17 Marc ಮಹಾ ಜನಪದಗಳು ಮತ್ತು ಗಣರಾಜ್ಯಗಳು New

 ಮಹಾ ಜನಪದಗಳು ಮತ್ತು ಗಣರಾಜ್ಯಗಳು

ಪ್ರಶ್ನೆ 1. ಮಗಧ ಸಾಮ್ರಾಜ್ಯ ಬೆಳವಣಿಗೆಗೆ ಕಾರಣಗಳು ಯಾವುವು.

1. ಕಬ್ಬಿಣದ ಬಳಕೆಯ ಕಾಲದಲ್ಲಿ ಮಗಧದ ಭೌಗೋಳಿಕ ಸನ್ನಿವೇಶವು ಅನುಕೂಲಕರವಾಗಿತ್ತು.
2.ಮಗಧದ ರಾಜಧಾನಿ ರಾಜಗೃಹದ ಸುತ್ತಲೂ ಉತ್ತಮವಾದ ಕಬ್ಬಿಣದ ಅದಿರಿನ ನಿಕ್ಷೇಪಗಳಿದ್ದವು
.3. ಕಬ್ಬಿಣದ ಬಳಕೆಯಿಂದಾಗಿ ಉತ್ತಮ ಆಯುಧಗಳು ರಚನೆಯಾದವು.
4. ಮಗಧದ ರಾಜಧಾನಿ ರಾಜಗೃಹವು 5 ಬೆಟ್ಟಗಳಿಂದ ಸುತ್ತುವರೆದ ದುಗ೯ಮ ಪ್ರದೇಶವಾಗಿತ್ತು.
5. ರಾಜಗೃಹವು ಮಧ್ಯಗಂಗಾ ನಡುಭಾಗದಲ್ಲಿತ್ತು. ಇದು ಉತ್ತಮ ಮಳೆ ಬಿಳುವ ಪ್ರದೇಶವಾಗಿತ್ತು. ಇದು ಉತ್ತಮ ಮಳೆ ಬೀಳುವ ಪ್ರದೇಶವಾಗಿತ್ತು ಉತ್ತಮವಾದ ಫಲವತ್ತತೆಯ ಭೂಮಿಯಿಂದ ಕೂಡಿತ್ತು.
6. ಭೂಮಿ ಉತ್ಪಾದನಾ ಸಾಮಥ್ಯ೯ ಹೊಂದಿತು.
7. ಮಗಧ ಸಾಮ್ರಾಜ್ಯದ ಸ್ಥಾಪಕರು ಜರಾಸಂಧ ಮತ್ತು ಬ್ರಹದೃತ 
8. ಮಗಧ ಸಾಮ್ರಾಜ್ಯವನ್ನಾಳಿದ ಮೊದಲ ಸಂತತಿ ಹರ್ಯಂಕ ಸಂತತಿ
9. ಹರ್ಯಂಕ ಸಂತತಿಯ ಸ್ಥಾಪಕ ಬಿಂಬಿಸಾರ


ಪ್ರಶ್ನೆ 2. ಬಿಂಬಿಸಾರ ಕ್ರಿ. ಪೂ 547-492

1.ಈತ ಹರ್ಯಂಕ ಸಂತತಿಯ ಸ್ಥಾಪಕ
2. ಇತನ ರಾಜ್ಯವು 80,000 ಹಳ್ಳಿಗಳಿಂದ ಕೂಡಿತ್ತು.
3. ಈತನಿಗೆ 500 ಜನ ಪತ್ನಿಯರಿದ್ದರು.
4. ಈತನ ಮೊದಲ ಪತ್ನಿ ಕೋಸಲದ ಅರಸ ಮಹಾಕೋಸಲನ ಮಗಳು ಕೋಸಲಾದೇವಿ. ಇವಳು ಬಿಂಬಸಾರನ ಆಸ್ಥಾನಕ್ಕೆ ಕಾಶಿಯನ್ನು ಬಳುವಳಿಯಾಗಿ ತಂದಳು.
(ಇವಳು ಪ್ರಸೇನಜಿತ್ನ ಸಹೋದರಿಯಾಗಿದ್ದಳು)
5. ಈತನ ಎರಡನೇ ಪತ್ನಿ ವೈಶಾಲಿಯ ಅರಸ ಚೇತಕನ ಮಗಳು ಚೆಲ್ಲನಳು. ಇವಳ ಸಹಾಯದಿಂದ ಬಿಂಬಸಾರ ನೇಪಾಳದ ಗಡಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದನು.
6. ಈತನ ಮೂರನೇ ಪತ್ನಿ ಮಾದ್ರ ರಾಜ್ಯದ ಅರಸ ಮುದ್ರಕನ ಮಗಳು ಖೇಮಾ ಇವಳ ಸಹಾಯದಿಂದ ಬಿಂಬಸಾರ ಬೌದ್ಧ ಧಮ೯ ಸ್ವೀಕರಿಸಿದನು.
7.ಆವಂತಿಯ ದೊರೆ ಪ್ರದೋತ್ಯನು ಪಾಂಡುರೋಗದಿಂದ {ಕುಷ್ಠರೋಗ} ಬಳಲುತ್ತಿದ್ದಾಗ ಬಿಂಬಾಸಾರ ತನ್ನ ಆಸ್ಥಾನದ ವೈದ್ಯ ಜೀವಕನನ್ನು ಕಳುಹಿಸಿ ಅವನ ರೋಗವನ್ನು ಗುಣಪಡಿಸಿ ಅವನ ಸ್ನೇಹವನ್ನು ಪಡೆದನು.
8.ಬಿಂಬಸಾರ ಅಂಗದ ದೊರೆ ಬ್ರಹದೃತನನ್ನು ಸೋಲಿಸಿ ಅಂಗದ ರಾಜಧಾನಿ ಚಂಪಾವನ್ನು ವಶಪಡಿಕೊಂಡು ಅದರ ಅಧಿಕಾರಿಯಾಗಿ ತನ್ನ ಮಗ ಕುನ್ನಿಕನನ್ನು ನೇಮಿಸಿದನು.
9.ಬಿಂಬಸಾರ ಬಂಧನದಲ್ಲಿದ್ದಾಗ ಅವನ ಊಟೋಪಚಾರ ನೋಡಿಕೊಂಡ ಪತ್ನಿ ವೈದೇಹಿ.
10. ಅಜಾತಶತ್ರು ಗೌತಮ ಬುದ್ಧನ ಸಂಬಂಧಿಕನಾದ ದೇವದತ್ತನ ಮಾತಿನಂತೆ ತಂದೆ ಬಿಂಬಸಾರನನ್ನು ಕೊಲೆ ಮಾಡಿ ತಾನೇ ಅಧಿಕಾರಕ್ಕೆ ಬಂದನು.


ಪ್ರಶ್ನೆ 3. ಅಜಾತಶತ್ರು ಕ್ರಿ. ಪೂ. 492-460

1.ಹರ್ಯಂಕ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ
2.ಈತನಿಗೆ ಪಿತೃಘಾತುಕ ಎಂಬ ಬಿರುದಿತ್ತು.
3.ತನ್ನ ಸಹೋದರಮಾವ ಪ್ರಸೇನಜಿತ್‌ ನನ್ನು ಸೋಲಿಸಿ ಅವನ ಮಗಳು ವಿಜ್ಜಿರಳನ್ನು ವಿವಾಹವಾದನು.
4. ಅಜಾತಶತ್ರು ತಾನೇ ಕಂಡು ಹಿಡಿದ ಎರಡು ಅಸ್ತ್ರಗಳಿಂದ ಲಿಚ್ಛವಿಗಳ ಒಕ್ಕೂಟವನ್ನು ಸಂಹಾರ ಮಾಡಿದನು.     ಎರಡು ಅಸ್ತ್ರಗಳು
1) ಮಹಾಶೀಲ ಕಂಠ - ಶತೃಗಳ ಮೇಲೆ ಕಲ್ಲು ಎಸೆಯುವ ಯಂತ್ರ
2) ರಥ ಮುಸಲು  -   ರಥದ ಗಾಲಿಗಳಿಗೆ ಮುಳ್ಳಿನಾಕಾರದ ಲೋಹದ ಕವಚ ಅಚಿಟಿಸುವುದು.
3) ಅಜಾತಶತ್ರು ಗೌತಮ ಬುದ್ಧನ ಕೊನೆಯ ದಿನಗಳಲ್ಲಿ ಭೇಟೆಯಾಗಿ ತನ್ನ ತಂದೆಯ ಕೊಲೆಯನ್ನು ಒಪ್ಪಿಕೊಂಡು ಪಶ್ಚಾತಾಪ ಪಟ್ಟನು.
4) ಕ್ರಿ.ಪೂ. 483 ರಲ್ಲಿ ಅಜಾತಶತ್ರು ರಾಜಗೃಹದಲ್ಲಿ ಮೊದಲ ಬೌದ್ಧ ಸಮ್ಮೇಳನ ಏಪ೯ಡಿಸಿದನು.
 
ಪ್ರಶ್ನೆ 4. ಉದಯನ್ ಕಿ.ಪೂ 460-444

ಈತ ಪಾಟಲಿಪುತ್ರ (ಕುಸುಮಪೂರ) ಎಂಬ ನಗರದ ನಿಮಾ೯ಣವನ್ನು ಮುಗಿಸಿದನು. (ಗಂಗಾ ಮತು ಸೋನ್‌ ನದಿಯ ದಡದಲ್ಲಿದೆ)‌


ಪ್ರಶ್ನೆ 5.ನಾಗ ಸಂತತಿ

ಸ್ಥಾಪಕ-ಶಿಶುನಾಗ
ಪ್ರಸಿದ್ದ ಅರಸ - ಕಾಲಾಶೋಕ
1.ಈತ ಎರಡನೇ ಬೌದ್ಧ ಸಮ್ಮೇಳನ ಏಪ೯ಡಿಸಿದ ಅರಸ.
2.ಕೊನೆಯ ಅರಸ ನಂದಿವಮ೯ನ್‌


ಪ್ರಶ್ನೆ 6. ನಂದ ಸಂತತಿ

1. ಇವರು ಶೂದ್ರ ವಗ೯ಕ್ಕೆ ಸೇರಿದವರಾಗಿದ್ದರು ಸ್ಥಾಪಕ; ಮಹಾ ಪದ್ಮನಂದ
2.ಬೌದ್ಧ ಮೂಲಗಳ ಪ್ರಕಾರ 150 ವಷ೯ಗಳ ಕಾಲ ಆಳ್ವಿಕೆ ಮಾಡಿದನು.
3.ಜೈನ ಮೂಲಗಳ ಪ್ರಕಾರ ಮಹಾ ಪದ್ಮನಂದನ ನಂತರ 8 ಜನ ಅಡಳಿತ ಮಾಡಿದರು ಅವರುಗಳೆಂದರೆ
 1. ಪಾಂಡುಕ      2. ಪಾಂಡುಗಾಕ
3. ಭೂತಪಾಲ   4. ರಾಷ್ಟ್ರಪಾಲ
5. ಗೋವಿಶಂಕ   6.ದಶಸಿದ್ದಕ
7. ಕೈವಾತ೯         8.ಧನನಂದ
4.ನಂದರ ಪ್ರಬಲ ಮತ್ತು ಕೊನೆಯ ದೊರೆ ಧನನಂದ. ಈತ ಪ್ರಜಾ ಪೀಡಕ ಮತ್ತು ಸಾಹಿತಿಗಳ ವಿರೋಧಿಯಾಗಿದ್ದ ಈತನೊಂದ ಅವಮಾನಕ್ಕೊಳಗಾದ ವ್ಯಕ್ತಿ- ಕೌಟಿಲ್ಯ
5. ಕೌಟಿಲ್ಯ ಧನನಂದನಿಂದ ಅವಮಾನಕ್ಕೊಳಗಾಗಿ ತಕ್ಷಶಿಲೆಗೆ ಹೋಗುವ ಸಂಧಭ೯ದಲ್ಲಿ ಮಾಗ೯ ಮಧ್ಯದಲ್ಲಿ ಚಂದ್ರ ಗುಪ್ತನನ್ನು ಕಂಡು ಅವನನ್ನು ಒಬ್ಬ ಸಮಥ೯ ಯೋಧನನ್ನಾಗಿ ಮಾಡಿದನು. 
ನಂದ ಸಾಮ್ರಾಜ್ಯವನ್ನು ಕೊನೆಗಾಣಿಸಿ ಮೌಯ೯ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದನು.

 
ಪ್ರಶ್ನೆ 7. ಗಣರಾಜ್ಯಗಳು

1. ಉತ್ತರ ಭಾರತದ ಹಿಮಾಲಯಯದ ತಪ್ಪಲಿನ ಪೂವ೯ದ ಗುಡ್ಡಗಾಡು ಪ್ರದೇಶಗಳಲ್ಲಿ 10 ಪಂಗಡಗಳು ಅಥವಾ ಬುಡಕಟ್ಟುಗಳು ನೆಲೆಸಿದ್ದವು. ಇವುಗಳನ್ನೇ ಗಣರಾಜ್ಯಗಳೆಂದು ಕರೆಯಲಾಯಿತು. 
ಇವು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಪಂಗಡಗಳನ್ನು ಪ್ರತಿನಿಧಿಸುವ ಪದ್ಧತಿಯನ್ನು ಹೊಂದಿದ್ದವು.  ಅವುಗಳೆಂದರೆ.
1.ಕಪಿಲವಸ್ತು -ಶಕ್ಯರು
2.ವಸಾಲಿಯ - ನ್ಯಾಯರು (ಜ್ನಾತ್ರಿಕರು)
3. ವೈಶಾಲಿಯ - ಲಿಚ್ಛವಿಗಳು
4. ಮಿಥಿಲಾದ - ವಿಧೇಹರು
5. ಸಮ- ಸುಮಾ ಬೆಟ್ಟದ - ಭಗ್ಗರು
6.ಕಳಸ ಭಟ್ಟದ - ಕಳಮಾರರು
7. ಅಲ್ಲಕಪ್ಪದ - ಕಳಮಾರರು
8. ಪಾವಾದ - ಮಲ್ಲರು
9. ಹುಸಿನಾರದ - ಮಲ್ಲರು
10 ಪಿಪ್ಪಲಿ ವನದ - ಮೌಯ೯ರು


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions