22 Mar ಮೌಯ೯ರ ಆಡಳಿತ New

ಪ್ರಶ್ನೆ 1.     ಮೌಯ೯ರ  ಆಡಳಿತ ಬಗ್ಗೆ ತಿಳಿಸಿ

1.ಅರಸ ಆಡಳಿತದ ಕೇಂದ್ರ ಬಿಂದು ಆಗಿದ್ದನು.

2. ಅಂತಿಮ ನ್ಯಾಯ ನೀಡುವ ಪರಿಮಾಧಿಕಾರಿಯಾಗಿದ್ದನು.

3. ಅರಸನಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿತ್ತು.

4. ಮಂತ್ರಿಗಳನ್ನು ಅಮಾತ್ಯರೆಂದು ಕರೆಯುತ್ತಿದ್ದರು.

5.ಮೌಯ೯ರು ರಾಜ್ಯವನ್ನು

ಯುವರಾಜ

ಸುಮುಕೃತ

ಗ್ರಾಮಿಕ ಎಂದು ವಿಭಾಗಿಸಿದ್ದರು.

6. ಮೌಯ೯ರು ಆಡಳಿತದ ಅನುಕೂಲಕ್ಕಾಗಿ ರಾಜ್ಯಗಳನ್ನು ನಾಲ್ಕು ಪ್ರಾಂತ್ಯಗಳಾಗಿ ವಿಭಾಗಿಸಿದ್ದರು.

1.ಉತ್ತರದ - ತಕ್ಷ ಶಿಲೆ (ಪಾಕಿಸ್ತಾನ - ರಾವಲಪಿಂಡಿ)

2.ದಕ್ಷಿಣದ - ಸುವಣ೯ಗಿರಿ (ಕೊಪ್ಪಳ ಜಿಲ್ಲೆ ಕನಕಗಿರಿ)

3.ಪೂವ೯ದ- ತೊಶಾಲಿ (ಓರಿಸ್ಸಾ ರಾಜ್ಯ)

4. ಪಶ್ಛಿಮದ- ಆವಂತಿ (ಮಧ್ಯ ಪ್ರದೇಶ)


ಪ್ರಶ್ನೆ 2.ಮೌಯ೯ರ ಕಾಲದ ನ್ಯಾಯಾಲಯಗಳು  ಯಾವುವು

1. ಧಮ೯ಸ್ಥಾನೀಯ - ಸಿವಿಲ್‌ ನ್ಯಾಯಾಲಯ

2. ಕಂಠಸ್ಥಾನೀಯ- ಕ್ರಿಮಿನಲ್‌ ನ್ಯಾಯಾಲಯ


ಪ್ರಶ್ನೆ 3.  ಮೌಯ೯ರ ಕಾಲದ ತೆರಿಗೆಗಳು  ಯಾವುವು

1.ಭಾಗ- ಕೃಷಿ ಮೇಲಿನ ತೆರಿಗೆ

2. ಬಲಿ- ಧಾಮಿ೯ಕ ತೆರಿಗೆ

3. ಪಿಂಡಕಾರ - ಗ್ರಾಮಗಳ ಸಮೂಹದ ಮೇಲಿನ ತೆರಿಗೆ

4.ಉದಯಭಾಗ-ನೀರಾವರಿ ಭೂಮಿಯಮೇಲಿನ ತೆರಿಗೆ.


ಪ್ರಶ್ನೆ 4. ಮೌಯ೯ರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಲೂ  ಯಾವುವು

1.ಧರಣ ಅಥವಾ ಪುರಾಣ - ಬೆಳ್ಳಿಯ ನಾಣ್ಯವಾಗಿತ್ತು. ಇದು 58. 4 ಗ್ರೇನ್‌ ತೂಕ ಹೊಂದಿತ್ತು.

2. ಕಷಾ೯ಪಣ - ಇದು ತಾಮ್ರದ ನಾಣ್ಯವಾಗಿತ್ತು. ಇದು 148.4 ಗ್ರೇನ್‌ ತೂಕ ಹೊಂದಿತ್ತು.

3. ಮೌಯ೯ರ ಸೈನ್ಯವನ್ನು 6 ಭಾಗಗಳಾಗಿ ವಿಭಾಗಿಸಲಾಗಿತ್ತು ಅವುಗಳೆಂದರೆ ಕಾಲ್ದಳ, ಅಶ್ವದಳ, ಗಜದಳ,ರಥದಳ ನೌಕದಳ,

ಸಾರಿಗೆ ಮೋತಿಖಾನೆ ವಾಹನ (ಇದು ಯುದ್ದದ) ಸಂದಭ೯ದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸುವ ವಾಹನ)

ಪ್ರಶ್ನೆ 5. ಮೌಯ೯ರ ಸಾಮಾಜಿಕ ಜೀವನ  ಬಗ್ಗೆ ತಿಳಿಸಿ

1. ವಣ೯ ವ್ಯವಸ್ಥೆ ಜಾರಿಯಲ್ಲಿತ್ತು.

2.ಬ್ರಾಹ್ಮಣ ಉನ್ನತ ಸ್ಥಾನದಲ್ಲಿದ್ದನು.

3. ಮಹಿಳೆಯರ ಸ್ಥಾನಮಾನಗಳು ಉನ್ನತವಾಗಿದ್ದವು.

4.ಮಹಿಳೆಯರಿಗೆ ವಿಚ್ಚೇದನ ಪಡೆದಕೊಳ್ಳಲು ಅವಕಾಶ ನೀಡಲಾಗಿತ್ತು.

4. ಸಮಾಜದಲ್ಲಿ ಗಣಿಕಾಸ್ರ್ತೀಯರಿಗೆ ಸ್ಥಾನಮಾನ ನೀಡಲಾಗಿತ್ತು. ಇವರಿಗೆ (ಗಣಿಕಾ ಸ್ರ್ತೀಯರು ಎಂದರೆ ವೇಶ್ಯಯರಾಗಿದ್ದರು೦ ತೊಂದರೆ ಕೊಡುತ್ತಿದ್ದರೆಇವರನ್ನು ನೊಡಿಕೊಳ್ಳಲು ಗಣಿಕಾಧ್ಯಕ್ಷನೆಂಬ ಅಧಿಕಾರಿಯನ್ನು ನೇಮಿಸುತ್ತಿದ್ದರು.

5.ಗಣಿಕಾಸ್ತ್ರೀಯರು ಸಾವ೯ಜನಿಕ ಸಭೆ ಸಮಾರಂಭಗಳಲ್ಲಿ ನೃತ್ಯ ಮಾಡುವುದರ ಜೊತೆಗೆ ಗೂಢಚಾರರಾಗಿ ಕಾಯ೯ ನಿವ೯ಹಿಸುತ್ತಿದ್ದರು.


  ಪ್ರಶ್ನೆ6.  ಮೌಯ೯ರ ಸಾಂಸ್ಕೃತಿ ಕೊಡುಗೆಗಳು   ಯಾವುವು

1. ಅಶೋಕನ ಶಾಸನಗಳೇ ಮೌಯ೯ರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿವೆ.

2.ಅಶೋಕ ರಾಜ್ಯಾದ್ಯಂತ ಸುಮಾರು 84,000 ಸ್ಥೂಪಗಳನ್ನು ನಿಮಿ೯ಸಿದ್ದನು.

3.ಅಶೋಕನ ಮೊದಲ ಸ್ತೂಪ - ಸಾರಾನಾಥ ಸ್ಥೂಪ

4.ಚಂದ್ರ ಗುಪ್ತ ಮೌಯ೯ ಪಾಟಲಿಪುತ್ರದಲ್ಲಿ 100 ಕಂಬಗಳುಳ್ಳ ಭವ್ಯವಾದ ಅರಮನೆ ನಿಮಿ೯ಸಿದ್ದ. ಈ ಅರಮೆಯ ಮುಂದೆ ಸುಂದರವಾದ ಈಜುಕೊಳ ನಿಮಿ೯ಸಿದನೆಂದುಫಾಹಿಯಾನನ ಘೋ - ಕೋ- ಕೀ ಗ್ರಂಥದಿಂದ ತಿಳಿದುಬರುತ್ತದೆ.

5. ಮೌಯ೯ರ ಕಾಲದಲ್ಲಿ ನಾಗರ ಬೆಟ್ಟ್ದಲ್ಲಿ ಮೂರು ಮತ್ತು ಬಾರಬರ್‌ ಬೆಟ್ಟದಲ್ಲಿ ನಾಲ್ಕು ಗುಹೆಗಳು ಕಂಡು ಬಂದಿವೆ, ಅವುಗಳಲ್ಲಿ ಅತ್ಯಂತ ದೊಡ್ಡ ಗುಹೆ ಲೋಮನ ಋಷಿಯ ಗುಹೆ.

(ಆಂಧ್ರ ಪ್ರದೇಶದ ನಾಗಾಜು೯ನ ಕೊಂಡದಲ್ಲಿ ಕಂಡುಬಂದಿದೆ.)


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions