14 Mar ನೂತನ ಶಿಲಾಯುಗ New
ಪ್ರಶ್ನೆ 3 ನೂತನ ಶಿಲಾಯುಗ/ನವಶಿಲಾಯುಗ ಬಗ್ಗೆ ತಿಳಿಸಿ
1 ಇದಕ್ಕೆ ಗ್ರೀಕ್ ಭಾಷೆಯಲ್ಲಿ neolithic age ಎನ್ನುವರು.
2 ಈ ಯುದಲ್ಲಿ ತನ್ನ ಪೂವಿ೯ಕರಿಗಿಂತ ಹೆಚ್ಚು ಹೊಳಪಾದ, ಹರಿತವಾದ ಕಲ್ಲಿನ ಆಯುಧಗಳನ್ನು ಬಲಸಲು ಅರಂಭಿಸಿದನು.
3 ಈ ಯುಗದಲ್ಲಿ ಆಯುಧಗಳ ಸ್ವರೂಪ ಬದಲಾಗಿದೆ, ಮಾನವ ಜೀವನ ಸ್ವರೂಪವೂ ಬದಲಾಯಿತು.
4 ಈ ಯುಗದ ಮಾನವಗುಹೆಗಳಲ್ಲಿ ವಾಸಿಸುವುದಲ್ಲದೆ,ವಾಸಕ್ಕೆ ಮಾನೆಗಳನ್ನು ಕಟ್ಟಾಲಾರಂಭಿಸಿದನು.
5 ಗುಹೆಗಳ ಗೊಡೆಯ ಮೇಲೆ ಬೇಟೆ ಮತ್ತು ನೃತ್ಯದ ಚಿತ್ರ ಬಿಡಿಸುತ್ತಿದ್ದನು.
6 ಅಲೆಮಾರಿ ಮಾನವ ಒಂದೇ ಕಡೆ ನೆಲೆ ನಿಂತು ಭೂಮಿಯನ್ನು ಹದಗೊಳಿಸಿ ವ್ಯವಸಾಯ ಮಾಡಲು ಅರಂಭಿಸಿದನು. ಈತನಿಗೆ ಮೊದಲ ಕೃಷಿಕ ಎನ್ನುವರು. ಆದ್ದರಿಂದ ಈ ಯುಗ ಸ್ಥಿರ ಜೀವನದ ಸಂಕೇತವಾಯಿತು.
7 ಚಕ್ರದ ಸಹಾಯದಿಂದ ಮಣ್ಣಿನ ಮಡಿಕೆ ಮಾಡಲು ಆರಂಭಿದನು. ಮತ್ತು ಅವುಗಲ ಮೇಲೆ ಚಿತ್ರ ಬಿಡಿಸುತ್ತಿದ್ದನು.
8 ಮನುಷ್ಯನೊಡನೆ ಸಾಕು ನಾಯಿಯನ್ನು ಹೂಳಲಾಗುತ್ತಿತ್ತು.
9 ಮನುಷ್ಯನ ಹೂಳುವಾಗ ದೊಡ್ಡ ಕುಂಭ ಅಥವಾ ಮಡಿಕೆಗಳಲ್ಲಿ ಹೂಳಿ ಮೇಲೆ ವೃತ್ತಾಕಾರದ ೩ ಕಂಬಗಳ ಮೇಲೆ ಚಾವಣಿ ಹೊದಿಸಿರುವ ಸಮಾಧಿಗಳಿಗೆ ಡಾಲ್ಮೆನ್ ಎನ್ನುವರು.
ಇಂಥ ಸಮಾಧಿಗಳು ನವಶಿಲಾಯುಗದ ವೈಶಿಷ್ಟಗಳಾಗಿವೆ.
10 ಮನುಷ್ಯ ಸಾಮೂಹಿಕವಾಗಿ ವಾಸಿಸುವುದನ್ನು ಕಲಿತನು. ಆದ್ದರಿಂದ ಹಳ್ಳಿಗಳು ರಚನೆಯಾದವು.
11 ಈ ಯುಗದೊಂದಿಗೆ ಮಾನವನ ನಾಗರಿಕತೆ ಆರಂಭವಾಯಿತು.