Lecture 41 ಕನ್ನಡ ಮಾಧ್ಯಮ . ತುಳಸಿದಾಸರು ಮತ್ತು ಮೀರಾಬಾಯಿ
ಪ್ರಶ್ನೆ 1. ತುಳಸಿದಾಸರು ಕ್ರಿಶ. 1535 - 1623 ಬಗ್ಗೆ ತಿಳಿಸಿ
1. ಇವರು ಯಮುನಾ ನದಿಯ ತೀರದಲ್ಲಿ ಜನಿಸಿದ ಬ್ರಾಹ್ಮಣ ಸಂತರು.
2.ಇವರು ಶ್ರೀ ರಾಮನ ಪರಮ ಭಕ್ತರಾಗಿದ್ದರು.
3. ಇವರು ಹಿಂದಿಭಾಷೆಯಲ್ಲಿ ರಾಮ ಚರಿತ ಮಾನಸ (ತುಳಸಿ ರಾಮಾಯಣ) ಗ್ರಂಥವನ್ನು ಬರೆದರು. ಇದನ್ನು ದಶಕೋಟೆ ಜನರ ಏಕಮೇವ ಬೈಬಲ್ ಎಂದು ಕರೆಯುತ್ತಾರೆ.
4. ತುಳಸಿದಾಸರನ್ನು ಎರಡನೇ ವಾಲ್ಮಿಕಿ ಎಂದು ಕರೆಯುತ್ತಾರೆ.
ಪ್ರಶ್ನೆ 2. ಮೀರಾಬಾಯಿ ಕ್ರಿ,ಶ 1535 - 1614 ಬಗ್ಗೆ ತಿಳಿಸಿ
1. ಇವಳು ರಾಜಸ್ಥಾನದ ಜೋಧಪುರದ ರಾಠೋಡ ಮನೆತನದ ಅರಸ ರತನಸಿಂಗ್ ನ ಮಗಳಾಗಿದ್ದಳು.
2.ಇವಳನ್ನು ಚಿತ್ತೋಡಿನ ಅರಸ ಭೋಜರಾಜನಿಗೆ ಕೊಟ್ಟು ವಿವಾಹ ಮಾಡಿದ್ದನು.
3. ಇವಳು ಲೌಕಿಕ ಜೀವನನ್ನು ತ್ಯಜಿಸಿದಳು
4. ಗುರು - ರಾಯಿದಾಸ್
5. ಇವಳು ಶ್ರೀಕೃಷ್ಣನೇ ತನ್ನ ಪತಿಯೆಂದು ತಿಳಿದು ಬೃಜ್ ಭಾಷೆಯ ಅನೇಕ ಭಕ್ತರಸಗೀತೆಗಳನ್ನು ರಚಿಸಿದಳು.
6. ಇವಳ ಭಜನೆಯು ಅಂಕಿತನಾಮ ಗಿರಿಧರ ಗೋಪಾಲ
7.ಇವಳನ್ನು ಕಲಿಯುಗದ ರಾಧೆ ಎಂದು ಕರೆಯುತ್ತಾರೆ.