26 Mar ಬ್ಯಾಕ್ಟ್ರೀಯನ್ ಗ್ರೀಕರು New
ಭಾರತದ ಮೇಲೆ ವಿದೇಶಿಯರ ದಾಳಿಗಳು
ಪ್ರಶ್ನೆ 1. ಬ್ಯಾಕ್ಟ್ರೀಯನ್ ಗ್ರೀಕರು ಬಗ್ಗೆ ತಿಳಿಸಿ?
1. ಇವರನ್ನು ಇಂಡೋ - ಗ್ರೀಕರು ಅಥವಾ ಯವನರೆಂದು ಕರೆಯುತ್ತಾರೆ.
2. ಭಾರತಕ್ಕೆ ಬಂದ ಮೊಟ್ಟ ಮೊದಲ ಬ್ಯಾಕ್ಟ್ರೀಯನ್ ದೊರೆ 1ನೇ ಡೆಮಿಟ್ರಿಯೊಸ್ ಈತ ಭಾರತ,ಅಪಘಾನಿಸ್ತಾನ, ತಕ್ಷಶಿಲೆ, ಸಿಂಧ್ ಪೇಶಾವರ್‌ಪಂಜಾಬ ಪ್ರಾಂತ್ಯಗಳ ಮೆಲೆ ದಾಳಿ ಮಾಡಿದನು.
3. ಭಾರತಕ್ಕೆ ಬಂದ ಬ್ಯಾಕ್ಟ್ರೀಯನ್ ಪ್ರಸಿದ್ಧ ದೊರೆ ಮೆನಾಂಡರ್ ಈತ ಭಾರತದ ಅಪಘಾನಿಸ್ಥಾನ ,ತಕ್ಷಶಿಲೆ ಸಿಂಧ್ ಪೇಶಾವರ್,ಪಂಜಾಬ,ಕಾಥೆವಾಡ ಮತ್ತು ಮಥುರಾಗಳ ಮೇಲೆ ದಾಳಿ ಮಾಡಿದ್ದನು.
4. ಮೆನಾಂಡರ್ ಮತ್ತು ಭಾರತದ ಬೌದ್ಧ ಸನ್ಯಾಸಿ ನಾಗಸೇನ್ ಮಧ್ಯ ನಡೆದ ಒಂದು ಚಚೆ೯ಯ ವಿಷಯವೇ ಮಿಲಿಂದ ಪನ್ಹಾ ಈ ಮಿಲಿಂದ ಪನ್ಹಾ ಎಂಬ ಗ್ರಂಥವನ್ನು ಬೌದ್ಧಧಮ೯ದ 2ನೇ ಪವಿತ್ರ ಗ್ರಂಥವೆಂದು ಕರೆಯುತ್ತಾರೆ.
5. ಬ್ಯಾಕ್ಟ್ರೀಯನ್‌ರ ಕೊನೆಯ ದೊರೆ ಹಮೆ೯ಯಸ್
ಪ್ರಶ್ನೆ 2. ಪಾಥಿ೯ಯನ್ನರು ಬಗ್ಗೆ ತಿಳಿಸಿ.
ಭಾರತದ ಮೇಲೆ ದಾಳಿ ಮಾಡಿದ ಪಾಥಿ೯ಯನ್ನರ ಮೊಟ್ಟಮೊದಲ ದೊರೆ ಗೊಂಡೋ ಪೆನೆ೯ಸ್ ಈತನ ಕಾಲದಲ್ಲಿ ಭಾರತಕ್ಕೆ ಬಂದ ಮೊಟ್ಟ ಮೊದಲ ಕ್ರಿಶ್ಚಿಯನ್ ವ್ಯಕ್ತಿ ಸೆಂಟ್ ಥಾಮಸ್