೊಳಿಸಲಾದ ಸಮಯದಲ್ಲಿ ನಡೆಸಲಾಗುವುದು. ಮರಣದಿಂದ ಅಥವಾ ಮತದಾನ ಕ್ಷೇತ್ರದಲ್ಲಿ ಮತಪೆಟ್ಟಿಗೆಯ ಅಪಹರಣದಿಂದ ಅಥವಾ ಸ್ಥಾನಕ್ಕೆ ಆಯ್ಕೆಯನ್ನು ನ್ಯಾಯಲಯ ರದ್ದು ಪಡಿಸಿದಾಗ
ಈ ಚುನಾವಣೆ ನಡೆಸಲಾಗುವುದು. ಹಲವು ಬಾರಿ ಕೆಲ ರಾಜಕಾರಣಗಳಿಗಾಗಿಯು ಇದು ನಡೆಯಬಹುದು.
ಈ ಚುನಾವಣೆ ನಡೆಸಲಾಗುವುದು. ಹಲವು ಬಾರಿ ಕೆಲ ರಾಜಕಾರಣಗಳಿಗಾಗಿಯು ಇದು ನಡೆಯಬಹುದು.