19 Marc ಚಂದ್ರಗುಪ್ತ ಮೌಯ೯ New
ಮೌಯ೯ ಸಾಮ್ರಾಜ್ಯ
ಪ್ರಶ್ನೆ 1. ಚಂದ್ರಗುಪ್ತ ಮೌಯ೯ ಕ್ರಿ.ಪೂ 324-300 ಬಗ್ಗೆ ತಿಳಿಸಿ
1. ಈತ ಮೌಯ೯ ಸಾಮ್ರಾಜ್ಯದ ಸ್ಥಾಪಕ.
2. ತನ್ನ ತಾಯಿ ಮುರಾದೇವಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಮನೆತನಕ್ಕೆ ಮೌಯ೯ ಎಂದು ಹೆಸರಿಟ್ಟು.
ಪ್ರಶ್ನೆ 2. ಚಂದ್ರ ಗುಪ್ತನ ಮೂಲದ ಬಗ್ಗೆ ಅಭಿಪ್ರಾಯಗಳು ಬಗ್ಗೆ ತಿಳಿಸಿ
1. ಬೌದ್ದ ಮೂಲಗಳ ಪ್ರಕಾರ
ಮೊರಿಯಾ ಎಂಬ ಪಿಪ್ಪಲಿವನದ ಕ್ಷತ್ರೀಯ ವಗ೯ಕ್ಕೆ ಸೇರಿದವನು.
2. ಜೈನ ಸಾಹಿತ್ಯದ ಪ್ರಕಾರ
ಮೊರಿಯಾ ಎಂಬ ಪಿಪ್ಪಲಿವನದ ಮಯೂರ ಪೋಷಕನ ಮಗಳ ಮಗ
3. ವಿಶಾಖದತ್ತನ ಮುದ್ರಾ ರಾಕ್ಷಸದ ಪ್ರಕಾರ
1. ಚಂದ್ರಗುಪ್ತ ಮೌಯ೯ ಹೀನ ಕುಲದವನೆಂದು ಹೇಳಿ ವೃಷಲ ಎಂಬ ಪದದಿಂದ ಕರೆಯಲಾಗಿದೆ.
2. ಕ್ರಿ.ಪೂ 323 ರಲ್ಲಿ ಗ್ರೀಕರಿಂದ ವಾಯುವ್ಯ ಭಾರತವನ್ನು ಮುಕ್ತಗೊಳಿಸಿ ಅವರ ವಶದಲ್ಲಿದ್ದ ಗಾಂಧಾರ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
3. ಕ್ರಿ.ಪೂ 321 ರಲ್ಲಿ ನಂದರ ರಾಜಧಾನಿ ಪಟಲಿಪುತ್ರದ ಮೇಲೆ ದಾಳಿ ಮಾಡಿ ನಂದರ ಅರಸ ಧನಮದನನ್ನು ಸೋಲಿಸಿ ಕೊಲೆ ಮಾಡುವುದರ ಮೂಲಕ ಮಗಧಸಾಮ್ರಾಜ್ಯದ ಆಡಳಿತವನ್ನು ಕೊನೆಗಾಣಿಸಿದನು.
4.ಕ್ರಿ.ಪೂ 315 ರಲ್ಲಿ ಗುಜರಾತಿನ ಸೌರಾಷ್ಟ್ರದ ಮೇಲೆ ದಾಳಿ ಮಾಡಿ ಅಲ್ಲಿಯೂ ವಿಜಯಾ ಶಾಲಿಯಾದನು. ಆ ಸೌರಾಷ್ಟ್ರದ ಅಧಿಕಾರಿಯಾಗಿ ತನ್ನ ಆಸ್ಥಾನದ ರಾಜ್ಯಪಾಲ ಪುಷ್ಯಗುಪ್ತನನ್ನು ನೇಮಿಸಿದನು. ಈ ಪುಷ್ಯಗುಪ್ತ ಸೌರಾಷ್ಟ್ರದ ಪ್ರಸಿದ್ದವಾದ ಸುದಶ೯ನ ಕೆರೆಯನ್ನು ನಿಮಿ೯ಸಿದನು.
5.ಕ್ರಿ.ಪೂ 305 ರಲ್ಲಿ ಗ್ರೀಕ್ ಸೇನಾಧಿಪತಿ ಸೆಲ್ಯೂಕಸ್ ನನ್ನು ಸೋಲಿಸಿದನು.
6. ಆತ ತನ್ನ ಮಗಳಾದ ಹೆಲನ್ ಳನ್ನು ಚಂದ್ರಗುಪ್ತನಿಗೆ ಕೊಟ್ಟು ವಿವಾಹ ಮಾಡಿದನು. & ಚಂದ್ರಗುಪ್ತನ ಆಸ್ಥಾನಕ್ಕೆ ಗ್ರೀಕ್ ರಾಯಬಾರಿಯಾಗಿ ಮೆಗಸ್ತಾನಿಯ ಕಳುಹಿಸಿದನು.
7. ಇದರ ಸವಿನೆನಪಿಗಾಗಿ ಚಂದ್ರಗುಪ್ತ ಮೌಯ೯ನು ಕೂಡಾ ಸೆಲ್ಯುಕಸ್ ನ ಆಸ್ಥಾನಕ್ಕೆ 50 ಆನೆಗಳನ್ನು ಕಾಣಿಕೆಯಾಗಿ ನೀಡಿದನು. (ಈ ವಿಷಯ ರೋಮ ಇತಿಹಾಸಕಾರ ಪ್ಲೇನಿ ಬರೆದಿರುವ ನ್ಯಾಚುರಲ್ ಹಿಸ್ಟರಿ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿದೆ)
8. ಚಂದ್ರಗುಪ್ತಮೌಯ೯ ತನ್ನ ಕೊನೆಯ ದಿನಗಳಲ್ಲಿ ಭದ್ರ ಬಾಹು ಎಂಬ ಜೈನ ಸನ್ಯಾಸಿಯೊಂದಿಗೆ ಕನಾ೯ಟಕದ ಶ್ರವಣ ಬೆಳಗೊಳಕ್ಕೆ ಬಂದು ಸಲ್ಲೇಖನ ವೃತ ಕೈಗೊಂಡನು.
9. ಈತ ಸಲ್ಲೇಖನ ವೃತ ಕೈಗೊಂಡಿರುವ ಒಂದು ಬೆಟ್ಟ ಚಂದ್ರಗಿರಿ ಬೆಟ್ಟ ಎಂದು ಕರೆಯುತ್ತಾರೆ.
10. ಚಂದ್ರಗುಪ್ತನ ರಾಜಕೀಯ ಗುರು - ಕೌಟಿಲ್ಯ
11. ಚಂದ್ರಗುಪ್ತನ ಅಧ್ಯಾತ್ಮಿಕ ಗುರು - ಭದ್ರಬಾಹು
12. ಚಂದ್ರಗುಪ್ತನ ಧಮ೯- ಜೈನಧಮ೯
ಪ್ರಶ್ನೆ3. ಬಿಂದುಸಾರ ಕ್ರಿ.ಪೂ 300-273
1.ಚಂದ್ರಗುಪ್ತ ಮೌಯ೯ನ ಮಗನಾಗಿದ್ದಾನೆ.
2. ತಂದೆ ನಿಮಿ೯ಸಿದ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಿದನು.
3. ಈತನಿಗೆ ಅಮಿತೃಘಾತ್ ಅಥವಾ ಅಮಿತಖಾಡ್ ಎಂಬ ಬಿರುದಿತ್ತು. (ಶತ್ರುಗಳ ವಿನಾಶಕ)
4. ಈತನಿಗೆ 16 ಜನ ಪತ್ನಿಯರು ಮತ್ತು 101 ಜನ ಮಕ್ಕಳಿದ್ದರು
5.ಎರಡನೇ ಮಗ - ಅಶೋಕ - ಉಜ್ಜೈನಿ
6. ಕೊನೆಯ ಮಗ - ತಿಸ್ಸಾ - ಸುವಣ೯ಗಿರಿಯ ರಾಜಪ್ರತಿನಿಧಿಯಾಗಿದ್ದರು.
7. ಬಿಂದುಸಾರನ ಆಸ್ಥಾನದ ಗ್ರೀಕ್ ರಾಯಬಾರಿ - ಡೆಮಾಕಸ್
8. ಬಿಂದುಸಾರ ಅಜೀವಕಪಂಥದ ಅನುಯಾಯಿಯಾಗಿದ್ದನು.