15 Mar ಸೈಯದ್‌ ಮತ್ತು ಲೋದಿ ಸಂತತಿ New

  ಪ್ರಶ್ನೆ 1.  ಸೈಯದ್‌ ಸಂತತಿ ಕ್ರಿ.ಶ 1414-1451 ಬಗ್ಗೆ ತಿಳಿಸಿ


1.ಇವರು ಮಹಮ್ಮದ ಪೈಗಂಬರನ ವಂಶಸ್ಥರು.
2. ಇಸ್ಲಾಂ ಬಾಂಧವರಲ್ಲಿ ಸೈಯ್ಯದ್‌ ಎಂದರೆ ಉನ್ನತವಾದ ವಗ೯ ಎಂದಥ೯

 ಪ್ರಶ್ನೆ 2.   ಖಜ್‌ ಕಅನ್‌ ಕ್ರಿ.ಶ 1414- 1420  ಬಗ್ಗೆ ತಿಳಿಸಿ

1. ಈತ ಸೈಯದ್‌ ಸಂತತಿಯ ಸ್ಥಾಪಕ.
2.ಈತ ತನ್ನ ಜೀವಿತಾವಧಿಯವರೆಗೂ ತೈಮೂರನ ಮಗ ಶಾರುಖನಿಗೆ ಕಪ್ಪ ಕಾಣಿಕೆ ಸಲ್ಲಿಸಿದನು.

ಪ್ರಶ್ನೆ 3.   ಮುಜಾರಕ ಷ ಕ್ರಿ.ಶ 1421-1434 ಬಗ್ಗೆ ತಿಳಿಸಿ

1ತನ್ನ ಆಡಳಿತದಲ್ಲಿ ಹಿಂದೂಗಳನ್ನುನೇಮಿಸಿಕೊಂಡ ಮೊಟ್ಟ ಮೊದಲ ದೆಹಲಿ ಸುಲ್ತಾನ.
2. ಈತ ಯಮುನಾ ನದಿಯ ದಂಡೆಯ ಮೇಲೆ ಮುಬಾರಕಾಬಾದ ನಗರ ದಂಡೆಯ ಮೇಲೆ ಮುಬಾರಕಾಬಾದ ನಗರ ನಿಮಿ೯ಸಿದನು.
3.ಈತ ಜಮಿನ್ದಾರರಿಗೆ ನೀಡಿದ ಅಧಿಕಾರ ವಂಶ ಪಾರಂಪರ್ಯವೆಂದು ಹೇಳಿ ಅವರನ್ನು 3 ವಷ೯ಗಳಿಗೊಮ್ಮೆ ಹೇಳಿ ಅವರನ್ನು 3 ವಷ೯ಗಳಿಗೊಮ್ಮೆ ವಗಾ೯ಯಿಸುತ್ತಿದ್ದನು.
4. ಮುಬಾರಕ ನಗರದಲ್ಲಿ ವಜೀರನಾದ ಸವ೯ರ್‌ ಉಲ್‌ ಮುಲ್ಕನು ಇವನನ್ನು ಕೊಲೆ ಮಾಡಿದನು.

  ಪ್ರಶ್ನೆ 4.  ಮಹಮ್ಮದ ಷಾ ಕ್ರಿ.ಶ 1434-1445  ಬಗ್ಗೆ ತಿಳಿಸಿ

1.ವಜೀರನಾದ ಸವ೯ರ ಉಲ್‌ ಮುಲ್ಕನನ್ನು ಕೊಲೆ ಮಾಡಿ ಅಧಿಕಾರಕ್ಕೆ ಬಂದನು.
2.ಬಹಲೂಲ ಲೋದಿಗೆ ಖಾನ್‌ ಮತ್ತು ಮಲ್ಲಿಕ್‌ ಎಂಬ ಬಿರುದುಗಳ್ನು ನೀಡಿದನು.

 ಪ್ರಶ್ನೆ 5.   ಅಲ್ಲಾವುದ್ದಿನ ಅಲಂ ಷಾ ಕ್ರಿ.ಶ 1445-1451 ಬಗ್ಗೆ ತಿಳಿಸಿ

1. ಸೈಯದ ಸಂತತಿಯ ಕೊನೆಯ ಅರಸ
2. ತನ್ನ ಮಂತ್ರಿ ಹಮೀದಖಾನನಿಗೆ ಹೆದರಿ ಲೋದಿ ಎಂಬಾತನು ಕೊಲೆ ಮಾಡಿ ಲೋದಿ ಸಂತತಿಗೆ ಅಡಿಪಾಯ ಹಾಕಿದನು.

ಪ್ರಶ್ನೆ 6.   ಲೋದಿ ಸಂತತಿ ಕ್ರಿ.ಶ 1451-1526 ಬಗ್ಗೆ ತಿಳಿಸಿ

1.ಇದು ಅಪಘಾನಿಸ್ತಾನದ ಪಠಾಣ ಪಂಗಡಕ್ಕೆ ಸೇರಿದ ಮನೆತನ 
2. ದೆಹಲಿ ಸುಲ್ತಾನರ ಕೊನೆಯ ಮನೆತನ
ಬಹಲೂಲ ಲೋದಿ ಕ್ರಿ.ಶ 1451-1489
1.ಈತ ಲೋದಿ ವಂಶದ ಸ್ಥಾಪಕ
2. ಅಫಘಾನಿಸ್ಥಾನದ ಮುಖಂಡರನ್ನು ಕರೆದು ತನ್ನ ಆಡಳಿತದಲ್ಲಿ ಉನ್ನತವಾದ ಹುದ್ದೆಗಳನ್ನು  ನೀಡಿದನು.
3.ಪಷಿ೯ಯಾದ ದೊರೆ ಮಹಮ್ಮದ - ಷಾ- ಶಕಿ೯ಯಿಂದ  ಶ್ರೀಮಂತ ಪ್ರದೇಶವಾದ ಚೌನಾಪುರವನ್ನು ವಶಪಡಿಸಿಕೊಂಡನು.
ಸಿಕಂದರ ಲೋದಿ ಕ್ರಿ.ಶ 1489-1517
1.ಲೋದಿ ಸಂತತಿಯ ಅತ್ಯಂತ ಪ್ರಸಿದ್ದ ಅರಸ
2. ಮೂಲ ಹೆಸರು - ನಿಜಾಂ ಖಾನ್‌
3.ಹಿಂದೂ ಅಕ್ಕಸಾಲಿಗನ ಮಗಳ ಮಗನಾಗಿದ್ದರೂ ಹಿಂದೂಗಳನ್ನು ವಿರೋಧಿಸಿದ 2ನೇ ದೆಹಲಿ ಸುಲ್ತಾನ.
4.ಬಹಲೂಲ ಲೋದಿಯ 3ನೇ ಮಗನಾಗಿದ್ದನು. ಈತ ಬಹಲೂಲ ಲೋದಿಯ ಮರಣ ನಂತರ ಸಿಂಕದರ ಷಾ ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದನು
5.ಹಿಂದೂಗಳಿಗೆ ಥಾಣೇಶ್ವರದ ಕೆರೆಯಲ್ಲಿ ಸ್ನಾನ ಮಾಡದಂತೆ ನಿಷೇಧ ಹೇರಿದನು.
6. ಮೊಹರಂ ಸಂದಭ೯ದಲ್ಲಿ ತೆಜಿಮಸ್‌ ಅಥವಾ ಡೋಲಿ ಮೆರವಣಿಗೆಯನು ನಿಷೇದಿಸಿದನು.
7. ಮಥುರಾ,ಚಂದೇರಿ ಮತು ಮಂದ್ರೆಲಾ ಎಂಬ ನಗರಗಳಲ್ಲಿನ ಅನೇಕ ಹಿಂದೂ ದೇವಾಲಯಗಳನ್ನು ನಾಶ ಮಾಡಿದನು.
8. ಹಿಂದೂ ದೇವರ ವಿಗ್ರಹದ ಚೂರುಗಳನ್ನು ಮಾಂಸದ ಅಂಗಡಿಯ ತೂಕದ ಕಲ್ಲುಗಳಾಗಿ ಮಾಡಿದನು.
9.ಕ್ರಿ.ಶ 1504 ರಲ್ಲಿ ಯಮುನಾ ನದಿಯ ದಂಡೆಯ ಮೇಲೆ ಆಗ್ರಾ ಎಂಬ ನಗರವನ್ನು ನಿಮಿ೯ಸಿ ರಾಜಧಾನಿ ದೆಹಲಿಯಿಂದ ಆಗ್ರಾ ನಗರಕ್ಕೆ ವಗಾ೯ಯಿಸಿದನು.
10. ಭೂ ಮಾಪನಕ್ಕಾಗಿ  ಸಿಕಂದರಗಜ್ಜ ಎಂಬ ಸಾಧನವನ್ನು ಬಳಸಿದನು.

 ಪ್ರಶ್ನೆ7.   ಇಬ್ರಾಹಿಂ ಲೋದಿ ಕ್ರಿ.ಶ 1517-1526  ಬಗ್ಗೆ ತಿಳಿಸಿ

1.ಈ ಸಂತತಿ ಮತ್ತು ದೆಹಲಿ ಸುಲ್ತಾನರ ಕೊನೆಯ ಅರಸ
2.ಅತ್ಯಂತ ದುರಂಕಾರಿ ಅರಸನಾಗಿದ್ದನು.
3. ಇವನಿಂದ ಅವಮಾನಕ್ಕೆ ಒಳಗಾದ ಇವನ ಚಿಕ್ಕಪ್ಪ ಅಲಂಖಾನ್‌
4. ಕ್ರಿ.ಶ 1517- 1518 ರಲ್ಲಿ ಮೇವಾರದ ಅರಸ ರಾಣಾ ಸಂಗ್ರಾಮ್‌ ಸಿಂಗ್ ನನ್ನು ಗ್ವಾಲಿಯರ ಬಳಿ ಕಥಾಲಿ ಎಂಬ ಕದನದಲ್ಲಿ ಸೋಲಿಸಿದನು ಸೋತ ಸಂಗ್ರಾಮ್‌ ತನ್ನ ಎಡಗೈ
ಕಳೆದುಕೊಡು ಓಡಿ ಹೋದನು.
5.ಲಾಹೋರಿನ ಅರೆ ಗವ೯ನರ್‌ ದೌಲತಖಾನನ ಮಗ ದಿಲ್‌ ವಾರ ಖಾನ್ ನಿಗೆ ಚಿತ್ರಹಿಂಸೆ ನೀಡಿ ಕೊಲೆಮಾಡಿದನು.ಇದರಿಂದ ದೌಲತಖಾನ್‌ ವಿರೋಧಿಯಾದನು.
6.ದೌಲತಾ ಖಾನ್‌,ಆಲಂಖಾನ್‌ ಮತ್ತು ರಾಣಾ ಸಂಗ್ರಾಮ್‌ ಸಿಂಗ್‌ ಇವರು ಮಧ್ಯ ಏಷ್ಯಾದ ಅರಸ ಬಾಬರ್ನನ್ನು ಭಾರತಕ್ಕೆ ಬರುವಂತೆ ಆಹ್ವಾನ ನಿಡಿದರು.
7.ಕ್ರಿ.ಶ 1526 ಏಪ್ರಿಲ್‌ 21 ರಂದು ಇಬ್ರಾಹಿಂ ಲೋದಿ ಮತ್ತು ಬಾಬರನ ಮಧ್ಯ ಮೊದಲ ಪಾಣಿಪತ್‌ ಕದನ ನಡೆಯಿತು. ಇದರಲ್ಲಿ ಬಾಬರ ಮಧ್ಯ ಏಷ್ಯಾದ ಉಜ್ಜೆಗಿ ಜನಾಂಗದ
ಯುದ್ದ ತಂತ್ರವಾದ ತುಲ್‌ ಗ್ರಾಮ್‌ ಎಂಬ ತಂತ್ರದ ಮೂಲಕ ಇಬ್ರಾಹಿಂ ಲೋದಿಯನ್ನು ಸೋಲಿಸಿ ಕೊಲೆ ಮಾಡುವುದರ ಮೂಲಕ ದೆಹಲಿ ಸುಲ್ತಾನರ ಅಡಳಿತವನ್ನು ಕೊನೆಗಾಣಿಸಿ ಮೊಘಲ ಸಮ್ರಾಜ್ಯಕ್ಕೆ ಅಡಿಪಾಯ ಹಾಕಿದನು.

  ಪ್ರಶ್ನೆ 8.   ವಿಶೇಷ ಅಂಶಗಳು ಬಗ್ಗೆ ತಿಳಿಸಿ

1. ಯುದ್ದ ಭೂಮಿಯಲ್ಲಿ ಮರಣ ಹೊಂದಿದ ಮೊದಲ ದೇಹಲಿ ಸುಲ್ತಾನ: ಇಬ್ರಾಹಿಂ ಲೋದಿ.
2. ರಜಿಯಾ ಸುಲ್ತಾನ ತನ್ನ ನಾಣ್ಯಗಳ ಮೇಲೆ ಸುಲ್ತಾನ ರಜಿಯಾತಲ್‌ ದುನಿಯಾ ಎಂದು ಟಂಕಿಸಿದ್ದಳು
3. ಕುತ್ಬಾವನ್ನು ಓದಿಸಿಕೊಳ್ಳದ ಮೊದಲಿ ದೇಹಲಿ ಸುಲ್ತಾನರ ಘೀರೋಜ ಷಾ ತುಘಲಕ್‌
4. ಸ್ವತಂತ್ರವಾಗ ನಾಣ್ಯ ಟಂಕಿಸಿದ ಮೊದಲ ದೇಹಲಿ ಸುಲ್ತಾನ ಇಲ್ತ್‌ ಮಿಷ್

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions