15 Mar ಖಿಲ್ಜಿ ಸಂತತಿ New
ಪ್ರಶ್ನೆ 1 ಜಲಾಲುದ್ದಿನ್ ಖಿಲ್ಜಿ ಕ್ರಿ.ಶ 1290-1296 ಬಗ್ಗೆ ತಿಳಿಸಿ
1. ಈತ ಖಿಲ್ಜಿ ಮನೆತನದ ಸ್ಥಾಪಕ.
2. ಕ್ರಿ.ಶ 1290 - 1291 ರಲ್ಲಿ ಬಲ್ಬನನ ಸಂಬಂಧಿ ಮಲ್ಲಿಕ್ ಚಚ್ಚು ದೆಹಲಿಯ ಮೇಲೆ ದಾಳಿ ಮಾಡಿದಾಗ ಅಳಿಯ ಅಲ್ಲಾವುದ್ದೀನ್ ಖಿಲ್ಜಿ ಈ ದಾಳಿಯನ್ನು ಅಡಗಿಸಿದನು.ಸಂತೋಷಗೊಂಡ ಜಲಾಲುದ್ದಿನ್ ಅಳಿಯನನ್ನು ಕಾರಾ ಮತ್ತು ಮಾಣಿಕ್ ನಗರದ ಮುಖ್ಯಸ್ಥನನ್ನಾಗಿ ಮಾಡಿದನು.
3. ಕ್ರಿ.ಶ 1292 ರಲ್ಲಿ ಮಂಗೋಲರು ಹಲೂಕ ಅಬ್ದುಲ್ ನ ನೇತೃತ್ವದಲ್ಲಿ ದೆಹಲಿಯ ಮೇಲೆ ದಾಳಿ ಮಾಡಿದಾಗ ಜಲಾಲುದ್ದಿನ್ ಖಿಲ್ಜಿಯೇ ಈ ದಾಳಿಯನ್ನು ಅಡಗಿಸಿದನು.
4.. ಕ್ರಿ.ಶ 1292-93 ರಲ್ಲಿ ಮಂಗೋಲರು ಹಲಗುವಿನ ಮೊಮ್ಮಗ ಉಲುಗುವಿನ ನೇತೃತ್ವದಲ್ಲಿ ದಾಳಿಮಾಡಿ ಜಲಾಲುದ್ದಿನ್ ಖಿಲ್ಜಿಯೊಂದಿಗೆ ಒಪ್ಪಂದ ಮಾಡಿಕೊಂಡು 30,000 ಮಂಗೋಲರು ಇಸ್ಲಾಂ ಧಮ೯ವನ್ನು ಸ್ವೀಕರಿಸಿ ಭಾರತೀಯರಾಗಿಯೇ ಉಳಿದರು ಇವರನ್ನೇ ನವ ಮುಸಲ್ಮಾನರೆಂದು ಕರೆಯುತ್ತಾರೆ.
5. ಕ್ರಿ.ಶ 1292 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ಮಾವನ ಅನುಮತಿಯನ್ನು ಪಡೆದುಕೊಂಡು ಬಿಲ್ಸಾದ ಮೇಲೆ ದಾಳಿ ಮಾಡಿ ಅಪಾರವಾದ ಸಂಪತ್ತನ್ನು ಜಲಾಲುದ್ದಿನ್ ಖಿಲ್ಜಿಗೆ ತಂದು ಒಪ್ಪಿಸಿದನು.
6. ಕ್ರಿ.ಶ. 1296 ರಲ್ಲಿ ಅಲ್ಲಾವುದ್ದಿನ್ ಖಿಲ್ಜಿ ತನ್ನ ಮಾವನ ಅನುಮತಿ ಪಡೆಯದೆ ದೇವಗಿರಿಯ ರಾಮಚಂದ್ರನ ಮೆಲೆ ದಾಳಿ ಮಾಡಿ ಅಪಾರವಾದ ಸಂಪತ್ತು ಕೊಳ್ಳೆ ಹೊಡೆದನು.ಆಗ ಜಲಾಲುದ್ದಿನ್ ಖಿಲ್ಜಿ ಕೋಪಗೊಂಡನು ಕೊಪಗೊಂಡ ಮಾವನನ್ನು ನಗರಕ್ಕೆ ಬರುವಂತೆ ಮಾಡಿ ಕ್ಷಮೆ ಕೋರುವ ನೆಪದಲ್ಲಿ ತನ್ನ ಮಾವನನ್ನು ಕೊಂದು ಅಧಿಕಾರಕ್ಕೆ ಬಂದನು.
ಪ್ರಶ್ನೆ 4. ಅಲ್ಲಾವುದ್ದಿನ್ ಖಿಲ್ಜಿಯ ಸಾಧನೆಗಳು ಬಗ್ಗೆ ತಿಳಿಸಿ
1.ಅಲ್ಲಾವುದ್ದಿನ್ ಖಿಲ್ಜಿಯ ಮಹತ್ವದ ಸುಧಾರಣೆ ಎಂದರೆ ಮಾರುಕಟ್ಟೆ ಸುಧಾರಣೆ
2. ಮಾರುಕಟ್ಟೆ ಇಲಾಖೆಯನ್ನು ದಿವಾನ್ - ಇ -ರಿಯಾಸತ್ ಎಂದು ಕರೆಯುತ್ತಿದ್ದರು.
3.ಮಾರುಕಟ್ಟೆ ಅಧಿಕಾರಿಯನ್ನು ಷಹನ್ - ಐ - ಮಂಡಿ ಎಂದುಕರೆಯುತ್ತಿದ್ದರು
4. ಸೈನಿಕ ಇಲಾಖೆಯಲ್ಲಿ ಕುದುರೆಗಳಿಗೆ ಮುದ್ರ ಹಾಕುವ ಗಾಗ್ ಎಂಬ ಪದ್ದತಿ ಜಾರಿಗೆ ತಂದನು.
5. ಸೈನಿಕರ ಮುಖ ಲಕ್ಷಣ ಬರೆದಿಡುವ ಹುಲಿಯಾ ಚಹರೆ ಎಂಬ ಪುಸ್ತಕದ ಜಾರಿಗೆ ತಂದನು.
6. ಈತನ ಆಸ್ಥಾನದಲ್ಲಿ 4,75,000 ಸೈನಿಕರು 50,000 ಗುಲಾಮರಿದ್ದರು.
7. ದಿವಾನ್ - ಇ - ಮಸ್ತಕರಾಜ ಎಂಬ ಹೊಸ ಕಂದಾಯ ಇಲಾಖೆಯನ್ನು ಆರಂಭಿಸಿದನು.
8.ಮಂಗೋಲರ ದಾಳಿ ತಡೆಗಟ್ಟುವ ಉದ್ದೇಶದಿಂದ ಸಿಂಧೂ ನದಿಗೆ ಕೋಟೆಯನ್ನು ಕಟ್ಟಿಸಿದನು.
9.ಅಲ್ಲಾವುದ್ದಿನ್ ಖಿಲ್ಜಿಜಿಯ ಪ್ರಸಿದ್ದ ಕಟ್ಟಡಗಳು
ಅಲಾಯಿ ದವಾ೯ಜ
ಅಲಾಯಿ ಮಿನಾರ್
ಜಮಾಯತ್ ಖಾನ್
10.ಈತನ ಆಸ್ಥಾನದಲ್ಲಿ ಭಾರತದ ಗಿಳಿ ಎಂದು ಖ್ಯಾತವಾದ ಅಮೀರ್ ಖುಸ್ರೋ ಆಶ್ರಯ ಪಡೆದುಕೊಂಡಿದ್ದನು, ಈತ ಭಾರತಕ್ಕೆ ಸಿತಾರ ಮತ್ತು ತಬಲಾ ವಾದ್ಯಗಳನ್ನು ಪರಿಚಯಿಸಿದನು
11 ಅಲಾವುದ್ದಿನ್ ಖಿಲ್ಜಿ 30,000 ಜನ ನವಮುಸಲ್ಮಾನರನ್ನು ಒಂದೇ ದಿನದಲ್ಲಿ ಕೊಲೆ ಮಾಡಿಸಿದನು..
12. ಈತ ಜಲರೋಗದಿಂದ ಬಳಲುತ್ತಿದ್ದು ಕ್ರಿ.ಶ. 1316 ರಲ್ಲಿ ತನ್ನ ದಂಡ ನಾಯಕ ಮಲ್ಲಿಕ್ ಕಾಫರ್ ನಿಂದ ವಿಷಪ್ರಾಶನಕ್ಕೆ ಒಳಗಾಗಿ ಮರಣ ಹೊಂದಿದನು.
13.ಮಲ್ಲಿಕ್ ಕಾಫರ ಅಲ್ಲಾವುದಿನ್ ಖಿಲ್ಜಿಯ 6 ವಷ೯ದ ಮಗ ಶಿಯಾಬ್- ಉದ್- ದಿನ್- ಕಾಲ ಅತ್ಯಮತ ಕ್ರೂರವಾದ ಆಳ್ವಿಕೆ ಮಾಡಿದನು, ಆಗ ದೆಹಲಿಯ ಜನತೆ ಮಲ್ಲಿಕಾಫರನನ್ನು ಕೊಲೆ ಮಾಡಿ ಕುತ್ಬುದ್ದಿನ್ ಮುಬಾರಕ್ನನ್ನು ಅಧಿಕಾರಕ್ಕೆ ತಂದರು.