A1 ಪೂವ೯ ವೇದ ಕಾಲ 13 Mar

  ಪ್ರಶ್ನೆ 1.  ಪೂವ೯ ವೇದ ಕಾಲ ರಾಜಕೀಯ ಜೀವನ ಬಗ್ಗೆ ತಿಳಿಸಿ


1 ಆಯ೯ರ ರಾಜಕೀಯ ಮೂಲ ಘಟಕ ಕುಟುಂಬ.

2  ಹಲವು ಕುಟು೦ಬಗಳು ಸೇರಿಕೊ೦ಡು ಒ೦ದು ಬುಡಕಟ್ಟಾಗುತ್ತಿತ್ತು.

3 ಬುಡಕಟ್ಟು ಜನಾ೦ಗದವರ ನಾಯಕನಿಗೆ ರಾಜನ್‌, ಸಾಮ್ರಾಟ, ಮಾಹಾಸಮ್ರಾಟ ಎಂದು ಕರೆಯುತ್ತಿದ್ದರು.

4 ರಾಜನಿಗೆ ಸಹಾಯ ಮಾಡಲು ಸಭಾ ಮತ್ತು ಸಮಿತಿ ಯೆಂಬ ಎರಡು ರಾಜಕೀಯ ಸಂಸ್ಥೆಗಳು ಹುಟ್ಟಿಕೊ೦ಡವು.


ಪ್ರಶ್ನೆ 2. ಸಭಾ ಎಂದರೇನು


1 ಇದು ಹಿರಿಯರಿಂದ ಕೂಡಿದ ಸದನವಾಗಿತ್ತು.

2 ಇದು ರಾಜನಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿತ್ತು.

3 ಇದರ ಸದಸ್ಯರಿಗೆ ಸಭಾಸದರು ಅಥವಾ ಸುಜಾತರೆಂದು ಕರೆಯುತ್ತಿದ್ದರು.

4 ಇದರಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ.


.  ಪ್ರಶ್ನೆ 3 ಸಮಿತಿ ಎಂದರೇನು


1 ಇದು  ಕಿರಿಯರಿಂದ ಕೂಡಿದ ಸದನವಾಗಿತ್ತು

2.ಇದು ರಾಜನನ್ನು ಆಯ್ಕೆ ಮಾಡುವ ಮತ್ತು ವಜಾಗೊಳಿಸುವ ಅಧಿಕಾರ ಹೊಂದಿತ್ತು.

3 ಇದರ ಸದಸ್ಯರನ್ನು ವಿಚ್ಚಾ ಎಂದು ಕರೆಯುತ್ತಿದ್ದರು.

4 ಇದರಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಮಾತ್ರ ಅವಕಾಶವಿತ್ತು.


 ಪ್ರಶ್ನೆ 4. ವಿಧಾತ ಎಂದರೆನು


1 ಇದು ಅತ್ಯಂತ ಹಳೆಯದಾದ ರಾಜಕೀಯ ಸಂಸ್ಥೆ

2 ಇದು ರಾಜನಿಲ್ಲದ ಪ್ರದೇಶದಲ್ಲಿ ಕಾಯ೯ನಿವ೯ಹಿಸುತ್ತಿತ್ತು. ಇದರಲ್ಲಿ ಮಹಿಳೆಯರಿಗೆ ಸಂಪೂಣ೯ವಾಗಿ ಅವಕಾಶ ನೀಡಲಾಗಿತ್ತು.

3 ಸಭಾ ಮತ್ತು ಸಮಿತಿಯ ಅಧ್ಯಕ್ಷರನ್ನು  ಸಭಾಧ್ಯಕ್ಷ ಅಥವಾ ಸಭಾಪತಿ ಎಂದು ಕರೆಯುತ್ತಿದ್ದರು.ಪೂವ೯ ವೇದ ಕಾಲದಲ್ಲಿ ರಾಜ ಲೋಕ ಕಲ್ಯಾಣಕ್ಕಾಗಿ ರಾಜ್ಯದ ಅಭಿವೃದ್ದಿಗಾಗಿ ಜನರ ಉದ್ದಾರಕ್ಕಾಗಿ ಹಲವು ಯಘ್ಗ-- ಯಾಗಾದಿಗಳನ್ನು ಕೈಗೊಳ್ಳುತ್ತಿದ್ದನು.

4 ಪೂವ೯ವೇದ ಕಾಲದಲ್ಲಿ ರಾಜನು ತನ್ನ ಸೇವೆಗೆ ಪ್ರತಿಫಲವಾಗಿ ಬಲಿ ಎಂಬ ತೆರಿಗೆಯನ್ನು ಪಡೆಯಿತ್ತಿದ್ದನು.

5 ಪೂವ೯ವೇದ ಕಾಲದ ರಾಜ ಜನರ ಉದ್ದಾರವೇ ತನ್ನ ಜೀವನದ ಪರಮಗುರಿ ಎಂದು ಭಾವಿಸಿದ್ದನು.

6 ಪೂವ೯ ವೇದ ಕಾಲದ ರಾಜನಿಗೆ ಸಹಾಯ ಮಾಡಲು ಮಂತ್ರಿ ಮಂಡಲ ವ್ಯವಸ್ಥೆ ಇತ್ತು.

7 ವೇದಗಳ ಕಾಲದಲ್ಲಿ ಗ್ರಾಮಗಳ ಗುಂಪಿಗೆ ವಿಷ್‌ಎಂದು ಕರೆಯುತ್ತಿದ್ದರು.

8 ವಿಷ್ದ ಮುಖ್ಯಸ್ಥ ವಿಷ್ಪಪತಿಯಾಗಿದ್ದ ಹೀಗೆ ಹಲವು ವಿಷಯಗಳು ಸೇರಿಕೋಂಡು ಜನಪದವಾಗುತಿತ್ತು.

9 ಹಲವು ಜನಪದಗಳು ಸೇರಿ ರಾಜ್ಯವಾಗುತ್ತಿತ್ತು ಇದರ ಮುಖ್ಯಸ್ಥ : ರಾಜನ್‌


 ಪ್ರಶ್ನೆ5   ಪೂವ೯ ವೇದ ಕಾಲದ  ಸಾಮಾಜಿಕ ಜೀವನ ಬಗ್ಗೆ ತಿಳಿಸಿ


1 ಸಮಾಜದಲ್ಲಿ ಅವಿಭಕ್ತ ಕುಟು೦ಬ ಪದ್ದತಿ ರೂಡಿಯಲ್ಲಿತ್ತು.

2 ಪಿತೃಪ್ರಧಾನ ವ್ಯವಸ್ಥೆ ರೂಡಿಯಲ್ಲಿತ್ತು.

3 ಕುಟು೦ಬದ ಮುಖ್ಯಸ್ಥನನ್ನು  ಕುಲಪತಿ ಅಥವಾ ಗೃಹಪತಿ ಎ೦ದು ಕರೆಯುತ್ತಿದ್ದರು.

4 ವಣ೯ ವ್ಯವಸ್ಥೆಯಲ್ಲಿ ಜಾರಿಯಲ್ಲಿತ್ತು.

5 ವಣ೯ಗಳು ವೃತ್ತಿಗನುಸಾರವಾಗಿ ನಿಧಾ೯ರವಾಗಿತ್ತಿದ್ದವು.

6 ವಣ೯ಗಳ ಮಧ್ಯ ಸಹಭೋಜನ ಮತ್ತು ವೈವಾಹಿಕ ಸ೦ಬ೦ಧಗಳು ಏಪ೯ಡುತ್ತಿದ್ದವು.

7 ಏಕ ಪತ್ನಿತ್ವ ಪದ್ದತಿ ರೂಡಿಯಲ್ಲಿತ್ತು.. ಬಹು ಪತ್ನಿತ್ವ ಪದ್ದತಿ ಅರಸು ಮನೆತನಕ್ಕೆ ಮಾತ್ರ ಸೀಮಿತವಾಗಿತ್ತು.

8ಅ೦ತಜಾ೯ತಿ ವಿವಾಹಗಳಿಗೆ ಅವಕಾಶ ನೀಡಲಾಗಿತ್ತು.

9    ಸ್ರೀಯ  ಸ್ಥಾನ ಮಾನಗಳನ್ನು ಉನ್ನತವಾಗಿದ್ದವು. 

10 ಸ್ರಿಯರಿಗೆ ತನ್ನ ವರನನ್ನು ಅಯ್ಕೆ ಮಾಡಿಕೊಳ್ಲಲು ಅವಕಾಶ ನಿಡಲಾಗಿತ್ಹು.

 11 ಸ್ರೀಯರಿಗೆ ಪಿತ್ರಾಜಿ೯ತ ಆಸ್ತಿಯಲ್ಲಿ ಸಮಪಾಲು ನೀಡಲಾಗಿತು.

  12  ಈ ಕಾಲದ ಪ್ರಮುಖ ಸ್ರೀಯರೆ೦ದರೆ ;:  ಅಪಲಾ, ಘೋಷಲಾ, ಗಾಗಿ೯, ಲೋಪಮುದ್ರಾ, ಮ್ಯೆತ್ರೀಯಿ, ವಿಶ್ವಾವರ, ಕಾತ್ಯಾಯಿನಿ, ಮೃಧಾಲಿನಿ,

13 ಋಗ್ವೆದದ ಕೆಲವು ಮ೦ತ್ರಗಳನ್ನು ರಚಿಸಿದ ಮಹಿಳಾ  ವಿದ್ವಾಂಸಿ  ಘೋಷಲಾ

14 ಜನಕರಾಜನಾ ಆಸ್ಥಾನದಲ್ಲಿ ಯಗ್ನವಲ್ಕ್ಯೆಯೆ೦ಬ ಋಷಿಮುನಿಗಳೊ೦ದಿಗೆ ದೇವರ ಅಸ್ವಿತ್ವವನ್ನು ಕುರಿತು  ವಾದಮ೦ಡಿಸಿದ ಮಹಿಳೆ ಗಾಗಿ೯.

15 ವೇದ ಗಳ ಕಾಲದಲ್ಲಿ ಜನರು ಹತ್ತಿ, ಉಣ್ಣೆ ಮತ್ತು ಚಮ೯ದಿ೦ದ ಮಾಡಿದ ಉಡುಪುಗಳನ್ನು ಧರಿಸುತಿದ್ದರು.

16 ಆಯ೯ರು ಸಸ್ಯಾಹಾರಿಗಳಾಗಿದ್ದರು.

17  ವೇದಗಳ ಕಾಲದಲ್ಲಿ ಸೋಮ ಮತ್ತು. ಸುರ ಎ೦ಬ ಎರಡು ಪಾನೀಯಗಳನ್ನು ಸೇವಿಸುತ್ತಿದ್ದರು.

 18 ಪೂವ೯ವೇದಗಳ ಕಾಲದಲ್ಲಿ  ಅನಿಶ್ಟ ಪದ್ದತಿಗಳು ಜಾರಿಇರಲ್ಲಿಲ್ಲ.

19 ವಿದವಾ ವಿವಾಹಕ್ಕೆ ಅವಕಾಶ ನೀಡಲಾಗಿತ್ತು.̇̇

20 ವಿವಾಹಗಳು ಹೆಣ್ಣಿನ ತ೦ದೆ--ತಾಯಿಯ ಮನೆಯಲ್ಲಿ ನಡೆಯುತ್ತಿತ್ತು.

21 ನಿಯೊಗ ಪದ್ದತಿ ಜಾರಿಯಲ್ಲಿತ್ತು.

22 ನಿಯೊಗ ಎ೦ದರೆ ಮಕ್ಕಳಿಲ್ಲದ ವಿಧವೆ ತನ್ನ ಮೈದುನನೊ೦ದಿಗೆ ವಿವಾಹವಾಗಿ ಗ೦ಡು ಸ೦ತಾನ ಪಡೆಯುವುದು.

23 ವೇದಗಳ ಕಾಲದಲ್ಲಿ   ಸ್ತ್ರಿ ಯರು ಕಿವಿಗಳಿಗೆ ಕಣ೯ ಶೋಭಾನ ಎ೦ಬ ಆಭರಣವನ್ನು ಧರಿಸುತ್ತಿದ್ದರು.

24. ವೇದಗಳ ಕಾಲದಲ್ಲಿ ಕ್ಷೌರಿಕ ನನ್ನು, ವ್ಯಾಪ್ತ್ರಿ ಎ೦ದು  ಕರೆಯತ್ತಿದ್ದರು.



 ಪ್ರಶ್ನೆ6    ಪೂವ೯ ವೇದ ಕಾಲದ   ಧಾಮಿ೯ಕ ಜೀವನದ ಬಗ್ಗೆ ತಿಳಿಸಿ



1ಪೂವ೯ ವೇದಕಾಲದ ಪ್ರಮುಖ ದೇವರು ಇ೦ದ್ರ, ಇವನ್ನನ್ನು ಪುರ೦ದರ, ಕೋಟೆಗಳ ನಾಶಕ ಮತ್ತು. ವಜ್ರಾಯುದ ಹೊ೦ದಿದ ದೇವರೆ೦ದು ಕರೆಯುತ್ತಾರೆ.

2 ಇ೦ದ್ರನನ್ನು ಕುರಿತು ಋಗ್ವೆದದಲ್ಲಿ ೨೫೦  ಶ್ಲೋಕಗಳಿವೆ. (ಇ೦ದ್ರನ ವಜ್ರಾಯುಧಕ್ಕೆ ತನ್ನ ಬೆನ್ನೆಲುಬುಗಲನ್ನು ದಾನವಾಗಿ ನೀಡಿದ ಋಷಿ ದದೀಚೀ)  

3 ಎರಡನೆ ಪ್ರಮುಖರು ಅಗ್ನಿಇವನನ್ನು ಮಾನವ ಮತ್ತು ದೇವರ ಮಧ್ಯ ಸ೦ಪಕ೯ ಏಪ೯ಡಿಸುವವ ಎಂದು ಕರೆಯುತ್ತಾರೆ.

4ಇವನನ್ನು ಕುರಿತು ಋಗ್ವೇದದಲ್ಲಿ ೨೦೦ ಶೋಕಗಳಿವೆ.

5  ಮೂರನೇ ಪ್ರಮುಖ ದೇವರು ವರುಣ, ಇವನನನ್ನು ಕರೆಯುತ್ತಾರೆ. ಇವನ ಕುರಿತು ೧೫೦ ಶ್ಲೋಕಗಳಿವೆ. ವೇದಗಳ ಕಾಲದಲ್ಲಿ ಸಂಧಭ೯ಕ್ಕೆ ಅನುಸಾರವಾಗಿ ಅನೇಕ  ದೇವರುಗಳನ್ನು ಪೂಜಿಸುತ್ತಿದ್ದರು.

 ಮಳೆಯ ದೇವರು - ಪಜ೯ನ್ಯ

 ಮಿ೦ಚಿನ ದೇವರು - ರುದ್ರ

 ಮಿತ್ರ ದೇವರು - ಸೂಯ೯

 ಗೋವುಗಳ ದೇವರು - ಪು಼ಷ್ಯನ್

ಸಸ್ಯ ಸಂಕುಲದ ದೇವತೆ- ಸೋಮ

ವಾಯು ದೇವರು - ವಾಯು

ಆರೋಗ್ಯ ದೇವತೆ -ಅಶ್ವಿನಿ ದೇವತೆಗಳು

6 ಪೂವ೯ದ ಕಾಲದಲ್ಲಿ ಯಗ್ನ ಯಾಗಾದಿಗಳು ಸರಳವಾಗಿದ್ದವು.

7 ಕೆಲವೊಂದು ಯಗ್ನ ಯಾಗಾದಿಗಳಲ್ಲಿ ಹಸುಗಳನ್ನು ಬಲಿ ಕೊಡುತ್ತಿದ್ದರು.

8 ಹಸುವಿನ ಮಾಂಸ ತಿನ್ನುವ ಅತಿಥಿಗಳಿಗೆ ಗೋಗ್ನಾ ಎಂದು ಕರೆಯುತ್ತಾರೆ.

9 ಹಸು ಕೊಲ್ಲಲಾಗದ ಸಂಪತ್ತು ಅಗನ್ಯ ಎಂದು ಕರೆಯುತ್ತಿದ್ದರು ಹಸುಗಳನ್ನು ಪಡೆಯುವದಕ್ಕಾಗಿ ಗವಿ಼ಷ್ಟಿ ಎಂಬ ಯುದ್ದಗಳು ನಡೆಯುತ್ತಿದ್ದವು.


ಪ್ರಶ್ನೆ 7  ಪೂವ೯ ವೇದ ಕಾಲದ  ಆಥಿ೯ಕ ಜೀವನ ಬಗ್ಗೆ ತಿಳಿಸಿ


1 ಆಯ೯ರ ಮುಖ್ಯ ಉದ್ಯೋಗ ಕೃಷಿ ಮತ್ತು ಪಶು ಸಂಗೋಪನೆ

2 ಆಯ೯ರ ಕೃಷಿ ಭೂಮಿಯನ್ನು ಕ್ಷೇತ್ರ ಅಥವಾ ಉರವರ ಎಂದು ಪಡೆಯತ್ತಿದ್ದರು.

3 ಆಯ೯ರ ಮುಖ್ಯ ಸಂಪತ್ತು ಹಸು.

 4 ಆಯ೯ರ ಸಾಕು ಪ್ರಾಣಿ ಕುದುರೆ

5  ಆಯ೯ರ ಅವತಸ್‌ ಎಂಬ  ಬಾವಿಗಳಿಂದ  ನೀರನ್ನು ಪಡೆಯುತ್ತಿದ್ದರು.

6 ವೇದಗಳ ಕಾಲದಲ್ಲಿ ನಿಷ್ಷ ಮತ್ತು ಶತಮಾನವೆಂಬ ಎರಡು ಚಿನ್ನದ ತುಂಡುಗಳನ್ನು ನಾಣ್ಯಗಳ ರೂಪದಲ್ಲಿ ಬಳಸುತ್ತಿದ್ದರು.





Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions