18 Marc ಭಾರತದ ಮೇಲೆ ವಿದೇಶಿಯರ ದಾಳಿಗಳು

ಭಾರತದ ಮೇಲೆ ವಿದೇಶಿಯರ ದಾಳಿಗಳು

ಪ್ರಶ್ನೆ 1.   1ನೇ ಸೈರಸ್‌  ಕ್ರಿ.ಪೂ 558-530  ಬಗ್ಗೆ ತಿಳಿಸಿ

  1. ಈತ ಪಷಿ೯ಯಾದಲ್ಲಿ ಪ್ರಬಲವಾದ ಮತ್ತು ಏಕೀಕೃತವಾದ ಮನೆತನವನ್ನು ನಿಮಿ೯ಸಿದನು. ಈ ಮನೆತನವನ್ನು ಅಖೇಮಿಯನ್‌ ಮನೆತನ (ಸಾಮ್ರಾಜ್ಯ) ಎಂದುಕರೆಯುತ್ತಾರೆ.

2. ಈತ ಅಪಘಾನಿಸ್ತಾನದ ತಕ್ಷಶಿಲೆ (ಸಿಂಧ್)‌ ಮತ್ತು ಭಾರತದ ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.

 ಪ್ರಶ್ನೆ 2.    1ನೇ ಡೇರಿಯಸ್‌ ಕ್ರಿ.ಪೂ 522- 486 ಬಗ್ಗೆ ತಿಳಿಸಿ

1.  1ನೇ ಸೈರ ಮೊಮ್ಮಗನಾಗಿದ್ದಾನೆ.

2.ಭಾರತದ ಸಿಂದ್‌ ಮತ್ತು ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.

3.  ಕ್ರಿ  ಪೂ 518 ರಲ್ಲಿ ಸಿಂಧ ಪ್ರಾಂತ್ಯವನ್ನು ವಶಪಡಿಸಿ ಕೊಂಡನು ಇದು ಡೇರಿಯಸ್‌ ನ  20ನೇ ಪ್ರಾಂತ್ಯವಾಗಿತ್ತು

4.  ಸಿಂಧ್‌ ಪ್ರಾಂತ್ಯದಿಂದ ವಾಷಿ೯ಕವಾಗಿ 1 ಕೋಟಿ ರೂ. ಮೌಲ್ಯದ ಚಿನ್ನದ ಪುಡಿಯನ್ನು ಪಷಿ೯ಯಾ ದೇಶಕ್ಕೆ ಕಪ್ಪ ನೀಡುತ್ತಿದ್ದನೆಂದು ಜೆನೋಪೆನ್‌ ಎಂಬ ಗ್ರೀಕ್‌ ಬರಹಗಾರನಿಂದ ತಿಳಿದು ಬರುತ್ತದೆ.

5. ಭಾರತದ ಸಿಂಧ್‌ ಪ್ರಾಂತ್ಯವು 20 ನೇ ಸತ್ರಪಿ ( ಪ್ರಾಂತ್ಯ)ವಾಗಿತ್ತೆಂದು ಅವನ ಎರಡು ಶಾಸನಗಳಾದ

1. ಪಸೇ೯ ಪೋಲೀಸ್‌

2. ನಕ್ಷಂ ಐ ರುಸ್ತುಂ ಎಂಬ ಶಾಸನಗಳಿಂದ ತಿಳಿದು ಬರುತ್ತದೆ.

6. ಈತ ಜರಾ ತುಷ್ಟ ಸ್ಥಾಪಿಸಿದ ಜೋರಾಸ್ಟ್ರೀಯನ್‌ ಧಮ೯ವನ್ನು ತನ್ನ ರಾಜ್ಯದ ಧಮ೯ವನ್ನಾಗಿ ಮಾಡಿಕೊಂಡಿದ್ದನು.

7.  ಈ ಧಮ೯ವು ಜೀವನವು ಒಳಿತು ಮತ್ತು ಕೆಡಕುಗಳ ನಡುವಿನ ನಿರಂತರವಾದ ಹೋರಾಟದ ರಂಗ ಎಂದು ಹೇಳಿದೆ.

8. ಈ ಧಮ೯ದ ಒಳಿತಿನ ದೇವರು - ಅಹುರ್‌ ಮಜ್ದಾ

9. ಈ ಧಮ೯ದ ಕೆಡಕಿನ ದೇವರು - ಅಹೀರ್‌ ಮಾನ್‌

10.  ಪಷಿ೯ಯಾದಿಂದ ಭಾರತಕ್ಕೆ ಬಂದ ಎಲ್ಲಾ ವಲಸಿಗರು ತಾವು ಪಾಸಿ೯ಗಳೆಂದು ಹೇಳಿಕೊಂಡರು.

11.  ಈ ಜೋರಾಸ್ಟ್ರಿಯನ್‌ ಧಮ೯ವೇ ಮುಂದೆ ಪಾಸಿ೯ಗಳ ಧಮ೯ವಾಗಿ ಪರಿವತ೯ನೆಯಾಯಿತು.

12.  ಪಾಸಿ೯ಯನ್ನರು ಪವಿತ್ರ ಗ್ರಂಥ ಝಂಡಾ ಅವೆಸ್ತಾ


ಪ್ರಶ್ನೆ 3.  1ನೇ ಕ್ಸರಕ್ಸಸ್‌ ಕ್ರಿ.ಪೂ 486-465  ಬಗ್ಗೆ ತಿಳಿಸಿ

1.ಈತ ಭಾರತದ ಒಳ ರಾಜ್ಯಗಳರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಭಾರತೀಯರನ್ನು ತನ್ನ ಆಡಳಿತದಲ್ಲಿ ಸೈನಿಕರನ್ನಾಗಿ ನೇಮಿಸಿಕೊಂಡನು.

2. ಈತನ ಆಡಳಿತದಲ್ಲಿ ಭಾರತೀಯ ಸೈನಿಕರ ಗುಂಪಿಗೆ ಗಾಂಧಾರಿಯನ್ನರು ಎಂದು ಕರೆಯುತ್ತಿದ್ದರು.



Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions