A1 ಖಿಲ್ಜಿ ಸಂತತಿ 15 Mar

 


    ಪ್ರಶ್ನೆ 1. ಖಿಲ್ಜಿ ಸಂತತಿ ಕ್ರಿ.ಶ 1290-1320   ಬಗ್ಗೆ ತಿಳಿಸಿ

ದೆಹಲಿ ಸುಲ್ತಾರಲ್ಲಿಯೇ ಅತ್ಯಂತ ಕಡಿಮೆ ಅವಧಿಗೆ ಆಳಿದ ಮನೆತನ


ಪ್ರಶ್ನೆ 2.  ಜಲಾಲುದ್ದಿನ್‌ ಖಿಲ್ಜಿ ಕ್ರಿ.ಶ  1290-1296   ಬಗ್ಗೆ ತಿಳಿಸಿ

1. ಈತ ಖಿಲ್ಜಿ ಮನೆತನದ ಸ್ಥಾಪಕ.

2. ತನ್ನ 70ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು.

3. ದೆಹಲಿಯ ಹೊರ ವಲಯದ ಕಿಲೋಬ್ರಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು.

4. ದೆಹಲಿಯ  ಖಾಜಿ ಮಲ್ಲಿಕ್‌ ಫಕ್ರುದ್ದಿನ್‌ ಮತ್ತು ದೆಹಲಿಯ ಜನರ ಸಹಾಯದಿಂದ ಅಧಿಕಾರಕ್ಕೆ ಬಂದನು.

5. ಕ್ರಿ.ಶ 1290 - 1291 ರಲ್ಲಿ ಬಲ್ಬನನ ಸಂಬಂಧಿ ಮಲ್ಲಿಕ್‌ ಚಚ್ಚು ದೆಹಲಿಯ ಮೇಲೆ ದಾಳಿ ಮಾಡಿದಾಗ ಅಳಿಯ ಅಲ್ಲಾವುದ್ದೀನ್‌ ಖಿಲ್ಜಿ ಈ ದಾಳಿಯನ್ನು ಅಡಗಿಸಿದನು.ಸಂತೋಷಗೊಂಡ ಜಲಾಲುದ್ದಿನ್‌ ಅಳಿಯನನ್ನು ಕಾರಾ ಮತ್ತು ಮಾಣಿಕ್‌ ನಗರದ ಮುಖ್ಯಸ್ಥನನ್ನಾಗಿ ಮಾಡಿದನು.

6. ಕ್ರಿ.ಶ 1292 ರಲ್ಲಿ ಮಂಗೋಲರು ಹಲೂಕ ಅಬ್ದುಲ್ ನ ನೇತೃತ್ವದಲ್ಲಿ ದೆಹಲಿಯ ಮೆಲೆ ದಾಳಿ ಮಾಡಿದಾಗ ಜಲಾಲುದ್ದಿನ್‌ ಖಿಲ್ಜಿಯೇ ಈ ದಾಳಿಯನ್ನು ಅಡಗಿಸಿದನು.

7. ಕ್ರಿ.ಶ 1292-93 ರಲ್ಲಿ ಮಂಗೋಲರು ಹಲಗುವಿನ ಮೊಮ್ಮಗ ಉಲುಗುವಿನ ನೇತೃತ್ವದಲ್ಲಿ ದಾಳಿಮಾಡಿ ಜಲಾಲುದ್ದಿನ್‌ ಖಿಲ್ಜಿಯೊಂದಿಗೆ ಒಪ್ಪಂದ ಮಾಡಿಕೊಂಡು 30,000 ಮಂಗೋಲರು ಇಸ್ಲಾಂ ಧಮ೯ವನ್ನು ಸ್ವೀಕರಿಸಿ ಭಾರತೀಯರಾಗಿಯೇ ಉಳಿದರು ಇವರನ್ನೇ ನವ ಮುಸಲ್ಮಾನರೆಂದು ಕರೆಯುತ್ತಾರೆ.

8. ಕ್ರಿ.ಶ 1292 ರಲ್ಲಿ ಅಲ್ಲಾವುದ್ದೀನ್‌ ಖಿಲ್ಜಿ ತನ್ನ ಮಾವನ ಅನುಮತಿಯನ್ನು ಪಡೆದುಕೊಂಡು ಬಿಲ್ಲಾದ ಮೆಲೆ ದಾಳಿ ಮಾಡಿ ಅಪಾರವಾದ ಸಂಪತ್ತನ್ನು ಜಲಾಲುದ್ದಿನ್‌ ಖಿಲ್ಜಿಗೆ ತಂದು ಒಪ್ಪಿಸಿದನು.

9. ಕ್ರಿ.ಶ. 1296 ರಲ್ಲಿ ಅಲ್ಲಾವುದ್ದಿನ್‌ ಖಿಲ್ಜಿ ತನ್ನ ಮಾವನ ಅನುಮತಿ ಪಡೆಯದೆ ದೇವಗಿರಿಯ ರಾಮಚಂದ್ರನ ಮೆಲೆ ದಾಳಿ ಮಾಡಿ ಅಪಾರವಾದ ಸಂಪತ್ತು ಕೊಳ್ಳೆ ಹೊಡೆದನು.ಆಗ ಜಲಾಲುದ್ದಿನ್‌ ಖಿಲ್ಜಿ ಕೋಪಗೊಂಡನು ಕೊಪಗೊಂಡ ಮಾವನನ್ನು ನಗರಕ್ಕೆ ಬರುವಂತೆ ಮಾಡಿ ಕ್ಷಮೆ ಕೋರುವ ನೆಪದಲ್ಲಿ ತನ್ನ ಮಾವನನ್ನು ಕೊಂದು ಅಧಿಕಾರಕ್ಕೆ ಬಂದನು.


ಪ್ರಶ್ನೆ 3.   ಅಲ್ಲಾವುದಿನ್‌ ಖಿಲ್ಜಿ ಕ್ರಿ.ಶ . 1296 - 1316   ಬಗ್ಗೆ ತಿಳಿಸಿ

1. ಖಿಲ್ಜಿ ಸಂತತಿಯ ಅತ್ಯಂತ ಪ್ರಸಿದ್ದ ಸುಲ್ತಾನ.

2.ಯಾರ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಆಡಳಿತ ಮಾಡಿ ಮೊಟ್ಟಮೊದಲ ದೆಹಲಿ ಸುಲ್ತಾನ

3. ಮೂಲ ಹೆಸರು - ಅಲಿ ಗುಷಾ೯ಪ್ಸ್‌

4. ಜಲಾಲುದ್ದಿನ್‌ ಖಿಲ್ಜಿಯ ಸಹೋದರ ಶಿಹಾಬುದ್ದಿನ್‌ ಮಸೂದನ ಮಗ.

5. ಚಿಕ್ಕ ವಯಸ್ಸಿನಲ್ಲಿ ಜಲಾಲುದ್ದಿನ್‌ ಖಿಲ್ಜಿಯ ಆಶ್ರಮಯದಲ್ಲಿ ಬೆಳೆದನು

6.ಅಲ್ಲಾವುದಿನ್‌ ಖಿಲ್ಜಿಗೆ ತನ್ನ ಮಗಳನ್ನು ಕೊಟ್ಟು ಅಳಿಯನನ್ನಾಗಿ ಮಾಡಿಕೊಂಡನು, ಆದರೆ ಅಲ್ಲಾವುದ್ದಿನ್‌ ಖಿಲ್ಜಿ ತನ್ನ ಮಾವನನ್ನೆ ಕೊಲೆ ಮಾಡಿ ಅಲ್ಲಾವುದ್ದಿನಿಯಾ ವಾದಿನ್‌ ಮಹಮ್ಮದ್‌ ಷಾ ಮತ್ತು - ಇ- ಸಹಾನಿ ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದನು

7.ಕ್ರಿ.ಶ 1296 ರಲ್ಲಿ ಅಲ್ಲಾವುದ್ದಿನ್‌ ಖಿಲ್ಜಿಗೆ ದೆಹಲಿಯ ಕೆಂಪು ಅರಮನೆಯಲ್ಲಿ ಪಟ್ಟಾಭಿಷೇಕವಾಯಿತು.

8 ಈತ ವಿಶ್ವ ಗೆಲ್ಲುವ ಯೋಜನೆಯನ್ನು ಹಾಕಿಕೊಡಿದ್ದನು. ಅದಕ್ಕಾಗಿ ಇವನನ್ನು ದ್ವೀತಿಯ ಅಲೆಕ್ಸಾಂಡರ್‌ ಎಂದು ಕರೆಯುತ್ತಾರೆ.


ಪ್ರಶ್ನೆ 4.  ಅಲ್ಲಾವುದ್ದಿನ್‌ ಖಿಲ್ಜಿಯ ಸಾಧನೆಗಳು ಬಗ್ಗೆ ತಿಳಿಸಿ

1.ಅಲ್ಲಾವುದ್ದಿನ್‌ ಖಿಲ್ಜಿಯ ಮಹತ್ವದ ಸುಧಾರಣೆ ಎಂದರೆ ಮಾರುಕಟ್ಟೆ ಸುಧಾರಣೆ

2. ಮಾರುಕಟ್ಟೆ ಇಲಾಖೆಯನ್ನು ದಿವಾನ್‌ - ಇ -ರಿಯಾಸತ್‌ ಎಂದು ಕರೆಯುತ್ತಿದ್ದರು.

3.ಮಾರುಕಟ್ಟೆ  ಅಧಿಕಾರಿಯನ್ನು ಷಹನ್‌ - ಐ - ಮಂಡಿ ಎಂದುಕರೆಯುತ್ತಿದ್ದರು

4. ಸೈನಿಕ ಇಲಾಖೆಯಲ್ಲಿ ಕುದುರೆಗಳಿಗೆ ಮುದ್ರ ಹಾಕುವ ಗಾಗ್‌ ಎಂಬ ಪದ್ದತಿ ಜಾರಿಗೆ ತಂದನು.

5. ಸೈನಿಕರ ಮುಖ ಲಕ್ಷಣ ಬರೆದಿಡುವ ಹುಲಿಯಾ ಚಹರೆ ಎಂಬ ಪುಸ್ತಕದ ಜಾರಿಗೆ ತಂದನು.

6. ಈತನ ಆಸ್ಥಾನದಲ್ಲಿ 4,75,000 ಸೈನಿಕರು 50,000 ಗುಲಾಮರಿದ್ದರು.

7. ದಿವಾನ್‌ - ಇ - ಮಸ್ತಕರಾಜ ಎಂಬ ಹೊಸ ಕಂದಾಯ ಇಲಾಖೆಯನ್ನು ಆರಂಭಿಸಿದನು.

8.ಮಂಗೋಲರ ದಾಳಿ ತಡೆಗಟ್ಟುವ ಉದ್ದೇಶದಿಂದ ಸಿಂಧೂ ನದಿಗೆ ಕೋಟೆಯನ್ನು ಕಟ್ಟಿಸಿದನು.

9.ಅಲ್ಲಾವುದ್ದಿನ್‌ ಖಿಲ್ಜಿಜಿಯ ಪ್ರಸಿದ್ದ ಕಟ್ಟಡಗಳು

ಅಲಾಯಿ ದವಾ೯ಜ

ಅಲಾಯಿ ಮಿನಾರ್‌

ಜಮಾಯತ್‌ ಖಾನ್‌

10.ಈತನ ಆಸ್ಥಾನದಲ್ಲಿ ಭಾರತದ ಗಿಳಿ ಎಂದು ಖ್ಯಾತವಾದ ಅಮೀರ್‌ ಖುಸ್ರೋ ಆಶ್ರಯ ಪಡೆದುಕೊಂಡಿದ್ದನು, ಈತ ಭಾರತಕ್ಕೆ ಸಿತಾರ ಮತ್ತು ತಬಲಾ ವಾದ್ಯಗಳನ್ನು ಪರಿಚಯಿಸಿದನು.

11. ಈತ ಜಲರೋಗದಿಂದ ಬಳಲುತ್ತಿದ್ದು ಕ್ರಿ.ಶ. 1316 ರಲ್ಲಿ ತನ್ನ ದಂಡ ನಾಯಕ ಮಲ್ಲಿಕ್‌ ಕಾಫರ್  ನಿಂದ ವಿಷಪ್ರಾಶನಕ್ಕೆ ಒಳಗಾಗಿ ಮರಣ ಹೊಂದಿದನು.

12. ಮಲ್ಲಿಕ್‌ ಕಾಫರ ಅಲ್ಲಾವುದ್ದಿನ ಖಿಲ್ಜಿಯ 6 ವಷ೯ದ ಮಗ ಶಿಯಾಬ್‌ - ಉದ್-‌ ದಿನ್‌ - ಉಮರನನ್ನು ಸಿಂಹಾಸನದ ಮೇಲೆ ಕೂಡಿಸಿ 35 ದಿನಗಳ ಕಾಲ ಅತ್ಯಂತ ಕ್ರೂರವಾದ ಅಳ್ವಿಕೆ ಮಾಡಿದನು. ಆಗ ದೆಹಲಿಯ ಜನತೆಯಲ್ಲಿ ಕಾಪರನ್ನು ಕೊಲೆ ಮಾಡಿ ಕುತ್ಚುದ್ದಿನ್‌ ಮುಬಾರಕನನ್ನು ಅಧಿಕಾರಕ್ಕೆ ತಂದರು.


    ಪ್ರಶ್ನೆ 5.   ಕುತ್ಬುದ್ದಿನ್ ಮುಬಾರಕ್‌ ಷ ಕ್ರಿ.ಶ 1316- 1320  ಬಗ್ಗೆ ತಿಳಿಸಿ

1.ಐಷಾರಾಮಿ ದೊರೆಯಾಗಿದ್ದ.

2. ತನ್ನ  ಆಡಳಿತದ ಸಮಸ್ತ ಜವಾಬ್ವಾರಿ ಎಲ್ಲವೂ ತನ್ನ ಮಂತ್ರಿ ಖುಸ್ರಾವ್‌ ಖಾನ್ ನಿಗೆ     ವಹಿಸಿದ್ದನು. ಈ ಖುಸ್ರಾವ್‌ ಖಾನ್‌ ತನ್ನ ಅರಸನನ್ನೆ ಕೊಲೆ ಮಾಡಿ ಅಧಿಕಾರಕ್ಕೆ ಬಂದನು.ಖುಸ್ರೋಖಾನನ್ನು 1320 ರಲ್ಲಿ ಘಾಜಿಮಲ್ಲಿಕ್‌ ಅಥವಾ ಘೀಯಾಸುದ್ದಿನ್‌ ತುಘಲಕ್‌ ಎಂಬಾತನು  ಕೊಲೆಮಾಡಿ ತುಘಲಕ್‌ ಸಂತತಿಗೆ ಅಡಿಪಾಯ ಹಾಕಿದನು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions