A2 ರಾಜ್ಯಸಭೆ ಮತ್ತು ಲೋಕಸಭೆ 19 Mar

 ರಾಜ್ಯ ಸಭೆ

 

1.ಇದನ್ನು ಹಿರಿಯರ ಸದನ, ಸಂಸತ್ತಿನ ಮೇಲ್ಮನೆ,ಬುದ್ದಿವಂತರ ಸದನ, ಶಾಶ್ವತ ಸದನ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.

2. ಈ ಸಭೆಗೆ ಆಯ್ಕೆಯಾಗುವ ಸದಸ್ಯರು ರಾಜ್ಯವನ್ನು ಪ್ರತಿನಿಧಿಸುತ್ತಾರೆ.

3.ರಾಜ್ಯ ಸಭೆಯನ್ನು 1954 ರ ವರೆಗೆ ಕೌನ್ಸಿಲ್‌ ಅಫ್‌ ಸ್ಟೇಟ್‌ ಎಂದು ಕರೆಯುತ್ತಿದ್ದರು

4. 1954 ಆಗಷ್ಟ 23 ರಿಂದ ಹಿಂದಿ ಭಾಷೆಯ ರಾಜ್ಯಸಭಾ ಎಂಬ ಪದ ಬಳಸಲಾಗಿದೆ.

5. 1919 ರ ಕಾಯ್ದೆಯಲ್ಲಿ ಕೌನ್ಸಿಲ್‌ ಆಫ್‌ ಸ್ಟೇಟ್‌ ಎಂಬ ಹೆಸರು ಉಗಮವಾಯಿತು.

6.ರಾಜ್ಯ ಸಭೆಯು ಅಸ್ತಿತ್ವಕ್ಕೆ ಬಂದಿದ್ದು - 1952 ಏಪ್ರೀಲ್‌ 03

7. ರಾಜ್ಯ ಸಭೆಯ ಮೊದಲ ಅಧಿವೇಶನ ನಡೆದಿದ್ದು 1952 ಮೇ 3

8. ಕನಾ೯ಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ:12

9. ಸಂವಿಧಾನದ 4ನೆ ಅನುಸೂಚಿಯಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳ ಸ್ಥಾನಮಾನದ ಕುರಿತು ತಿಳಿಸಲಾಗುತ್ತದೆ.

10.ಈ ಸಭೆಗೆ ರಾಷ್ಟ್ರಪತಿಯವರು 80ನೇ ವಿಧಿಯಾಧಾರದ ಮೆಲೆ ಕಲೆ,ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ 12  ಜನ ಸದಸ್ಯರನ್ನು ನಾಮಕರಣ ಮಾಡುತ್ತಾರೆ.

11.ಈಸಭೆಯಸಭಾಪತಿಗಳಾಗಿ ಅಥವಾ ಅಧ್ಯಕ್ಷರಾಗಿ  ಉಪರಾಷ್ಟ್ರಪತಿಯವರು

 ಕಾಯ೯ನಿವ೯ಹಿಸುತ್ತಾರೆ.

12. ಈ ಸಭೆಯ ಶಾಶ್ವತ ಸದನವಾಗಿದ್ದು ಪ್ರತಿ 2 ವಷ೯ಕ್ಕೊಮ್ಮೆ 1/3 ರಷ್ಟು ಜನ ಸದಸ್ಯರು ನಿವೃತ್ತಿ ಹೊಂದಿರುತ್ತಾರೆ.


ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಹ೯ತೆಗಳು

1.ಭಾರತದ ಪ್ರಜೆಯಾಗಿರಬೇಕು.

2. 30 ವಷ೯ ವಯಸ್ಸಾಗಿರಬೆಕು.

3. ಲಾಭದಾಯಕ ಹುದ್ದೆ ಹೊಂದಿರಬಾರದು.

4. ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.

5.ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕೆಲವು ಅಹ೯ತೆಗಳು ಹೊಂದಿರತಕ್ಕದ್ದು 


 ಅವಧಿ

1.ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಧಿಕಾರ ಅವಧಿ 6 ವಷ೯.


ಪ್ರಮಾಣ ವಚನ

ಈ ಸಭೆಗೆ ಆಯ್ಕೆಯಾಗುವ ಸದಸ್ಯರಿಗೆ ಪ್ರಮಾಣವಚನ ಬೋಧಿಸುವವರು ರಾಜ್ಯಸಭೆಯ ಸಭಾಪತಿಗಳು

ರಾಜಿನಾಮೆ

ಈ ಸಭೆಗೆ ಆಯ್ಕೆಯಾಗಿರುವ ಸದಸ್ಯರು ತಮ್ಮ ರಾಜೀನಾಮೆಯನ್ನು ರಾಜ್ಯಸಭೆಯ ಸಭಾಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆ ಖಾಲಿ ಮಾಡುತ್ತಾರೆ.

ಲೋಕಸಭೆ

1.ಇದನ್ನು ಕೇಂದ್ರ ಶಾಸಕಾಂಗದ ಕೆಳಮನೆ, ಕಿರಿಯರ ಸದನ, ಜನತಾ ಸದನ ಎನ್ನುವರು.
2.ಇದನ್ನು ಅಮೇರಿಕಾದಲ್ಲಿ ಹೌಸ್‌ ಆಫ್‌ ರೆಪ್ರೆಸೆಂಟೆಟಿವ್ಸ್‌ ಮತ್ತು ಬ್ರಿಟನ್ನಲ್ಲಿ ಹೌಸ್‌ ಅಫ್‌ ಕಾಮನ್ಸ್‌ ಎಂದು ಕರೆಯುವರು.
3. ಲೋಕಸಭಾ ಎಂಬ ಪದವು ಹಿಂದಿ ಭಾಷೆಯ ಪದವಾಗಿದೆ.
4. ಈ ಸಭೆಗೆ ರಾಷ್ಟ್ರಪತಿಯವರು 331 ನೇ ವಿಧಿಯ ಆಧಾರದ ಮೇಲೆ ಇಬ್ಬರು ಆಂಗ್ಲೋ, ಇಂಡಿಯನ್ನರನ್ನು ನೇಮಕ ಮಾಡುತ್ತಾರೆ
5.2020 ರಲ್ಲಿ 104 ನೇ ತಿದ್ದುಪಡಿಯಲ್ಲಿ ಆಂಗ್ಲೋ ಇಂಡಿಯನ್ನರನ್ನು ರದ್ದುಪಡಿಸಲಾಗಿದೆ. (ಪ್ರಸ್ತುತ: 543)
6.ಕನಾ೯ಟಕದ ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ-28

ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಹ೯ತೆಗಳು

1. ಭಾರತದ ಪ್ರಜೆಯಾಗಿರಬೇಕು
2. 25 ವಷ೯ ವಯಸ್ಸಾಗಿರಬೇಕು
3. ಲಾಭದಾಯಕ ಹುದ್ದೆ ಹೊಂದಿರಬಾರದು.
4. ಬುದ್ದಿ ಮಾಂದ್ಯನಾಗಿರಬಾರದು.
5. ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕೆಲವು ಅಹ೯ತೆಗಳು ಹೊಂದಿರತಕ್ಕದ್ದು.

ಅವಧಿ

ಈ ಸಭೆಗೆ ಆಯ್ಕೆಯಾಗುವ ಸದಸ್ಯರ ಅಧಿಕಾರವಧಿ 5 ವಷ೯

ಪ್ರಮಾಣವಚನ

ಈ ಸಭೆಗೆ ಆಯ್ಕೆಯಾಗುವ ಸದಸ್ಯರಿಗೆ ಪ್ರಮಾಣವಚನವನ್ನು ಲೋಕಸಭೆಯ ಸಭಾಪತಿಗಳು ಬೋಧಿಸುತ್ತಾರೆ.

ರಾಜೀನಾಮೆ

ಈ ಸಭೆಗೆ ಆಯ್ಕೆಯಾಗುವ ಸದಸ್ಯರು ತಮ್ಮ ರಾಜೀನಾಮೆಯನ್ನು ಲೋಕಸಭೆಯ ಸಭಾಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆ ಖಾಲಿ ಮಾಡುತ್ತಾರೆ.

ವಿಶೇಷ ಅಂಶಗಳು
1. ಒಂದು ವಷ೯ದಲ್ಲಿ  2 ಬಾರಿ ಅಧಿವೇಶನ ಸೇರಬೇಕು ಅದರ ನಡುವಿನ ಅಂತರ  6 ತಿಂಗಳು ಮಿರುವಂತಿಲ್ಲ
2. ಹಣಕಾಸು ಮಸೂದೆಯನ್ನು ಕಡ್ಡಾಯವಾಗಿ ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು.
3. ಕೋರಂ ಎಂದರೆ ಸದಸ್ಯರ ಹಾಜರಾತಿಯನ್ನು ಅಳೆಯುವ ಮಾನದಂಡ
4. ಕೋರಂ 1/10 ರಷ್ಠಿರಬೇಕು ಇದನ್ನು ಪರೀಕ್ಷಿಸುವವರು ಲೋಕಸಭೆಯ ಸಭಾಪತಿಗಳು.



 





Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions