003 ಆಥಿ೯ಕ ಸುಧಾರಣೆ ಲಕ್ಷಣಗಳು 7 Mar

 
.
 ಪ್ರಶ್ನೆ1. ಉದಾರೀಕರಣ  Liberalisation  ಎಂದರೇನು

 ಆಥಿ೯ಕ ಚಟುವಟಿಕೆಗಳ ಮೇಲೆ ಸಕಾ೯ರದ ಹತೋಟಿ ನಿಯಂತ್ರಣಗಳನ್ನು ಸಡಿಲಗೊಳಿಸಿ ಮುಕ್ತ ಅಥಿ೯ಕ ವ್ಯವಸ್ಥೆಯ ಕಾಯಾ೯ಚರಣೆಗೆಅವಕಾಶ ನೀಡುವುದಕ್ಕೆ ಉದಾರಿಕರಣ ಎಂದು ಕರೆಯುತ್ತೇವೆ. 

  ಪ್ರಶ್ನೆ 2. ಖಾಸಗೀಕರಣ  privatistion  ಎಂದರೇನು

 ಸಕಾ೯ರದ ಒಡೆತನ ಮತ್ತು ಆಡಳಿತಕ್ಕೆ ಒಳಪಟ್ಟ ಉದ್ಯಮ ಸಂಸ್ಥೆಗಳನ್ನು ಖಾಸಗಿಯವರ ಒಡೆತನ ಮತ್ತುಆಡಳಿತಕ್ಕೆ ವಹಿಸುವ ಕ್ರಮವನ್ನು ಖಾಸಗಿಕರಣ ಎಂದು ಕರೆಯುತ್ತೆವೆ. 


ಪ್ರಶ್ನೆ 3. ಜಾಗತೀಕರಣ  Globalistion   ಎಂದರೇನು

ಭಾರತದ ಅಥಿ೯ಕ ವ್ಯವಸ್ಥೆ ಜಗತ್ತಿನ ಅಥಿ೯ಕತೆಗಳೊಂದಿಗೆ ಸಂಯೋಜಿಸುವುದನ್ನು ಜಾಗತೀಕರಣ ಎಂದು ಕರೆಯುತ್ತೇವೆ. 

  ಪ್ರಶ್ನೆ   4.    ಮಾರುಕಟ್ಟೆ ಸ್ನೇಹಿ ಸಕಾ೯ರ   Market Friendly Govt   ಎಂದರೇನು

ಮಾರುಕಟ್ಟೆ ಸ್ನೇಹಿ ಸಕಾ೯ರ ಎಂದರೇ   ಆಥಿ೯ಕ ಚಟುವಟಿಕೆಗಳು ಎಲ್ಲಾ ರಿತಿಯ ನಿಬ೯ಂಧ ನಿಯಂತ್ರಗಳಿಂದ ಮುಕ್ತವಾಗಿ, ಸುಗಮ ಕಾಯ೯ಚರಣೆಗೆ ಅವಕಾಶ ಮಾಡಿಕೊಡುವುದು


 ಪ್ರಶ್ನೆ  5.     ಆಧುನಿಕರಣ  Modernnisation  ಎಂದರೇನು

ನೂತನ ಆಥಿ೯ಕ ನೀತಿಯು ಆಥಿ೯ಕ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ನಾನದ ಅಳವಡಿಕೆಗೆ ಅವಕಾಶ ಕಲ್ಪಿಸಿದೆ. 


   ಪ್ರಶ್ನೆ   6   . ಆಥಿ೯ಕ ಸ್ಥಿರೀಕರಣ  ಎಂದರೇನು

 ಆಥಿ೯ಕ ವ್ಯವಸ್ಥೆಯಲ್ಲಿ ಅತಿಹೆಚ್ಚಿನ ಏರಿಳಿತಗಳು ಸಂಭವಿಸದಂತೆ ಸಮತೋಲನ ಕಾಪಾಡಲು ಕೈಗೊಂಡ ಕ್ರಮಗಳನ್ನು ಆಥಿ೯ಕ ಸ್ಥಿರೀಕರಣ ಎಂದುಕರೆಯುತ್ತೆವೆ.


 ಪ್ರಸ್ನೆ   7.    ರಚನಾತ್ಮಕ ಹೊಂದಾಣಿಕೆ ಕ್ರಮಗಳು   ಎಂದರೇನು

  ರಚನಾತ್ಮಕ ಹೊಂದಾಣಿಕೆ ಕ್ರಮಗಳು   ಎಂದರೆ   ವ್ಯಾಪಾರನೀತಿ, ಕೈಗಾರಿಕಾ ನೀತಿ, ಸಾವ೯ಜನಿಕ ವಲಯದ ನೀತಿ, ಬೆಲೆ ಮತ್ತು ಸುಂಕನೀತಿ, ಉತ್ಪಾದನಾಂಗಗಳ ಮಾರುಕಟ್ಟೆ ನಿತಿ ಮೊದಲಾದವುಗಳಲ್ಲಿ ರಚನಾತ್ಮಕ ವಾಗಿ  ಸುಧಾರಣೆಗಳನ್ನು ಮಾಡುವುದು

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions