001 ಪೌರತ್ವ 7 Mar
ಪೌರತ್ವ
ಪ್ರಶ್ನೆ 1. ವಿಧಿ - 5 ಪ್ರಾರಂಭದಲ್ಲಿ ಪೌರತ್ವ ಬಗ್ಗೆ ತಿಳಿಸಿ
1. ಭಾರತ ಸಂವಿಧಾನ ಪ್ರಾರಂಭವಾಗುವ ಪೂವ೯ದಲ್ಲಿ ಕನಿಷ್ಟ 5 ವಷ೯ಗಳ ಕಾಲ ಭಾರತದ ಭೂಪ್ರದೇಶದಲ್ಲಿ ವಾಸವಾಗಿರಬೇಕು.
2. 1950 ಜನವರಿ 26 ಪೂವ೯ ಮತ್ತು ನಂತರ ಭಾರತದಲ್ಲಿ ಭೂ ಪ್ರದೇಶದಲ್ಲಿ ಜನಿಸಿದ ಪ್ರತೀ ಮಗುವಿಗೆ ಭಾರತದ ನಾಗರಿಕತ್ವದ ಹಕ್ಕುಗಳನ್ನು ನೀಡಲಾಗುತ್ತದೆ.
ಪ್ರಶ್ನೆ 2 ವಿಧಿ-6 ಪಾಕಿಸ್ತಾನದಿಂದ ಭಾರತ ಬಗ್ಗೆ ತಿಳಿಸಿ
1948 ಜುಲೈ 19 ಕ್ಕಿಂತ ಮುಂಚೆ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ನಾಗರಿಕರಿಗೆ ಭಾರತದ ನಾಗರಿಕತ್ವವನ್ನು ನೀಡಲಾಗುತ್ತದೆ.
ಪ್ರಶ್ನೆ 3 ಭಾರತದಿಂದ ಪಾಕಿಸ್ತಾನ ಬಗ್ಗೆ ತಿಳಿಸಿ
1947 ಮಾಚ್‌೯ 1ರ ನಂತರ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ನಾಗರಿಕರಿಗೆ ಭಾರತದ ನಾಗರಿಕತ್ವ ನೀಡಲಾಗುವುದಿಲ್ಲ.
ಪ್ರಶ್ನೆ 4. ಭಾರತೀಯ ಮೂಲದ ವ್ಯಕ್ತಿಗೆ ನಾಗರಿಕತ್ವ ಬಗ್ಗೆ ತಿಳಿಸಿ
ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಗೆ ಅಲ್ಲಿ ಮಗು ಜನಿಸಿದಾಗ ಆ ಮಗು ಭಾರತೀಯ ಮೂಲದ ಆಧಾರದ ಮೇಲೆ ನಾಗರಿಕತ್ವವನ್ನು ಪಡೆಯಲು ಅಹ೯ತೆ ಹೊಂದಿರುತ್ತದೆ.
ಪ್ರಶ್ನೆ 5 ವಿಧಿ- 9 ರದ್ದು ಬಗ್ಗೆ ತಿಳಿಸಿ
1. ಭಾರತದ ನಾಗರಿಕರು ಸ್ವ- ಇಚ್ಚೆಯಿಂದ ವಿದೇಶದ ನಾಗರಿಕತ್ವ ಪಡೆದಾಗ ಭಾರತದ ನಾಗರಿತ್ವವು ತಾನಾಗಿಯೆ ರದ್ದಾಗುತ್ತದೆ.
ಪ್ರಶ್ನೆ ವಿಧಿ-10 ಒಳಪಡುತ್ತಾನೆ ಬಗ್ಗೆ ತಿಳಿಸಿ
ಭಾರತದ ನಾಗರಿಕ ಅಥವಾ ನಾಗರಿಕನಾಗಲೂ ಬಯಸಿರುವ ವ್ಯಕ್ತಿ, ಸಂಸತ್ತು ಮಾಡುವ ಕಾನೂನುಗಳಿಗೆ ಒಳಪಡುತ್ತಾನೆ
.
ಪ್ರಶ್ನೆ 6. ವಿಧಿ-11 ಸಂಸತ್ತು ಕಾನೂನು ಮಾಡಬಹುದು ಬಗ್ಗೆ ತಿಳಿಸಿ
ನಾಗರಿಕತ್ವದ ಕುರಿತು ಸಂಸತ್ತು ಕಾನೂನು ಮಾಡುವ ಮತ್ತು ನಾಗರಿಕತ್ವವನ್ನು ವಜಾಮಾಡುವ ಅಧಿಕಾರ ಹೊಂದಿದೆ
ಪ್ರಶ್ನೆ 7 ಜನನದ ಮೂಲಕ ಬಗ್ಗೆ ತಿಳಿಸಿ
1. 1950 ಜನೆವರಿ 26 ಕ್ಕಿಂತಲೂ ಮುಂಚೆ ಮತ್ತು ನಂತರ ಭಾರತದ ಭೂ ಪ್ರದೇಶದಲ್ಲಿ ಜನಿಸಿದ ಪ್ರತಿ ಮಗುವಿಗೆ ಜನನ ಆಧಾರದ ಮೇಲೆ ನಾಗರಿಕತ್ವವನ್ನು ನಿಡಲಾಗುತ್ತದೆ.
2. ವೈರಿ ರಾಷ್ಟ್ರದವರು ಭಾರತದ ಭೂ ಪ್ರದೇಶದಲ್ಲಿ ಅವರಿಗೆ ಮಗು ಜನಿಸಿದಾಗ ಆ ಮಗುವಿಗೆ ಜನನದ ಆಧಾರದ ಮೇಲೆ ನಾಗರಿಕತ್ವ ನೀಡಲಾಗುವುದಿಲ್ಲ.
3.ರಾಜತಾಂತ್ರಿಕ ರಾಯಭಾರಿಗಳು ಭಾರತಕ್ಕೆ ಕೆಲಸಕ್ಕೆಂದು ಬಂದಾಗ ಅವರಿಗೆ ಆ ಪ್ರದೇಶದಲ್ಲಿ ಮಗು ಜನಿಸಿದಾಗ ಆ ಮಗುವಿಗೂ ಸಹ ಜನನ ಆಧಾರದ ಮೇಲೆ ನಾಗರಿಕತ್ವ ನೀಡಲಾಗುವುದಿಲ್ಲ.
ಪ್ರಶ್ನೆ 8 ವಂಶದ ಮೂಲಕ ಬಗ್ಗೆ ತಿಳಿಸಿ
1. 1950 ಜನವರಿ 26 ನಂತರ ವಿದೇಶದಲ್ಲಿ ಜನಿಸಿದಂತ ಮಗು ಭಾರತದ ನಾಗರಿಕತ್ವ ಪಡೆಯ ಬಹುದಾಗಿದೆ, ಸಂಬಂಧದ ಮೂಲಕ ಅಥವಾ ವಂಶದ ಮೂಲಕ ಭಾರತದ ನಾಗರಿಕತ್ವ ಪಡೆಯುವವನು.
2. 1950 ರಿಂದ 1992 ರವರೆಗೆ ತಂದೆ ಭಾರತೀಯನಾಗಿದ್ದರೆ ಮಾತ್ರ ಅವಕಾಶವಿತ್ತು.
3. 1992 ರ ನಂತರ ತಂದೆ ಅಥವಾ ತಾಯಿ ಇಬ್ಬರಲ್ಲಿ ಯಾರಾದರೊಬ್ಬರು ಭಾರತೀಯರಾಗಿದ್ದರೂ ಸಹ ಭಾರತದ ನಾಗರಿಕತ್ವದ ಪಡೆಯಬಹುದು.
4. 2004ರ ನಂತರ ಮಗು ಜನಿಸಿದ ಒಂದು ವಷ೯ದ ಒಳಗಾಗಿ ಆ ದೇಶದ ರಾಯಭಾರಿ ಕಛೇರಿಯಲ್ಲಿ ನೊಂದಣಿ ಮಾಡಿಸತಕ್ಕದ್ದು
ಪ್ರಶ್ನೆ 9. ಸಹಜೀಕೃತದ ಮೂಲಕ ಬಗ್ಗೆ ತಿಳಿಸಿ
ಭಾರತೀಯ ನಾಗರಿಕರಿಲ್ಲದ ವ್ಯಕ್ತಿ ಅಂದರೆ ವಿದೇಶಿಯ ವ್ಯಕ್ತಿ ಭಾರತದ ನಾಗರಿಕತ್ವ ಬೇಕೆಂದು ಬಯಿಸಿದಾಗ ಕೆಲವು ಷರತ್ತುಗಳಿಗೆ ಒಳಪಟ್ಟು ಭಾರತೀಯ ನಾಗರಿಕತ್ವ ನೀಡಬಹುದಾಗಿದೆ. ಷರತ್ತುಗಳೆಂದರೆ
1.ಭಾರತದ ಪ್ರಜೆಗೆ ಯಾವ ದೇಶದ ಪ್ರಜೆಯಾಗಲು ಅವಕಾಶವಿಲ್ಲವೊ ಆ ದೇಶದಿಂದ ಬಂದಿರುವನಾಗಿರಬಾರದು.
2. ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿ ಯಾವುದಾದರೊಂದು ಭಾಷೆಯ ಬಗ್ಗೆ ಗೊತ್ತಿರಬೇಕು.
3. ಭಾರತದ ನಾಗರಿಕತ್ವ ಬೇಕೆಂದು ಬಯಸಿರುವ ವ್ಯಕ್ತಿ ಭಾರತಕ್ಕೆ ಬಂದು 7 ವಷ೯ಗಳಾಗಿರಬೇಕು, ಅದರಲ್ಲಿ ಕಡ್ಡಾಯವಾಗಿ 4 ವಷ೯ಗಳ ಕಾಲ ಭಾರತದ ಭೂಪ್ರದೇಶದಲ್ಲಿಯೇ ವಾಸವಾಗಿಬೇಕು. ನಂತರ ಅಜಿ೯ಸಲ್ಲಿಸಲು ಅಹ೯ರಾಗುತ್ತಾರೆ. ಅಜಿ೯ ಸಲ್ಲಿಸಿದ 12 ತಿಂಗಳ ನಂತರ ಭಾರತದ ನಾಗರಿಕತ್ವ ಪಡೆಯುತ್ತಾನೆ ಅಂದರೆ 5 ವಷ೯ ಭಾರತದ ಭೂಪ್ರದೇಶದಲ್ಲಿಯೇ ವಾಸವಾಗಿರಬೇಕು.
4. ಕಲೆ, ವಿಜ್ನಾನ,ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸಂಸತ್ತು ಕೆಲವು ಸಡಿಲಿಕೆಗಳನ್ನು ನೀಡುವ ಮೂಲಕ ನಾಗರಿಕತ್ವ ನೀಡಬಹುದಾಗಿದೆ.
ಪ್ರಶ್ನೆ 11. ನೊಂದಣಿ ಮೂಲಕ ನಾಗರಿಕತ್ವ ಬಗ್ಗೆ ತಿಳಿಸಿ
ಭಾರತದ ಪುರುಷ ವಿದೇಶಿ ಮಹಿಳೆಯನ್ನು ವಿವಾಹವಾದಾಗ ಅಥವಾ ವಿದೇಶಿ ಪುರುಷ ಭಾರತದ ಮಹಿಳೆಯೊಂದಿಗೆ ವಿವಾಹವಾದಾಗ ವಿದೇಶಿಯರು ಭಾರತಕ್ಕೆ ಬರಲು ಬಯಸಿದರೆ ವಿವಾಹವಾದಾಗ ಆ ವಿದೇಶಿಯರು ಭಾರತಕ್ಕೆ ಬರಲು ಬಯಸಿದರೆ ವಿವಾಹದ ನೋಂದಣಿ ಆಧಾರದ ಮೇಲೆ ಭಾರತದ ನಾಗರಿಕತ್ವ ಪಡೆಯಬಹುದಾಗಿದೆ. 1986 ರಲ್ಲಿ ತಿದ್ದುಪಡಿ ಕಾಯ್ದೆ ಮಾಡಿ ನೋಂದಣಿ ಮೂಲಕ ಪಡೆಯುವ ನಾಗರಿಕತ್ವಕ್ಕೆ 6 ತಿಂಗಳ ಇದ್ದ ಅವಧಿಯನ್ನು 5 ವಷ೯ಕ್ಕೆ ಹೆಚ್ಚಿಸಲಾಗಿದೆ.
ಪ್ರಶ್ನೆ 12. ಭೂ ಪ್ರದೇಶದ ಸೇಪ೯ಡೆಯಿಂದ ಬಗ್ಗೆ ತಿಳಿಸಿ
ವಿದೇಶಕ್ಕೆ ಸೇರಿದ ಯಾವುದೇ ಒಂದು ಭೂಪ್ರದೇಶ ಭಾರತಕ್ಕೆ ಸೇಪ೯ಡೆಯಾದರೆ ಅಲ್ಲಿ ನೆಲೆಸಿರುವ ನಾಗರಿಕರಿಗೆ ಭಾರತದ ನಾಗರಿಕತ್ವವನ್ನು ನೀಡಬಹುದಾಗಿದೆ.
ಪ್ರಶ್ನೆ 13 ನಾಗರಿಕತ್ವವವನ್ನು ಕಳೆದುಕೊಳ್ಳುವ 3 ನಿಯಮಗಳು
1. ತ್ಯಜಿಸುವುದರ ಮೂಲಕ
ಭಾರತೀಯ ನಾಗರಿಕನು ಸಂಬಂಧಪಟ್ಟ ಪ್ರಾಧಿಕಾರದ ಎದುರು ನಿಗದಿಪಡಿಸಿದ ಘೋಷಣೆಯ ಮೂಲಕ ತ್ಯಜಿಸಬಹುದಾಗಿದೆ.
ಅವನ ಮಕ್ಕಳು ಅಪ್ರಾಪ್ತರಾಗಿದ್ದರೆ ವಯಸ್ಕರಾದ ನಂತರ ಭಾರತದ ನಾಗರಿಕತ್ವ ಬೇಕೆಂದು ಬಯಸಿದರೆ ಭಾರತದ ನಾಗರಿಕತ್ವವನ್ನು ಒಂದು ವಷ೯ದ ಒಳಗಾಗಿ ಪಡೆಯಬಹುದಾಗಿದೆ.
2. ರದ್ದು ಮಾಡುವ ಮೂಲಕ
ಭಾರತದ ನಾಗರಿಕನು ಸ್ವ-ಇಚ್ಛೆಯಿಂದ ವಿದೇಶದ ನಾಗರಿಕತ್ವ ಪಡೆದಾಗ ಭಾರತದ ನಾಗರಿಕತ್ವವು ತಾನಾಗಿಯೆ ರದ್ದಾಗುತ್ತದೆ.
3. ಕಸಿದುಕೊಳ್ಳುವ ಮೂಲಕ
ಯಾವುದೇ ಮಾಹಿತಿ ನೀಡದೆ ವಿದೇಶದಲ್ಲಿ 7 ವಷ೯ಗಳ ಕಾಲ ವಾಸವಾರಗಿದ್ದರೆ ಭಾರತದ ನಾಗರಿತ್ವ ಕಸಿದುಕೊಳ್ಳಲಾಗುವುದು.
ಭಾರತದ ಸಂವಿಧಾನಕ್ಕೆ ಗೌರವ ತೋರದೆ ಇದ್ದರೆ ನಾಗರಿಕತ್ವವನ್ನು ಕಸಿದುಕೊಳ್ಳಲಾಗುವುದು.
ನೋಂದಾಣಿ ಮೂಲಕ ಅಥವಾ ಸಹಜೀಕೃತದ ಮೂಲಕ ಪಡೆದ ನಾಗರಿಕತ್ವದ ನಂತರ ಆ ವ್ಯಕ್ತಿ 5 ವಷ೯ಗಳಲ್ಲಿ 2 ವಷ೯ ಜೈಲುವಾಸ ಅನುಭವಿಸಿದ್ದರೆ ಕಸಿದುಕೊಳ್ಳಲಾಗುವುದು