A2 ಮೂಲ ಭೂತ ಹಕ್ಕುಗಳು 15 Mar
ಮೂಲ ಭೂತ ಹಕ್ಕುಗಳು
ಪ್ರಶ್ನೆ 1. ನಿಧಿ 12: ಬಗ್ಗೆ ತಿಳಿಸಿ
ಪರಿಭಾಷೆ ರಾಜ್ಯ ಎನ್ನುವ ಪದದ ಅಥ೯ ತಿಳಿಸಲಾಗುತ್ತದೆ
ಪ್ರಶ್ನೆ 2. ವಿಧಿ - 13 : ಬಗ್ಗೆ ತಿಳಿಸಿ
ಮೂಲಭೂತ ಹಕ್ಕುಗಳನ್ನು ಮೂಲ ಅಥ೯ಕ್ಕೆ ಭಂಗಬರದ ಹಾಗೆ 368ನೇ ವಿಧಿಯ ಪ್ರಕಾರ ತಿದ್ದುಪಡಿ ಮಾಡಬಹುದಾಗಿದೆ.
ಪ್ರಶ್ನೆ 3 ವಿಧಿ -14 ; ಬಗ್ಗೆ ತಿಳಿಸಿ
ಭಾರತದ ಭೂ ಪ್ರದೇಶದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಕಾನೂನಿನ ಮುಂದೆ ಸಮಾನರು
ಎಂದು ಈ ವಿಧಿಯು ಮಾಹಿತಿ ನೀಡುತ್ತದೆ. ಇದು ವಿದೇಶಿಯವರಿಗೂ ಅನ್ವಯವಾಗುತ್ತದೆ.
ಪ್ರಶ್ನೆ 4. ವಿಧಿ -15 ಬಗ್ಗೆ ತಿಳಿಸಿ
ಕುಲ, ಜಾತಿ,ಲಿಂಗ,ಜನ್ಮಸ್ಥಳದ ಆಧಾರದ ಮೇಲೆ ವ್ಯಕ್ತಿಗೆ ರಾಜ್ಯ ತಾರತಮ್ಯ ಮಾಡುವಂತಿಲ್ಲ.
ಪ್ರಶ್ನೆ 5. ವಿಧಿ 16 ಬಗ್ಗೆ ತಿಳಿಸಿ
ನೌಕರಿಯಲ್ಲಿ ಸಮಾನತೆ
1. ಸಾವ೯ಜನಿಕ ಸೇವೆಗೆ ಸೇರಲು ಸಮಾನ ಅವಕಾಶ.
2. ಲಿಂಗ ,ಜಾತಿ, ಧಮ೯, ಕುಲ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
3. ವಾಸಸ್ಥಳವನ್ನು ಒಂದು ಅಹ೯ತೆ ಎಂದು ಪರಿಗಣಿಸ ಬಹುದಾಗಿದೆ.
4.ನೇಮಕಾತಿಯಲ್ಲಿ ಹಿಂದುಳಿದ ವಗ೯ದವರಿಗೆ ರಾಜ್ಯ ಮೀಸಲಾತಿ ನೀಡಬಹುದು.
ಪ್ರಶ್ನೆ 6. ವಿಧಿ 17 ಬಗ್ಗೆ ತಿಳಿಸಿ
ಸಾವ೯ಕನಿಕ ಸ್ಥಳಗಳಲ್ಲಿ ಮತ್ತು ಸಾವ೯ಜನಿಕ ಆರಾಧಾನ ಸ್ಥಳಗಳಲ್ಲಿ ಜಾತಿಯ ಆರಾಧನ ಮೇಲೆ ಪ್ರವೇಶ ನಿಷೇಧ ಮಾಡುವಂತಿಲ್ಲ
ಪ್ರಶ್ನೆ 6. ವಿಧಿ -18 ಬಗ್ಗೆ ತಿಳಿಸಿ
ರಾಜ್ಯವು ಸೈನಿಕರಿಗೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹೊರತುಪಡಿಸಿ ಬೇರೆಯವರಿಗೆ ಬಿರುದುಗಳನ್ನು ನೀಡುವಂತಿಲ್ಲ.
ಪ್ರಶ್ನೆ 7. ವಿಧಿ --19 ರ ಬಗ್ಗೆ ತಿಳಿಸಿ
ವ್ಯಕ್ತಿಗೆ 6 ಸ್ವಾತಂತ್ಯ್ಯಗಳನ್ನು ನೀಡಲಾಗಿದೆ.
19 (1) ಎ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ಯ.
19 (1) ಬಿ ನಿರಾಯುಧವಾಗಿ ಸಭೆ ಸೇರುವ ಸ್ವಾತಂತ್ಯ್ಯ.
19 (1) ಸಿ ಸಂಘ,ಸಂಸ್ಥೆ,ಸಹಕಾರಿ ಸಂಘಗಳನ್ನು ಸ್ಥಾಪಿಸುವ ಸ್ವಾತಂತ್ಯ್ಯ.
19 (1) ಡಿ ದೇಶಾದ್ಯಂತ ಸಂಚರಿಸುವ ಸ್ವಾತಂತ್ಯ್ಯ.
19 (1) ಇ ದೇಶಾದ್ಯಂತ ನೆಲೆಸುವ ಸ್ವಾತಂತ್ಯ್ಯ.
19 (1) ಜಿ ದೇಶದಾದ್ಯಂತ ವೃತ್ತಿ ಅಥವಾ ಕೆಲಸ ಮಾಡುವ ಸ್ವಾತಂತ್ಯ್ಯ.
ಪ್ರಶ್ನೆ8 ವಿಧಿ --20 ರ ಬಗ್ಗೆ ತಿಳಿಸಿ
ಅಪರಾಧಿಯ ರಕ್ಷಣೆ
1. ಅಪರಾಧ ನಡೆದ ಸಂದಭ೯ದಲ್ಲಿ ಜಾರಿಯಲ್ಲಿದ್ದ ಕಾನೂನುನ್ನು ಮಾತ್ರ ಅಳವಡಿಸಬೇಕು.
2. ಒಂದು ಅಪರಾಧಕ್ಕೆ ಒಂದೇ ಶಿಕ್ಷೆ ನೀಡಲಾಗುವುದು.
3. ಒಬ್ಬ ಅಪರಾಧಕ್ಕೆ ತನ್ನ ವಿರುದ್ದವೇ ಸಾಕ್ಷಿ ಹೇಳುವಂತೆ ಒತ್ತಾಯ ಮಾಡುವಂತಿಲ್ಲ.
ಪ್ರಶ್ನೆ9 ವಿಧಿ--21 ಜೀವಿಸುವ ಹಕ್ಕು
ಒಬ್ಬ ವ್ಯಕ್ತಿಯ ಜೀವ ಮತ್ತು ವೈಯಕ್ತಿಕ ಸ್ವಾತಂತ್ಯ್ಯವನ್ನು ಕಸಿದುಕೊಳ್ಳುವಂತಿಲ್ಲ,
ಪ್ರಶ್ನೆ 10 ವಿಧಿ --21ಎ ರ ಬಗ್ಗೆ ತಿಳಿಸಿ
2002 ರಲ್ಲಿ 86 ನೇ ತಿದ್ದುಪಡಿ ಮಾಡುವ ಮೂಲಕ 21 ಎ ಹೊಸದಾದ ವಿಧಿ ಮಾಡಿಕೊಂಡು ಅದರಲ್ಲಿ 6 ರಿಂದ 14 ವಷ೯ದ ಒಳಗಿನ ಮಕ್ಕಳಿಗೆ ರಾಜ್ಯವು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡುತ್ತದೆ.
ಪ್ರಶ್ನೆ 11. ವಿಧಿ --22 ರ ಬಗ್ಗೆ ತಿಳಿಸಿ
ಬಂಧಿಸಿದ ವ್ಯಕ್ತಿಯ ರಕ್ಷಣೆ
1. ಬಂಧಿಸುವ ವ್ಯಕ್ತಿಗೆ ಬಂಧ ನಕ್ಕೆ ಕಾರಣ ತಿಳಿಸಬೇಕು.
2. ಬಂಧಿಸುವ ವ್ಯಕ್ತಿಯ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು
3. ಬಂಧಿಸಿದ ವ್ಯಕ್ತಿಯನ್ನು 24 ಗಂಟೆಯ ಒಳಗಾಗಿ ಸಂಬಂಧಿಸಿದ ನ್ಯಾಯಾಲಯ ಒಳಗಾಗಿ ಸಂಬಂಧಿಸಿದ ನ್ಯಾಯಾಲಯ ಅಥವಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು.
4. ಈ ಮೇಲಿನ ನಿಯಮಗಳು ಮುನ್ನಚ್ಚರಿಕೆಯ ಬಂಧನವಾಗಿ ಬಂಧಿಸಲ್ಪಟ್ಟಿದ್ದರೆ ಅನ್ವಯಿಸುವುದಿಲ್ಲ.
ಪ್ರಶ್ನೆ 12 ವಿಧಿ --23 ಬಗ್ಗೆ ತಿಳಿಸಿ\
ಜೀತ ಪದ್ದತಿ ನಿಷೇಧ
ಮಾನವನ ಅಕ್ರಮ ಮಾರಾಟ, ಬೇಗಾರ ಪದ್ದತಿ (ಸಂಭಾವನೆಯಿಲ್ಲದೇ ಬಲಂತವಾಗಿ ದುಡಿಸಿಕೊಳ್ಳುವ ಪದ್ದತಿಯು ಬೇಗಾರ ಪದ್ದತಿಯಾಗಿದೆ) ಜೀತಪದ್ದತಿ ನಿಷೇದದ ಕುರಿತು ಈ ವಿಧಿಯಲ್ಲಿ ಮಾಹಿತಿ ನೀಡುತ್ತದೆ.
ಪ್ರಶ್ನೆ 13 ವಿಧಿ -24 ಬಗ್ಗೆ ತಿಳಿಸಿ
ಗಣಿ,ಕಾಖಾ೯ನೆ & ಅಪಾಯಕಾರಿಯನ್ನುಂಟು ಮಾಡುವ ಯಾವುದೇ ಕೆಲಸದಲ್ಲಿ 0 ರಿಂದ 14 ವಷ೯ದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ.
ಪ್ರಶ್ನೆ 14 ವಿಧಿ -- 25 ಬಗ್ಗೆ ತಿಳಿಸಿ
ವ್ಯಕ್ತಿಗೆ ತನಗೆ ಇಷ್ಷವಾದ ಧಮ೯ವನ್ನು ಸ್ವೀಕರಿಸಲು ಮತ್ತು ಯಾವುದೇ ಧಮ೯ವನ್ನು ಆಚರಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರಶ್ನೆ 15 ವಿಧಿ - 26 ಬಗ್ಗೆ ತಿಳಿಸಿ
ಒಂದು ಧಮ೯ದ ಹೆಸರಿನಲ್ಲಿ ಧಾಮಿ೯ಕ ಸಂಸ್ಥೆಯನ್ನು ಸ್ಥಾಪಿಸಬಹುದು ಮತ್ತು ಒಂದು ಧಮ೯ದ ಹೆಸರಿನಲ್ಲಿ ಆಸ್ತಿಯನ್ನು ಸಂಪಾಧಿಸಬಹುದೆಂದು ಈ ವಿಧಿಯಲ್ಲಿ ಮಾಹಿತಿ ನೀಡುತ್ತದೆ.
ಪ್ರಶ್ನೆ 16 ವಿಧಿ -27 ಬಗ್ಗೆ ತಿಳಿಸಿ
ಒಂದು ಧಮ೯ದ ಏಳಿಗೆಗಾಗಿ ಮತ್ತು ಧಾಮಿ೯ಕ ಸಂಸ್ಥೆಯ ಏಳಿಗೆಗಾಗಿ ಸಾವ೯ಜನಿಕರಿಂದ ದಾನ ದತ್ತಿ ಪಡೆಯಬಹುದು ಆದರೆ ಒತ್ತಾಯ ಪೂವ೯ಕವಾಗಿ ಪಡೆಯುವಂತಿಲ್ಲ
ಪ್ರಶ್ನೆ 17 ವಿಧಿ -28
1.ಕೇಂದ್ರ ಹಾಗೂ ರಾಜ್ಯ ಸಕಾ೯ರದಿಂದ ಪೂಣ೯ ಪ್ರಮಾಣದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಯಲ್ಲಿ ಧಾಮಿ೯ಕ ಬೋಧನೆ ಮಾಡುವಂತಿಲ್ಲ.
2. ದಾನ ಮತ್ತು ದತ್ತಿಯ ಮೂಲಕ ಅರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಧಾಮಿ೯ಕ ಬೋದನೆ ಮಾಡಬಹುದಾಗಿದೆ.
3.ಧಾಮಿ೯ಕ ಬೋಧನೆ ಮಾಡುವ ಶಿಕ್ಷಣ ಸಂಸ್ಥೆಗಳು ಅಲ್ಲಿ ಹಾಜರಾಗುವ ವ್ಯಕ್ತಿಯ ಒಪ್ಪಿಗೆಯನ್ನು ಪಡೆದುಕೊಂಡು ಧಾಮಿ೯ಕ ಬೋಧನೆ ಮಾಡತಕ್ಕದ್ದು.
ಪ್ರಶ್ನೆ 18 ವಿಧಿ --29
ಭಾಷಾ ಅಲ್ಪಸಂಖ್ಯಾತರು ದೇಶದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಅವರು ಭಾಷೆ, ಲಿಪಿ, ಸಂಸ್ಕೃತಿಯನ್ನು ಹೊಂದಿದ್ದರೆ ಅದನ್ನು ಕಾಪಾಡುವ ಹಕ್ಕು.
ಪ್ರಶ್ನೆ 19 ವಿಧಿ -30 ಬಗ್ಗೆ ತಿಳಿಸಿ
ಭಾಷಾ ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ತೆಗೆದು ಅದನ್ನು ಮುನ್ನಡೆಸುವ ಹಕ್ಕನ್ನು ಹೊಂದಿದ್ದಾರೆ.