27 Mar ಕಬೀರದಾಸರು New
ಪ್ರಶ್ನೆ 1. ಕಬೀರದಾಸರು ಕ್ರಿಶ. 1440 - 1518 ಬಗ್ಗೆ ತಿಳಿಸಿ
1.ಬ್ರಾಹ್ಮಣ ವಿಧವೆಯ ಪುತ್ರರಾಗಿದ್ದಾರೆ.
2. ಇವರನ್ನು ಕಾಶಿಯ ಕೆರೆಯ ಹತ್ತಿರ ಬಿಟ್ಟು ಹೋದಾಗ ನಿರೂ ಮತ್ತು ನಿಹಾ ಎಂಬ ಮುಸಲ್ಮಾನ ದಂಪತಿಗಳ ಆಶ್ರಯದಲ್ಲಿ ಬೆಳೆದರು.
3. ಇವರು ಜಾತಿ ಭೇಧ ಧಾಮಿ೯ಕ ವಿಧಿ - ವಿಧಾನವನ್ನು ಮತ್ತು ಆಡಂಬರದ ಅಚರಣೆಗಳನ್ನು ಕಂಡಿಸಿದರು
4. ಇವರು ಭಕ್ತರಹಿತವಾದ ವ್ರತ, ಉಪವಾಸ, ಉತ್ಸವ ತೀಥ೯ ಯಾತ್ರೆಗಳು ನಿರುಪಯುಕ್ತ ಎಂದು ಹೇಳಿದರು.
5. ಹಿಂದೂ ಮುಸ್ಲಿಂ ಒಂದೇ ಮಣ್ಣಿನಿಂದ ತಯಾರಿಸಿದ ಮಡಿಕೆಗಳು ಮತ್ತು ಭಕ್ತಿಯೇ ಧಮ೯ದ ಜೀವಾಳ,ಪ್ರೇಮವೇ ದೇವರನ್ನು ಒಲಿಸಿಕೊಳ್ಳುವ ಮಾಗ೯ ದೇವರು ಮಾನವನ ಹೃದಯದಲ್ಲಿದ್ದಾನೆ. ರಾಮ ರಹೀಮ ಬೇಧವಿಲ್ಲ ತಾವು ಅಲ್ಲಾ ಮತ್ತು ರಾಮನ ಪುತ್ರ ಎಂದು ಹೇಳಿದ್ದಾರೆ
6. ಇವರು ದೇವನೊಬ್ಬ ನಾಮ ಹಲವು ಎಂಬ ಏಕೀಶ್ವರ ವಾದವನ್ನು ಪ್ರತಿಪಾದಿಸಿದರು.
7. ಇವರು ಹಿಂದಿ ಭಾಷೆಯಲ್ಲಿ 2 ಸಾಲಿನ ಪದ್ಯಗಳಿಂದ ದೋಹಾಗಳ ಮೂಲಕ ಜನಸಾಮಾನ್ಯರಿಗೆ ತಿಳಿ ಹೇಳಿದರು
8. ಇವರ ಅನುಯಾಯಿಗಳನ್ನು ಕಬೀರ ಪಂಥಿಗಳೆಂದು ಕರೆಯುತ್ತಾರೆ.