30 Mar ಸಮುದ್ರಗುಪ್ತ New
ಪ್ರಶ್ನೆ 1. ಸಮುದ್ರಗುಪ್ತ ಕ್ರಿ .ಶ. 335-380 ಬಗ್ಗೆ ತಿಳಿಸಿ
1. ಭಾರತದ ಇತಿಹಾಸದಲ್ಲಿಯೇ ಅಗ್ರಗಣ್ಯ ಅರಸ.
2. ಈತನ ಸಾಧನೆಯನ್ನು ತಿಳಿಸುವ ಶಾಸನ. ಅಲಹಾಬಾದ ಸ್ಥಂಭ ಶಾಸನ. ಇದರ ರಚನಾಕಾರ ಹರಿಸೇನ. ಇದು 33 ಸಾಲುಗಳನ್ನು ಒಳಗೊಂಡಿದ್ದು ಒಂದೇ ವಾಕ್ಯದಲ್ಲಿದೆ.
ಇದರಲ್ಲಿ ಸಮುದ್ರಗುಪ್ತ ಉತ್ತರದ - 9, ದಕ್ಷಿಣ - 10 ಅಡವಿ ರಾಜ್ಯಗಳು, ಪೂವ೯ ಮತ್ತು ಪಶ್ಚಿಮದ 18 ಅರಸರನ್ನು ಸೋಲಿಸಿ ಯಶಸ್ವಿಯಾಗಿ ಅಶ್ವಮೇಧಯಾಗವನ್ನು ಆಚರಿಸಿದ್ದಕ್ಕಾಗಿ ಇವನನ್ನು ವಿ.ಎ. ಸ್ಮಿತ ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.
3.ಈತನ ಮೂಲ ಹೆಸರು - ಕಚ
4.ಈತ ಸಮುದ್ರ ಯಾನದ ಮೂಲಕ ಮೊಟ್ಟಮೊದಲಬಾರಿಗೆ ವಿದೇಶದ ಮೇಲೆ ದಾಳಿ ಮಾಡಿ ಇಂಡೋನೇಷಿಯಾದ ಜಾವಾ ಮತ್ತು ಸಮಾತ್ರಾ ಎಂಬ ಪ್ರದೇಶಗಳನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡಿದ್ದಾಕ್ಕಾಗಿ ಇವನನ್ನು ಸಮುದ್ರಗುಪ್ತ ಎಂದು ಕರೆಯಲಾಯಿತು
4. ಈತ ಶ್ರೀಲಂಕಾದ ಮೇಲೆ ದಾಳಿ ಮಾಡಿ ಮೇಘ ವಮ೯ನನ್ನು ಸೋಲಿಸಿ ಶ್ರೀಲಂಕಾದ ಕಪ್ಪ ಕಾಣಿಕೆ ವಸೂಲಿ ಮಾಡಿದನು.
5.ಈತನ ಸಾಮ್ರಾಜ್ಯವು ಪೂವ೯ದ ಬಂಗಾಳದಿಂದ ಪಶ್ಚಿಮದ ಸಿಂಧವರೆಗೆ ಉತ್ತರದ ಹಿಮಾಲಯದಿಂದ ದಕ್ಷಿಣದ ವಿಂದ್ಯ ಪವ೯ತದವರೆಗೆ ಹರಡಿಕೊಂಡಿತ್ತು
6.ಈತ ಕೇವಲ ಯುದ್ದ ಪ್ರಿಯನಾಗಿರದೇ ಕಲೆ ಸಾಹಿತ್ಯ ಮತ್ತು ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದನು.
7.ಈತನ ಪ್ರಸಿದ್ದ ಕೃತಿ - ಕೃಷ್ಣಚರಿತೆ
8. ಈತನಿಗಿದ್ದ ಪ್ರಸಿದ್ದ ಬಿರುದು- ಕವಿರಾಜ
9. ಈತ ತನ್ನ ಆಡಳಿತದಲ್ಲಿ 8 ಪ್ರಕಾರದ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದನು ಅವುಗಳೆಂದರೆ
ಛತ್ರ, ಕಚ್ಚ, ವೀಣಾ, ಅಶ್ವಮೇಧ, ಗಧೆ, ಪದ್ಮ, ಚಕ್ರ, ಶಂಖ
10 ಸಮುದ್ರಗುಪ್ತ ಒಬ್ಬ ಪ್ರಸಿದ್ದ ಸಂಗೀತಗಾರನಾಗಿದ್ದನೆನ್ನಲು ತನ್ನ ಕಾಲದ ನಾಣ್ಯಗಳ ಮೇಲೆ ವೀಣೆ ,ಮತ್ತು ಕೊಳಲನ್ನು ನುಡಿಸುತ್ತಿರುವ ಚಿತ್ರಗಳನ್ನು ಮುದ್ರಿಸಿದನು.
11. ಈತನ ಕಾಲದಲ್ಲಿ ಹಿಂದೂ ಧಮ೯ ಉನ್ನತ ಸ್ಥಾನದಲ್ಲಿತ್ತು.