https://himalaiiasclass.blogspot.com/2024/03/1_9.html
ಪ್ರಶ್ನೆ 1.ಸಿಂಧೂ ನಾಗರಿಕತೆ ನಗರ ಯೋಜನೆ ಬಗ್ಗೆ ತಿಳಿಸಿ
1 ಇದು ಜಗತ್ತಿನ ಮೊಟ್ಟ ಮೊದಲ ನಗರ ನಾಗರಿಕತೆ ಯಾಗಿದೆ.
2 ಇದು ಜಗತ್ತಿನಲ್ಲಿ ಮೊಟ್ಟ ಮೊದಲ ಒಳ ಚರಂಡಿ ವ್ಯವಸ್ಥೆ ಅಳವಡಿಸಿಕೊಂಡ ನಾಗರಿಕತೆಯಾಗಿದೆ.
3 ಸಿಂಧೂ ಜನರ ಮನೆಗಳು ಚದುರಂಗದಾಕಾರದಲ್ಲಿದ್ದವು
4 ರಸ್ತೆಗಳು ನೇರ ಮತ್ತು ಅಗಲವಾಗಿದ್ದವು.
5 ಮನೆಗಳು ರಸ್ತೆಯ ಅಂಚನ್ನು ದಾಟುವಂತಿರಲಿಲ್ಲ
6 ರಸ್ತೆಗಳ ಪಕ್ಕದಲ್ಲಿ ಬೀದಿ ದೀಪದ ಕಂಬಗಳಿದ್ದವು.
7 ಮನೆಗಳು ಮತ್ತು ಚರಂಡಿಗಳು ಸುಟ್ಟ ಇಟ್ಟಿಗೆಗಳಿಂದ ನಿಮಿ೯ಸುತ್ತಿದ್ದರು.
8 ರಸ್ತೆಗಳು ಸುಟ್ಟ ಇಟ್ಟಿಗೆಯ ಪುಡಿ ಮತ್ತು ಗಾರೆಕಲ್ಲುಗಳಿಂದ ನಿಮಿ೯ಸತ್ತಿದ್ದರು.
9 ಚರಂಡಿಗಳನ್ನು ಸ್ವಚ್ಚಗೊಳಿಸಲು ಅಲ್ಲಲ್ಲಿ ಜಾಲಂಧ್ರಗಳನ್ನು ಬಿಡುತ್ತಿದ್ದರು.
10 ನಗರಗಳು ಕೋಟೆಗಳಿಂದ ರಕ್ಷಣೆ ಪಡೆದುಕೊಂಡಿದ್ದವು.
12 ನಗರಗಳಿಗೆ ಹೋಗಿ ಬರಲು ಪ್ರವೇಶದ್ವಾರಗಳಿದ್ದವು.
13 ಸಿಂಧೂ ನಾಗರಿಕತೆಯ ನಗರ ಯೋಜನೆ ಏಕೈಕ ದೋಷವೆಂದರೆ ಚರಂಡಿ ಪಕ್ಕದಲ್ಲಿ ಬಾವಿಗಳನ್ನು ನಿಮಿ೯ಸುತ್ತಿದ್ದರು.
ಪ್ರಶ್ನೆ 2. ಸಾಮಾಜಿಕ ಜೀವನ ಬಗೆ ತಿಳಿಸಿ
1 ಸಮಾಜದಲ್ಲಿ ವಗ೯ ಭೇದವಿರಲ್ಲಿಲ್ಲ.
2 ಸಿಂಧೂ ಜನರು ಸೌಂದಯ೯ಪ್ರಿಯರಾಗಿದ್ದರು.
3 ಸಿಂಧೂ ಜನರು ಹತ್ತಿ, ಉಣ್ಣೆ ಮತ್ತು ಚಮ೯ದಿಂದ ಮಾಡಿದ ಉಡುಪುಗಳನ್ನು ಧರಿಸುತ್ತಿದ್ದರು.
4 ಸಿಂಧೂ ಸ್ರೀಯರು ಓಲೆ, ಮೂಗುತಿ, ಕಂಠಿಹಾರ, ತೋಳಬಂಧಿ, ಟೊಂಕಪಟ್ಟಿ ಮತ್ತು ಕಾಲಿಗೆ ಗೆಜ್ಜೆಗಳನ್ನು ಕಟ್ಟುತ್ತಿದ್ದರು.
5 ಸಿಂಧೂ ಪುರುಷರು ಕೈ ಕಡಗವನ್ನು ಧರಿಸುತ್ತಿದ್ದರು.
6 ಸಿಂಧೂ ಸ್ರೀಯರಿಗೆ ವಿವಿಧ ರೀತಿಯ ಕೇಶಾಲಂಕಾರ ಕಲೆಯ ಬಗ್ಗೆ ಗೊತ್ತಿತ್ತು.
7 ಅವರು ದಂತದ ಬಾಚಣಿಗೆ ಮತ್ತು ಕಂಚಿನ ಕನ್ನಡಿ ಬಳಸುತ್ತಿದ್ದರು.
8 ಸಿಂಧೂ ಜನರು ಮಿಶ್ರಾಹಾರಿಗಳಾಗುದ್ದರು.
ಪ್ರಶ್ನೆ 3. ಸಿಂಧೂ ನಾಗರಿಕತೆಯ ಧಾಮಿ೯ಕ ಜೀವನ ಬಗ್ಗೆ ತಿಳಿಸಿ
1 ಸಿಂಧೂ ಜನರ ಆರಾಧ್ಯ ದೇವತೆ ಮಾತೃದೇವತೆ.
2 ಸಿಂಧೂ ಜನರ ಆರಾಧ್ಯದೇವರು ಪಶುಪತಿ.
3 ಈ ಪಶುಪತಿ ವಿಗ್ರಹವು ಮೆಂಹಜೊದಾರೋದಲ್ಲಿ ದೊರೆತ್ತಿದ್ದು ಅದರ ಸುತ್ತಲೂ ಕೋಣ,ಹುಲಿ, ಆನೆ, ಘೇಂಡಾಮೃಗ ಮತ್ತು ಪಾದದ ಬಳಿ ಎರಡು ಜಿಂಕೆಗಳು ಕಂಡು ಬಂದಿವೆ.
4 ಸಿಂಧು ಜನರ ಪೂಜ್ಯನೀಯ ಪ್ರಾಣಿ ಡುಬ್ಬದ ಗೂಳಿ.
5 ಸಿಂಧೂ ಜನರ ಪೂಜ್ಯನೀಯ ಪಕ್ಷಿ ಪಾರಿವಾಳ.
6 ಸಿಂಧೂ ಜನರ ಪೂಜ್ಯನೀಯ ಮರ ಅರಳಿಮರ.
7 ಸಿಂಧೂ ಜನರ ಧಾಮಿ೯ಕ ಚಿಹ್ನೆ ಸ್ವಸ್ತಿಕ್
8 ಸಿಂಧೂ ಜನರಿಗೆ ಯಜ್ನಯಾಗಾದಿಗಳ ಬಗ್ಗೆ ಕಲ್ಪನೆ ಇತ್ತು.
9 ಯಜ್ನಕುಂಡಗಳು ಕಂಡು ಬಂದ ಸ್ಥಳ ಕಾಲಿಬಂಗಾನ ಮತ್ತು ಲೋಥಾಲ್
10 ಸಿಂಧೂ ಜನರಿಗೆ ಪವಿತ್ರ ಸ್ನಾನದ ಬಗ್ಗೆ ಕಲ್ಪನೆ ಇತ್ತು.
ಪ್ರಶ್ನೆ 4. ಸಿಂಧೂ ಜನರ ಆಥಿ೯ಕ ಜೀವನ ಬಗ್ಗೆ ತಿಳಿಸಿ
1 ಸಿಂದೂ ಜನರ ಮುಖ್ಯ ಉದ್ಯೋಗ ಕೃಷಿ ಮತ್ತು ಪಶು ಸಂಗೋಪನೆ
2 ಸಿಂಧೂ ಜನರ ಮುಖ್ಯ ಆಹಾರ ಬೆಳೆಗಳೆಂದರೆ ಗೋಧಿ, ಬಾಲಿ೯,ಭತ್ತ, ರಾಗಿ.
3 ಸಿಂಧೂ ಜನರ ಮುಖ್ಯ ವಾಣಿಜ್ಯ ಬೆಳೆಗಳೆಂದರೆ ಹತ್ತಿ, ಎಳ್ಳು,ಸಾಸುವೆ, ಕಲ್ಲಂಗಡಿ ಮತ್ತು ಖಜೂ೯ರ
4 ಸಿಂಧೂ ಜನರು ಆಂತರಿಕ ಮತ್ತು ವಿದೇಶಗಳೊಂದಿಗೆ ವ್ಯಾಪಾರ ಮಾಡುತ್ತಿದ್ದರು.
ಪ್ರಶ್ನೆ 5. ಸಿಂಧೂ ಜನರ ಆಂತರಿಕ ವ್ಯಾಪಾರದ ಬಗ್ಗೆ ತಿಳಿಸಿ (ಆಮದು)
ಸಿಂಧೂ ಜನರು, ತಮ್ಮ ಸುತ್ತಲಿನ ಪ್ರದೇಶಗಳಿಂದ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು.
1 ಕನಾ೯ಟಕ (ಕೋಲಾರ) ಚಿನ್ನವನ್ನು ತರಿಸಿಕೊಳ್ಳುತ್ತಿದ್ದರು
2 ರಾಜಸ್ಥಾನ - ತಾಮ್ರವನ್ನು ತರಿಸಿಕೊಳ್ಳುತ್ತಿದ್ದರು
3 ಗುಜರಾತ - ತೇಗದ ಮರಗಳು ತರಿಸಿಕೊಳ್ಳುತ್ತಿದ್ದರು
4 ಹಿಮಾಲಯ - ಆಯುವೇ೯ದ ಔಷಧಿಗಳು ತರಿಸಿಕೊಳ್ಳುತ್ತಿದ್ದರು
5 ಅಫಘಾನಿಸ್ತಾನ - ಬೆಳ್ಳಿ ಸತು & ಸುಗಂಧ ದ್ರವ್ಯ ತರಿಸಿಕೊಳ್ಳುತ್ತಿದ್ದರು
6 ಬದಖಸ್ತಾನ - ಅಭ್ರಕ ಅಥವಾ ಮೈಕಾ ತರಿಸಿಕೊಳ್ಳುತ್ತಿದ್ದರು
7 ಬಾಲಕೋಟ - ಶಂಖಗಳು ತರಿಸಿಕೊಳ್ಳುತ್ತಿದ್ದರು
8 ಮಾಂಡು - ಸೀಸ ತರಿಸಿಕೊಳ್ಳುತ್ತಿದ್ದರು
9 ಲೋಥಾಲ್ - ಹತ್ತಿ ತರಿಸಿಕೊಳ್ಳುತ್ತಿದ್ದರು
ಪ್ರಶ್ನೆ6. ವಿದೇಶದೊಂದೆಗೆ ವ್ಯಾಪಾರ ಬಗ್ಗೆ ತಿಳಿಸಿ
1 ಸಿಂಧೂ ನಾಗರಿಕತೆಯ ಸಮಕಾಲಿನ ನಾಗರಿಕತೆಯಾದ ಈಜಿಪ್ತ, ಮೆಸಪಟೊಮಿಯಾ ಮತ್ತು ಚೀನಾ ನಾಗರಿಕತೆಗಳೊಂದಿಗೆ ಭೂ ಮತ್ತು ಜಲಮಾಗ೯ದ ಮೂಲಕ ವ್ಯಾಪಾರ ಏನಿಮಯ ನಡಿಯುತ್ತಿತ್ತು
2 ವಿದೇಶಿ ವ್ಯಾಪಾರ ವಿನಿಮಯ ಕೇಂದ್ರಗಳೇಂದರೆ ಲೋಥಾಲ್, ಸೂಕ್ತಜಂಡರ್, ಚುನ್ಹದಾರೋ, ಸುರಕೊಟ್ಟ
ಪ್ರಶ್ನೆ7 ಸಿಂಧೂ ಜನರ ಮನರಂಜನೆಗಳ ಬಗ್ಗೆ ತಿಳಿಸಿ
1 ಸಿಂಧೂ ಸ್ರೀಯರು ಒಳಾಂಗಣ ಕ್ರೀಡೆಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರು.
ಅವುಗಳೆಂದರೆ ಚದುರಂಗ, ಪಗಡೆ, ನೃತ್ಯ ಸಂಗೀತ.
2 ಪುರುಷರು ಹೊರಾಂಗಣ ಕ್ರೀಡೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಅವುಗಳೆಂದರೆ ಗೂಳಿಕಾಳಗ, ಪಕ್ಷಿ ಕಾಳಗ, ಬೇಟೆಗಾರಿಕೆ, ಮಲ್ಲಯುದ್ದ ಮುಂತಾದವುಗಳು.
ಪ್ರಶ್ನೆ 8 ಸಿಂಧೂ ಜನರ ಲಿಪಿ ಬಗ್ಗೆ ತಿಳಿಸಿ
1 ಇವರ ಲಿಪಿ ಚಿತ್ರಾಕಾರವಾಗಿತ್ತು ಅದರ ಮೊದಲ ಸಾಲು ಎಡದಿಂದ ಬಲಕ್ಕೆ ಉಳಿದೆಲ್ಲ ಸಾಲುಗಳು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.ಈ ಲಿಪಿಯನ್ನು Bostropedan ಎಂದು ಕರೆಯುತ್ತಿದ್ದರು.
ಉದಾ; ಸಿಂಧೂ ಜನರು ಬಳಸಿದ ಚಿತ್ರಗಳೆಂದರೆ ಮಾನವ ಮಡಿಕೆಗಳು ಹಡಗು, ನವಿಲು ಮತ್ತು ಗುಲಾಬಿ ಹೂ
2 ಈ ಭಾಷೆ ಮತ್ತು ಲಿಪಿಯನ್ನು ಅಧ್ಯಯನ ಮಾಡಿದವರು ಐರಾವತ ಮಹಾದೇವತ್
3 ಇವರು ಈ ಭಾಷೆಯು ಡ್ರಾವಿಡ ಗುಂಪಿಗೆ ಸೇರಿದೆ ಎಂದಿದ್ದಾರೆ.
ಪ್ರಶ್ನೆ 9 ಸಿಂಧೂ ಜನರ ಶವಸಂಸ್ಕಾರ ಪದ್ದತಿ ಬಗ್ಗೆ ತಿಳಿಸಿ
1 ಸಿಂಧೂ ಜನರು ಶವಗಳನ್ನು ಹೆಚ್ಚಾಗಿ ಮಣ್ಣಿನಲ್ಲಿ ಹೂಳುತ್ತಿದ್ದರು. ಸುಡುವ ಪದ್ದತಿ ಕಡಿಮೆ ಇತ್ತು.
2 ಕೆಲವೊಂದು ಸಂದಭ೯ದಲ್ಲಿ ಶವಗಳನ್ನು ನಿಜ೯ನವಾದ ಪ್ರದೇಶದಲ್ಲಿಟ್ಟು ಬರುತ್ತಿದ್ದರು. (ಪ್ರಾಣಿ - ಪಕ್ಷಿಗಳಿಗೆ ಆಹಾರವಾಗಲೆಂದು)
3 ಶವದ ಪೆಟ್ಟಿಗೆ ಮೊದಲು ಕಂಡು ಬಂದ ಸ್ಥಳ ಮೆಹೆಂಜೋದಾರೊ.
ಪ್ರಶ್ನೆ 10 ಸಿಂಧೂ ನಾಗರಿಕತೆಯ ಅವನತಿಗೆ ಕಾರಣಗಳ ಬಗ್ಗೆ ತಿಳಿಸಿ
1 ಸಿಂಧೂ ನಾಗರಿಕತೆಯ ಅವನತಿ ಕುರಿತು ಬೇರೆ ಬೇರೆ ವಿದ್ವಾಂಸರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕಾರಣ
a ನದಿಯ ಪ್ರವಾಹ
b ಭೂ ಕಂಪನ
c ಹವಮಾನ ಬದಲಾವಣೆ
d ಆಯ೯ರ ದಾಳಿ
e ಆಣೆಕಟ್ಟುಗಳ ನಾಶ
ಪ್ರಶ್ನೆ 11. ಹರಪ್ಪ ಬಗ್ಗೆ ತಿಳಿಸಿ
1 1921 ರಲ್ಲಿ ದಯಾರಾಂ ಸಹಾನಿ ಸಂಶೋಧಿಸಿದರು.
2 ರಾವಿನದಿಯ ಎಡದಂಡೆಯ ಮೇಲಿದೆ.
3 ಪಾಕಿಸ್ತಾನದ ಮಾಂಟೆಯಗೋಮರಿ ಜಿಲ್ಲೆಯಲ್ಲಿದೆ.
4 ಈ ನಗರದಿಂದ ಇದಕ್ಕೆ ಹರಪ್ಪ ಸಂಸ್ಕತಿ ಎಂದು ಕರೆದವರು ಜಾನ್ ಮಾಷೆ೯ಲ್
5̤ H ಮಾದಿರಿಯ ಸಮಾಧಿ ಕಂಡು ಬಂದಿದೆ.
5 ಗೋಧಿ & ಬಾಲಿ೯ಯ ಕುರುಹು ಕಂಡುಬಂದಿದವೆ.
6 ಕಲ್ಲಂಗಡಿ ಬೀಜ,ಕಂಚಿನ ಕೊಡಲಿ, ತಾಮ್ರದ ಅಳತೆ ಪಟ್ಟಿ ದೊರೆತಿದೆ.
7 ಈ ನಗರವನ್ನು ಕಣಜಗಳ ನಗರ ಎನ್ನುವರು.
8 ಇದಕ್ಕೆ ಸಿಂಧೂ ನಾಗರಿಕತೆಯ ʼಹೆಬ್ಬಾಗಿಲು ನಗರ" ಎನ್ನುವರು.
ಪ್ರಶ್ನೆ 12. ಮೆಹೆಂಜೋದಾರೊ ಬಗ್ಗೆ ತಿಳಿಸಿ
1 1922 ರಲ್ಲಿ R D ಬ್ಯಾನಜಿ೯ ಇದನ್ನು ಸಂಶೋಧಿಸಿದರು.
2 ಸಿಂಧೂ ನದಿಯ ಬಲದಂಡೆಯ ಮೇಲಿದೆ.
3 ಪಾಕಿಸ್ತಾನದ ಲಕಾ೯ನ ಜೆಲ್ಲೆಯಲ್ಲಿದೆ.
4 ಸಿಂಧ್ ಭಾಷೆಯಲ್ಲಿ ಮೆಹೆಂಜೋದಾರೊ ಎಂದರೆ ಮಡಿದವರ ದಿಬ್ಬ / ಮೃತರ ಗುಪ್ಪೆ ಎಂದಥ೯.
5 1925 ರಲ್ಲಿ ಜಾನ್ ಮಾಷೆ೯ಲ್ ಇಲ್ಲಿಯ ಈಜುಕೊಳವನ್ನು ಪತ್ತೆ ಹಚ್ಚಿದರು
6 ಇದು ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿದ ನಗರ
7 ಈ ನಗರದಲ್ಲಿ ಹತ್ತಿ ಬಟ್ಟೆ ಚೂರು, ಖಜೂ೯ರದ ಬೀಜ ಕಂಡುಬಂದಿದೆ.
8 ಗಡ್ಡದಾರಿ ಮನುಷ್ಯನ ವಿಗ್ರಹ, ನತ೯ಕಿಯ ಕಂಚಿನ ವಿಗ್ರಹ, ಮಾತೃದೇವತೆಯ ವಿಗ್ರಹ, ಪಶುಪತಿಯ ವಿಗ್ರಹ ದೊರೆತಿವೆ.
9 13 ತಲೆ ಬುರುಡೆಗಳು ಒಂದೆ ಕಡೆ ಕಂಡು ಬಂದಿವೆ.
10 1980 ರಲ್ಲಿ ಈ ನಗರವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.
ಪ್ರಶ್ನೆ13. ಚುನ್ಹದಾರೋ ಬಗ್ಗೆ ತಿಳಿಸಿ
1 1931 ರಲ್ಲಿ ಎನ್. ಜಿ. ಮುಜುಂದಾರ್ ಈ ನಗರವನ್ನು ಸಂಶೋಧಿಸಿದರು.
2 ಸಿಂಧೂ ನದಿಯ ಎಡದಂಡೆಯ ಮೇಲಿದೆ.
3 ಪಾಕಿಸ್ತಾನದ ಲಕಾ೯ನ್ ಜಿಲ್ಲೆಯಲ್ಲಿದೆ.
4 ಇಲ್ಲಿ ಮಸಿಕುಡಿಕೆ, ಕಂಡುಬಂದಿದೆ.
5 ಕೋಟೆ ಮತ್ತು ಒಳಚರಂಡಿ ವ್ಯವಸ್ಥೆಯಿಲ್ಲದ ನಗರ.
6 ಇಲ್ಲಿ ಆಭರಣ, ಮಣಿ ,ಮುದ್ರೆ, ಬೊಂಬೆ./ಆಟದ ಸಾಮಾನುಗಳನ್ನು ತಯಾರಿಸುತ್ತಿದ್ದರು. ಆದ್ದರಿಂದ ಇದಕ್ಕೆ ಕಾಖ೯ನೆ ನಗರ ಎನ್ನುವರು.
ಪ್ರಶ್ನೆ 14. ಲೋಥಾಲ್ ಬಗ್ಗೆ ತಿಳಿಸಿ
1 1959 ರಲ್ಲಿ ಎಸ್.ಆರ್. ರಾವ್ ಸಂಶೋದಿಸಿದರು.
2 ಬೋಗವೊ ನದಿ ದಂಡೆಯ ಮೇಲಿದೆ.
3 ಗುಜರಾತ್ ರಾಜ್ಯದಲ್ಲಿದೆ.
4 ಇಲ್ಲಿ ದೊಡ್ಡ ಹಡಗುಕಟ್ಟಿ ಕಂಡು ಬಂದಿದ್ದರಿಂದ ಇದಕ್ಕೆ ಬಂದರು ನಗರ ಎನ್ನುವರು.
5 ಗುಜರಾತಿ ಭಾಷೆ ಯಲ್ಲಿ ಲೋಥಾಲ್ ಎಂದರೆ ಸತ್ತವರಿದಿಬ್ಬ/ ಮೃತರ ಗುಪ್ಪೆ ಎಂದಥ೯.
6 ಇದಕ್ಕೆ ಸಿಂದೂ ನಾಗರಿಕತೆಯ ಮ್ಯಾಂಚೆಸ್ಟರ್ ಎನ್ನುತ್ತಾರೆ.
7 ಇಲ್ಲಿ ಒಂದೇ ಕಡೆ ಜೋಡಿ ಅಸ್ಥಪಂಜರ ಕಂಡು ಬಂದಿದ್ದು ಇದು ಸತಿ ಸಹಗಮನ ಪದ್ದತಿ ನೆನಿಪಿಸುತ್ತದೆ.
8 ಜಾಣ ನರಿಯ ಚಿತ್ರ ಕಂಡುಬಂದಿದೆ.
9 ತುಟಿಗೆ,ಕಣ್ಣಿಗೆ ಬಣ್ಣ ಹಚ್ಚುವ ಕಡ್ಡಿ,ದಂತದ ಬಾಚಣಿಕೆ, ತಾಮ್ರದ ಕನ್ನಡಿ ಸೌಂದಯ೯ವಧ೯ಕಗಳು ಕಂಡು ಬಂದಿದ್ದರಿಂದ ಇದಕ್ಕೆ ಸೌಂದಯ೯ ನಗರ ಎನ್ನುವರು.
10 ಇಲ್ಲಿ ಚದುರಂಗ ಆಟದ ಅಲಗೆ ಕಂಡುಬಂದಿವೆ.
11 ಯಜ್ನ ಕುಂಡಗಳು ದೊರೆತಿವೆ.
ಪ್ರಶ್ನೆ 15. ಕಾಲಿಬಂಗಾನ್ ಬಗ್ಗೆ ತಿಳಿಸಿ
1 1953 ರಲ್ಲಿ ಅಮಲಾನಂದ ಘೋಷ್ ಮತ್ತು ಬಿ.ಕೆ. ಥಾಪರ್ ಈ ನಗರವನ್ನು ಸಂಶೋಧಿಸಿದರು.
2 ಇದು ಫಗ್ಗರ್/ಸರಸ್ವತಿ ನದಿ ದಂಡೆಯ ಮೇಲಿದೆ.
3 ರಾಜಸ್ತಾನ ರಾಜ್ಯದಲ್ಲಿದೆ.
4 ಸಿಂಧ್ ಭಾಷೆಯ ಅವಶೇಷ ಮತ್ತು ಯಜ್ನ ಕುಂಡಗಳು ಕಂಡು ಬಂದಿದೆ.
6 ಮಾಬ೯ಲ್ಲಿನಿಂದ ನಿಮಿ೯ಸಿದ ನೆಲ ಹಾಸಿಗೆ ಕಂಡು ಬಂದಿದೆ.
7 ನೇಗಿಲಿನಿಂದ ಹೊಲ ಉಳುಮೆ ಮಾಡಿದ ಕುರುಹು ಕಂಡು ಬಂದಿವೆ.
ಪ್ರಶ್ನೆ 16. ರೂಪಾರ ಬಗ್ಗೆ ತಿಳಿಸಿ
1 1953 ರಲ್ಲಿRD ಶಮ೯ ಸಂಶೋಧಿಸಿದರು.
2 ಸಟ್ಲಜ ನದಿ ದಂಡೆಯ ಮೇಲಿದೆ
3 ಪಂಜಾಬ ರಾಜ್ಯದಲ್ಲಿದೆ.
4 ಮನುಷ್ಯ ಮತ್ತು ನಾಯಿಯ ಅವಷೇಶ ಒಂದೇ ಕಡೆ ಕಂಡು ಬಂದಿವೆ.
ಪ್ರಶ್ನೆ 17 ರಂಗಪುರ ಬಗ್ಗೆ ತಿಳಿಸಿ
1 1953 ರಲ್ಲಿ SR ರಾವ್ ಸಂಶೋಧಿಸಿದರು.
2 ಇದು ಮೀದಾರ್ ನದಿ ದಂಡೆ ಮೇಲಿದೆ.
3 ಗುಜರಾತ್ ರಾಜ್ಯದಲ್ಲಿದೆ.
4 ಇಲ್ಲಿ ಭತ್ತದ ಹೊಟ್ಟು ದೊರೆತಿದೆ.
ಪ್ರಶ್ನೆ 18 ದೋಲವೀರ ಬಗೆಗ ತಿಳಿಸಿ
1 1991 -92 ರಲ್ಲಿ JP ಜೋಶಿ ಮತ್ತು RS ಬಿಸ್ತ್ ಸಂಶೋಧಿಸಿದರು.
2 ಇದು ಮನಹೂರ ನದಿ ದಂಡೆಯ ಮೇಲಿದೆ.
3 ಭಾರತದ ೧೦೦೦ ನೆಲೆಗಳಲ್ಲಿ ದೊಡ್ಡದಾದ ನೆಲೆ.
4 ಇದು ೩ ಕೋಟೆಗಳಿಂದ ಆವೃತವಾಲಿದೆ.
5 ಇಲ್ಲಿ ಕ್ರೀಡಾಂಗಣಗಳು ಕಂಡುಬಂದಿವೆ.
6 ಇಲ್ಲಿ ಜಲಸಂಗ್ರಹಣೆ ಅಥವಾ ಮಳೆ ನೀರಿನ ಕೊಯ್ಲು ಕಂಡು ಬಂದಿದೆ.
7 2021 ಇದನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.