Lecture 13 ಕನ್ನಡ ಮಾಧ್ಯಮ ಅಶೋಕನ ಶಾಸನಗಳ
ಪ್ರಶ್ನೆ 1. ಅಶೋಕನ ಶಾಸನಗಳ ಬಗ್ಗೆ ತಿಳಿಸಿ
1. ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹ ನೆಂದು ಕರೆಯುತ್ತಾರೆ.
2. ಅಶೋಕನ ಶಾಸನಗಳು ಬ್ರಾಹ್ಮಿ, ಖರೋಷ್ಟಿ, ಗ್ರೀಕ್, ಅರಾಮಿಕ ಮತ್ತು ದೇವನಾಗಿರಿ ಲಿಪಿಯಲ್ಲಿವೆ.
3. ಅಶೊಕನ ಶಾಸನಗಳು ಪ್ರಾಕೃತ, ಪಾಳಿ ಬಾಷೆಯಲ್ಲಿ ಕಂಡು ಬಂದಿವೆ.
4. ಅಶೋಕನ ಶಾಸನಗಳು ಹೆಚ್ಚಾಗಿ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡು ಬಂದಿವೆ.
5. ಅಶೊಕನ ಶಾಸನವನ್ನು ಮೊಟ್ಟಮೊದಲ ಬಾರಿಗೆ ಅಧ್ಯ ಯನ ಮಾಡಿದವರು - ಜೇಮ್ಸ್ ಪ್ರಿನ್ಸೆಪ್(1837 ದೆಹಲ್ಲಿರುವ ತೋಂಪ್ರಾಶಾಸನ)
6.ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡುಬಂದ ಶಾಸನ - ಬ್ರಹ್ಮ ಗಿರಿಶಾಸನ
(ಶಿಲ್ಪಿ -ಚಪಡ)
7. ಅಶೋಕನ ಹೆಸರು ಕಂಡು ಬಂದ ಶಾಸನ- ಮಸ್ಕಿ ಶಾಸನ ಮತ್ತು ಗುಜರ್ರಾ ಶಾಸನ
8 .ಮಸ್ಕಿ ಶಾಸನವನ್ನು 1915 ರಲ್ಲಿ ಸಿ.ಬಿಡ್ ಎಂಬುವವರು ಸಂಶೋಧನೆ ಮಾಡಿದರು.
9 .ಮಸ್ಕಿ ಶಾಸನದಲ್ಲಿ ಅಶೋಕನ ಹೆಸರು - ದೇನಾಂಪ್ರಿಯ ಪ್ರಿಯದಶಿ೯ನಿ ಅಶೋಕ ಎಂದು ಓದಿದವರು
10. ಅಶೋಕ ಬೌದ್ಧ ಧಮ೯ ಸ್ವೀಕರಿಸಿದರ ಬಗ್ಗೆ ತಿಳಿಸುವ ಶಾಸನ ಬಬ್ರು ಶಾಸನ (ಕಲ್ಕತ್ತಾ)
11 ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ 13ನೇ ಬಂಡೆಗಲ್ಲು ಶಾಸನ.
12 ಅಶೊಕನ ಕಂದಾಯ ವ್ಯವಸ್ಥೆಯ ಬಗ್ಗೆ ತಿಳಿಸುವ ಏಕೈಕ ಶಾಸನ - ರುಮಿಂಡೈ ಶಾಸನ (ನೇಪಾಳ)
13 . ಅಶೋಕನ ಖರೋಷ್ಠಿ ಲಿಪಿ ಹೊಂದಿರುವ ಶಾಸನಗಳು -ಶಬಾಜಗಿರಿ ಮತ್ತು ಮನ್ನೀರ್ (ಪಾಕಿಸ್ತಾನ)
14 . ಅಶೋಕನ ಗ್ರೀಕ್ & ಅರಾಮಿಕ್ ಲಿಪಿಯಾಲ್ಲಿರುವ ಶಾಸನ ಕಂದಹಾರ ಶಾಸನ ಇದರಲ್ಲಿ ಅಶೋಕನನ್ನು ಸಮಸ್ತ ಪೃಥ್ವಿ ಪತಿ ಎಂದು ಉಲ್ಲೇಖಿಸಲಾಗಿದೆ. ( ಅಪಘಾನಿಸ್ತಾನ)
15. ಕನಾ೯ಟಕದಲ್ಲಿ ದೊರೆತ ಅಶೋಕನ ಶಾಸನಗಳು 14
1. ಚಿತ್ರದುಗ೯ ಜಿಲ್ಲೆಯ ಬ್ರಹ್ಮಗಿರಿ
2. ಸಿದ್ದಾಪುರ ಮತ್ತು ಜಟ್ಟಿಂಗರಾಮೇಶ್ವರ
3. ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡ
4. ರಾಯಚೂರು ಜಿಲ್ಲೆಯ ಮಸ್ಕಿ
5. ಬಳ್ಳಾರಿ ಜಿಲ್ಲೆಯ ನಿಟ್ಟೂರು & ಉದಯಗೋಳ
6.ಕಲಬುರಗಿ ಜಿಲ್ಲೆಯ ಸನ್ನತಿ
16.ಕನಾ೯ಟಕದಲ್ಲಿ ದೊರೆತ ಅಶೋಕನ ಮೊಟ್ಟ್ಟ ಮೊದಲ ಶಾಸನ ಚಿತ್ರದುಗ೯ ಜಿಲ್ಲೆಯ ಬ್ರಹ್ಮಗಿರಿ ಶಾಸನ
17. ಕನಾ೯ಟಕದಲ್ಲಿರುವ ಅಶೋಕನ ದೊಡ್ಡ ಶಾಸನ ಸನ್ನತಿ ಶಾಸನ.