A2 ಸಂವಿಧಾನ ಪೂವ೯ ಪೀಠಿಕೆ 12 Mar
ಪ್ರಶ್ನೆ1. ಭಾರತದ ಪ್ರಜೆಗಳಾದ ನಾವು ಬಗ್ಗೆ ತಿಳಿಸಿ
ಈ ಪದವನ್ನು ಬಳಸಲು ಕಾರಣ ಭಾರತದ ಸಂವಿಧಾನ ಭಾರತೀಯರಿಂದಲೇ ರಚಿತವಾದ ಸಂವಿಧಾನ ಎಂಬ ಅಥ೯ಕೊಡಲು ಬಳಸಲಾಗಿದೆ. ಮತ್ತು ಪೂವ೯ ಪೀಠಿಕೆಯ ಅಂತಿಮ ವಾಕ್ಯದಲ್ಲಿ ಅಂಗೀಕರಿಸಿಆತ್ಮಾಪಿ೯ತ ಮಾಡಿಕೊಂಡಿದ್ದದೇವೆ ಎಂಬ ವಾಕ್ಯವಿದೆ.
ಪ್ರಶ್ನೆ 2 ಗಣರಾಜ್ಯ ಬಗ್ಗೆ ತಿಳಿಸಿ
ರಾಷ್ಟ್ರ ಮುಖ್ಯಸ್ಥರು ಅನುವಂಶಿಕ ರಾಜನಾಗಿರದೇ ಒಂದು ನಿಗಧಿತ ಅವಧಿಗೆ ಚುನಾಯಿತ ಕಾಯ೯ ನಿವಾ೯ಹಕ ಎಂಬ ಅಥ೯ ಹೊಂದಿದೆ. ಭಾರತದ ಒಕ್ಕೂಟದ ಮುಖ್ಯಸ್ಥರು ರಾಷ್ಟ್ರ ಪತಿಯವರನ್ನು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತಿರುವುದರಿಂದ ನಮ್ಮ ರಾಷ್ರ ಗಣರಾಜ್ಯ ರಾಷ್ರವಾಗಿದೆ.
ಪ್ರಶ್ನೆ 3. ಸಾವ೯ಭೌಮ ಬಗ್ಗೆ ತಿಳಿಸಿ
ಭಾರತವು ಯಾವುದೇ ರಾಷ್ಟ್ರದ ಅಧೀನಕ್ಕೆ ಒಳಗಾಗದೇ ಆಂತರಿಕ ಮತ್ತು ಬಾಹ್ಯವಾದ ನಿಧಾ೯ರ ತೆಗೆದುಕೊಳ್ಳಲು ನಮ್ಮದೇಶ ಸ್ವತಂತ್ರವಾಗಿದೆ. ಹೀಗಾಗಿ ನಮ್ಮ ರಾಷ್ಟ್ರ ಸಾವ೯ಭೌಮ ರಾಷ್ಟ್ರವಾಗಿದೆ.
ಪ್ರಶ್ನೆ 4. ಸಮಾಜವಾದಿ ಬಗ್ಗೆ ತಿಳಿಸಿ
1976 ರಲ್ಲಿ 42ನೇ ತಿದ್ದುಪಡಿ ಮಾಡುವ ಮೂಲಕ ಈ ಪದ ಸೇರಿಸಲಾಗಿದೆ. ಈ ಪದ ಸೇರಿಸಲು ಮುಖ್ಯ ಕಾರಣ ಬಂಡವಾಳಶಾಹಿಗಳ ಮತ್ತು ಕಾಮಿ೯ಕರ ಮಧ್ಯ ಇರುವ ತಾರತಮ್ಯವನ್ನು ಹೋಗಲಾಡಿಸಲು ಸೇರಿಸಿದೆ.
ಪ್ರಶ್ನೆ5 ಜಾತ್ಯತೀತ ಬಗ್ಗೆ ತಿಳಿಸಿ
ಇದನ್ನು ಸಹ 1976 ರಲ್ಲಿ 42 ನೇ ತಿದ್ದುಪಡಿ ಮಾಡುವ ಮೂಲಕ ಸೇರಿಸಿದೆ. ಭಾರತದಲ್ಲಿ ಎಲ್ಲಾ ಧಮ೯ಗಳ ಅಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದ 25ನೆಯ ವಿಧಿಯಿಂದ 28ನೆಯ ವಿಧಿಯವರೆಗೂ ಧಾಮಿ೯ಕ ಸ್ವಾತಂತ್ರ್ಯ ಕುರಿತು ವಿವರಿಸಲಾಗಿದೆ.
ಪ್ರಶ್ನೆ 4 ಐಕ್ಯತೆ ಬಗ್ಗೆ ತಿಳಿಸಿ
ಇದನ್ನು ಸಹ 1976 ರಲ್ಲಿ 42ನೇ ತಿದ್ದುಪಡಿ ಮಾಡುವ ಮೂಲಕ ಸೇರಿಸಲಾಗಿದೆ. ನಾವೆಲ್ಲರೂ ಸಹೋದರತ್ವ ಭಾವದಿಂದ ಬದುಕಲು ಈ ಪದವನ್ನು ಸೇರಿಸಲಾಗಿದೆ.
ಪ್ರಶ್ನೆ 5 ಸಮಾನತೆ ಬಗ್ಗೆ ತಿಳಿಸಿ
ಭಾರತದ ಪ್ರಜೆಗಳು ತಮ್ಮ ಅಹ೯ತೆಗೆ ಅನುಗುಣವಾಗಿ ಸ್ಥಾನಮಾನ ಮತ್ತು ಅವಕಾಶಗಳನ್ನು ಸಮಾನತೆಯಲ್ಲಿ ಪಡೆಯುವರು. ಈ ಪದವು ಫ್ರೆಂಚ್ ದೇಶದಿಂದ ಪಡೆಯಲಾಗಿದೆ
ಪ್ರಶ್ನೆ 6 ನ್ಯಾಯ ಬಗ್ಗೆ ತಿಳಿಸಿ
ಈ ಪದವನ್ನು ರಷ್ಯಾ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಎಲ್ಲಾ ಪ್ರಜೆಗಳಿಗೆ ತಾರಮ್ಯವಿಲ್ಲದೇ ಆಥಿ೯ಕ,ಸಾಮಾಜಿಕ, ರಾಜಕೀಯದಲ್ಲಿ ನ್ಯಾಯ ಒದಗಿಸುವುದಾಗಿದೆ.
ಪ್ರಶ್ನೆ 7 ಸ್ವಾತಂತ್ರ್ಯ ಬಗ್ಗೆ ತಿಳಿಸಿ
ಈ ಪದವನ್ನು ಫ್ರೆಂಚ್ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದ 19 ನೆಯ ವಿಧಿಯಲ್ಲಿ ವ್ಯಕ್ತಿಗೆ 6 ಸ್ವಾತಂತ್ರ್ಯಗಳನ್ನು ನೀಡಿ ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.