A2 ಕೇಂದ್ರ ಸಕಾ೯ರ 18 Mar

 ಕೇಂದ್ರ ಸಕಾ೯ರ

 ಪ್ರಶ್ನೆ 1.ವಿಧಿ - 52 ರಾಷ್ಟ್ರಪತಿಯ ಸ್ಥಾನ

 ಸಂವಿಧಾನದಲ್ಲಿ ಭಾರತ ದೇಶಕ್ಕೆ ಒಂದು ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈಹುದ್ದೆಯನ್ನು ಬ್ರಿಟನ್‌ ದೊರೆಯ ಹುದ್ದೆಗೆ ಹೋಲಿಸಲಾಗಿದೆ.

 ಪ್ರಶ್ನೆ 2. ವಿಧಿ-53 ಕಾಯಾಂಗೀಯ ಅಧಿಕಾರ
ರಾಷ್ಟ್ರಪತಿಯವರ ಕಾಯ೯೦ಗೀಯ ಅಧಿಕಾರದ ಕುರಿತು ಈ ವಿಧಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.

 ಪ್ರಶ್ನೆ 3. ವಿಧಿ - 54 ಚುನಾವಣೆ
1. ಇವರ ಚುನಾವಣೆಯು ಪರೋಕ್ಷ ಮತದಾನದ ಮೂಲಕ ನಡೆಯುತ್ತದೆ.
2. ಇವರ ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುತ್ತದೆ.
3. ಯಾವುದೇ ರಾಜ್ಯ ಸಕಾ೯ರ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಸಹ ಇವರ ಚುನಾವಣೆ ನಡೆಯುತ್ತದೆ.
4. ಇವರ ಚುನಾವಣೆಯಲ್ಲಿ ಮತದಾನ ಮಾಡುವರೆಂದರೆ
1. ಲೋಕಸಭೆಯ ಚುನಾಯಿತ ಸದಸ್ಯರು
2. ರಾಜ್ಯ ಸಭೆಯ ಚುನಾಯಿತ ಸದಸ್ಯರು
3. ಎಲ್ಲಾ ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರು
4. ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯ ಚುನಾಯಿತ ಸದಸ್ಯರು

  ಪ್ರಶ್ನೆ 4. ವಿಧಿ --55 ಚುನಾವಣೆ ರೀತಿ
1.  ಈ ವಿಧಿಯಲ್ಲಿ ರಾಷ್ಟ್ರಪತಿಯವರ ಚುನಾವಣ  ರೀತಿ ಮತ್ತು ಮತದಾನದ ಮೌಲ್ಯದ ಕುರಿತು ಮಾಹಿತಿ ನೀಟಲಾಗುತ್ತದೆ.

  ಪ್ರಶ್ನೆ 5. ವಿಧಿ - 56 ಅಧಿಕಾರ ಅವಧಿ
ರಾಷ್ಟ್ರ ಪತಿಯವರ ಅಧಿಕಾರ ಅವಧಿ 5 ವಷ೯

  ಪ್ರಶ್ನೆ 6. ವಿಧಿ - 57 ಮರುಚುನಾವಣೆಯ ಅಹ೯ತೆ
ರಾಷ್ಟ್ರಪತಿಯವರು ಎಷ್ಟು ಬಾರಿಯಾದರು ಚುನಾವಣೆಯಲ್ಲಿ ಸ್ಪಧಿ೯ಸಬಹುದು. ಜೊತೆಗೆ ಎಷ್ಟು ಬಾರಿಯಾದರೂ ಆಯ್ಕೆಯಾಗಬಹುದು. . ಆದರೆ ಅಮೇರಿಕಾದ ಅಧ್ಯಕ್ಷರ ಚುನಾವಣೆಗೆ 2 ಬಾರಿ ಮಾತ್ರ ಆಯ್ಕೆಯಾಗಲು ಅವಕಾಶವಿದೆ.

  ಪ್ರಶ್ನೆ 7. ವಿಧಿ-58 ಅಹ೯ತೆಗಳು
1 ಭಾರತದ ಪ್ರಜೆಯಾಗಿರಬೆಕು
2. ಕನಿಷ್ಠ 35 ವಯಸ್ಸಾಗಿರಬೇಕು
3. ಲಾಭದಾಯಕ ಹುದ್ದೆ ಹೊಂದಿರಬಾರದು
4 ದಿವಾಳಿಕೋರನಾಗಿರಬಾರದು
5. ಬುದ್ದಿ ಮಾಂದ್ಯನಾಗಿರಬಾರದು.
6. ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು
7. ಲೋಕಸಭೆಯ ಸದಸ್ಯನಾಗಲು ಹೊಂದಿರುವ ಅಹ೯ತೆ ಹೊಂದಿರತಕ್ಕದ್ದು ಅದರೆ ಲೋಕಸಭೆಯ ಸದಸ್ಯನಾಗುವಂತಿಲ್ಲ

   ಪ್ರಶ್ನೆ 8 ವಿಧಿ - 59 ಷರತ್ತು ಮತು ಸವಲತ್ತುಗಳು
1.ಇವರು ಸಂಸತ್ತಿನ ಸದಸ್ಯರಾಗಿರಬಾರದು.
2. ಇವರ ವೇತನವು ರೂ .5 ಲಕ್ಷ
3. ಇವರ ವೇತನವು ಸಂಚಿತ ನಿಧಿಯಿಂದ ನೀಡಲಾಗುತ್ತದೆ.
4. ಇವರ ವೆತನವು ಆದಯಾ ತೆರಿಗೆಗೆ ಒಳಪಟ್ಟಿರುತ್ತದೆ.
5ಇವರಿಗೆ ದೆಹಲಿಯಲ್ಲಿ ರಾಷ್ಟ್ರಪತಿ ಭವನ, ಹೈದ್ರಾಬಾದಿನಲ್ಲಿ ರಾಷ್ಟ್ರಪತಿ ನಿಲಯಂ, ಸಿಮ್ಲಾದಲ್ಲಿ ರಾಷ್ಟ್ರಪತಿ ನಿವಾಸ ಎಂಬ ನಿವಾಸಗಳನ್ನು ನೀಡಲಾಗಿದೆ.

 ಪ್ರಶ್ನೆ 9  ವಿಧಿ -60 ಪ್ರಮಾಣವಚನ
  ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಸುಪ್ರೀಂಕೋಟ್‌೯ನ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ.

  ಪ್ರಶ್ನೆ 10. ವಿಧಿ - 61 ಮಹಾಭಿಯೋಗ
1.ಈ ಪದವನ್ನು ಅಮೇರಿಕಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ.
2.ರಾಷ್ಟ್ರಪತಿಯವರು ಸಂವಿಧಾನಾತ್ಮಕವಾಗಿ ಕಾಯ೯ ನಿವ೯ಹಿಸಲು ವಿಫಲಾವಾದರೆ ಅವರ ಮೇಲೆ ದೋಷಾ ರೋಪ ಪಟ್ಟಿ ಸಲ್ಲಿಸಲು ಸದನದ1/4 ರಷ್ಟ್ಟು ಜನ ಸದಸ್ಯರ ಸಹಿ ಇರಬೇಕು. ನಂತರ 14 ದಿನಗಳು ಕಳೆದ ಮೆಲೆ ಸಂಸತ್ತಿನಲ್ಲಿ 2/3 ರಷ್ಟ್ಟು ಬಹುಮತ ಸಾಬೀತುಪಡಿಸುವುದರ ಮೂಲಕ ರಾಷ್ಟ್ರಪತಿಯವರನ್ನು ಹುದ್ದೆಯಿಂದ ಕೆಳಗಿಳಿಸಬಹುದು.

 ಪ್ರಶ್ನೆ 11. ವಿಧಿ - 62 ಹುದ್ದೆ ಖಾಲಿಯಾದ ನಂತರ ಚುನಾವಣೆ ನಡೆಸತಕ್ಕದ್ದು
1. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಅವರ ಸ್ಥಾನವನ್ನು ಉಪರಾಷ್ಟ್ರಪತಿಗಳು ತುಂಬುತ್ತಾರೆ. ಅವರೂ ಇಲ್ಲದ ವೇಳೆಯಲ್ಲಿ ರಾಷ್ಟ್ರಪತಿಯವರ ಕಾಯ೯ವನ್ನು ಸುಪ್ರೀಮ್ ಕೋಟ್‌೯ನ ಮುಖ್ಯ ನ್ಯಾಯಾಧೀಶರುನಿವ೯ಹುಸುತ್ತಾರೆ.
2. ರಾಷ್ಟ್ರಪತಿ ಹುದ್ದೆ ಖಾಲಿಯಾದ 6 ತಿಂಗಳ ಒಳಗಾಗಿ ಚುನಾವಣೆ ನಡೆಸತಕ್ಕದ್ದು.

ರಾಜೀನಾಮೆ
ರಾಷ್ಟ್ರಪತಿಯವರು ತಮ್ಮ ರಾಜೀನಾಮೆಯನ್ನು ಉಪರಾಷ್ಟ್ರಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆಯನ್ನು ಖಾಲಿ ಮಾಡುತ್ತಾರೆ.
 
ರಾಷ್ಟ್ರಪತಿಯವರ ಕಾಯ೯ಗಳು
1. ಶಾಸಕಾಂಗೀಯ ಕಾಯ೯ಗಳು

 ಪ್ರಶ್ನೆ 12. ವಿಧಿ - 80 ಇದರ ಅನ್ವಯ ಕಲೆ, ಸಾಹಿತ್ಯ, ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ 12 ಜನರನ್ನು ರಾಜ್ಯ ಸಭೆಗೆ ನಾಮಕರಣ ಮಾಡುತ್ತಾರೆ.

 ಪ್ರಶ್ನೆ 13. ವಿಧಿ - 85 ಇದರ ಅನ್ವಯ ಸಂಸತ್ತಿನ  ಅಧಿವೇಶನ ಕರೆಯುವ, ಅಧಿವೇಶನ ಮುಂದೂಡುವ, ಅಧಿವೇಶನ ವಿಸಜಿ೯ಸುವ ಅಧಿಕಾರ ಹೊಂದಿದ್ದಾರೆ.

 ಪ್ರಶ್ನೆ 14 ವಿಧಿ - 86ಇದರ ಅನ್ವಯ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವ ಅಧಿಕಾರ ಹೊಂದಿದ್ದಾರೆ.

 ಪ್ರಶ್ನೆ 15 ವಿಧಿ - 108 ಇದರ ಅನ್ವಯ ಜಂಟಿ ಅಧಿವೇಶನ ಕರೆಯುತ್ತಾರೆ.

 ಪ್ರಶ್ನೆ 16 ವಿಧಿ - 331 ಇದರ ಅನ್ವಯ ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯರನ್ನು ನೇಮಕ ಮಾಡಲಾಗುತ್ತಿತ್ತು (104 ನೇ ಸಂವಿಧಾನದ ತಿದ್ದುಪಡಿ ಪ್ರಕಾರ ರದ್ದುಪಡಿಸಲಾಗಿದೆ)

 ಪ್ರಶ್ನೆ 17 ವಿಧಿ - 123 ಇದರ ಅನ್ವಯ ಅಧಿವೇಶನ ಇಲ್ಲದಿದ್ದಾಗ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. (6 ವಾರಗಲ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕ್ಕದ್ದು)
 ಕಾಯಾ೯ಂಗೀಯ ಅಧಿಕಾರಗಳು

 ಪ್ರಶ್ನೆ18. ವಿಧಿ - 74 ಇದರ ಅನ್ವಯ ಪ್ರಧಾನಮಂತ್ರಿ ಮತ್ತು ಮಂತ್ರಿ ಮಂಡಲವಿರಬೇಕು. ಇವರ ಸಲಹೆ ಪಡೆಯುವ ಅಧಿಕಾರ ಹೊಂದಿರುವರು.

ಪ್ರಶ್ನೆ19.  ವಿಧಿ - 75 ಇದರ ಅನ್ವಯ ಬಹುಮತ ಪಡೆದ ಪಕ್ಷದ ನಾಯಕನನ್ನು ಪ್ರಧಾನ ಮಂತ್ರಿಯೆಂದು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ

ಪ್ರಶ್ನೆ20  ವಿಧಿ -  76 ಇದರ ಅನ್ವಯ ಅಟಾನಿ೯ ಜನರಲ್ ರವರನ್ನು ನೇಮಿಸುತ್ತಾರೆ

ಪ್ರಶ್ನೆ21  ವಿಧಿ - 124  ಇದರ ಅನ್ವಯ ಪ್ರಕಾರ ಸುಪ್ರೀಂಕೋಟ್‌೯ನ ಮುಖ್ಯ ನ್ಯಾಯಾಧೀಶರ ನೇಮಕ

ಪ್ರಶ್ನೆ22  ವಿದಿ - 217 ಇದರ ಅನವಯ ಹೈಕೋಟ್‌೯ನ ಮುಖ್ಯ ನ್ಯಾಯಾಧೀಶರ ನೇಮಕ.

ಪ್ರಶ್ನೆ23  ವಿಧಿ - 280 ಇದರ ಅನ್ವಯ ಹಣಕಾಸು ಆಯೋಗದ ಅಧ್ಯಕ್ಷರ ನೇಮಕ.

ಪ್ರಶ್ನೆ24  ವಿಧಿ - 324 ಇದರ ಅನ್ವಯ ಚುನಾವಣಾ ಆಯುಕ್ತರ ನೇಮ.

ಪ್ರಶ್ನೆ25  ವಿಧಿ - 316 ಇದರ ಅನ್ವಯ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ
.
ಪ್ರಶ್ನೆ25  ವಿಧಿ - 155 ಇದರ ಅನ್ವಯ ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನ ಅಧಾರದ ಮೇಲೆ ರಾಜ್ಯಗಳ ರಾಜ್ಯಪಾಲರ ನೇಮಕ.

ಪ್ರಶ್ನೆ26  ವಿಧಿ - 148 ಇದರ ಅನ್ವಯ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋದಕರನ್ನು ನೇಮಕ

ಹಣಕಾಸು ಮಸೂದೆಗೆ ಇವರ ಸಹಿ ಬೇಕು ಮೊದಲು ಲೋಕ ಸಭೆಯಲ್ಲಿಯೇ ಮಂಡಿಸಬೇಕು. ಮಡಿಸುವ ಪೂವ೯ದಲ್ಲಿ  ರಾಷ್ಟ್ರಪತಿಯವರ ಒಪ್ಪಿಗೆ ಕಡ್ಡಾಯ.ಕ್ಷಮಾಧಾನದ ಅಧಿಕಾರ

 ಪ್ರಶ್ನೆ27  ವಿಧಿ - 72 ಇದರ ಅನ್ವಯ ಕ್ಷಮಾಧಾನ ನೀಡುವ,ಶಿಕ್ಷೆ ಬದಲಿಸುವ ಅಧಿಕಾರ ಹೊಂದಿದ್ದಾರೆ ಮರಣ ದಂಡನೆ ವಿಧಿಸಿದ ಶಿಕ್ಷೆಯನ್ನುರದ್ದುಮಾಡುವಅಧಿಕಾರರಾಷ್ಟ್ರಪತಿಗಳಿಗೆ ಮಾತ್ರ ಇದೆ. ರಾಷ್ಟ್ರಪತಿಯವರು ಚಲಾಯಿಸಿದ ಅಧಿಕಾರಿಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ತುತು೯ ಪರಿಸ್ಥಿತಿ ಅಧಿಕಾರಗಳು
1.ಸಂವಿಧಾನದ 18 ನೇ ಭಾಗದಲ್ಲಿ 352ನೆ ವಿಧಿಯಿಂದ 360ನೇ ವಿಧಿಯವರೆಗೂ ವಿವರಿಸಲಾಗಿದೆ. ಈ ವಿಷಯವನ್ನು ಜಮ೯ನಿ ದೇಶದಿಂದ ಎರವಲಾಗಿ ಪಡೆಯಲಾಗಿದೆ.
2. ರಾಷ್ಟ್ರದ ಏಕತೆಗೆ ತೊಂದರೆಯಾದಾಗ,ಆಡಳಿತಾತ್ಮಕವಾಗಿ ತೊಂದರೆಯಾದಾಗ ಹಣಕಾಸು ತೊಂದರೆಯಾದಾಗ ರಾಷ್ಟ್ರಪತಿಗಳು 3 ಪ್ರಕಾರದ ತುತು೯ ಪರಿಸ್ಥಿತಿಯನ್ನು ಹೊರಡಿಸುತ್ತಾರೆ.

1) ರಾಷ್ಟ್ರೀಯ ತುತು೯ ಪರಿಸ್ಥಿತಿ
ಪ್ರಧಾನ ಮಂತ್ರಿ ಮತ್ತು ಕೇಂದ್ರ ಮಂತ್ರಿ ಮಂಡಲವು ಲಿಖಿತ ರೂಪದಲ್ಲಿ ಶಿಫಾರಸ್ಸು ಮಾಡಿದಾಗ ರಾಷ್ಟ್ರಪತಿಗಳು ಸಂವಿಧಾನದ 352ನೆ ವಿಧಿಯನ್ವಯ ಈ ತುತು೯ ಪರಿಸ್ಥಿತಿ ಘೋಷಣೆಯಾದ ನಂತರ ಅಧಿವೇಶನ ಸೇರಿದ 30 ದಿನಗಳ ಒಳಗಾಗಿ ಸಂಸತ್ತಿನ ಒಪ್ಪಿಗೆ ಪಡೆಯತಕದ್ದು ನಂತರ ಪ್ರತಿ 6 ತಿಂಗಳಿಗೊಮ್ಮೆಸಂಸತ್ತಿನಒಪ್ಪಿಗೆಪಡೆಯುವುದರ ಮೂಲಕ ಅನಿಧಿ೯ಷ್ಟಅವಧಿಯವರೆಗೂ ಜಾರಿಯಲ್ಲಿರುತ್ತದೆ.
1 1/10 ರಷ್ಟು ಸದಸ್ಯರ ಬಹುಮತದ ಮೂಲಕ ಲಿಖಿತ ರೂಪದ ಪತ್ರವನ್ನು ಅಧಿವೇಶನ ಇದ್ದರೆ ಸಭಾಪತಿಯವರಿಗೆ, ಇಲ್ಲದಿದ್ದರೆ ರಾಷ್ಟ್ರಪತಿಗಳಿಗೆ ಸಲ್ಲಿಸಿ ರದ್ದು ಮಾಡುವಂತೆ ಕೇಳಿದಾಗ 14 ದಿನಗಳ ಒಳಗಾಗಿ ಇದನ್ನು ರದ್ದುಮಾಡಲಾಗುತ್ತದೆ.

2. ರಾಜ್ಯ ತುತು೯ ಪರಿಸ್ಥಿತಿ
1. ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಾಗ, ಸಂವಿಧಾನಾತ್ಮಕವಾಗಿ ಆಡಳಿತ ನಡೆಯದೇ ಇದ್ದಾಗ, ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೇ ಇದ್ದಾಗ, ಈ ತುತು೯ ಪರಿಸ್ಥಿತಿಯನ್ನು ಘೋಷಿಸಲಾಗುವುದು.
2. ಸಂವಿಧಾನದ 356 ನೆ ವಿಧಿಯ ಅನ್ವಯ ರಾಷ್ಟ್ರಪತಿಗಳು ಈ ತುತು೯ ಪರಿಸ್ಥಿತಿಯನ್ನು ಘೋಷಿಸುತ್ತಾರೆ. ಈ ತುತು೯ ಪರಿಸ್ಥಿತಿ ಘೋಷಿಸಿದ ನಂತರ ಅಧಿವೇಶನ ಸೇರಿದ 2 ತಿಂಗಳ ಒಳಗಾಗಿ ಸಮಸತ್ತಿನ ಒಪ್ಪಿಗೆಪಡೆಯತಕ್ಕದ್ದು. ನಂತರ ಪ್ರತಿ 6 ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯುವುದರ ಮೂಲಕ ಗರಿಷ್ಠ 3 ವಷ೯ದವರೆಗೂ ಜಾರಿಯಲ್ಲಿರುತ್ತದೆ.

3.ಹಣಕಾಸು ತುತು೯ ಪರಿಸ್ಥಿತಿ
1. ದೇಶದಲ್ಲಿ ಹಣಕಾಸಿನ ತೊಂದರೆಯುಂಟಾದಾಗ ಸಂವಿಧಾನ 360 ನೇ ವಿಧಿಯನ್ವಯ ರಾಷ್ಟ್ರಪತಿಗಳು ಈ ತುತು೯ ಪರಿಸ್ಥಿತಿಯನ್ನು ಘೋಷಿಸುತ್ತಾರೆ. ನಂತರ ಅಧಿವೇಶನ ಸೇರಿದ 2 ತಿಂಗಳಿಗೊಮ್ಮೆಸಂಸತ್ತಿನ ಒಪ್ಪಿಗೆ ಪಡೆಯುವುದರ ಮೂಲಕ ಅನಿದಿ೯ಷ್ಟ ಅವಧಿಯವರೆಗೂ ಜಾರಿಯಲ್ಲಿರುತ್ತದೆ.
2.ಈ ತುತು೯ ಪರಿಸ್ಥಿತಿಯನ್ನು ಒಮ್ಮೆಯೂ ಘೋಷಣೆಯಾಗಿಲ್ಲ.
ಇತರೆ ಅಧಿಕಾರಿಗಳು
1.ದೇಶದ 3 ಪಡೆಯ ಮಹಾದಂಡ ನಾಯಕ ಆಗಿರುತ್ತಾರೆ.
2. ದೇಶದ 3 ಪಡೆಯ ಮುಖ್ಯಸ್ಥರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
3.ಕೇಂದ್ರ ಮಂತ್ರಿಮಂಡಲದ ಲಿಖಿತ ರೂಪದ ಶಿಫಾರಸ್ಸಿನ ಆಧಾರದ ಮೇಲೆ ಯುದ್ಧವನ್ನು ಘೋಷಿಸುವ ಮತ್ತು ರದ್ದು ಮಾಡುವ ಅಧಿಕಾರ ಹೊಂದಿದ್ದಾರೆ.
4. ವಿದೇಶಿ ರಾಯಭಾರಿಯನ್ನು ನೇಮಕ ಮಾಡುತ್ತಾರೆ.
ಉಪರಾಷ್ಟ್ರಪತಿ

 ಪ್ರಶ್ನೆ27  ವಿಧಿ -64 ರಾಜ್ಯಸಭೆಯ ಸಭಾಪತಿಗಳಾಗಿರುತ್ತಾರೆ
ಇದರ ಅನ್ವಯ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಪದನಿಮಿತ್ಯ ಸಭಾಪತಿಗಲಅಗಿ ಕಾಯ೯ನಿವ೯ಹಿಸುತ್ತಾರೆ.

  ಪ್ರಶ್ನೆ 28 ವಿಧಿ-66 ಚುನಾವಣೆ
1.ಇವರ ಚುನಾವಣೆಯು ಪರೊಕ್ಷ ಮತದಾನದ ಮೂಲಕ ನಡೆತಯುತ್ತದೆ.
2. ಇವರ ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುತ್ತವೆ.
3. ಇವರ ಚುನಾವಣೆಯಲ್ಲಿ ಭಾಗವಹಿಸುವರೆಂದರೆ ಲೊಕಸಭೆ ಮತ್ತು ರಾಜ್ಯ ಸಭೆಯ ಎಲ್ಲಾ ಸದಸ್ಯರು ಭಾಗವಹಿಸುತ್ತಾರೆ.

  ಪ್ರಶ್ನೆ 29    ವಿಧಿ -67 ಅವಧಿ
ಉಪರಾಷ್ಟ್ರಪತಿಯವರ ಅಧಿಕಾರ ಅವಧಿ 5 ವಷ೯

   ಪ್ರಶ್ನೆ 30   ವಿಧಿ -68 ಹುದ್ದೆಕಲಿಯಾದಾಗ ತುಂವತಕ್ಕದ್ದು.
1. ಉಪರಾಷ್ಟ್ರಪತಿಯವರ ಹುದ್ದೆ ಖಾಲಿಯಾದ 6 ತಿಂಗಳ ಒಳಗಾಗಿ ಚುನಾವಣೆ ನಡೆಸತಕ್ಕದ್ದು ಅಂದರೆ ಆ ಹುದ್ದೆ ತುಂಬತಕ್ಕದ್ದು ಎಂದಥ೯ ಕೊಡುತ್ತದೆ.

    ಪ್ರಶ್ನೆ 31  ವಿಧಿ - 69 ಪ್ರಮಾನ ವಚನ
. ಉಪರಾಷ್ಟ್ರಪತಿಯವರಿಗೆ ಪ್ರಮಾಣ ವಚನವನ್ನು ರಾಷ್ಟ್ರಪತಿಗಳು ಬೊಧಿಸುತ್ತಾರೆ.

     ಪ್ರಶ್ನೆ 32    ವಿಧಿ - 70 ಕೆಲವು ಸಮದಭ೯ದಲ್ಲಿ ರಾಷ್ಟ್ರಪತಿಯವರ ಕಾಯ೯ನಿವ೯ಹಿಸುತ್ತಾರೆ
ಕೆಲವು ಸಂದಭ೯ದಲ್ಲಿ  ರಾಷ್ಟ್ರಪತಿಯವರು ಇಲ್ಲದಾಗ ಅವರ ಕಾಯ೯ವನ್ನು ನಿವ೯ಹಿಸುತ್ತಾರೆ.

ರಾಜೀನಾಮೆ
ಉಪರಾಷ್ಟ್ರಪತಿಯವರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆಯನ್ನು ಖಾಲಿ ಮಾಡುತ್ತಾರೆ.

ವೇತನ
1. ಉಪರಾಷ್ಟ್ರಪತಿಯವರ ವೇತನ ರೂ. 4,00,000
2.ಉಪರಾಷ್ಟ್ರಪತಿಯವರ ವೇತನವು ಸಂಚಿತ ನಿಧಿಯಿಂದ ನಿಡಲಾಗುತ್ತದೆ.
3. ಉಪರಾಷ್ಟ್ರಪತಿಯವರ ವೇತನವು ಅದಾಯ ತೆರಿಗೆಗೆ ಒಳಪಟ್ಟಿರುತ್ತದೆ.

ರಾಜ್ಯ ಸಭೆ
1.ಇದನ್ನು ಹಿರಿಯರ ಸದನ, ಸಂಸತ್ತಿನ ಮೇಲ್ಮನೆ,ಬುದ್ದಿವಂತರ ಸದನ, ಶಾಶ್ವತ ಸದನ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
2. ಈ ಸಭೆಗೆ ಆಯ್ಕೆಯಾಗುವ ಸದಸ್ಯರು ರಾಜ್ಯವನ್ನು ಪ್ರತಿನಿದಿಸುತ್ತಾರೆ.
3.ರಾಜ್ಯ ಸಭೆಯನ್ನು 1954 ರ ವರೆಗೆ ಕೌನ್ಸಿಲ್‌ ಅಫ್‌ ಸ್ಟೇಟ್‌ ಎಂದು ಕರೆಯುತ್ತಿದ್ದರು
4. 1954 ಆಗಸ್ಟ್‌ 23 ರಿಂದ ಹಿಂದಿ ಭಾಷೆಯ ರಾಜ್ಯಸಭಾ ಎಂಬ ಪದ ಬಳಸಲಾಗಿದೆ.
5. 1919 ರ ಕಾಯ್ದೆಯಲ್ಲಿ ಕೌನ್ಸಿಲ್‌ ಆಫ್‌ ಸ್ಟೇಟ್‌ ಎಂಬ ಹೆಸರು ಉಗಮವಾಯಿತು.
6.ರಾಜ್ಯ ಸಬೇಯು ಅಸ್ತಿತ್ವಕ್ಕೆ ಬಂದಿದ್ದು - 1952 ಏಪ್ರೀಲ್‌ 03
7. ರಾಜ್ಯ ಸಭೆಯ ಮೊದಲ ಅಧಿವೇಶನ ನಡೆದಿದ್ದು 1952 ಮೇ 3
8. ಕನಾ೯ಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ:12
9. ಸಂವಿಧಾನದ 4ನೆ ಅನುಸೂಚುಯಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳ ಸ್ಥಾನಮಾನದ ಕುರಿತು ತಿಳಿಸಲಾಗುತ್ತದೆ.
10.ಈ ಸಭೆಗೆ ರಾಷ್ಟ್ರಪತಿಯವರು 80ನೇ ವಿಧಿಯಾಧಾರದ ಮೆಲೆ ಕಲೆ,ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ 12  ಜನ ಸದಸ್ಯರನ್ನು ನಾಮಕರಣ ಮಾಡುತ್ತಾರೆ.
11. ಈ ಸಭೆಯ ಸಭಾಪತಿಗಳಾಗಿ ಅಥವಾ ಅಧ್ಯಕ್ಷರಾಗಿ ಉಪರಾಷ್ಟ್ರಪತಿಯವರು ಕಾಯ೯ನಿವ೯ಹಿಸುತ್ತಾರೆ.
12. ಈ ಸಭೆಯ ಶಾಶ್ವತ ಸದನವಾಗಿದ್ದು ಪ್ರತಿ 2 ವಷ೯ಕ್ಕೊಮ್ಮೆ 1/3 ರಷ್ಟು ಜನ ಸದಸ್ಯರು ನಿವೃತ್ತಿ ಹೊಂದಿರುತ್ತಾರೆ.
ಈ ಸಬೇಗೆ ಆಯ್ಕೆಯಾಗುವ ಸದಸ್ಯರ ಅಹ೯ತೆಗಳು
1.ಭಾರತದ ಪ್ರಜೆಯಾಗಿರಬೇಕು.
2. 30 ವಷ೯ ವಯಸ್ಸಾಗಿರಬೆಕು.
3. ಲಾಭದಾಯಕ ಹುದ್ದೆ ಹೊಂದಿರಬಾರದು.
4. ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.
5.ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕೆಲವು ಅಹ೯ತೆಗಳು ಹೊಂದಿರತಕ್ಕದ್ದು 

 ಅವಧಿ
1.ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಧಿಕಾರ ಅವಧಿ 6 ವಷ೯.

ಪ್ರಮಾಣ ವಚನ
ಈ ಸಭೆಗೆ ಆಯ್ಕೆಯಾಗುವ ಸದಸ್ಯರಿಗೆ ಪ್ರಮಾಣವಚನ ಬೋಧಿಸುವವರು ರಾಯಸಭೆಯ ಸಭಾಪತಿಗಳು

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions