002 ನಿರುದ್ಯೋಗ ಬಡತನ 6 Mar

 ಪ್ರಶ್ನೆ 1 ಬಡ ರಾಜ್ಯಾ ಗಳಲ್ಲಿ ಬಡತನಕ್ಕೆ  ಕಾರಣಗಳು


1. ಮಿತಿ ಮೀರಿದ ಜನಸಂಖ್ಯಾ ಬೆಳವಣಿಗೆ

2. ವಿಭಿನ್ನರೀತಿಯ  ನಿರುದ್ಯೋಗ

3. ಹಿಂದುಳಿದ ಆಥಿ೯ಕ ವ್ಯವಸ್ಥೆ ಮತ್ತು ನಿಧಾನಗತಿಯ ಆಥಿ೯ಕ ಬೆಳವಣಿಗೆ

4.ಬಡತನ ವಿಷವತು೯ಲ

5. ಅನಕ್ಷರತೆ ಮತು ಅಜ್ನಾನ

6. ಬಂಡವಾಳದ ಕೊರತೆ ಮತ್ತು ಅಸಮಪ೯ಕ ತಂತ್ರಾಜ್ನಾನ

7. ಕಡಿಮೆ ತಲಾದಾಯ ಮತ್ತು ಆಥಿ೯ಕ ಅಸಮಾನತೆ

8. ಅಸಮಪ೯ಕ ಆಥಿ೯ಕ ಯೋಜನೆಗಳು 

ಉದಾ: ಬಿಹಾರ, ಮದ್ಯಪ್ರದೇಶ, ರಾಜಾಸ್ತಾನ, ಉತ್ತರ ಪ್ರದೇಶ


2 ಮುಕ್ತ ನಿರುದ್ಯೋಗ (open Unemployment)  ಎಂದರೇನು

ಉದ್ಯೋಗ ಮಾಡುವವರು ಯಾವುದೇ ಉದ್ಯೋಗವನ್ನು ಪಡೆಯಲಾದದಿರುವುದನ್ನು ಮುಕ್ತ ನಿರುದ್ಯೋಗ ಎಂದು ಕರೆಯುತ್ತಾರೆ.


3  ಚಕ್ರೀಯ ನಿರುದ್ಯೊಗ (Cyclical Unemployement) ಎಂದರೇನು

 ಆಥಿ೯ಕ ವ್ಯವಸ್ಥೆಯಲ್ಲಿನ ವ್ಯಾಪಾರಿ ಚಕ್ರಗಳ ಪರಿಣಾಮದಿಂದ ಉಂಟಾಗುವ ನಿರುದ್ಯೊಗವನ್ನು  ಚಕ್ರೀಯ ನಿರುದ್ಯೊಗ ಎಂದು ಕರೆಯುತ್ತೇವೆ.  ಆಥಿ೯ಕ ಮುಗ್ಗಟ್ಟಿನ ಸಮಯದಲ್ಲಿ ಹೂಡಿಕೆ, ಉತ್ಪಾದೆನ ಬೆಲೆಗಳಕುಸಿತದಿಂದಾಗಿನಿರುದ್ಯೊಗ ಉಂಟಾಗುತ್ತಿರುತ್ತದೆ.


4. ತಾಂತ್ರಿಕ ನಿರುದ್ಯೋಗ( Technology Unemployment) ಎಂದರೇನು

ಉತ್ಪಾದನಾ ವಲಯದಲ್ಲಿನ ಸಂಶೋದನೆ ಮತ್ತು ಆವಿಷ್ಕಾರಗಳ ಕಾರಣದಿಂದ ಉಂಟಾಗುವ ನಿರುದ್ಯೋಗವನ್ನು ತಾಂತ್ರಿಕ ನಿರುದ್ಯೋಗ ಎಂದು ಕರೆಯುತ್ತೇವೆ.

ಉದ್ಯಮದ ಉತ್ಪಾದನೆಯಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಿದಲ್ಲಿ ಕಾಮಿ೯ಕರು ನಿರುದ್ಯೋಗಿಗಳಾಗುತ್ತಾರೆ. ಅಂದರೆ ಹೊಸ ಸಂಶೋದನೆ ಆವಿಷ್ಕಾರಗಳು ತಾಂತ್ರಿಕ ಬದಲಾವಣೆಮೂಲಕ ಕಾಮಿ೯ಕರ ಬಳಕೆಯನ್ನು ಕಡಿಮೆ ಮಾಡುತ್ತವೆ.


5. ಮರೆಮಾಚಿದ ನಿರುದ್ಯೋಗ (Disguised Unemployment) ಎಂದರೇನು

ವ್ಯಕ್ತಿಯ ಸೀಮಾಂತ ಉತ್ಪಾದನೆಯು ಶೂನ್ಯವಾಗಿದ್ದರೆ ಅದನ್ನು  ಮರೆಮಾಚಿದ ನಿರುದ್ಯೋಗ  ಸನ್ನಿವೇಶಗಳಲ್ಲಿ ಒಂದು ನಿದಿ೯ಷ್ಟ ಕೆಲಸಕ್ಕೆ ಬೇಕಾಗಿರುವ ಒಟ್ಟು

ಕಾಮಿ೯ಕರಿಗಿಂತಲೂ ಅಧಿಕ ಕಾಮಿ೯ಕರು ಉತ್ಪಾದನೆಯಲ್ಲಿ ತೊಡಗಿರುತ್ತಾರೆ. 

ಇವರಲ್ಲಿ ಕೆಲವು ಕಾಮಿ೯ಕರನ್ನು ಉತ್ಪಾದನೆಯಿಂದ ಹೊರೆಗೆ ತಂದರೂ ಸಹ ಒಟ್ಟು ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.


6 ಘಷ೯ಣಾತ್ಮಕ ನಿರುದ್ಯೋಗ (friction Unemployment) ಎಂದರೇನು

ಒಂದು ನಿದಿ೯ಷ್ಠ ಉತ್ಪಾದನಾ ವ್ಯವಸ್ಥೆಯಲ್ಲಿ ಕಾಯ೯ನಿರತ ಕಾಮಿ೯ಕರು ಕಾರಾಣಾಂತರಗಳಿಂದ ನಿರುದ್ಯೋಗಿಗಳಾದರೆ ಅದನ್ನುಘಷ೯ಣಾತ್ಮಕ ನಿರುದ್ಯೋಗ ಎಂದು ಕರೆಯುತ್ತೇವೆ.

ಕಾಮಿ೯ಕ ಸಂಘಟನೆಗಳು ಕೈಗೊಳ್ಳುವ ಚಳುವಳಿಗಳು ಉದ್ಯಮ ಮಾಲಿಕರು ಮತ್ತು ಕಾಮಿ೯ಕರು ನಡುವೆ ಉಂಟಾಗುವ ಘಷ೯ಣೆ,ವ್ಯಾಜ್ಯಗಳು, ಕೈಗಾರಿಕಾ ಬೀಗಮುದ್ರೆ ಕಾರಣಗಳಿಂದ ಕಾಮಿ೯ಕರು ಉದ್ಯೋಗ 


7. ತಾತ್ಕಲಿಕ ನಿರುದ್ಯೋಗ( Temporary Unemployment) ಎಂದರೇನು

ಕೆಲವು ಅನಿರೀಕ್ಷಿತ  ಕಾರಣಗಳಿಂದ ಅಲ್ಪಾವಧಿಯಲ್ಲಿ ಉದ್ಯೋಗ ಲಭ್ಯವಾಗದ ಸ್ಥಿತಿಯನ್ನು ತಾತ್ಕಲಿಕ ನಿರುದ್ಯೋಗ ಎಂದು ಕರೆಯುತ್ತೇವೆ.

 ತಾತ್ಕಲಿಕ ನಿರುದ್ಯೋಗದಿಂದ ಕಾಮಿ೯ಕರ ಜೀವನ ಗುಣಮಟ್ಟದಲ್ಲಿಯಾವುದೇ ಬದಲಾವ ಣೆ ಗಳಾದ್ದರೂ ಸಹ ಅದಾಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ  ಅಗುತ್ತವೆ. ಸಾಮಾನ್ಯವಾಗಿ ವಿದ್ಯತ್‌,ಇಂಧನ, ಕಚ್ಛಾವಸ್ತುಗಳ ಪೂರೈಕೆ,ಹವಾಮಾನದಲ್ಲಿನ ವೈಪರೀತ್ಯಗಳಾದ ಅತೀವೃಷ್ಟಿ,ಅನಾವೃಷ್ಠಿ ಮೊದಲಾದ ಕಾರಣಗಳಿಂದ ಇಂತಹ ನಿರುದ್ಯೋಗ ಉಂಟಾಗುತ್ತದೆ.


8 ಶಿಕ್ಷಿತ ಅಥವಾ ವಿಧ್ಯಾಂತ ನಿರುದ್ಯೋಗ( Educated Unemployment) ಎಂದರೇನು

ನಿದಿ೯ಷ್ಟ ಉದ್ಯೋಗ ಮಾಡುವ ಅಹ೯ ವಿದ್ಯಾಹ೯ತೆಗಳ ತರಬೇತಿ,ಕೌಶಲ್ಯಗಳನ್ನು ಪಡೆದಿದ್ದರೂ ಉದ್ಯೋಗವು ಲಬಿಸದಿರುವುದನ್ನುವಿದ್ಯಾವಂತ ಅಥವಾ ಶಿಕ್ಷಿತ ನಿರುದ್ಯೋಗ ಎಂದು ಕರೆಯುತ್ತೇವೆ. 


9 ಅರೆ ಉದ್ಯೋಗ-( Semi Unemployment) ಎಂದರೇನು

ವ್ಯಕ್ತಿಯ ಶಕ್ತಿ ಸಾಮಥ್ಯ೯ಗಳಿಗೆ ಪೂಣ೯ ಪ್ರಮಾಣದ ಉದ್ಯೋಗ ದೊರೆಯದ ಸ್ಥಿತಿಯನ್ನು ಅರೆ ನಿರುದ್ಯೋಗ ಎಂದು ಕರೆಯುತ್ತೇವೆ. 

ಅರೆ ನಿರುದ್ಯೋಗ ಅಥವಾ ಅರೆ ಉದ್ಯೋಗ ಎಂದರೆ ದಿನದ 8 ಗಂಟೆ ದುಡಿಯುವ ಸಾಮಥ್ಯ೯ವಿರುವವನಿಗೆ ಕೇವಲ 4 ಗಂಟೆಗಳ ಉದ್ಯೊಗ ದೊರೆತರೆ ಅದು ಅರೆ ನಿರುದ್ಯೋಗ ಎನಿಸಿಕೊಳ್ಳುತ್ತದೆ.


10 ಕೌಶಲ್ಯ ಆಧಾರಿತ ನಿರುದ್ಯೋಗ ಎಂದರೇನು

ಒಂದು ನಿದಿ೯ಷ್ಠ ವೃತ್ತಿಯಲ್ಲಿ ವಿಶೇಷ ಪರಿಣಿತಿ, ಕೌಶಲ್ಯ ತರಭೇತಿ ಪಡೆದಿದ್ದು ಅವುಗಳಲ್ಲಿ ಕೆಲಸ ಪಡೆಯಲಾಗದ ಸ್ಥಿತಿಯನ್ನು ಕೌಶಲ್ಯ ಆಧಾರಿತ ನಿರುದ್ಯೋಗ ಎಂದು ಕರೆಯತ್ತಾರೆ. 


11. ಐಶ್ಚಿಕ ನಿರುದ್ಯೋಗ ಎಂದರೇನು

ಉದ್ಯೋಗ ಲಭ್ಯವಿದ್ದು ಉದ್ಯೋಗದಲ್ಲಿ ತೊಡಗಲು ಅಸಕ್ತರಾಗದೆ ನಿರುದ್ಯೋಗಳಾಗಿರುವುದಕ್ಕೆ ಐಶ್ಚಿಕ ನಿರುದ್ಯೋಗ  ಎಂದು ಕರೆಯುತ್ತಾರೆ


12 ಬಡತನ ಎಂದರೇನು

ಪ್ರತಿ ದಿನ ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಲರಿ ಹಾಗೂ ನಗರ ಪ್ರದೇಶದಲ್ಲಿ2100 ಕ್ಯಾಲರಿಗಿಂತಲೂ ಕಡಿಮೆ ಆಹಾರ ಸೇವಿಸುವವರು ಬಡತನ ರೇಖೆಗಿಂತ ಕೆಳಗಿರುವವರುʼ ಎಂದು ಕರೆಯುವರು

\


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions