Lecture 20 ಕನ್ನಡ ಮಾಧ್ಯಮ 2ನೇ ಚಂದ್ರಗುಪ್ತನ

  ಪ್ರಶ್ನೆ 1.    2ನೇ ಚಂದ್ರಗುಪ್ತನ ಕ್ರಿ. ಶ 380-414 ಬಗ್ಗೆ ತಿಳಿಸಿ


1.ಸಮುದ್ರ ಗುಪ್ತನ ರಾಣಿ ದತ್ತಾದೇವಿಯ ಮಗನಾಗಿದ್ದಾನೆ ಅದಕ್ಕಾಗಿ ಈತನಿಗೆ ದೇವ ಶ್ರೀ ಮತ್ತು ದೇವಗುಪ್ತ ಎಂಬ ಹೆಸರುಗಳಿದ್ದವು.

2. ಈತ ಅಧಿಕಾರಕ್ಕೆ ಬಂದ ಕೂಡಲೇ ಶಕರ ದೊರೆ 3 ನೇ ರುದ್ರ ಸಿಂಹನನ್ನು ಕೊಲೆ ಮಾಡಿ ಶಕಾರಿ ಎಂಬ ಬಿರುದನ್ನು ಧರಿಸಿದನು.

3. ಈತನಿಗೆ ವಿಕ್ರಮಾದಿತ್ಯ ಎಂಬ ಬಿರುದಿತ್ತು

4. ಈತ ಉಜ್ಜೈನಿಯನ್ನು ತನ್ನ  2ನೇ ರಾಜಧಾನಿಯನ್ನಾಗಿ ಮಾಡಿಕೊಂಡನು

5. ಈತನ ಸಾಧನೆಯನ್ನು ತಿಳಿಸುವ ಶಾಸನ ಮೆಹರುಲಿ ಸ್ಥಂಭ ಶಾಸನ

6. ಇದು ಲೋಹ ಶಾಸನವಾಗಿದ್ದು ಎತ್ತರ - 23.8 ಅಡಿ ತೂಕ- 6.000 ಕೆಜಿ. ತೂಕವನ್ನು  ಹೊಂದಿದ್ದು ದೆಹಲಿಯ ಕುತುಬ್‌ ಮಿನಾರಿನ ಆವರಣದ ಪಕ್ಕದಲ್ಲಿದೆ.

7. ಈತನು ಕೂಡಾ ತನ್ನ ಅಜ್ಜನಂತೆ ವೈವಾಹಿಕ ಸಂಬಂಧಗಳ ಮೂಲಕ ಸಾಮ್ರಾಜ್ಯ ವಿಸ್ತರಿಸಿ ಕೊಂಡನು.

8. ಈತ ನಾಗಾ ಸಂತತಿಯ ರಾಜಕುಮಾರಿ ಕುಬೆರನಾಗಳನ್ನು ವಿವಾಹವಾದನು.

9. ಈತ ತನ್ನ ಮಗಳಾ ಪ್ರಭಾವತಿ  ಗುಪ್ತಳನ್ನು ವಾಕಟಕದ ಅರಸ 3ನೇ ರುದ್ರಸೇನನಿಗೆ ಕೊಟ್ಟು ವಿವಾಹ ಮಾಡಿದನು.

10 ಈತ ಕನಾ೯ಟಕದ ಕದಂಬರ ಅರಸ ಕಾಕುತ್ಸ ವಮ೯ನ ಮಗಳೊಂದಿಗೆ ತನ್ನ ಮಗನ ವಿವಾಹ ಮಾಡಿದನು.

11. ಈತನ ಆಸ್ಥಾನದಲ್ಲಿ ನವರತ್ನ ಎಂಬ ಕವಿಗಳ ಕೂಟವಿತ್ತು ಮತ್ತು ಅವರುಗಳೆಂದರೆ

 1. ಕಾಳಿದಾಸ- ಅಭಿಜ್ನಾನ ಶಾಕುಂತಲ 

2.  ವರಾಹಿಮಿಹಿರ- ಬೃಹತ್‌ ಸಂತತಿ

3. ದನ್ವಂತರಿ - ಆಯುವೇ೯ದ ನಿಗಘಂಟ, 

4. ಅಮರಸಿಂಹ - ಅಮರಕೋಶ

5. ವೇಣಾಲ ಭಟ್‌ - ಮಂತ್ರ ಶಾಸ್ತ್ರ

6.  ಘಟಕಪ೯ರ - ಘಟಕಪ೯ರ ಕಾವ್ಯ

7.ವರರುಚಿ- ವ್ಯಾಕರಣ

 8. ಶಂಕು - ಶಿಲ್ಪ ಶಾಸ್ತ್ರ

  9. ಕ್ಷಪಣಕ - ಜ್ಯೋತಿಷ್ಯಶಾಸ್ತ್ರ

ಇವರಲ್ಲಿ ಅತ್ಯಂತ ಪ್ರಸಿದ್ದಿಗೆ ಬಂದವನು ಕಾಳಿದಾಸ ಈತನಿಗೆ ಕವಿಕುಲ ಗುರು ಕವಿರತ್ನವೆಂಬ ಬಿರುದುಗಳಿದ್ದವು.


ಪ್ರಶ್ನೆ 2.  ಗುಪ್ತರ ಆಡಳಿತ ವ್ಯವಸ್ಥೆ  ಬಗ್ಗೆ ತಿಳಿಸಿ


1.ಅರಸ ಆಡಳಿತದ ಕೆಂದ್ರ ಬಿಂದುವಾಗಿದ್ದನು.

2. ಅಂತಿಮ ನ್ಯಾಯ ನೀಡುವ ಪರಮಾಧಿಕಾರಿಯಾಗಿದ್ದನು.

3. ಗುಪ್ತರು ರಾಜ್ಯವನ್ನು

 1.ಭೋಗ- ಭೋಗಪತಿ

 2 .ವಿಷಯ-ವಿಷಯಪತಿ

  3. ಗ್ರಾಮಗ್ರಾಮಿಕ/ಗಾವುಂಡ ಎಂದು ಕರೆಯುತ್ತಿದ್ದರು.

4.ಗ್ರಾಮಗಳಲ್ಲಿ ಗ್ರಾಮ ಸಭೆಗಳು ಅಸ್ತಿತ್ವದಲ್ಲಿದ್ದವು.

5. ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.

6.ಗುಪ್ತರ ಕಾಲದಲ್ಲಿ ಊಳಿಗಮಾನ್ಯ ಪದ್ದತಿ ರೂಢಿಯಲ್ಲಿತ್ತು

7. ಗುಪ್ತರ ಕಾಲದ ಗ್ರಾಮಗಳಲ್ಲಿ ಉದ್ರಂಗ 1/4 ರಷ್ಟು ತೆರಿಗೆ ಇತ್ತು ಮತ್ತುಭೋಗ  ಎಂಬ 1/6 ರಷ್ಟು ತೆರಿಗೆ ಇತ್ತು. ಇದು ನಗರಗಳ ಮೇಲೆ ಹೇರುತ್ತಿದ್ದರು.

8. ಗುಪ್ತರು ಉತ್ತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಾಹ್ಮಣರಿಗೆ ಭೂಮಿ ದಾನ ಕೊಡುವ ಪದ್ದತಿ ಆರಂಭಿಸಿದರು.

9. ಗುಪ್ತರ ಸೈನ್ಯವನ್ನು ಕಾಲ್ದಳ, ಅಶ್ವದಳ, ಗಜದಳ ಮತ್ತು ನೌಕಾದಳಗಳಾಗಿ ವಿಭಾಗಿಸಿದ್ದರು.

10 ಗುಪ್ತರ ಕಾಲದಲ್ಲಿ ಸೈನ್ಯದ ಮುಖ್ಯಸ್ಥನನ್ನು ಸಮರ ಮಾತ್ಯ ಎಂದು ಕರೆಯುತ್ತಿದ್ದರು.

11. ಅರಣ್ಯ ಪಾಲಕರನ್ನು ಗೊಳಮಿಕ ಎಂದು ಕರೆಯುತ್ತಿದ್ದರು.

12 ಆನೆಗಳ ಮುಖ್ಯಸ್ಥನನ್ನು ಮಹಾಮಹಿಪಿಲುಪತಿ ಎಂದು ಕರೆಯುತ್ತಿದ್ದರು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions