4 Apr ಫ್ರೆಂಚರು New
ಪ್ರಶ್ನೆ 1. ಫ್ರೆಂಚರು ಬಗ್ಗೆ ತಿಳಿಸಿ
1. ಫ್ರಾನ್ಸ ದೊರೆ 14 ನೆ ಲೂಯಿಯ ಅಥ೯ ಸಚಿವನಾದ ಕೋಲ್ಟಟ್‌೯ನ ಪ್ರಯತ್ನದಿಂದ 1664 ರಲ್ಲ್ ಫ್ರೆಂಚ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿತವಾಯಿತು. ಇದು ಖಾಸಗಿ ಕಂಪನಿಯಾಗಿರದೆ ಸಕಾ೯ರವೇ ಸ್ಥಾಪಿಸಿದ ಒಂದು ಇಲಾಖೆಯಾಗಿತ್ತು.
2. ಕ್ರಿಶ. 1667 - 68 ಫ್ರಾನ್ಸಿಸ್ ಕೆರಾನ್ ಎನ್ನುವವನು ಸೋರತ್ನಲ್ಲಿ ಪ್ರಪ್ರಥಮ ವ್ಯಾಪಾರ ಕೊಠಿಯನ್ನು ಆರಂಭಿಸಿದನು.
3. 1669 ರಲ್ಲಿ ಮಚಲೀಪಟ್ಟಣದಲ್ಲಿ ವಸಾಹತು ಸ್ಥಾಪಿಲಾಯಿತು.
4. 1674 ರಲ್ಲಿ ಫ್ರಾನ್ಸಿಸ್ ಮಾಟಿ೯ನ್ ವಾಲಿಕಂಡಪುರಂ ಬಳಿ ಇರುವ ಒಂದುಹಳ್ಳಿಯನ್ನು ಪಡೆದು ಅದನ್ನು ಅಭಿವೃದ್ದಿ ಪಡಿಸಿದ ಅದೇ ಮುಂದೆ ಪಾಂಡಿಚೇರಿ ಎಂದಾಯಿತು. ಅಲ್ಲದೇ ಫ್ರೆಂಚ್ ರಾಜಧಾನಿ ಕೇಂದ್ರವು ಆಯಿತು.
5. ಈತನು ಪಾಂಡಿಚೇರಿಯಲ್ಲಿ ಪೊಟ್‌೯ ಲೂಯಿಸ್ ಎಂಬ ಕೊಟೆಯನ್ನು ಕಟ್ಟಿಸಿದನು.
6. 1693 ರಲ್ಲಿ ಡಚ್ಚರ ಮತ್ತು ಫ್ರೆಂಚರ ಮಧ್ಯದ ಹೋರಾಟದಲ್ಲಿ ಪಾಂಡಿಚೇರಿ ಡಚ್ಚರ ವಶವಾಯಿತು. ಆದರೆ ರಿಶ್ ವಿಕ್ ಒಪ್ಪಂದದಂತೆ ಅದನ್ನು ಫ್ರೆಂಚ್ ಗೆ ಹಿಂದಿರುಗಿಸಲಾಯಿತು.