Lecture 40 ಕನ್ನಡ ಮಾಧ್ಯಮ ರಮಾನಂದರು, ಕಬೀರದಾಸರು, ಚೈತನ್ಯರು

  ಭಕ್ತಿ ಪಂಥದ ಚಳುವಳಿ 

    ಪ್ರಶ್ನೆ 1. ರಮಾನಂದರು ಕ್ರಿಶ. 1400 ರಿಂದ 1480 ಬಗ್ಗೆ ತಿಳಿಸಿ

1. ಇವರು ಉತ್ತರ ಭಾರತದ ಮೊದಲ ಭಕ್ತಿ ಪಂಥದ ಸಂತರು

2. ಇವರು ಜನರಾಡುವ ಹಿಂದಿ ಭಾಷೆಯಲ್ಲಿ ಬೋಧನೆ ಮಾಡಿದರು.

3. ಇವರು ಶ್ರೀರಾಮನ ಪರಮ ಭಕ್ತರಾಗಿದ್ದರು.

4. ಇವರು ದೇವರು ಒಬ್ಬನೇ ಅತನೇ ಎಲ್ಲರ ತಂದೆ ಎಂದು ಹೆಳಿ ಜಾತಿ ಪದ್ಧತಿಯನ್ನು ಖಂಡಿಸಿ ಸಮಾನತೆಯನ್ನು  ಭೋಧಿಸಿದರು.


ಪ್ರಶ್ನೆ2.  ಕಬೀರದಾಸರು ಕ್ರಿಶ. 1440 - 1518 ಬಗ್ಗೆ ತಿಳಿಸಿ

1.ಬ್ರಾಹ್ಮಣ ವಿಧವೆಯ ಪುತ್ರರಾಗಿದ್ದಾರೆ.

2. ಇವರನ್ನು ಕಾಶಿಯ ಕೆರೆಯ ಹತ್ತಿರ ಬಿಟ್ಟು ಹೋದಾಗ ನಿರೂ ಮತ್ತು ನಿಹಾ ಎಂಬ ಮುಸಲ್ಮಾನ ದಂಪತಿಗಳ ಆಶ್ರಯದಲ್ಲಿ ಬೆಳೆದರು.

3. ಇವರು ಜಾತಿ ಭೇಧ ಧಾಮಿ೯ಕ ವಿಧಿ - ವಿಧಾನವನ್ನು ಮತ್ತು ಆಡಂಬರದ ಅಚರಣೆಗಳನ್ನು ಕಂಡಿಸಿದರು

4. ಇವರು ಭಕ್ತರಹಿತವಾದ ವ್ರತ, ಉಪವಾಸ, ಉತ್ಸವ ತೀಥ೯ ಯಾತ್ರೆಗಳು ನಿರುಪಯುಕ್ತ ಎಂದು ಹೇಳಿದರು.

5. ಹಿಂದೂ ಮುಸ್ಲಿಂ ಒಂದೇ ಮಣ್ಣಿನಿಂದ ತಯಾರಿಸಿದ ಮಡಿಕೆಗಳು ಮತ್ತು ಭಕ್ತಿಯೇ ಧಮ೯ದ ಜೀವಾಳ,ಪ್ರೇಮವೇ  ದೇವರನ್ನು ಒಲಿಸಿಕೊಳ್ಳುವ ಮಾಗ೯ ದೇವರು ಮಾನವನ ಹೃದಯದಲ್ಲಿದ್ದಾನೆ. ರಾಮ ರಹೀಮ ಬೇಧವಿಲ್ಲ ತಾವು ಅಲ್ಲಾ ಮತ್ತು ರಾಮನ ಪುತ್ರ ಎಂದು ಹೇಳಿದ್ದಾರೆ

6. ಇವರು ದೇವನೊಬ್ಬ ನಾಮ ಹಲವು ಎಂಬ ಏಕೀಶ್ವರ ವಾದವನ್ನು ಪ್ರತಿಪಾದಿಸಿದರು.

7. ಇವರು ಹಿಂದಿ ಭಾಷೆಯಲ್ಲಿ 2 ಸಾಲಿನ ಪದ್ಯಗಳಿಂದ ದೋಹಾಗಳ ಮೂಲಕ ಜನಸಾಮಾನ್ಯರಿಗೆ ತಿಳಿ ಹೇಳಿದರು

8. ಇವರ ಅನುಯಾಯಿಗಳನ್ನು ಕಬೀರ ಪಂಥಿಗಳೆಂದು ಕರೆಯುತ್ತಾರೆ.


 ಪ್ರಶ್ನೆ 3.   ಚೈತನ್ಯರು ಕ್ರಿ.ಶ 1485- 1533 ಬಗ್ಗೆ ತಿಳಿಸಿ

1. ಬಂಗಾಳದ ನವದ್ವೀಪ ಎಂಬಲ್ಲಿ ಜನಿಸಿದರು.

ತಂದೆ - ಜಗನ್ನಾಥ ಮಿಶ್ರಾ

ತಾಯಿ - ಸಚ್ಚಿದೇವಿʼ

ಗುರು - ಈಶ್ವರ ಪುರಿ

ಮೂಲ ಹೆಸರು - ವಿಶ್ವಾಂಬರ

2. ಇವರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು.

3.ಇವರು ವಿಶ್ವ ಪ್ರೇಮವೇ ದೇವರ ಪ್ರೀತಿಗಳಿಸುವ ಪ್ತಥಮ ಹೆಜ್ಜೆ ಎಂದು ಬೋಧಿಸಿದರು.

4.ಇವರನ್ನು ಕುಣಿದಾಡುವ ಸಂತನೆಂದು ಕರೆಯುತ್ತಾರೆ.




Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions