25 Mar ಶುಂಗರು New
ಪ್ರಶ್ನೆ1. ಶುಂಗರು ಕ್ರಿ.ಪೂ 187- 75 ಬಗ್ಗೆ ತಿಳಿಸಿ
ಶುಂಗರ ಮೂಲದ ಬಗ್ಗೆ ಬಾಣಭಟ್ಟನ ಹಷ೯ಚರಿತೆ ಮತ್ತು ಟಿಬೇಟ್ ಇತಿಹಾಸಕಾರ ತಾರಾನಾಥರ ಬರವಣಿಗೆಯಿಂದ ತಿಳಿದು ಬರುತ್ತದೆ.
1. ಶುಂಗರ ಸ್ಥಾಪಕ - ಪುಷ್ಯಮಿತ್ರ ಶುಂಗ
2. ರಾಜಧಾನಿ - ವಿಧಿಶ
3. ಕೆಲವು ಇತಿಹಾಸಕಾರರ ಪ್ರಕಾರ : ಶುಂಗರು ಮುಲತ: ಇರಾನಿಯನ್ನರು ಎಂದು ಹೇಳಲಾಗಿದೆ. ಕಾರಣ ಶುಂಗ ಅರಸರ ಎಲ್ಲ ಹೆಸರುಗಳ ಮುಂದೆ ಮಿತ್ರ ಎಂಬ ಪದ ಸಾಮಾನ್ಯವಾಗಿದೆ. ಇರಾನಿನಲ್ಲಿ ಮಿತ್ರ ಎಂದರೆ ಸೂಯ೯ ಎಂದಥ೯.
4. ಬೌದ್ಧ ಮೂಲಗಳ ಪ್ರಕಾರ ಶುಂಗರು ಮೂಲತ: ಮೌಯ೯ರ ಸಂಬಂಧಿಗಳೆಂದು ಹೇಳಲಾಗಿದೆ.
5. ಕೆ.ಪಿ ಜೈಸ್ಪಾಲ್ ರ ಪ್ರಕಾರ ಶುಂಗರು ಬ್ರಾಹ್ಮಣ ವಗ೯ಕ್ಕೆ ಸೇರಿದವರು. ಇವರ ಆಡಳಿತದ ಕಾಲವನ್ನು ಭಾರತದಲ್ಲಿ ಬ್ರಾಹ್ಮಣ ಕ್ರಾಂತಿ ಎಂದು ಕರೆಯುತ್ತಾರೆ.
6. ಪುರಾಣಗಳ ಪ್ರಕಾರ ಶುಂಗರ 10 ಜನ ಅರಸರು 112 ವಷ೯ಗಳ ಕಾಲ ಆಡಳಿತ ಮಾಡಿದರೆಂದು ಹೇಳಲಾಗಿದೆ.
7. ಕಾಳಿದಾಸನ ಮಾಳವಿಕಾಗ್ನಿ ಮಿತ್ರ ---ಈ ನಾಟಕದ ಕಥಾ ನಾಯಕ ಅಗ್ನಿಮಿತ್ರ ಈ ಮನೆತನದ ಪ್ರಸಿದ್ಧ ದೊರೆಯೆಂದು ಹೇಳಲಾಗಿದೆ.
8. ಶುಂಗರ ಕೊನೆಯ ಅರಸ - ದೇವಭೂತಿ, ಇವನನ್ನು ಇವನ ಮಂತ್ರಿ ವಸುದೇವ ಕಣ್ವನು ಕೊಲೆ ಮಾಡಿ ಅಧಿಕಾರಕ್ಕೆ ಬಂದನು.