A1 ತುಘಲಕ್‌ ಸಂತತಿ 15 Mar

  ಪ್ರಶ್ನೆ 1.  ತುಘಲಕ್‌ ಸಂತತಿ ಕ್ರಿ.ಶ 1320- 1414  ಬಗ್ಗೆ ತಿಳಿಸಿ

ದೆಹಲಿ ಸುಲ್ತಾನರಲ್ಲಿಯೇ ಅತೀ ಹೆಚ್ಚು ಅವಧಿಗೆ ಆಳಿದ ಮನೆತನ.


 ಪ್ರಶ್ನೆ 2.  ಘೀಯಾಸುದ್ದಿನ್‌ ತುಘಲಕ್‌ ಕ್ರಿ.ಶ 1320- 1325  ತಿಳಿಸಿ

1.ಈತ ತುಘಲಕ್‌ ಸಂತತಿಯ ಸ್ಥಾಪಕ.

2. ಈತನ ಮೂಲ ಹೆಸರು - ಘಾಜಿಮಲ್ಲಿಕ್‌

3. ತುಘಲಕ್ ಎಂಬ ನಗರವನ್ನು ನಿಮಿ೯ಸಿದನು.

4. ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟ ಮೊಟ್ಟ ಮೊದಲ ಬಾರಿಗೆ ದೆಹಲಿ ಸುಲ್ತಾನ

 5. ಕ್ರಿ.ಶ. 1324 ರಲ್ಲಿ ಬಂಗಾಳ ಪ್ರಾಂತ್ಯದ ಮಿಥಿಲಾ ನಗರದ  ಮೇಲೆ ದಾಳಿ ಮಾಡಿ ರಾಜಾ
 ಹರಿಸಿಂಗ್‌ ದೇವನನ್ನು ಸೊಲಿಸಿ ಅಪಾರವಾದ ಸಂಪತ್ತಿನೊಂದಿಗೆ ದೆಹಲಿಗೆ ಬಂದನು.
ಅಗ ಇವನ ಮಗ ಜುನಾಖಾನ್‌ ಎಂಬುವವನು ತಂದೆಯನ್ನು ಸನ್ಮಾನ  ಮಾಡುವ ನೆಪದಲ್ಲಿ ವೇದಿಕೆ ಕುಸಿಯುವಂತೆ ಮಾಡಿ  ಕೊಲೆ ಮಾಡಿ ಅಧಿಕಾರಕ್ಕೆ ಬಂದನು.

6. ವೇದಿಕೆಯ ರಾಜಶಿಲ್ಪಿ ಅಬ್ದುಲ್‌

7. ವೇದಿಕೆಯ ಉಸ್ತುವಾರಿ ವಹಿಸಿಕೊಂಡವನು ಅಯಾಜ್‌ ಖಾನ


  ಪ್ರಶ್ನೆ 3.  ಮಹಮ್ಮದ್‌ ಬಿನ್‌ ತುಘಲಕ ಕ್ರಿ.ಶ .  1325- 1351 ಬಗ್ಗೆ ತಿಳಿಸಿ


1. ತುಘಲಕ್‌ ಸಂತತಿಯ ಪ್ರಸಿದ್ದ ಅರಸ ಮೂಲ ಹೆಸರು- ಜುನಾಖಾನ್‌

2. ಇವನನ್ನು ಪಾಶ್ಚಿಮಾತ್ಯ ಇತಿಹಾಸಕಾರರು - ಅರೆ ಹುಚ್ಚ ಎಂದು ಕರೆದರೆ ಇನ್ನೂ ಕೆಲವು ಇತಿಹಾಸಕಾರರು ಯೋಜನಾಪರ ಸುಲ್ತಾನ ಎಂದು ಕರೆದಿದ್ದರು
.ಮಹಮ್ಮದ ಬಿನ್‌ ತುಘಲಕ್‌ ಕೈಗೊಂಡ ಪ್ರಮುಖ ಯೋಜನೆಗಳು


  ಪ್ರಶ್ನೆ 4.  ರಾಜಧಾನಿ ವಗಾ೯ವಣೆ 1326- 1327   ಬಗ್ಗೆ ತಿಳಿಸಿ


1. ಈತ ತಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವಗಾ೯ಯಿಸಿ ದೇವಗಿರಿಗೆ ದೌಲತಾಬಾದ ಎಂದು ಹೆಸರಿಟ್ಟನು.

2. 700 ಮೈಲಿ ದೂರ 40 ದಿನಗಳ ಪ್ರಯಾಣವಾಗಿತ್ತು


 ಪ್ರಶ್ನೆ5.  ವಗಾ೯ವಣೆ ಕಾರಣಗಳು ಯಾವುವು


1. ಇಸಾಮಿ: ದೆಹಲಿಯ ಜನರ ಶಕ್ತಿಯನ್ನು ಕುಂದಿಸುವವದಕ್ಕಾಗಿ ಸ್ಥಳಾಂತರಿಸಿದನು. ದೆಹಲಿಯು ಜನಭರಿತವಾಗಲು 14 ವಷ೯ ಸಮಯ ಬೇಕಾಯಿತು

2.ಹಬಿಬುಲ್ಲಾ : ದಖ್ಖನನದಲ್ಲಿ ಇಸ್ಲಾಂ ಸಂಪ್ರದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಕೈಗೊಂಡನು

3̤  ಜಿಯಾವುದ್ದಿನ್‌ ಬನಿ೯: ಆಡಳಿತ ಅನುಕೂಲಕ್ಕಾಗಿ ಮತ್ತು ಮಂಗೋಲರ ದಾಳಿಯನ್ನು ತಡೆಗಟ್ಟುವ ಉದ್ದೇಶ ದಿಂದ ಬದಲಾಯಿಸಿದನು.


 ಪ್ರಶ್ನೆ 6. ಅಥಿ೯ಕ ಯೋಜನೆ ಕ್ರಿ.ಶ 1326   ಬಗ್ಗೆ ತಿಳಿಸಿ


1. ಈತ ಗಂಗಾ ಮತ್ತು ಯಮುನಾ ನದಿಯ ದಂಡೆಯ ಮೇಲಿನ ರೈತರ ಪಲವತ್ತಾದ ಕೃಷಿ ಭೂಮಿಯ ಮೇಲೆ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
ಬರಗಾಲದ    ಕ್ರಮೇಣ  ರೈತರು ಕೃಷಿ ಭೂಮಿಯನ್ನಾಗಿ ಮಾಡಿದರು ಇದರಿಂದ ಬರುವ ಆದಾಯವು ಇಲ್ಲದಂತಾಯಿತು.
2. ರೈತರಿಗೆ ಬರ ಪರಿಹಾರ ನೀಡಲು ದಿವಾನ - ಈ- ಅಮೀರಕೋಲ ಎಂಬ ಕೃಷಿ ಇಲಾಖೆಯನ್ನು ಆರಂಭಿಸಿದನು.ಗಂಗಾ - ಯಮುನಾ ನದಿ ದಂಡೆಯ ಪ್ರದೇಶವನ್ನು ದೋ ಅಬ್‌ ಪ್ರದೇಶ ಎನ್ನುತ್ತಾರೆ.


 ಪ್ರಶ್ನೆ 7.  ನಾಣ್ಯ ಪ್ರಯೋಗ ಕ್ರಿ.ಶ. 1329 - 1332   ಬಗ್ಗೆ ತಿಳಿಸಿ


ಆರಂಭದಲ್ಲಿ ವೈಜ್ನಾನಿಕ ತಳಹದಿಯ ಮೇಲೆ ದಿನಾರ ಎಂಬ ಬಂಗಾರದ ಮತ್ತು ಅದಲಿ ಎಂಬ ಬೆಳ್ಳಿಯ ನಾಣ್ಯಗಳನ್ನು  ಚಲಾವಣೆಗೆ ತಂದನು ಇದರಿಂದ ಪ್ರತಿಯೊಬ್ಬ ಅಕ್ಕಸಾಲಿಗನ ಮನೆಯು ಟಂಕಶಾಲೆಗಳಾದವು. ಇದರಿಂದ ಜನರು ಮಹಮ್ಮದ - ಬಿನ್‌ - ತುಘಲಕನಿಂದ ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಜಾರಿಗೆ ತಂದನು.



  ಪ್ರಶ್ನೆ 8.   ಮಂಗೋಲರ ದಾಳಿ ತಡೆಗಟ್ಟುವ ಯೋಜನೆ ಕ್ರಿ.ಶ 1328   ಬಗ್ಗೆ ತಿಳಿಸಿ


ಮಂಗೋಲರು ದಾಳಿ ಮಾಡಿದಾಗ ಅವರೊಂದಿಗೆ ಯುದ್ದ ಮಾಡುವುದರ ಬದಲಾಗಿ ಹಣ ಕೊಟ್ಟು  ಕಳುಹಿಸುವ ನೀತಿ ಅನುಸರಿಸಿದನು.


 ಪ್ರಶ್ನೆ 9.   ವಿಶ್ವ ಗೆಲ್ಲುವ ಯೋಜನೆ   ಬಗ್ಗೆ ತಿಳಿಸಿ


1.ಇರಾಕ್‌ ಮತ್ತು  ಇರಾನ್ ಳನ್ನು ಗೆಲ್ಲುವ ಉದ್ದೇಶದಿಂದ 3.70 ಸಾವಿರ ಸೈನಿಕರಿಗೆ 1 ವಷ೯ದ ವೇತನ ಮುಂಚಿತವಾಗಿ ನೀಡಿದನು.


ಪ್ರಶ್ನೆ 10.  ಕಜ೯ಲ್‌  ದಂಡಯಾತ್ರೆ ಕ್ರಿ.ಶ 1337- 1338   ಬಗ್ಗೆ ತಿಳಿಸಿ


1 ಭಾರತದ ಮತ್ತು ಚೀನಾದ ಮಧ್ಯ ಇರುವ ಕಜ೯ಲ್‌ ಪವ೯ತದ ಪ್ರದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ 1,00,000 ಸೈನಿಕರನ್ನು ಕಳಿಹಿಸಿದನು. ಅಲ್ಲಿನ ವಿಪರೀತ ಚಳಿ ಮತ್ತು ಆಹಾರದ ಕೊರತೆಯಿಂದ ಕಜ೯ಲ್‌ ದಂಡಯಾತ್ರೆಯ ದಾರುಣ ಕಥೆ ಹೇಳಲು ಬದುಕಿ ಬಂದ ಬರವಣಿಗೆಯಿಂದ ತಿಳಿದು ಬರುತ್ತದೆ.

2. ಹೀಗೆ ಮಧ್ಯ ಕಾಲಿನ ಇತಿಹಾಸದಲ್ಲಿ ಸಕಲ ವಿಧ್ಯೆಯಲ್ಲಿ ಯಾರು ಇರಲಿಲ್ಲ

3.ಹಿಂದೂ ಪ್ರದೇಶಗಳ ಮೇಲೆ ದಾಳಿ ಮಾಡಿದ್ದರು ಹಿಂದೂ ದೇವಾಲಯಗಳನ್ನು ನಾಶ ಮಾಡದ ಮೊಟ್ಟ ಮೊದಲ ದೆಹಲಿ ಸುಲ್ತಾನ.

4. ಆಫ್ರೀಕಾ ಖಂಡದ ಮೊರಾಕ್ಕೊ ದೇಶದ ಇಬ್ನಬತೂತನನ್ನು 10ವಷ೯ಗಳ ಕಾಲ ದೆಹಲಿಯ ಖಾಜಿ ( ನ್ಯಾಯಾದೀಶರನ್ನಾಗಿ ನೇಮಕ ಮಾಡಿದನು)

5. ಇಬ್ನಬ ತೂತನನ್ನು ಚೀನಾ ದೇಶಕ್ಕೆ ರಾಯಭಾರಿಯಾಗಿ ಕಳುಹಿಸಿದನು.

6. ದಿವಾನ್‌ - ಇ - ಅಮೀರ ಕೊಹಿ ಎಂಬ ಹೊಸ ಕೃಷಿ ಇಲಾಖೆಯನ್ನು ಆರಂಭಿಸಿದನು.

7.ಜೈನ ಸನ್ಯಾಸಿ ಪ್ರಭು ಸೂರಿಯೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದನು.
ಕ್ರಿ.ಶ 1351 ರಲ್ಲಿ ವಿಪರೀತ ಜ್ವರದಿಂದ ಬಳಲಿ ಪಾಕಿಸ್ತಾನದ ಥಟ್ಟಾ ಎಂಬಲ್ಲಿ ಮರಣ ಹೊಂದಿದನು. ಇಡೀ ಭಾರತದ ಇತಿಹಾಸದಲ್ಲಿಯೇ ಇತಿಹಾಸಕಾರರಿಗೆ  ಅತ್ಯಂತ ಗೊಂದಲಮಯವಾಗಿ ಕಂಡ ಏಕೈಕ ವ್ಯಕ್ತಿ ಅದಕ್ಕಾಗಿ ಇವನನ್ನು
ವೈಪರೀತ್ಯಗಳ ಸಮ್ಮಿಶ್ರಣದ ದೊರೆ ಎಂದು ಕರೆಯುತ್ತಾರೆ


  ಪ್ರಶ್ನೆ  11.   ಫಿರೊಜ್‌ ಷಾ ತುಘಲಕ್‌ ಕ್ರಿ.ಶ 1351- 88  ಬಗ್ಗೆ ತಿಳಿಸಿ


1. ರಜಪೂತರ ಅರಸ ರಣಮಲ್ಲನ ಮಗಳಾದ ನೈಲ್‌ ಳ   ಮಗನಾಗಿದ್ದಾನೆ.

2. ಈತ ಹಿಂದೂ ತಾಯಿಯ ಮಗನಾಗಿದ್ದರೂ ಹಿಂದೂಗಳನ್ನು ವಿರೋಧಿಸಿದ ಮೊಟ್ಟ ಮೊದಲ ದೆಹಲಿ ಸುಲ್ತಾನ.

3. ಅಧಿಕಾರಕ್ಕೆ ಬಂದ ಕೂಡಲೇ ರೈತರ ಮೇಲಿನ ತಕ್ಕಾವಿ ಎಂಬ ಕೃಷಿ ಸಾಲವನ್ನು ರದ್ದು ಪಡಿಸಿದನು.

4. ಹಿಂದೂಗಳ ಮೇಲೆ ಜಜಿಯಾ ಎಂಬ ಕಂದಾಯ (ತೆರಿಗೆ) ಹೇರಿದ ಮೊಟ್ಟ ಮೊದಲ ದೆಹಲಿ ಸುಲ್ತಾನ.

5. ಇವನನ್ನು ಮಧ್ಯ ಕಾಲೀನ ಇತಿಹಾಸದಲ್ಲಿ ನಗರಗಳ ನಿಮಾ೯ಪಕ ರಾಜ ಎಂದು ಕರೆಯುತ್ತಿದ್ದರು.

6. 300 ನಗರಗಳನ್ನು ನಿಮಿ೯ಸಿದನು.

7. ಈತನ ಅಚ್ಚುಮೆಚ್ಚಿನ ನಗರ ಫಿರೋಜಾಬಾದ್‌ ಇಲ್ಲಿ ಫಿರೋಜ್‌ ಷಾಹಿ - ಎ- ಕೊಟ್ಲಾ ಎಂಬ ಅರಮನೆಯನ್ನು ನಿಮಿ೯ಸಿ ಅದರ ಸೌಂದಯ೯ ವನ್ನು ಹೆಚ್ಚಿಸಿಕೊಳ್ಳಲು ಅರಮನೆಯ 3ನೇ 
ಮಹಡಿ ಮೇಲೆ ಅಶೋಕನ ತೋಂಪ್ರಾ  ಶಾಸನವನ್ನು ತಂದು ನಿಲ್ಲಿಸಿದನು.

8.ಅತೀ ಹೆಚ್ಚು ಗುಲಾಮರನ್ನು ಹೊಂದಿದ ದೆಹಲಿ ಸುಲ್ತಾನ.

9. ಈತನ ಆಸ್ತಾನದಲ್ಲಿ 1,80,000 ಗುಲಾಮರಿದ್ದರು.

10. ಬಡ ರೋಗಿಗಳಿಗಾಗಿ ದಾರ್‌ - ಉಲ್-‌ ಪಷಿ ಎಂಬ ಆಸ್ಪತ್ರೆಗಳನ್ನು ನಿಮಿ೯ಸಿದ್ದನು.

11. ದಿವಾನ್‌ - ಈ- ಖೈರಾತ ಎಂಬುದು ಸಾವ೯ಜನಿಕ ಕಲ್ಯಾಣ ಇಲಾಖೆ ಆಗಿತ್ತು

12. ಯಮುನಾ ಮತ್ತು ಸಟ್ಲೇಜ್‌ ನದಿಗಳಿಗೆ ಕಾಲುವೆಗಳನ್ನು ನಿಮಿ೯ಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟನು. ಅದಕ್ಕಾಗಿ ಇವನನ್ನು ಕಾಲುವೆಗಳ ರಾಜ ಎಂದು ಕರೆಯುತ್ತಾರೆ.

13. ತನ್ನ ಅತ್ಮ ಚರಿತ್ರೆಯಾದ ಫತುಹತ್‌ - ಐ ಫಿರೋಜ್‌ ಷಾಹಿ ಎಂಬ ಗ್ರಂಥವನ್ನು ರಚಿಸಿದನು. (ತನ್ನ ಅತ್ಮ ಚರಿತ್ರೆ ಬರೆದುಕೊಂಡ ಮೊದಲ ದೆಹಲಿ ಸುಲ್ತಾನ)

14. ತನ್ನ ಆಡಳಿತದಲ್ಲಿ ಭಾರತೀಯ ಮುಸ್ಲೀಂರನ್ನು ಸೈನಿಕರನ್ನಾಗಿ ನೇಮಿಸಿಕೊಂಡ , ಮೊಟ್ಟ ಮೊದಲ ದೆಹಲಿ ಸುಲ್ತಾನ.

15. ಕುತುಬ್‌ ಮಿನಾರ ಎಂಬ ಕಟ್ಟಡ ಸಿಡಿಲಿನಿಂದ ಗಾಸಿಗೊಂಡಾಗ ಅದರ 4ನೇ ಮಜಲನ್ನು ತೆಗೆದು 2 ಚಿಕ್ಕ ಮಜಲುಗಳನ್ನಾಗಿ ನಿಮಿ೯ಸಿದನು.


  ಪ್ರಶ್ನೆ 12.  ನಾಸಿರುದ್ದಿನ್‌ ಮಹಮ್ಮದ ಷಾ  ಬಗ್ಗೆ ತಿಳಿಸಿ


1. ಇವನು ತುಘಲಕ ಸಂತತಿಯ ಕೊನೆಯ ಅರಸ

2. ಈತನ ಕಾಲದಲ್ಲಿ ಮಧ್ಯ ಏಷ್ಯಾದ ಸಮರಖಂಡದ ನಾಯಕ ತೈಮೂರ ಭಾರತಕ್ಕೆ ಭೇಟಿ ನೀಡಿದನು.

3. ಕ್ರಿ.ಶ  1398 ಡಿಸೆಂಬರ್‌ 18 ರಂದು ದೆಹಲಿಯ ಮೇಲೆ ದಾಳಿ ಮಾಡಿ ಒಂದು ಲಕ್ಷ ಹಿಂದೂಗಳನ್ನು ಕೊಲೆ ಮಾಡಿ ಅಪಾರವಾದ ಸಂಪತ್ತು ಕೊಳ್ಳೆ ಹೊಡೆದನು.

4. ತೈ ಮೂರನು ತಾನು ಭಾರತದಲ್ಲಿ ಗೆದ್ದ ತನ್ನ ಪ್ರದೇಶಗಳಿಗೆ ತನ್ನ ಮಂತ್ರಿ ಖಿಜರ್‌ ಖಾನನನ್ನು ನೇಮಿಸಿ ಹೋದನು. ಈ ಖಿಜರ್ ಖಾನ್‌, ನಾಸಿರುದ್ದಿನ್‌ ಮಹಮ್ಮದ ಷಾ ನನ್ನು ಕೊಲೆಮಾಡಿ ಸೈಯದ ಸಂತತಿಗೆ ಅಡಿಪಾಯ ಹಾಕಿದನು.
.





Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions