29 Mar ಗುರುನಾನಕ New
ಪ್ರಶ್ನೆ 1. ಗುರುನಾನಕ ಕ್ರಿ.ಶ 1469 - 1539 ಬಗ್ಗೆ ತಿಳಿಸಿ
1.ಇವರು ಸಿಖ್ ಮತದ ಸ್ಥಾಪಕರು.
2. ಇವರು ಖತ್ರಿ ಕುಟುಂಬ ದವರಾಗಿದ್ದರು
3. ಇವರು ಪಾಕಿಸ್ತಾನದ ತಲವಂಡಿ ಎಂಬಲ್ಲಿ ಜನನಿಸಿದರು
ತಂದೆ : ಮೆಹತ್ ಕೌರ
ತಾಯಿ : ತ್ರಿಪುರಾದೇವಿ
6. ಇವರು ಸವ೯ಧಮ೯ ಸಹಿಷ್ಣುತೆಯ ಸಂದೇಶ ನೀಡಿದರು.
7. ಇವರು ದೇವರು ಒಬ್ಬನೇ ಸತ್ಯವೇ ದೇವರು ಎಂದು ಹೇಳಿದರು. ನನಗೆ ಒಂದು ಲಕ್ಷ ನಾಲಿಗೆಗಳಿದ್ದರೂ ಆ ಎಲ್ಲ ನಾಲಿಗಳಿಂದಲೂ ಒಬ್ಬನೇ ದೇವರನ್ನು ಸ್ಮರಿಸುತ್ತೇನೆ.
ಎಂದು ಹೇಳುತ್ತಿದ್ದನು.
8. ಇವರು ಗುರುವಿನಿಂದ ಭಕ್ತಿಯನ್ನು ಭಕ್ತಿಯಿಂದ ಮುಕ್ತಿಯನ್ನು ಪಡೆಯ ಬಹುದೆಂದು ಹೇಳಿದರು
9. ಇವರು ಕನಾ೯ಟಕದ ಬೀದರ್ ನಗರಕ್ಕೆ ಭೇಟಿ ನೀಡಿದರ ನೆನಪಿಗಾಗಿ ಅಲ್ಲಿ ಗುರುನಾನಕ ಝರಾ ಎಂಬ ಕಟ್ಟಡ ನಿಮಿ೯ಸಲಾಗಿದೆ.
10. ಸಿಖ್ ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ನ ಐದನೇ ಗುರು ಅಜು೯ನ ದೇವ ರಚಿಸಿದರು
11. ಸಿಖ್ ರ ಆರಾಧನಾ ಕೇಂದ್ರಗಳನ್ನು ಗುರುದ್ವಾರಗಳೆಂದು ಕರೆಯುತ್ತಾರೆ.
12.ಸಿಖ್ ರ ಲಿಪಿಯನ್ನು ಗುರು ಮುಖಿ ಲಿಪಿ ಎಂದು ಕರೆಯುತಾರೆ.
13. ಸಿಖ್ ರ ನಾಲ್ಕನೇ ಗುರು ರಾಮದಾಸರು ಅಮೃತಸರದಲ್ಲಿ ಹರಮಿಂದ ಸಾಹೇಬ್ ಅಥವಾ ಸ್ವಣ೯ಮಂದಿರ ನಿಮಾ೯ಣಕ್ಕೆ ಅಡಿಪಾಯ ಹಾಕಿದರು. ಇದನ್ನು ಐದನೇ ಗುರು ಅಜು೯ನ ದೇವ ಪುಣ೯ಗೊಳಿಸಿದರು.
14. ಸಿಖ್ ರ ಹತ್ತನೇ ಹಾಗೂ ಕೊನೆಯ ಗುರು ಗೋವಿಂದ ಸಿಂಗ್. ಈತ ಖಾಲ್ಸಾ ಎಂಬ ಸೈನ್ಯವನ್ನು ರಚಿಸಿದನು.