30 Mar 2ನೇ ಚಂದ್ರಗುಪ್ತನ New
ಪ್ರಶ್ನೆ 1. 2ನೇ ಚಂದ್ರಗುಪ್ತನ ಕ್ರಿ. ಶ 380-414 ಬಗ್ಗೆ ತಿಳಿಸಿ
1.ಸಮುದ್ರ ಗುಪ್ತನ ರಾಣಿ ದತ್ತಾದೇವಿಯ ಮಗನಾಗಿದ್ದಾನೆ ಅದಕ್ಕಾಗಿ ಈತನಿಗೆ ದೇವ ಶ್ರೀ ಮತ್ತು ದೇವಗುಪ್ತ ಎಂಬ ಹೆಸರುಗಳಿದ್ದವು.
2. ಈತ ಅಧಿಕಾರಕ್ಕೆ ಬಂದ ಕೂಡಲೇ ಶಕರ ದೊರೆ 3 ನೇ ರುದ್ರ ಸಿಂಹನನ್ನು ಕೊಲೆ ಮಾಡಿ ಶಕಾರಿ ಎಂಬ ಬಿರುದನ್ನು ಧರಿಸಿದನು.
3. ಈತನಿಗೆ ವಿಕ್ರಮಾದಿತ್ಯ ಎಂಬ ಬಿರುದಿತ್ತು
4. ಈತ ಉಜ್ಜೈನಿಯನ್ನು ತನ್ನ 2ನೇ ರಾಜಧಾನಿಯನ್ನಾಗಿ ಮಾಡಿಕೊಂಡನು
5. ಈತನ ಸಾಧನೆಯನ್ನು ತಿಳಿಸುವ ಶಾಸನ ಮೆಹರುಲಿ ಸ್ಥಂಭ ಶಾಸನ
6. ಇದು ಲೋಹ ಶಾಸನವಾಗಿದ್ದು ಎತ್ತರ - 23.8 ಅಡಿ ತೂಕ- 6.000 ಕೆಜಿ. ತೂಕವನ್ನು ಹೊಂದಿದ್ದು ದೆಹಲಿಯ ಕುತುಬ್ ಮಿನಾರಿನ ಆವರಣದ ಪಕ್ಕದಲ್ಲಿದೆ.
7. ಈತನು ಕೂಡಾ ತನ್ನ ಅಜ್ಜನಂತೆ ವೈವಾಹಿಕ ಸಂಬಂಧಗಳ ಮೂಲಕ ಸಾಮ್ರಾಜ್ಯ ವಿಸ್ತರಿಸಿ ಕೊಂಡನು.
8. ಈತ ನಾಗಾ ಸಂತತಿಯ ರಾಜಕುಮಾರಿ ಕುಬೆರನಾಗಳನ್ನು ವಿವಾಹವಾದನು.
9. ಈತ ತನ್ನ ಮಗಳಾ ಪ್ರಭಾವತಿ ಗುಪ್ತಳನ್ನು ವಾಕಟಕದ ಅರಸ 3ನೇ ರುದ್ರಸೇನನಿಗೆ ಕೊಟ್ಟು ವಿವಾಹ ಮಾಡಿದನು.
10 ಈತ ಕನಾ೯ಟಕದ ಕದಂಬರ ಅರಸ ಕಾಕುತ್ಸ ವಮ೯ನ ಮಗಳೊಂದಿಗೆ ತನ್ನ ಮಗನ ವಿವಾಹ ಮಾಡಿದನು.
11. ಈತನ ಆಸ್ಥಾನದಲ್ಲಿ ನವರತ್ನ ಎಂಬ ಕವಿಗಳ ಕೂಟವಿತ್ತು ಮತ್ತು ಅವರುಗಳೆಂದರೆ
1. ಕಾಳಿದಾಸ- ಅಭಿಜ್ನಾನ ಶಾಕುಂತಲ
2. ವರಾಹಿಮಿಹಿರ- ಬೃಹತ್ ಸಂತತಿ
3. ದನ್ವಂತರಿ - ಆಯುವೇ೯ದ ನಿಗಘಂಟ,
4. ಅಮರಸಿಂಹ - ಅಮರಕೋಶ
5. ವೇಣಾಲ ಭಟ್ - ಮಂತ್ರ ಶಾಸ್ತ್ರ
6. ಘಟಕಪ೯ರ - ಘಟಕಪ೯ರ ಕಾವ್ಯ
7.ವರರುಚಿ- ವ್ಯಾಕರಣ
8. ಶಂಕು - ಶಿಲ್ಪ ಶಾಸ್ತ್ರ
9. ಕ್ಷಪಣಕ - ಜ್ಯೋತಿಷ್ಯಶಾಸ್ತ್ರ
ಇವರಲ್ಲಿ ಅತ್ಯಂತ ಪ್ರಸಿದ್ದಿಗೆ ಬಂದವನು ಕಾಳಿದಾಸ ಈತನಿಗೆ ಕವಿಕುಲ ಗುರು ಕವಿರತ್ನವೆಂಬ ಬಿರುದುಗಳಿದ್ದವು.