A1 ಬೌದ್ಧ ಧಮ೯ 17 Mar

  ಬೌದ್ಧ ಧಮ೯  

 
 
   ಪ್ರಶ್ನೆ 1. ಗೌತಮ ಬುದ್ಧ  ಕ್ರಿ.ಪೂ. 563--483 ಬಗ್ಗೆ ತಿಳಿಸಿ

1.ಈತ ನೇಪಾಳದ ಕಪಿಲವಸ್ತುವಿನ ಲುಂಬಿನ ಎಂಬ ಗ್ರಾಮದಲ್ಲಿ ಜನಿಸಿದನು.

2 ತಂದೆ -ಶುದ್ಧೋದನ

3ತಾಯಿ -ಮಾಯಾದೇವಿ

4 ಹೆಂಡತಿ - ಯಶೋಧರೆ

5. ಮಗ - ರಾಹುಲ

6 ಸಾಕುತಾಯಿ - ಪ್ರಜಾಪತಿ ಗೌತಮಿ

7 ಈತನ ಮೂಲ ಹೆಸರು - ಸಿದ್ಧಾಥ೯

8 ಪಂಗಡ - ಶಾಕ್ಯ ಪಂಗಡ

9 ಬುದ್ಧನ ಭವಿಷ್ಯ ನುಡಿದ ನೇಪಾಳದ ಸನ್ಯಾಸಿ - ಅಸ್ಸೀಮ್‌

10 ಬುದ್ಧನ ಕುದುರೆ ಹೆಸರು - ಕಂಥಕ

11 ಸಿದ್ಧಾಥ೯ನು  ಸನ್ಯಾಸಿಯಾಗಲು ಕಾರಣವಾದ ನಾಲ್ಕು ದೃಶ್ಯಗಳು

 ವೃದ್ಧ, ರೋಗಿ,ಶವ, ಸನ್ಯಾಸಿ ಇವುಗಳನ್ನು ಮಹಾದಶ೯ನಗಳೆಂದು ಕರೆಯುತ್ತಾರೆ

12 .ಸಿದ್ಧಾಥ೯ 29ನೇ ವಯಸ್ಸಿನಲ್ಲಿ ಅರೆಮನೆಯನ್ನು ತ್ಯಜಿಸಿದನು. ಈ ಘಟನೆಯನ್ನು ಮಹಾ ಪರಿತ್ಯಾಗ ಎಂದು ಕರೆಯುತ್ತಾರೆ.

13 ಸಿದ್ಧಾಥ೯ನ ಮೊದಲ ಗುರು ಅಲರಕಲಮ, ಇವನಿಂದ ಕೇವಲ ವೈದಿಕ ಧಮ೯
 ವಿಚಾರಗಳನ್ನು ತಿಳಿದು ಕೊಂಡನು ಯಾವುದೇ ಜ್ನಾನೋದಯವಾಗಲಿಲ್ಲ

14 ಈತನ ಎರಡನೆಯ ಗುರು - ಉದ್ರಿಕರಾಮ ಪುತ್ತ

15 ಇವನಿಂದ ದೇಹ ದಂಡಿಸುವುದು ಮತ್ತು ಉಪವಾಸ ಆಚರಿಸುವುದು ಕಲಿತುಕೊಂಡನು. ದೇಹ ಎಲುಬಿನ ಹಂದರವಾಯಿತು. ಯಾವುದೆ ಜ್ನಾನೋದಯವಾಗಲಿಲ್ಲ

16 ಅದ್ದರಿಂದ ಈತನ್ನು ಬಿಟ್ಟು ಅಲೆಯುತ್ತಾ ಸಿದ್ಧಾಥ೯ 35 ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯಾದ ಸಮಿಪ ನಿರಂಜನ ನದಿಯ ದಂಡೆಯ ಮೇಲಿನ ಅರಳಿ ಮರದ ಕೆಳಗಡೆ ತಪಸ್ಸಿಗೆ ಕುಳಿತನು. ತಪಸ್ಸಿಗೆ ಕುಳಿತ 47 ನೇ ದಿನಕ್ಕೆ ಪರಮ ಜ್ನಾನ ಲಭಿಸಿ ಬುದ್ಧನಾದನು.

17 ಬುದ್ಧ ಎಂದರೆ - ಎಲ್ಲವನ್ನು ತಿಳಿದವ ಎಂದಥ೯

18 ಈತ ಪಡೆದುಕೊಂಡ ಜ್ನಾನವನ್ನು ಮೊಟ್ಟಮೊದಲ ಬಾರಿಗೆ ಉತ್ತರ ಪ್ರದೇಶದ ವಾರಾಣಾಸಿ ಜಿಲ್ಲೆಯ ಸಾರನಾಥದ ಜಿಂಕೆ ವನದಲ್ಲಿತನ್ನ 5 ಜನ ಶಿಷ್ಯಾರಾದ - ಕೊಂಡಣ್ಣ,ಯಪ್ಪು, ಅನ್ಸಾಜಿ, ಭಪ್ಪಾಜಿ, ಮಹನಾಮ ಎಂಬುವವರಿಗೆ ಉಪದೇಶ ಮಾಡಿದನು. ಇದನ್ನೇ ಧಮ೯ಚಕ್ರ ಪರಿವತ೯ನ ಎನ್ನುವರು.

19 ಬುದ್ಧ ತನ್ನ ರಾಜ್ಯವಾದ ಕಪಿಲವಸ್ತುವಿಗೆ ಬಂದು ತನ್ನ ತಂದೆ ಹಾಗೂ ಸಾಕು ತಾಯಿ , ಹೆಂಡತಿ, ಮಗ ಮತ್ತು ಚಿಕ್ಕಪ್ಪನ ಮಕ್ಕಳಾದ ಆನಂದ ಮತ್ತು ದೇವದತ್ತರಿಗೆ ಉಪದೇಶ ನೀಡಿದನು.

20  ಹೀಗೆ ಗೌತಮ ಬುದ್ಧ ಉತ್ತರದ ಗಂಗಾನದಿಯ ತೀರದವರೆಗೂ ಸಂಚರಿಸುವ ಬೌದ್ಧ ಧಮ೯ವನ್ನು ಪ್ರಚಾರ ಮಾಡಿ ಕ್ರಿ.ಪೂ. 483 ರಲ್ಲಿ ಉತ್ತರ  ಪ್ರದೇಶದ ಗೋರಖಪುರ ಜಿಲ್ಲೆಯ ಕುಶಿನಗರಎಂಬಲ್ಲಿ ಮರಣ ಹೊಂದಿದನು.ಈ ಘಟನೆಯನ್ನು ಮಹಾಪುರಿ ನಿವಾ೯ಣ ಎಂದು ಕರೆಯುತ್ತಾರೆ.

  ಪ್ರಶ್ನೆ 2.  ಬೌದ್ದ ಧಮ೯ದ ತತ್ವಗಳು ಅಥವಾ ಆಯ೯ಸತ್ಯಗಳ  ಬಗ್ಗೆ ತಿಳಿಸಿ

1. ಜಗತ್ತು ದು:ಖದಿಂದ ಕೂಡಿದೆ
2. ದು;ಖಕ್ಕೆ ಮೂಲ ಕಾರಣ ಆಸೆ
3. ಆಸೆಯನ್ನು ತೊರೆದಾಗ ಮುಕ್ತಿ ದೊರೆಯುತ್ತದೆ.
4. ಆಸೆಯನ್ನು ತೊರೆಯಲು ಅಷ್ಠಾಂಗ ಮಾಗ೯ಗಳನ್ನು ಅನುಸರಿಸಬೇಕು

 ಪ್ರಶ್ನೆ 3.   ಅಷ್ಟಾಂಗ ಮಾಗ೯ಗಳ ಬಗ್ಗೆ ತಿಳಿಸಿ
  1.ಒಳ್ಳೇಯ ಮಾತು 
  2.ಒಳ್ಳೇಯ ಆಲೊಚನೆ
  3.ಒಳ್ಳೇಯ ಜೀವನ  
 4. ಒಳ್ಳೇಯ ನೆನಪು
 5ಒಳ್ಳೇಯ ನಂಬಿಕೆ
 6.ಒಳ್ಳೇಯ ಧ್ಯಾನ
 7 ಒಳ್ಳೇಯ ಪ್ರಯತ್ನ
 8 ಒಳ್ಳೇಯ ನಡೆತೆ
ಇವುಗಳನ್ನು ಬೌದ್ಧ ಧಮ೯ದ ಚಕ್ರಗಳು ಎಂದು ಕರೆಯುತ್ತಾರೆ.

 ಪ್ರಶ್ನೆ 4.  ಬೌದ್ಧ ಧಮ೯ದ ಪಂಗಡಗಳ ಬಗ್ಗೆ ತಿಳಿಸಿ

I. ಹೀನಾಯಾನ
1 ಇವರು ಬುದ್ಧನನ್ನು ಶ್ರೇಷ್ಠ ವ್ಯಕ್ತಿ ಎಂದರು
2 ಇವರು ಸಂಪ್ರದಾಯವಾದಿಗಳಾಗಿದ್ದರು
3 ಇವರು ಬುದ್ಧನನ್ನು ಸಂಕೇತ ರೂಪದಲ್ಲಿ ಪೂಜಿಸುತ್ತಿದ್ದರು.
4. ಇವರ ಭಾಷೆ ಪಾಲಿ

II. ಮಹಾಯಾನ
1. ಬುದ್ಧನನ್ನು ಮೂತಿ೯ ರೂಪದಲ್ಲಿ ಪೂಜಿಸಿದರು
2. ಬುದ್ಧ ದೇವರು  ಎಂದು ತಿಳಿದರು.
3. ಇವರು ಸುಧಾರಣಾವಾದಿಗಳಾಗಿದ್ದರು.
4 ಇವರ ಭಾಷೆ ಸಂಸ್ಕೃತ

III ವಜ್ರಾಯಾನ
ಇವರು ಹೀನಾಯಾನ ಮತ್ತು ಮಹಾಯಾನ ಎರಡು ಪಂಥದವರ ತತ್ವಗಳನ್ನು ಅನುಸರಿಸುವವರು.

 ಪ್ರಶ್ನೆ 5.  ಬೌದ್ಧ ಧಮ೯ದ ಸಾಹಿತ್ಯ ಗಳ ಬಗ್ಗೆ ತಿಳಿಸಿ

1 ವಿನಯ ಪಿಠಕ ; ಬೌದ್ಧಧಮ೯ದ ನಿಯಮಗಳನ್ನು ಒಳಗೊಂಡಿದೆ.
2 ಸುತ್ತ ಪಿಠಕ ; ಬುದ್ದನ ಜೀವನ ಮತ್ತು ಬೋಧನೆಗಳನ್ನು ಒಳಗೊಂಡಿದೆ.
3 ಅಭಿದಮ್ಮ ಪಿಠಕ : ಇದು ಬೌದ್ಧ ಸನ್ಯಾಸಿಗಳ ಸಾಮಾನ್ಯ ನಿಯಮಗಳನ್ನು ಒಳಗೊಂಡಿದೆ.
4  ಜಾತಕ ಕಥೆಗಳುಇವು: ಬುದ್ಧನ ಪೂವ೯ ಜನ್ಮದ ವೃತ್ತಾಂಶ ಕಥೆಗಳನ್ನು ಒಳಗೊಂಡಿದೆ.

ಪ್ರಶ್ನೆ 6.   ಬೌದ್ಧ ಧಮ೯ದ ಸಮ್ಮೇಳನಗಳ ಬಗ್ಗೆ ತಿಳಿಸಿ

1 ನೇ ಸಮ್ಮೇಳನ

ಸ್ಥಳ - ರಾಜಗೃಹ
ವಷ೯ - ಕ್ರಿ.ಪೂ. 483
ಅಧ್ಯಕ್ಷ - ಮಹಾಕಶ್ಯಪ
ಅರಸ- ಅಜಾತ ಶತ್ರು
ಈ ಸಮ್ಮೇಳನದಲ್ಲಿ ಬೌದ್ದ ಧಮ೯ದ ಪವಿತ್ರ ಗ್ರಂಥಗಳ ವಿನಯ ಪಿಠಕ & ಸುತ್ತ ಪಿಠಕಗಳನ್ನು ರಚಿಸಲಾಯಿತು.

2ನೇ ಸಮ್ಮೇಳನ

ಸ್ಥಳ  - ವೈಶಾಲಿ
ವಷ೯ -  ಕ್ರಿ.ಪೂ 383
ಅಧ್ಯಕ್ಷ- ಸಭಾಕಮಿ
ಅರಸ - ಕಾಲಾಶೋಕ
ಈ ಸಮ್ಮೇಳನದಲ್ಲಿ ಬೌದ್ಧ ಸನ್ಯಾಸಿಗಳು ಹತ್ತು ಅಂಶಗಳ ಬೇಡಿಕೆಯನ್ನು ಇಟ್ಟರು ಇದನ್ನು ಸಾಂಪ್ರದಾಯಿ ಕಗಳು ವಿರೋಧಿಸಿದರು. ಇವರನ್ನು ಸ್ಥವಿರರು ಎಂದು ಕರೆದರು.
10 ಅಂಶಗಳ ಬೇಡಿಕೆಗೆ ಸುಧಾರಣಾ ವಾದಿಗಳು ಅವಕಾಶ ನೀಡಿದರು. ಇವರನ್ನು ಮಹಾಸಂಧಿಕರು ಎಂದು ಕರೆದರು.

3ನೇ ಸಮ್ಮೇಳನ

ಸ್ಥಳ - ಪಾಟಲೀಪುತ್ರ
ವಷ೯ - ಕ್ರಿ.ಪೂ 250
ಅಧ್ಯಕ್ಷ- ತಿಸ್ಸಾ ಮೊಗ್ಗಲಿಪುತ್ತ
ಅರಸ - ಅಶೋಕ
ಈ ಸಮ್ಮೇಳನದಲ್ಲಿ ಬೌದ್ಧ ಧಮ೯ ಪವಿತ್ರ ಗ್ರಂಥದೊಂದಿಗೆ ಅಭಿದಮ್ಮ ಪೀಠಕವನ್ನು ರಚಿಸಲಾಯಿತು.

4 ನೇ ಸಮ್ಮೇಳನ
ಸ್ಥಳ - ಕುಂಡಲೀವನ
ವಷ೯ - ಕ್ರಿ.ಶ. 100 ಅಥವಾ 102
ಅಧ್ಯಕ್ಷ - ವಸುಮಿತ್ರ
ಉಪಾಧ್ಯಕ್ಷ - ಅಶ್ವಘೋಷ
ಅರಸ - ಕನಿಷ್ಕ
ಈ ಸಮ್ಮೇಳನದಲ್ಲಿ ಬೌದ್ಧ ಧಮ೯ ಹೀನಾಯಾನ ಮತ್ತು ಮಹಾಯಾನ  ಎಂಬ ಎರಡು ಪಂಗಡಗಳಾಗಿ ಒಡೆದು ಹೋಯಿತು.

   ಪ್ರಶ್ನೆ 7.   ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು  & ಸಂಕೇತಗಳ ಬಗ್ಗೆ ತಿಳಿಸಿ

     ಘಟನೆಗಳು                         ಸಂಕೇತಗಳು
  1. ಜನನ                                 ಕಮಲ
  2. ಮನೆ ತೊರೆದಿದ್ದು           ಕುದುರೆ ( ಕಂಥಕ)
  3. ತಪಸ್ಸು ಅಚರಿಸಿದ್ದು     ಬೋಧಿವೃಕ್ಷ (ಅರಳಿ ಮರ)
  4. ಪ್ರಥಮ ಉಪದೇಶ         ಧಮ೯ ಚಕ್ರ (8 ಕಡ್ಡಿಗಳಿವೆ)
  5. ಮರಣ                                ಸ್ತೂಪಗಳು

ಪ್ರಶ್ನೆ 8.  ವಿಶೇಷ ಅಂಶಗಳ ಬಗ್ಗೆ ತಿಳಿಸಿ


1. ಬುದ್ಧನ  ಮೊದಲ ಶಿಷ್ಯ - ಆನಂದ
2. ಬುದ್ಧನ ಸೇವಕ - ಚನ್ನ
3.. ಕುದುರೆ - ಕಂಥಕ
4. ಬುದ್ಧನ ಭವಿಷ್ಯ ನುಡಿದ ಸನ್ಯಾಸಿ - ಅಸ್ಸೀಮ್‌
5. ಬುದ್ಧನ ಪರಿವತ೯ನೆಯಾದ ಕಳ್ಳ - ಅಂಗುಲಿಮಾಲ
6. ಬುದ್ಧನಿಂದ ಪರಿವತ೯ನೆಯಾದ ವೇಶ್ಯೆ- ಅಮ್ರಪಾಲಿ
7. ಬುದ್ದನ ಪ್ರಸಿದ್ದ ಶಿಷ್ಯಳು - ವಿಶಾಖಳು
8. ಬುದ್ಧನಿಗೆ ಭಿಕ್ಷೆ ನೀಡಿದ ಮೊದಲ ಶಿಷ್ಯ - ಸುಜಾತ (ಅಕ್ಕಿಯ ಪಾಯಸ)
9. ಬುದ್ದನ ಕೊನೆಯ ದಿನಗಳಲಲ್ಲಿ ಚಿಕಿತ್ಸೆ ನೀಡಿದ ವೈಧ್ಯ- ಜೀವಕ
10 ಬೌದ್ಧ ಧಮ೯ದ ಪ್ರಾಥ೯ನಾ ಮಂದಿರಕ್ಕೆ- ಚೈತ್ಯಾಲಯಗಳು ಎಂದು ಕರೆಯುತ್ತಾರೆ.
11 ಭಾರತದಲ್ಲಿ ಅತಿ ದೊಡ್ಡ ಚೈತ್ಯಾಲಯಗಳು- ಕಾಲೆ೯ (ಮಹಾರಾಷ್ಟ್ರ)
12 ಬೌದ್ಧರ ಸಮಾಧಿಗಳನ್ನು ಸ್ತೂಪಗಳು ಎಂದು ಕರೆಯುತ್ತಾರೆ
13 ಭಾರತದಲ್ಲಿ ಅತಿದೊಡ್ಡ ಸ್ತೂಪ ಸಾಂಚಿಸ್ತೂಪ
14 ಬೌದ್ಧರ ವಸತಿ ಕೇಂದ್ರಗಳಿಗೆ ವಿಹಾರಗಳು 
16 ಬೌದ್ಧ ಧಮ೯ದಲ್ಲಿ ಸನ್ಯಾಸ ದೀಕ್ಷೆ ನೀಡುವ ಕಾಯ೯ಕ್ರಮಕ್ಕೆ ಪಬ್ಬಜ ಎಂದು ಕರೆಯುತ್ತಾರೆ
17 ಬೌದ್ಧ ಸನ್ಯಾಸಿಗಳನ್ನು ಉಪಾಸಕರು / ಭಿಕ್ಕುಗಳು ಎಂದು ಕರೆಯುತ್ತಾರೆ.

18 ಬೌದ್ದ ಸನ್ಯಾಸಿಗಳ ಸಾಮಾನ್ಯ ಮಂತ್ರ
  ಬುದ್ದಂ ಶರಣಂ ಗಚ್ಚಾಮಿ 
  ಧಮ೯೦ ಶರಣಂ ಗಚ್ಚಾಮಿ 
 ಸಂಘಂ ಶರಣಂ ಗಚ್ಚಾಮಿ

19 ಮಹಾಯಾನ ಪಂಥವು ಭಾರತ, ಅಪಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಚೀನಾಗಳಲ್ಲಿ ಪ್ರಸಿದ್ಧ ಪದೆದಿದೆ.
21 ಹೀನಾಯಾನ ಪಂಥವು ಶ್ರೀಲಂಕಾ,ಥೈಲಾಂಡ್‌ ಬಮಾ೯ ದೇಶದಲ್ಲಿ ಪ್ರಸಿದ್ಧ ಪಡೆದಿದೆ
22 ವಜ್ರಾಯಾನ ಪಂಥವು ಗಾಂದಾರ ಮತ್ತು ತಕ್ಷಶಿಲಾ ವಿದ್ಯಾಲಯಗಳಲ್ಲಿ ಪ್ರಸಿದ್ದ ಪಡೆದಿತ್ತು.
23 ಮಹಾಯಾನ ಪಂಥದ ಮೊದಲ ಪುಸ್ತಕ ಲಲಿತ ವಿಸ್ತಾರ.
24 ಹೀನಾಯಾನ ಪಂಥದ ಮೊದಲ ಪುಸ್ತಕ ಮಹಾವಸ್ತು
25 ವಜ್ರಾಯಾನ ಪಂಥದ ಮೊದಲ ಪುಸ್ತಕ ಮಂಜೂಶ್ರೀ ಮೂಲ ಕಲ್ಪ

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions