001 ರಾಜ್ಯ ನಿದೇ೯ನದ ತತ್ವಗಳು 6 Mar


  ಪ್ರಶ್ನೆ 1. ವಿಧಿ 36 ಬಗ್ಗೆ ತಿಳಿಸಿ

ರಾಜ್ಯ ಎಂಬ ಪದದ ಅಥ೯  ತಿಳಿಸುತ್ತದೆ.


  ಪ್ರಶ್ನೆ 2.  ವಿಧಿ 37  ಬಗ್ಗೆ ತಿಳಿಸಿ

 ಈ ತತ್ವಗಳು ಸಕಾ೯ರಗಳಿಗೆ ನಿದೇಶ೯ನ ಮಾಡುತ್ತವೆ. ಅವುಗಳನ್ನು ಪಾಲನೆ ಮಾಡದೆ ಇದ್ದರೆ ಯಾವುದೇ ಕೋಟ್‌೯ ಮೊರೆ ಹೋಗುವಂತಿಲ್ಲ.


  ಪ್ರಶ್ನೆ 3.  ವಿಧಿ 38  ಬಗ್ಗೆ ತಿಳಿಸಿ

 ಅಸಮತೋಲನವನ್ನು ಹೋಗಲಾಡಿಸಲು ದೇಶದಲ್ಲಿರುವ ಸಾಮಾಜಿಕ ಮತ್ತು ಆಥಿ೯ಕ  ಅಸಮತೋಲನವನ್ನು  ಹೋಗಲಾಡಿಸಲು ಸಕಾ೯ರ ಉತ್ತಮ ಕಾಯ೯ಕ್ರಮಗಳನ್ನು ಹಾಕಿಕೊಳ್ಳಬೇಕು.


 ಪ್ರಶ್ನೆ 4. ವಿಧಿ 39 ಬಗ್ಗೆ ತಿಳಿಸಿ

    ರಾಜ್ಯ ಅನುಸರಿಸ ಬೇಕಾದ ತತ್ವಗಳು

 1. ಸಮಾನ ಕೆಲಸಕ್ಕೆ ಸಮಾನ ವೇತನ

 2. ಪ್ರತಿಯೊಬ್ಬ ನಾಗರಿಕನಿಗೂ ಜೀವನಾವಶ್ಯಕವಾಗಿ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವುದು

 3. ಜೀತ ಪದ್ದತಿ ಅಥವಾ ಬಲಾತ್ಕಾರದ ದುಡಿಮೆ ತಡೆಯುವುದು.


 ಪ್ರಶ್ನೆ 5. ವಿಧಿ 39 ಎ ಬಗ್ಗೆ ತಿಳಿಸಿ  

ಬಡವರಿಗೆ ಮತ್ತು ನಿಗ೯ತಿಕರಿಗೆ ಅನುಕೂಲವಾಗಲೆಂದು ಉಚಿತ ಕಾನೂನಿನ ನೆರವನ್ನು ನೀಡಬೇಕೆಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.


 ಪ್ರಶ್ನೆ 6 ವಿಧಿ-40 ಬಗ್ಗೆ ತಿಳಿಸಿ  

ಗ್ರಾಮ ಪಂಚಾಯತಿಯ ರಚನೆಯ ಕುರಿತು ಮಾಹಿತಿ ನಿಡುತ್ತದೆ.

1 ಗ್ರಾಮ ಪಂಚಯತಿಯ ರಚನೆಗೆ ಸಂಬಂಧಿಸಿದ ತಿದ್ದುಪಡಿ - 73

2. ಮುನ್ಸಿಪಾಲಿಟಿ ಅಥವಾ ನಗರಾಡಳಿತಕ್ಕೆ ಸಂಬಂದಿಸಿದ ತಿದ್ದುಪಡಿ -74


ಪ್ರಶ್ನೆ 7. ವಿಧಿ-41 ಬಗ್ಗೆ ತಿಳಿಸಿ  


 ಅಂಗವಿಕಲರಿಗೆ, ವೃದ್ಧರಿಗೆ, ನಿರುದ್ಯೋಗಿಗಳಿಗೆ ಸಹಾಯಧನ ನೀಡಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡಲಾಗುತ್ತದೆ.


ಪ್ರಶ್ನೆ 8. ವಿಧಿ - 42 ಬಗ್ಗೆ ತಿಳಿಸಿ  


.ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತವಾದ ಮತ್ತು ನ್ಯಾಯಾ ಸಂಬಂಧದ ವಾತಾವರಣ ಕಲ್ಪಿಸಬೇಕೆಂದು ತಿಳಿಸುತ್ತದೆ. ಜೊತೆಗೆ ಸ್ರೀಯರಿಗೆ ಹೆರಿಗೆ ಸೌಲಭ್ಯ ಒದಗಿಸಿವಂತೆ ಅವಕಾಶ ಕಲ್ಪಿಸಕೊಡ ಬೇಕೆಂದು ತಿಳಿಸುತ್ತದೆ. 


ಪ್ರಶ್ನೆ 9. ವಿಧಿ -43  ಬಗ್ಗೆ ತಿಳಿಸಿ  

.ಎಲ್ಲಾ ಕಾಮಿ೯ಕರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸುವುದು ಮತ್ತು ಗೌರವಯುತವಾಗಿ ಜೀವನ ನಡೆಸಲು ಜೀವನಾವಶ್ಯಕವಾದ ವೇತನವನ್ನು ನಿಡುವಂತೆ ಮಾಡುವುದು.


ಪ್ರಶ್ನೆ 10. ವಿಧಿ -43 ಎ ಬಗ್ಗೆ ತಿಳಿಸಿ 

ಕೈಗಾರಿಕಾ ವ್ಯವಸ್ಥಾಪನೆಯಲ್ಲಿ ಕಾಮಿ೯ಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ


ಪ್ರಶ್ನೆ 11. ವಿಧಿ-43 ಬಿ ಬಗ್ಗೆ ತಿಳಿಸಿ 

2011 ರಲ್ಲಿ 97 ನೇ ತಿದ್ದುಪಡಿ ಮಾಡುವ ಮೂಲಕ 43 ಬಿ ಹೊಸದಾದ ವಿಧಿ ಮಾಡಿಕೊಂಡು ಈ ವಿಧಿಯಲ್ಲಿ ಸಹಕಾರ ಸಂಘಗಳ ಸ್ಥಾಪನೆಯ ಕುರಿತು ತಿಳಿಸಲಾಗಿದೆ.

 

ಪ್ರಶ್ನೆ 12. ವಿಧಿ-44 ಬಗ್ಗೆ ತಿಳಿಸಿ 

 ಎಲ್ಲಾ ನಾಗರಿಕರಿಗೂ ಮತ್ತು ಎಲ್ಲಾ ಧಮ೯ದವರಿಗೂ ದೇಶಾದ್ಯಂತ ಒಂದೇ ರೀತಿಯ ಸಿವಿಲ್‌ ಸಂಹಿತೆ ಅಂದರೆ ಏಕರೂಪ ನಾಗರಿಕ  ಸಂಹಿತೆಯನ್ನು ಜಾರಿಗೊಳಿಸುವುದರ ಕುರಿತು ತಿಳಿಸಲಾಗಿದೆ.


 ಪ್ರಶ್ನೆ 13. ವಿಧಿ- 45 ಬಗ್ಗೆ ತಿಳಿಸಿ 

 6 ವಷ೯ದ ಒಳಗಿನ ಮಕ್ಕಳನ್ನು  ಪೂವ೯ ಬಾಲ್ಯ ಶಿಕ್ಷಣಕ್ಕೆ ಒಳಪಡಿಸಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡಲಾಗುತ್ತದೆ.


ಪ್ರಶ್ನೆ 14. ವಿಧಿ -- 46  ಬಗ್ಗೆ ತಿಳಿಸಿ 

ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದ ಅನುಸೂಚಿತ ಜಾತಿ ಮತ್ತು ಬುಟಕಟ್ಟು ಜನಾಂಗವರಿಗೆ ವಿಶೇಷ  ಸೌಲಭ್ಯ ನೀಡಬಹುದೆಂದು ಈ ವಿಧಿಯಲ್ಲಿ ತಿಳಿಸಲಾಗುತ್ತಿದೆ.

 

ಪ್ರಶ್ನೆ 15. ವಿಧಿ-47 ಬಗ್ಗೆ ತಿಳಿಸಿ 

ಪೌಷ್ಟಿಕತೆಯ ಮಟ್ಟ ಮತ್ತು ಜನರ ಜೀವನಮಟ್ಟ ಹೆಚ್ಚಿಸುವುದು, ಸಾವ೯ಜನಿಕೆ ಆರೋಗ್ಯ ಸುಧಾರಿಸುವುದು ಜೊತೆಗೆ ಸಾರಾಯಿ ನಿಷೇಧದ ಕುರಿತು ಈ ವಿಧಿಯಲ್ಲಿ ತಿಳಿಸಲಾಗಿದೆ.

 

ಪ್ರಶ್ನೆ 16. ವಿಧಿ -48 ಬಗ್ಗೆ ತಿಳಿಸಿ 

 ಕೃಷಿಯಲ್ಲಿ ಆಧುನೀಕರಣಗೊಳಿಸುವುದು, ಪಶು ಸಂಗೋಪನೆ ಮಾಡುವುದು,ಗೋವು, ಕರು, ಮತ್ತು ಇತರೆ ಹಾಲು ಕೊಡುವ ಮೂಕ ಪ್ರಾಣಿಯ ಹತ್ಯೆಯನ್ನು ಮಾಡುವಂತಿಲ್ಲ ಎಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.


ಪ್ರಶ್ನೆ 17. ವಿಧಿ- 48 ಎ ಬಗ್ಗೆ ತಿಳಿಸಿ 

 ಈ ವಿಧಿಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುತ್ತದೆ.


ಪ್ರಶ್ನೆ 18. ಬಗ್ಗೆ ತಿಳಿಸಿ 

ಐತಿಹಾಸಿಕ ಸ್ಮಾರಕಗಳ, ಐತಿಹಾಸಿಕ ಕಟ್ಟಡಗಳ, ಕಲಾತ್ಮಕ ವಸ್ತುಗಳ ರಕ್ಷಣೆ ಮಾಡಬೇಕೆಂದು ಈ ವಿಧಿಯಲ್ಲಿ ತಿಳಿಲಾಗುತ್ತದೆ.


ಪ್ರಶ್ನೆ 19. ವಿಧಿ -50 ಬಗ್ಗೆ ತಿಳಿಸಿ 

ನ್ಯಾಂಗವನ್ನು ಕಾಯಾ೯ಂಗದಿಂದ  ಬೇಪ೯ಡಿಸುವ ಕುರಿತು ತಿಳಿಸಲಾಗುತ್ತದೆ.


ಪ್ರಶ್ನೆ 20. ವಿಧಿ 51 ಬಗ್ಗೆ ತಿಳಿಸಿ 

 .ಅಂತರಾಷ್ಟ್ರಿಯ ಒಪ್ಪಂದಗಳಿಗೆ ಗೌರವ ನೀಡುವುದು.




















 

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions