27 Mar ಕುಶಾಣರು New

ಪ್ರಶ್ನೆ 1.  ಕುಶಾಣರು  ಬಗ್ಗೆ ತಿಳಿಸಿ

ಮೌಯ೯ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅತ್ಯಂತ ವಿಶಾಲವಾದ ಸಾಮ್ರಾಜ್ಯ ವಿಸ್ತರಿಸಿದ ಕೀತಿ೯ ಕುಶಾಣರದು, ಇವರು ಮೂಲತ: ಚೀನಾದ ಯೂಚಿ- ಬುಡಕಟ್ಟಿಗೆ ಸೇರಿದ ಜನಾಂಗ ಆರಂಭದಲ್ಲಿ ಯೂ-ಚಿಗಳಲ್ಲಿ ಹುಪ್ಸಿ,ತುಪ್ಪು, ಕುಲಿಶಾಂಗ,ಹಿಲಿಯಾನ್‌ ಮತ್ತು ಕ್ರಿಷಾಂಗ್‌ ಎಂಬ 5 ಪಂಗಡಗಳಿದ್ದವು.

ಕ್ರಿಷಾಂಗ್‌ ಪದವೇ ಪ್ರಸಿದ್ದಿಯಾಗಿ ಕುಶಾಣ ಎಂಬ ಹೆಸರು ಪಡೆಯಿತು.ಕ್ರಿಷಾಂಗ ಪಂಗಡದ ನಾಯಕ ಒಂದನೇ ಕುಜಲ ಕಡಫಿಸಸ್‌  5 ಪಂಗಡಗಳನ್ನು ಒಂದುಗೊಡಿಸಿ ಕುಶಾಣ ಮನೆತನದ ಸ್ಥಾಪಕನಾದನು.

1ನೇ ಕುಜಲ ಕಢಪಿಸಸ್‌ ಕಿ.ಶ. 15 - 65

1. ಈತ ಕುಶಾಣ ಮನೆತನದ ಸ್ಥಾಪಕ

2. ಈತ ಐದು ಪಂಗಡಗಳನ್ನು ಒಂದುಗೂಡಿಸಿದ್ದಕ್ಕಾಗಿ ವಾಂಗ ಎಂಬ ಬಿರುದು  ಪಡೆದನು

3.ಇಂಡೋ ಗ್ರೀಕರು ಪಾಥಿ೯ಯನ್ನರು ಮತ್ತು ಶಕರನ್ನು ಸೋಲಿಸಿ ಅಪಘಾನಿಸ್ತಾನ, ತಕ್ಷಶಿಲೆ.ಪೇಶಾವರ, ಸಿಂಧ್‌ ಮತ್ತು ಪಂಜಾಬ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು.

4.ಪೇಶಾವರ ಅಥವಾ ಪುರುಷ ಪುರವನ್ನು ತನ್ನರಾಜಧಾನಿಯಾಗಿ ಮಾಡಿಕೊಂಡನು

5. ಈತನ ಸಾಮ್ರಾಜ್ಯವು ಪಷಿ೯ಯಾದಿಂದ ಸಿಂಧೂ ನದಿಯವರೆಗೆ ವಿಸ್ತರಿಸಿತ್ತು.

6. ಚೀನಾ ಮತ್ತು ರೋಮನ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಪಕ೯ ಹೊಂದಿದ್ದನು.

7. ಬೌದ್ಧ ಮತಾವಲಂಬಿಯಾಗಿದ್ದರು ರೋಮನ್‌ ಮಾದರಿಯಲ್ಲಿ ದಿನಾರ್‌ ಎಂಬ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು.

8. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದನು.

9. ಈತನಿಗೆ ರಾಜಾದಿರಾಜ ಧಮ೯ ಮಹಾರಾಜ ಎಂಬ ಬಿರುದುಗಳಿದ್ದವು.


 ಪ್ರಶ್ನೆ 2.   2ನೇ ಕುಜಲ್‌ ಕಡಫಿಸಸ್‌ ಕ್ರಿ.ಶ. 65-78 ಬಗ್ಗೆ ತಿಳಿಸಿ

1ನೇ ಕುಜಲ ಕಡಫಿಸಸನ್‌ ಮಗನಾಗಿದ್ದಾನೆ.

2. ಭಾರದ ಭೂ ಪ್ರದೇಶಗಲನ್ನು ಗೆದ್ದ ಮೊದಲ ಕುಶಾಣರ ಅರಸ.

3. ತಂದೆ ಗಿಂತಲೂ ವಿಶಾಲವಾದ ಸಾಮ್ರಾಜ್ಯ ಹೊಂದಿದ್ದನು.

4. ಶಿವನ ಆರಾಧಕನಾಗಿದ್ದನು.

5. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು.

6. ಭಾರತಕ್ಕೆ ಶುದ್ದ ಬಂಗಾರದ ನಾಣ್ಯಗಳನ್ನು ಪರಿಚಯಿಸಿದ ಮೊಟ್ಟ ಮೊದಲ ಅರಸ.

7. ಈತನಿಗೆ ಸಮಗ್ರ ಪ್ರಪಂಚದ ಒಡೆಯ ತ್ರೈಲೋಕೇಶ್ವರ, ರಾಜರ ರಾಜ ಮತ್ತು ಮಹೇಶ್ವರ ಎಂಬ ಬಿರುದುಗಳಿದ್ದವು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions