28 Mar 1ನೇ ಕುಜಲ ಕಢಪಿಸಸ್ ಮತ್ತು 2ನೇ ಕುಜಲ್ ಕಡಫಿಸಸ್ New
ಪ್ರಶ್ನೆ 1. 1ನೇ ಕುಜಲ ಕಢಪಿಸಸ್ ಕಿ.ಶ. 15 - 65 ಬಗ್ಗೆ ತಿಳಿಸಿ
1. ಈತ ಕುಶಾಣ ಮನೆತನದ ಸ್ಥಾಪಕ
2. ಈತ ಐದು ಪಂಗಡಗಳನ್ನು ಒಂದುಗೂಡಿಸಿದ್ದಕ್ಕಾಗಿ ವಾಂಗ ಎಂಬ ಬಿರುದು ಪಡೆದನು
3.ಇಂಡೋ ಗ್ರೀಕರು ಪಾಥಿ೯ಯನ್ನರು ಮತ್ತು ಶಕರನ್ನು ಸೋಲಿಸಿ ಅಪಘಾನಿಸ್ತಾನ, ತಕ್ಷಶಿಲೆ, ಪೇಶಾವರ, ಸಿಂಧ್ ಮತ್ತು ಪಂಜಾಬ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು.
4.ಪೇಶಾವರ ಅಥವಾ ಪುರುಷಪುರವನ್ನು ತನ್ನರಾಜಧಾನಿಯಾಗಿ ಮಾಡಿಕೊಂಡನು
5. ಈತನ ಸಾಮ್ರಾಜ್ಯವು ಪಷಿ೯ಯಾದಿಂದ ಸಿಂಧೂ ನದಿಯವರೆಗೆ ವಿಸ್ತರಿಸಿತ್ತು.
6. ಚೀನಾ ಮತ್ತು ರೋಮನ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಪಕ೯ ಹೊಂದಿದ್ದನು.
7. ಬೌದ್ಧ ಮತಾವಲಂಬಿಯಾಗುದ್ದರು ರೋಮನ್ ಮಾದರಿಯಲ್ಲಿ ದಿನಾರ್ ಎಂಬ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು.
8. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದನು.
9. ಈತನಿಗೆ ರಾಜಾದಿರಾಜ ಧಮ೯ಮಹಾರಾಜ ಎಂಬ ಬಿರುದುಗಳಿದ್ದವು.
ಪ್ರಶ್ನೆ 2. 2ನೇ ಕುಜಲ್ ಕಡಫಿಸಸ್ ಕ್ರಿ.ಶ. 65-78 ಬಗ್ಗೆ ತಿಳಿಸಿ
1ನೇ ಕುಜಲ ಕಡಫಿಸಸನ್ ಮಗನಾಗಿದ್ದಾನೆ.
2. ಭಾರದ ಭೂ ಪ್ರದೇಶಗಳನ್ನು ಗೆದ್ದ ಮೊದಲ ಕುಶಾಣರ ಅರಸ.
3. ತಂದೆಗಿಂತಲೂ ವಿಶಾಲವಾದ ಸಾಮ್ರಾಜ್ಯ ಹೊಂದಿದ್ದನು.
4. ಶಿವನ ಆರಾಧಕನಾಗಿದ್ದನು.
5. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು.
6. ಭಾರತಕ್ಕೆ ಶುದ್ದ ಬಂಗಾರದ ನಾಣ್ಯಗಳನ್ನು ಪರಿಚಯಿಸಿದ ಮೊಟ್ಟ ಮೊದಲ ಅರಸ.
7. ಈತನಿಗೆ ಸಮಗ್ರ ಪ್ರಪಂಚದ ಒಡೆಯ ತ್ರೈಲೋಕೇಶ್ವರ, ರಾಜರ ರಾಜ ಮತ್ತು ಮಹೇಶ್ವರ ಎಂಬ ಬಿರುದುಗಳಿದ್ದವು.