002 ರಾಷ್ಟ್ರೀಯ ಆದಾಯ 7 Mar
1 GDP ಎಂದರೇನು
ಒಂದು ದೇಶದೊಳಗೆ ಉತ್ಪಾದಿಸಲಾದ ಒಟ್ಟು ಸರಕು ಸೇವೆಗಳ ಮೌಲ್ಯವು ಒಟ್ಟು ದೇಶಿಯ ಉತ್ಪನ್ನವಾಗಿರುತ್ತದೆ. ಇದರಲ್ಲಿ ಸವಕಳಿ ವೆಚ್ಚವೂ ಸೇರಿದ್ದುವಿದೇಶಿಗಳಿಂದ ಗಳಿಸುವ ವರಮಾನವನ್ನು ಪರಿಗಣಿಸುವುದಿಲ್ಲ
2 GNP ಎಂದರೇನು
ಒಂದು ದೇಶದೊಳಗೆ ಉತ್ಪಾದಿಸಲಾದ ಒಟ್ಟು ಸರಕು ಸೇವೆಗಳ ಮೌಲ್ಯವು ಒಟ್ಟು ದೇಶಿಯ ಉತ್ಪನ್ನವಾಗಿರುತ್ತದೆ. ಇದರಲ್ಲಿ ಸವಕಳಿ ವೆಚ್ಚವೂ ಸೇರಿದ್ದುವಿದೇಶಿಗಳಿಂದ ಗಳಿಸುವ ವರಮಾನವನ್ನು ಪರಿಗಣಿಲಾಗುವುದು
3.NNP ಎಂದರೇನು
ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಯಂತ್ರೋಪಕರಣಗಳ ದುರಸ್ತಿ ವೆಚ್ಚ ಅಥವಾ ಸವಕಳಿ ವೆಚ್ಚವನ್ನು ಕಳೆಯುವುದರಿಂದ ನಿವ್ವಳ ರಾಷ್ಟ್ರೀಯ ಉತ್ಪನ್ನವನ್ನು ಮಾಪನ ಮಾಡಲಾಗುತ್ತದೆ.
4̤ National Income ಎಂದರೇನು
ಉತ್ಪಾದನಾಂಗ ವೆಚ್ಚದಲ್ಲಿ ರಾಷ್ಟ್ರೀಯ ಅದಾಯ: ಮಾರುಕಟ್ಟೆ ಬೆಲೆಗಳಲ್ಲಿನ ರಾಷ್ಟ್ರೀಯ ಆದಾಯದಲ್ಲಿ ತೆರಿಗೆ ಮತ್ತು ಸವಕಳಿ ವೆಚ್ಚ್ವವನ್ನು ಕಳೆದು, ಉತ್ಪಾದನೆಗೆ ಸಕಾ೯ರ ನೀಡಿದ ಸಹಾಯಧನಗಳನ್ನು ಸೇರಿಸಿದರೆ ಬರುವ ಮೌಲ್ಯವೇಉತ್ಪಾದನಾಂಗ ವೆಚ್ಚದಲ್ಲಿ ರಾಷ್ಟ್ರೀಯ ಅದಾಯವಾಗಿರುತ್ತದೆ.
5̤ ತಲಾದಾಯ: ಎಂದರೇನು
ಒಂದುವಷ೯ದಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಆದಾಯವನ್ನು ತಲಾದಾಯ ಎಂದು ಕರೆಯುತ್ತೇವೆ. ರಾಷ್ಟ್ರೀಯ ಅದಾಯವನ್ನು ಅ ದೇಶದ ಜನಸಂಖ್ಯೆಯಿಂದ ಭಾಗಿಸಿದರೆ ತಲಾದಾಯ ಲಭ್ಯವಾಗುತ್ತದೆ.
ಪ್ರಶ್ನೆ 2. ರಾಷ್ಟ್ರೀಯ ಅದಾಯದ ಮಾಪನ ವಿಧಾನಗಳು:
ರಾಷ್ಟ್ರೀಯ ಆದಾಯವನ್ನು 3 ವಿಧಾನಗಳಲ್ಲಿ ಮಾಪನ ಮಾಡಲಾಗುತ್ತದೆ.
1. ಉತ್ಪಾದನಾ ವಿಧಾನ: ಒಂದು ವಷ೯ದಲ್ಲಿ ದೇಶದ ಪ್ರಾಥಾಮಿಕ, ಮಾಧ್ಯಮಿಕ ಮತ್ತು ತೃತೀಯ ವಲಯಗಳಲ್ಲಿ ಉತ್ಪಾದನೆಯಾದ ಸರಕುಸೇವೆಗಳ ಮೊತ್ತವೇ ಉತ್ಪಾದನೆ ವಿಧಾನದ ರಾಷ್ಟ್ರೀಯ ಅದಾಯವಾಗಿರುತ್ತದೆ.
2. ಆದಾಯದ ವಿಧಾನ: ಒಂದು ವಷ೯ದಲ್ಲಿ ದೇಶದ ಉತ್ಪಾದನಾಂಗಗಳಾದ ಭೂಮಿ,ಶ್ರಮ, ಬಂಡವಾಳ, ಮತ್ತು ಸಂಘಟನೆಗಳು ಉತ್ಪಾದನೆಯಿಂದ ಪಡೆಯುವ ಪ್ರತಿಫಲವೇ ಆದಾಯ ವಿದಾನದ ರಾಷ್ಟ್ರೀಯ ಆದಾಯವಾಗಿರುತ್ತದೆ.
3. ವೆಚ್ಚದ ವಿಧಾನ : ಒಂದು ವಷ೯ದಲ್ಲಿ ದೇಶದ ಎಲ್ಲಾ ವ್ಯಕ್ತಿಗಳು, ಸಕಾ೯ರ, ಉದ್ಯಮ ಸಂಸ್ಥೆಗಳು ಮಾಡುವ ಅನುಭೋಗವೆಚ್ಚ ಮತ್ತು ಹೂಡಿಕೆಯ ವೆಚ್ಚಗಳ ಮೊತ್ತವೇ ವೆಚ್ಚದ ವಿಧಾನದ ರಾಷ್ಟ್ರೀಯ ಆದಾಯವಾಗಿರುತ್ತದೆ.