A1 ಭಾರತದ ಮೇಲೆ ವಿದೇಶಿ ದಾಳಿಗಳು 19 Mar
ಭಾರತದ ಮೇಲೆ ವಿದೇಶಿಯರ ದಾಳಿಗಳು
ಪ್ರಶ್ನೆ 1. 1ನೇ ಸೈರಸ್ ಕ್ರಿ.ಪೂ 558-530 ಬಗ್ಗೆ ತಿಳಿಸಿ
ಈತ ಪಷಿ೯ಯಾದಲ್ಲಿ ಪ್ರಬಲವಾದ ಮತ್ತು ಏಕೀಕೃತವಾದ ಮನೆತನವನ್ನು ನಿಮಿ೯ಸಿದನು. ಈ ಮನೆತನವನ್ನು ಅಖೇಮಿಯನ್ ಮನೆತನ (ಸಾಮ್ರಾಜ್ಯ) ಎಂದು
ಕರೆಯುತ್ತಾರೆ.
2. ಈತ ಅಪಘಾನಿಸ್ತಾನದ ತಕ್ಷಶಿಲೆ (ಸಿಂಧ್) ಮತ್ತು ಭಾರತದ ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.
ಪ್ರಶ್ನೆ 2. 1ನೇ ಡೇರಿಯಸ್ ಕ್ರಿ.ಪೂ 522- 486 ಬಗ್ಗೆ ತಿಳಿಸಿ
1. 1ನೇ ಸೈರಸ್ ನ ಮೊಮ್ಮಗನಾಗಿದ್ದಾನೆ.
2. ಭಾರತದ ಸಿಂಧ್ ಮತ್ತು ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.
3. ಕ್ರಿ.ಪೂ 518 ರಲ್ಲಿ ಸಿಂಧ್ ಪ್ರಾಂತ್ಯವನ್ನು ವಶಪಡಿಸಿ ಕೊಂಡನು ಇದು ಡೇರಿಯಸ್ 20ನೇ ಪ್ರಾಂತ್ಯವಾಗಿತ್ತು
4. ಸಿಂಧ್ ಪ್ರಾಂತ್ಯದಿಂದ ವಾಷಿ೯ಕವಾಗಿ 1 ಕೋಟಿ ರೂ. ಮೌಲ್ಯದ ಚಿನ್ನದ ಪುಡಿಯನ್ನು ಪಷಿ೯ಯಾ ದೇಶಕ್ಕೆ ಕಪ್ಪ ನೀಡುತ್ತಿದ್ದನೆಂದು ಜೆನೋಪೆನ್ ಎಂಬಗ್ರೀಕ್ ಬರಹಗಾರನಿಂದ ತಿಳಿದು ಬರುತ್ತದೆ.
5. ಭಾರತದ ಸಿಂಧ್ ಪ್ರಾಂತ್ಯವು 20 ನೇ ಸತ್ರಪಿ ( ಪ್ರಾಂತ್ಯ)ವಾಗಿತ್ತೆಂದು ಅವನ ಎರಡು ಶಾಸನಗಳಾದ
1. ಪಸೇ೯ ಪೋಲೀಸ್
2. ನಕ್ಷಂ ಐ ರುಸ್ತುಂ ಎಂಬ ಶಾಸನಗಳಿಂದ ತಿಳಿದು ಬರುತ್ತದೆ.
3. ಈತ ಜರಾ ತುಷ್ಟ ಸ್ಥಾಪಿಸಿದ ಜೋರಾಸ್ಟ್ರೀಯನ್ ಧಮ೯ವನ್ನು ತನ್ನ ರಾಜ್ಯದ ಧಮ೯ವನ್ನಾಗಿ ಮಾಡಿಕೊಂಡಿದ್ದನು.
4. ಈ ಧಮ೯ವು ಜೀವನವು ಒಳಿತು ಮತ್ತು ಕೆಡಕುಗಳ ನಡುವಿನ ನಿರಂತರವಾದ ಹೋರಾಟದ ರಂಗ ಎಂದು ಹೇಳಿದೆ.
5. ಈ ಧಮ೯ದ ಒಳಿತಿನ ದೇವರು - ಅಹುರ್ ಮಜ್ದಾ
6. ಈ ಧಮ೯ದ ಕೆಡಕಿನ ದೇವರು - ಅಹೀರ್ ಮಾನ್
7. ಪಷಿ೯ಯಾದಿಂದ ಭಾರತಕ್ಕೆ ಬಂದ ಎಲ್ಲಾ ವಲಸಿಗರು ತಾವು ಪಾಸಿ೯ಗಳೆಂದುಹೇಳಿಕೊಂಡರು.
8.ಈ ಜೋರಾಸ್ಟ್ರಿಯನ್ ಧಮ೯ವೇ ಮುಂದೆ ಪಾಸಿ೯ಗಳ ಧಮ೯ವಾಗಿ ಪರಿವತ೯ನೆಯಾಯಿತು.
9. ಪಾಸಿ೯ಯನ್ನರು ಪವಿತ್ರ ಗ್ರಂಥ ಝಂಡಾ ಅವೆಸ್ತಾ
ಪ್ರಶ್ನೆ 3. 1ನೇ ಕ್ಸರಕ್ಸಸ್ ಕ್ರಿ.ಪೂ 486-465 ಬಗ್ಗೆ ತಿಳಿಸಿ
1.ಈತ ಭಾರತದ ಒಳ ರಾಜ್ಯಗಳರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಭಾರತೀಯರನ್ನು ತನ್ನ ಆಡಳಿತದಲ್ಲಿ ಸೈನಿಕರನ್ನಾಗಿ ನೇಮಿಸಿಕೊಂಡನು.
2. ಈತನ ಆಡಳಿತದಲ್ಲಿ ಭಾರತೀಯ ಸೈನಿಕರ ಗುಂಪಿಗೆ ಗಾಂಧಾರಿಯನ್ನರು ಎಂದು ಕರೆಯುತ್ತಿದ್ದರು.
ಮ್ಯಾಸಿಡೋನಿಯಾದ ಗ್ರೀಕರು
ಪ್ರಶ್ನೆ 4. ಅಲೆಗ್ಸಾಂಡರ್ ಕ್ರಿ.ಪೂ 336-323 ಬಗ್ಗೆ ತಿಳಿಸಿ
1.ತಂದೆ- ಎರಡನೇ ಪಿಲಿಫ್
2. ತಾಯಿ - ಒಲಂಪಿಯಾ
3.ಗುರು - ಅರಿಸ್ಟಾಟಲ್
4. ಅಲೆಕ್ಸಾಂಡರ್ ನ ಪ್ರೀತಿಯ ವಸ್ತುಗಳು ಖಡ್ಗ ಮತ್ತು ಹೋಮರ್ ಬರೆದ ಇಲಿಯಡ್ ಮತ್ತು ಓಡಿಸ್ಸಿ ಎರಡು ಮಹಾಕಾವ್ಯಗಳು.
5. ಕ್ರಿ.ಪೂ 330 ರಲ್ಲಿ ಪಷಿ೯ಯಾ ದೇಶವನ್ನು ಸೋಲಿಸಿ ಇಡೀ ಜಗತ್ತನ್ನೇ ತನ್ನ ಚಕ್ರಾದಿಪತ್ಯಕ್ಕೆ ಒಳಪಡಬೇಕೆಂಬ ಉದ್ದೇಶ ಹೊಂದಿದ್ದನು.
6. ಕ್ರಿ.ಪೂ 327 ರಲ್ಲಿ ಭಾರತದ ಮೇಲೆ ದಾಳಿ ಮಾಡಿದನು.
7. ಭಾರತದಲ್ಲಿ ಅಲೆಕ್ಸಾಂಡರನಿಗೆ ಶರಣಾದ ತಕ್ಷ ಶಿಲೆಯ ದೊರೆ ಅಂಬಿ.
8.ಕ್ರಿ.ಪೂ 326 ರಲ್ಲಿ ಅಲೆಕ್ಸಾಂಡರ ಮತ್ತು ಭಾರತದ ಅರಸ ಪೌರವನ ಮಧ್ಯ ಜೀಲಂ ನದಿಯ ದಂಡೆಯ ಮೇಲೆ ಪ್ರಸಿದ್ಧವಾದ ಹೈಡಾಸ್ಟಸ್ ಕದನ ಅಥವಾ ಜೀಲಂ ನದಿ ಕಾಳಗ ನಡೆಯಿತು. ಈ ಕದನದಲ್ಲಿ ಪೌರವನ ಮಗ ಹರಿವಮ೯ನ ಕೊಲೆಯಾಯಿತು. ಪೌರವ ಸೋತು ಅಲೆಕ್ಸಾಂಡರನಿಗೆ ಶರಣಾದನು.
9. ಕ್ರಿ.ಪೂ 323 ರಲ್ಲಿ ತನ್ನ ದೇಶಕ್ಕೆ ಹೋಗುವಾಗ ಬ್ಯಾಬಿಲೊನಿಯಾ ಎಂಬ ಪ್ರಾಂತ್ಯದಲ್ಲಿ ಗ್ಯಾಂಗ್ರಿನ್ ಎಂಬ ಚಮ೯ ಕೊಳೆಯುವ ರೋಗಕ್ಕೆ ಬಲಿಯಾದನು.
ಪ್ರಶ್ನೆ 5. ವಿಶೇಷ ಅಂಶಗಳು ಯಾವುವು
1. ಅಲೆಕ್ಸಾಂಡರ ಈಜಿಪ್ತನಲ್ಲಿ ಅಲೆಗ್ಸಾಂಡ್ರಿಯಾ ಎಂಬ ನಗರ ಮತ್ತು ಗ್ರೀಕರ ಟಾಲೆಮಿಯ ಮನೆತನವನ್ನು ವಶಪಡಿಸಿಕೊಂಡನು.
2. ಅಲೆಕ್ಸಾಂಡರ ಭಾರತದಲ್ಲಿ ಒಟ್ಟು 27 ತಿಂಗಳುಗಳ ಕಾಲ ಇದ್ದನು.
3. ಅಲೆಕ್ಸಾಂಡರನ ಕುದುರೆಯ ಹೆಸರು - ಬುಕ್ಕೆಪಾಲಸ್
4. ಭಾರತ ದೇಶದ ಮೊದಲ ದೇಶದ್ರೋಹಿ ಅರಸ ಅಂಬಿ.