21 Mar ಷಹಜಹಾನ್ New
ಪ್ರಶ್ನೆ 1. ಷಹಜಹಾನ್ ಕ್ರ.ಶ. 1627 - 1658 ಬಗ್ಗೆ ತಿಳಿಸಿ
1.ಈತನ ಕಾಲವನ್ನು ವಣ೯ ಚಿತ್ರ ಕಲೆಯ ಸುವಣ೯ಯುಗ ವೆಂದು ಕರೆಯುತ್ತಾರೆ. ಮೂಲ ಹೆಸರು - ಖುರ್ರಂ
2. ಜಹಾಂಗೀರನಿಗೆ 4 ಜನ ಗಂಡು ಮಕ್ಕಳಿದ್ದರು
ಖುಸ್ರಾವ್, ಷಾರ್ಯಾ, ಖುರ್ರಂ, ಪವೆ೯ಜ್,
3. ಪವೆ೯ಜ್ ಅತೀ ಹೆಚ್ಚು ದೂಮಪಾನ ಮತ್ತು ಮದ್ಯಪಾನ ಮಾಡಿ ಮರಣ ಹೊಂದಿದನು.
4.ಷಾರ್ಯನನ್ನು ನೂರಜಹಾನಳು ತನ್ನ ಮೊದಲ ಗಂಡನ ಮಗಳಾದ ಲಾಡಿ ಬೇಗಂಗಳೊಂದಿಗೆ ವಿವಾಹ ಮಾಡಿದಳು
5. ನೂರ ಜಹಾನಳು ಖುರಂ ನನ್ನು ತನ್ನ ಸಹೋದರ ಅಸಫಖಾನನ ಮಗಳಾದ ಅಜು೯ಮಂದ ಬಾನು ಬೇಗಂಗಳೊಂದಿಗೆ ವಿವಾಹ ಮಾಡಿದಳು
6.ನೂರ ಜಹಾನ ಷರ್ಯಾನನ್ನು ಸಿಂಹಾಸನದ ಮೇಲೆ ಕೂಡಿಸಿ ತಾನೇ ಅಡಳಿತ ಮಾಡಬೇಕೆಂದಾಗ ಅವಳ ಸಹೋದರ ಅಸಫ ಖಾನ್ ತನ್ನ ಅಳಿಯ ಖುರಂ ನನ್ನು ಅಧಿಕಾರಕ್ಕೆ ತಂದನು.
7. ಕ್ರಿಶ. 1628 ರಲ್ಲಿ ಖುರಂ (ಷಹಜಹಾನ್) ತನನ್ನು ತಾನು ದೆಹಲಿ ಬಾದಷಹ್ ಎಂದು ಘೊಷಿಸಿಕೊಂಡನು.
8. ಖುರಂ ತನ್ನ ಮಾವ ಅಸಫ ಖಾನನನ್ನು ವಜೀರನನ್ನಾಗಿ ನೇಮಿಸಿಕೊಂಡನು.
9. ಖುರಂ ನೂರ ಜಹಾನಳಿಗೆ ವಾಷಿ೯ಕ ವೇತನವಾಗಿ 2,00,000 ರೂ. ನೀಡಿದನು. ಇವಳು ಸಾಮಾನ್ಯ ವಿಧವೆಯಂತೆ ಜೀವನ ನಡೆಸಿ ಕ್ರಿ.ಶ 1645 ರಲ್ಲಿ ಮರಣ ಹೊಂದಿದಳು.
10. ಷಹಜಹಾನ್ ತನ್ನ ಹೆಂಡತಿ ಅಜು೯ಮಂದಬಾನು ಬೇಗಂಳಿಗೆ ಮಮ್ತಾಜ್ ಮಹಲ ಎಂದು ಕರೆಯುತ್ತಿದ್ದನು. ಮಮ್ತಾಜ್ ಎಂದರೆ : ಅರಮನೆಯ ಅಲಂಕಾರ ಎಂದಥ೯
11. ಮಮ್ತಾಜ್ ಮಹಲ್ 1631 ರಲ್ಲಿ ಮರಣ ಹೊಂದಿದಳು ಇವಳ ಮರಣದ ನಂತರ ದೆಹಲಿಯಲ್ಲಿಅನೇಕ ಕಟ್ಟಡಗಳನ್ನು ನಿಮಿ೯ಸಿದನು.ಕೆಂಪು ಕೋಟೆ. ಜಾಮಿ, ಮಸೀದಿ, ದಿವಾನ್ - ಇ - ಖಾಸ್ ಮತ್ತು ದಿವಾನ್ - ಇ- ಆಮ್,ಮಯೂರ ಸಿಂಹಾಸನ
ಇದು ಅಂದಿನ ಕಾಲದಲ್ಲಿ 1 ಕೋಟೆ ರೂ. ವೆಚ್ಚದಲ್ಲಿ ಸುವಣ೯ ರತ್ನ ಖಚಿತವಾದ ಸಿಂಹಾಸನ ನಿಮಿ೯ಸಿದನು.