14 Mar ಸಿಂಧೂ ನಾಗರಿಕತೆ New
ಪ್ರಶ್ನೆ 1.ಸಿಂಧೂ ನಾಗರಿಕತೆ ನಗರ ಯೋಜನೆ ಬಗ್ಗೆ ತಿಳಿಸಿ
1 ಇದು ಜಗತ್ತಿನ ಮೊಟ್ಟ ಮೊದಲ ನಗರ ನಾಗರಿಕತೆ ಯಾಗಿದೆ.
2 ಇದು ಜಗತ್ತಿನಲ್ಲಿ ಮೊಟ್ಟ ಮೊದಲ ಒಳ ಚರಂಡಿ ವ್ಯವಸ್ಥೆ ಅಳವಡಿಸಿಕೊಂಡ ನಾಗರಿಕತೆಯಾಗಿದೆ.
3 ಸಿಂಧೂ ಜನರ ಮನೆಗಳು ಚದುರಂಗದಾಕಾರದಲ್ಲಿದ್ದವು
4 ರಸ್ತೆಗಳು ನೇರ ಮತ್ತು ಅಗಲವಾಗಿದ್ದವು.
5 ಮನೆಗಳು ರಸ್ತೆಯ ಅಂಚನ್ನು ದಾಟುವಂತಿರಲಿಲ್ಲ
6 ರಸ್ತೆಗಳ ಪಕ್ಕದಲ್ಲಿ ಬೀದಿ ದೀಪದ ಕಂಬಗಳಿದ್ದವು.
7 ಮನೆಗಳು ಮತ್ತು ಚರಂಡಿಗಳು ಸುಟ್ಟ ಇಟ್ಟಿಗೆಗಳಿಂದ ನಿಮಿ೯ಸುತ್ತಿದ್ದರು.
8 ರಸ್ತೆಗಳು ಸುಟ್ಟ ಇಟ್ಟಿಗೆಯ ಪುಡಿ ಮತ್ತು ಗಾರೆಕಲ್ಲುಗಳಿಂದ ನಿಮಿ೯ಸತ್ತಿದ್ದರು.
9 ಚರಂಡಿಗಳನ್ನು ಸ್ವಚ್ಚಗೊಳಿಸಲು ಅಲ್ಲಲ್ಲಿ ಜಾಲಂಧ್ರಗಳನ್ನು ಬಿಡುತ್ತಿದ್ದರು.
10 ನಗರಗಳು ಕೋಟೆಗಳಿಂದ ರಕ್ಷಣೆ ಪಡೆದುಕೊಂಡಿದ್ದವು.
12 ನಗರಗಳಿಗೆ ಹೋಗಿ ಬರಲು ಪ್ರವೇಶದ್ವಾರಗಳಿದ್ದವು.
13 ಸಿಂಧೂ ನಾಗರಿಕತೆಯ ನಗರ ಯೋಜನೆ ಏಕೈಕ ದೋಷವೆಂದರೆ ಚರಂಡಿ ಪಕ್ಕದಲ್ಲಿ ಬಾವಿಗಳನ್ನು ನಿಮಿ೯ಸುತ್ತಿದ್ದರು.
ಪ್ರಶ್ನೆ 2. ಸಾಮಾಜಿಕ ಜೀವನ ಬಗೆ ತಿಳಿಸಿ
1 ಸಮಾಜದಲ್ಲಿ ವಗ೯ ಭೇದವಿರಲ್ಲಿಲ್ಲ.
2 ಸಿಂಧೂ ಜನರು ಸೌಂದಯ೯ಪ್ರಿಯರಾಗಿದ್ದರು.
3 ಸಿಂಧೂ ಜನರು ಹತ್ತಿ, ಉಣ್ಣೆ ಮತ್ತು ಚಮ೯ದಿಂದ ಮಾಡಿದ ಉಡುಪುಗಳನ್ನು ಧರಿಸುತ್ತಿದ್ದರು.
4 ಸಿಂಧೂ ಸ್ರೀಯರು ಓಲೆ, ಮೂಗುತಿ, ಕಂಠಿಹಾರ, ತೋಳಬಂಧಿ, ಟೊಂಕಪಟ್ಟಿ ಮತ್ತು ಕಾಲಿಗೆ ಗೆಜ್ಜೆಗಳನ್ನು ಕಟ್ಟುತ್ತಿದ್ದರು.
5 ಸಿಂಧೂ ಪುರುಷರು ಕೈ ಕಡಗವನ್ನು ಧರಿಸುತ್ತಿದ್ದರು.
6 ಸಿಂಧೂ ಸ್ರೀಯರಿಗೆ ವಿವಿಧ ರೀತಿಯ ಕೇಶಾಲಂಕಾರ ಕಲೆಯ ಬಗ್ಗೆ ಗೊತ್ತಿತ್ತು.
7 ಅವರು ದಂತದ ಬಾಚಣಿಗೆ ಮತ್ತು ಕಂಚಿನ ಕನ್ನಡಿ ಬಳಸುತ್ತಿದ್ದರು.
8 ಸಿಂಧೂ ಜನರು ಮಿಶ್ರಾಹಾರಿಗಳಾಗುದ್ದರು.
ಪ್ರಶ್ನೆ 3. ಸಿಂಧೂ ನಾಗರಿಕತೆಯ ಧಾಮಿ೯ಕ ಜೀವನ ಬಗ್ಗೆ ತಿಳಿಸಿ
1 ಸಿಂಧೂ ಜನರ ಆರಾಧ್ಯ ದೇವತೆ ಮಾತೃದೇವತೆ.
2 ಸಿಂಧೂ ಜನರ ಆರಾಧ್ಯದೇವರು ಪಶುಪತಿ.
3 ಈ ಪಶುಪತಿ ವಿಗ್ರಹವು ಮೆಂಹಜೊದಾರೋದಲ್ಲಿ ದೊರೆತ್ತಿದ್ದು ಅದರ ಸುತ್ತಲೂ ಕೋಣ,ಹುಲಿ, ಆನೆ, ಘೇಂಡಾಮೃಗ ಮತ್ತು ಪಾದದ ಬಳಿಎರಡು ಜಿಂಕೆಗಳು ಕಂಡು ಬಂದಿವೆ.
4 ಸಿಂಧು ಜನರ ಪೂಜ್ಯನೀಯ ಪ್ರಾಣಿ ಡುಬ್ಬದ ಗೂಳಿ.
5 ಸಿಂಧೂ ಜನರ ಪೂಜ್ಯನೀಯ ಪಕ್ಷಿ ಪಾರಿವಾಳ.
6 ಸಿಂಧೂ ಜನರ ಪೂಜ್ಯನೀಯ ಮರ ಅರಳಿಮರ.
7 ಸಿಂಧೂ ಜನರ ಧಾಮಿ೯ಕ ಚಿಹ್ನೆ ಸ್ವಸ್ತಿಕ್
8 ಸಿಂಧೂ ಜನರಿಗೆ ಯಜ್ನಯಾಗಾದಿಗಳ ಬಗ್ಗೆ ಕಲ್ಪನೆ ಇತ್ತು.
9 ಯಜ್ನಕುಂಡಗಳು ಕಂಡು ಬಂದ ಸ್ಥಳ ಕಾಲಿಬಂಗಾನ ಮತ್ತು ಲೋಥಾಲ್
10 ಸಿಂಧೂ ಜನರಿಗೆ ಪವಿತ್ರ ಸ್ನಾನದ ಬಗ್ಗೆ ಕಲ್ಪನೆ ಇತ್ತು.
ಪ್ರಶ್ನೆ 4. ಸಿಂಧೂ ಜನರ ಆಥಿ೯ಕ ಜೀವನ ಬಗ್ಗೆ ತಿಳಿಸಿ
1 ಸಿಂದೂ ಜನರ ಮುಖ್ಯ ಉದ್ಯೋಗ ಕೃಷಿ ಮತ್ತು ಪಶು ಸಂಗೋಪನೆ
2 ಸಿಂಧೂ ಜನರ ಮುಖ್ಯ ಆಹಾರ ಬೆಳೆಗಳೆಂದರೆ ಗೋಧಿ, ಬಾಲಿ೯,ಭತ್ತ, ರಾಗಿ.
3 ಸಿಂಧೂ ಜನರ ಮುಖ್ಯ ವಾಣಿಜ್ಯ ಬೆಳೆಗಳೆಂದರೆ ಹತ್ತಿ, ಎಳ್ಳು,ಸಾಸುವೆ, ಕಲ್ಲಂಗಡಿ ಮತ್ತು ಖಜೂ೯ರ
4 ಸಿಂಧೂ ಜನರು ಆಂತರಿಕ ಮತ್ತು ವಿದೇಶಗಳೋಂದಿಗೆ ವ್ಯಾಪಾರ ಮಾಡುತ್ತಿದ್ದರು.
ಪ್ರಶ್ನೆ 5. ಸಿಂಧೂ ಜನರ ಆಂತರಿಕ ವ್ಯಾಪಾರದ ಬಗ್ಗೆ ತಿಳಿಸಿ (ಆಮದು)
ಸಿಂಧೂ ಜನರು, ತಮ್ಮ ಸುತ್ತಲಿನ ಪ್ರದೇಶಗಳಿಂದ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು.
1 ಕನಾ೯ಟಕ (ಕೋಲಾರ) ಚಿನ್ನವನ್ನು ತರಿಸಿಕೊಳ್ಳುತ್ತಿದ್ದರು
2 ರಾಜಸ್ಥಾನ - ತಾಮ್ರವನ್ನು ತರಿಸಿಕೊಳ್ಳುತ್ತಿದ್ದರು
3 ಗುಜರಾತ - ತೇಗದ ಮರಗಳು ತರಿಸಿಕೊಳ್ಳುತ್ತಿದ್ದರು
4 ಹಿಮಾಲಯ - ಆವೇ೯ದ ಔಷಧಿಗಳು ತರಿಸಿಕೊಳ್ಳುತ್ತಿದ್ದರು
5 ಅಫಘಾನಿಸ್ತಾನ - ಬೆಳ್ಳಿ ಸತು & ಸುಗಂಧ ದ್ರವ್ಯ ತರಿಸಿಕೊಳ್ಳುತ್ತಿದ್ದರು
6 ಬದಖಸ್ತಾನ - ಅಭ್ರಕ ಅಥವಾ ಮೈಕಾ ತರಿಸಿಕೊಳ್ಳುತ್ತಿದ್ದರು
7 ಬಾಲಕೋಟ - ಶಂಖಗಳು ತರಿಸಿಕೊಳ್ಳುತ್ತಿದ್ದರು
8 ಮಾಂಡು - ಸೀಸ ತರಿಸಿಕೊಳ್ಳುತ್ತಿದ್ದರು
9 ಲೋಥಾಲ್ - ಹತ್ತಿ ತರಿಸಿಕೊಳ್ಳುತ್ತಿದ್ದರು
ಪ್ರಶ್ನೆ6. ವಿದೇಶದೊಂದೆಗೆ ವ್ಯಾಪಾರ ಬಗ್ಗೆ ತಿಳಿಸಿ
1 ಸಿಂಧೂ ನಾಗರಿಕತೆಯ ಸಮಕಾಲಿನ ನಾಗರಿಕತೆಯಾದ ಈಜಿಪ್ತ, ಮೆಸಪಟೊಮಿಯಾ ಮತ್ತು ಚೀನಾ ನಾಗರಿಕತೆಗಳೊಂದಿಗೆ ಭೂ ಮತ್ತು ಜಲಮಾಗ೯ದ ಮೂಲಕ ವ್ಯಾಪಾರ ಏನಿಮಯ ನಡಿಯುತ್ತಿತ್ತು
2 ವಿದೇಶಿ ವ್ಯಾಪಾರ ವಿನಿಮಯ ಕೇಂದ್ರಗಳೇಂದರೆ ಲೋಥಾಲ್, ಸೂಕ್ತಜಂಡರ್, ಚುನ್ಹದಾರೋ, ಸುರಕೊಟ್ಟ
ಪ್ರಶ್ನೆ7 ಸಿಂಧೂ ಜನರ ಮನರಂಜನೆಗಳ ಬಗ್ಗೆ ತಿಳಿಸಿ
1 ಸಿಂಧೂ ಸ್ರೀಯರು ಒಳಾಂಗಣ ಕ್ರೀಡೆಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರು.
ಅವುಗಳೆಂದರೆ ಚದುರಂಗ, ಪಗಡೆ, ನೃತ್ಯ ಸಂಗೀತ.
2 ಪುರುಷರು ಹೊರಾಂಗಣ ಕ್ರೀಡೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಅವುಗಳೆಂದರೆ ಗೂಳಿಕಾಳಗ, ಪಕ್ಷಿ
ಕಾಳಗ, ಬೇಟೆಗಾರಿಕೆ, ಮಲ್ಲಯುದ್ದ ಮುಂತಾದವುಗಳು.
ಪ್ರಶ್ನೆ 8 ಸಿಂಧೂ ಜನರ ಲಿಪಿ ಬಗ್ಗೆ ತಿಳಿಸಿ
1 ಇವರ ಲಿಪಿ ಚಿತ್ರಾಕಾರವಾಗಿತ್ತು ಅದರ ಮೊದಲ ಸಾಲು ಎಡದಿಂದ ಬಲಕ್ಕೆ ಉಳಿದೆಲ್ಲ ಸಾಲುಗಳು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.ಈ ಲಿಪಿಯನ್ನು BSTROPEDNNU ಎಂದು ಕರೆಯುತ್ತಿದ್ದರು.
ಉದಾ; ಸಿಂಧೂ ಜನರು ಬಳಸಿದ ಚಿತ್ರಗಳೆಂದರೆ ಮಾನವ ಮಡಿಕೆಗಳು ಹಡಗು, ನವಿಲು ಮತ್ತು ಗುಲಾಬಿ ಹೂ
2 ಈ ಭಾಷೆ ಮತ್ತು ಲಿಪಿಯನ್ನು ಅಧ್ಯಯನ ಮಾಡಿದವರು ಐರಾವತ ಮಹಾದೇವತ್
3 ಇವರು ಈ ಭಾಷೆಯು ಡ್ರಾವಿಡ ಗುಂಪಿಗೆ ಸೇರಿದೆ ಎಂದಿದ್ದಾರೆ.
ಪ್ರಶ್ನೆ 9 ಸಿಂಧೂ ಜನರ ಶವಸಂಸ್ಕಾರ ಪದ್ದತಿ ಬಗ್ಗೆ ತಿಳಿಸಿ
1 ಸಿಂಧೂ ಜನರು ಶವಗಳನ್ನು ಹೆಚ್ಚಾಗಿ ಮಣ್ಣಿನಲ್ಲಿ ಹೂಳುತ್ತಿದ್ದರು. ಸುಡುವ ಪದ್ದತಿ ಕಡಿಮೆ ಇತ್ತು.
2 ಕೆಲವೊಂದು ಸಂದಭ೯ದಲ್ಲಿ ಶವಗಳನ್ನು ನಿಜ೯ನವಾದ ಪ್ರದೇಶದಲ್ಲಿಟ್ಟು ಬರುತ್ತಿದ್ದರು. (ಪ್ರಾಣಿ - ಪಕ್ಷಿಗಳಿಗೆ ಆಹಾರವಾಗಲೆಂದು)
3 ಶವದ ಪೆಟ್ಟಿಗೆ ಮೊದಲು ಕಂಡು ಬಂದ ಸ್ಥಳ ಮೆಹೆಂಜೋದಾರೊ.
ಪ್ರಶ್ನೆ 10 ಸಿಂಧೂ ನಾಗರಿಕತೆಯ ಅವನತಿಗೆ ಕಾರಣಗಳ ಬಗ್ಗೆ ತಿಳಿಸಿ
1 ಸಿಂಧೂ ನಾಗರಿಕತೆಯ ಅವನತಿ ಕುರಿತು ಬೇರೆ ಬೇರೆ ವಿದ್ವಾಂಸರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕಾರಣ
a ನದಿಯ ಪ್ರವಾಹ
b ಭೂ ಕಂಪನ
c ಹವಮಾನ ಬದಲಾವಣೆ
d ಆಯ೯ರ ದಾಳಿ
e ಆಣೆಕಟ್ಟುಗಳ ನಾಶ