2 Apr ಡಚ್ಚರು New
ಪ್ರಶ್ನೆ 1. ಡಚ್ಚರು ಬಗ್ಗೆ ತಿಳಿಸಿ
1.ಇವರು ಭಾರತಕ್ಕೆ ಬಂದ 2ನೇ ಯುರೋಪಿಯನ್ನರು
2. ಕ್ರಿ.ಶ. 1596 ರಲ್ಲಿ ಸಾಹಸಿ ವತ೯ಕ ಕಾಲೆ೯ಲಿಯನ್ ಹೌಟ್ ಮನ್ ವ್ಯಾಪಾರಕ್ಕೆ ಭಾರತಕ್ಕೆ ಬಂದು ಅಮೂಲ್ಯ ವಸ್ತುಗಳೊಂದಿಗೆ ತನ್ನ ದೇಶಕ್ಕೆ ಬಂದು ಅಮೂಲ್ಯ ವಸ್ತುಗಳೊಂದಿಗೆ ತನ್ನ ದೇಶಕ್ಕೆ ಹಿಂದುರುಗಿದ.
3. ಕ್ರಿ.ಶ 1602 ರಲ್ಲಿ ಹಲವು ಕಂಪನಿಗಳನ್ನು ಒಗ್ಗೂಡಿಸುವುದರ ಮೂಲಕ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಲಾಯಿತು.
4. ಕ್ರಿಶ. 1604 ರಲ್ಲಿ ಜಾಮೋರಿನ್ ನ ಅನುಮತಿಯನ್ನು ಪಡೆದು ವ್ಯಾಪಾರ ಆರಂಭಿಸಿದರು.
5. ಕ್ರಿ.ಶ 1605 ರಲ್ಲಿ ಮಚಲೀಪಟ್ಟಣ (ಆಂಧ್ರ ಪ್ರದೇಶ ) ದಲ್ಲಿ ಪ್ರಪ್ರಥಮ ವ್ಯಾಪಾರ ಕೋಠಿ ಆರಂಭದಲ್ಲಿ ನಾಗಪಟ್ಟಣ ಇವರ ಆಡಳಿತದ ಕೇಂದ್ರ ಸ್ಥಾನವಾಗಿದ್ದು, ಅನಂತರ ಪುಲಿಕಾಟ್ ಇವರ ರಾಜಧಾನಿ ಕೇಂದ್ರವಾಯಿತು.
6. ಕ್ರಿ.ಶ 1605 ರಲ್ಲಿ ಪೋಚು೯ಗೀಸ್ ರಿಂದ ಅಂಬೋಯ್ನ ದ್ವೀಪವನ್ನು ವಶಪಡಿಸಿಕೊಂಡರು.
7.ಆ ನಂತರ 1639 ರಲ್ಲಿ ಗೋವಾ 1641 ರಲ್ಲಿ ಗೋವಾ, 1641 ರಲ್ಲಿ ಮಲೇಷಿಯಾ, 1658 ರಲ್ಲಿ ಶ್ರೀಲಂಕಾವನ್ನು ವಶಪಡಿಸಿಕೊಂಡರು.
8. ಆ ನಂತರ ಡಚ್ಚರು ಮತ್ತು ಆಂಗ್ಲರ ಮಧ್ಯ ಅನೇಕ ಹೋರಾಟಗಳು ನಡೆದವು. ಈ ಹೋರಾಟದಲ್ಲಿ ಆಂಗ್ಲರೇ ಮೆಲುಗೈ ಸಾಧಿಸಿದರು.
8. 1759 ರಲ್ಲಿ ಬಿದ್ರಾ ಕದನದಲ್ಲಿ ಇಂಗ್ಲೀಷರು ಡಚ್ಚರನ್ನು ಸಂಪೂಣ೯ವಾಗಿ ಸೋಲಿಸಿದರು.
ಪ್ರಶ್ನೆ 2. ಡಚ್ಚರ ಅವನತಿಗೆ ಕಾರಣಗಳು ಬಗ್ಗೆ ತಿಳಿಸಿ
1.ಡಚ್ಚರು ಆಗ್ನೇಯಾ ಏಷ್ಯಾದ ಸಾಂಬಾರ ದ್ವೀಪಗಳತ್ತ ಗಮನ ಹರಿಸಿದ್ದರಿಂದ ಭಾರತದಲ್ಲಿ ಅವರ ಲಕ್ಷ ಕಡಿಮೆಯಾಯಿತು.
2. ಯುರೋಪಿನಲ್ಲಿ ಡಚ್ಚರು ಫ್ರೆಂಚ್ ರೊಂದಿಗೆ ಮತ್ತು ಬ್ರಿಟಿಷರೊಂದಿಗೆ ಸುದೀಘ೯ ಹೋರಾಟ ಮಾಡಿದ್ದರಿಂದ ಡಚ್ಚರ ಶಕ್ತಿ ಅಲ್ಲಿಯೇ ವ್ಯಯವಾಯಿತು.
3.ಡಚ್ಚರ ಸೇನೆ ವ್ಯವಸ್ಥಿತವಾಗಿ ಸಂಘಟಿತವಾಗಿರಲಿಲ್ಲ.
4. ಡಚ್ಚರ ಪ್ರತಿಸ್ಪಧಿ೯ಗಳಾದ ಅಂಗ್ಲರು ಇವರಿಗಿಂತ ಪ್ರಬಲವಾಗಿದ್ದರು.