Lecture 17 ಕನ್ನಡ ಮಾಧ್ಯಮ ಭಾರತದ ಮೇಲೆ ವಿದೇಶಿಯರ ದಾಳಿಗಳು
ಭಾರತದ ಮೇಲೆ ವಿದೇಶಿಯರ ದಾಳಿಗಳು
ಪ್ರಶ್ನೆ 1. ಬ್ಯಾಕ್ಟ್ರೀಯನ್ ಗ್ರೀಕರು ಬಗ್ಗೆ ತಿಳಿಸಿ
1. ಇವರನ್ನು ಇಂಡೋ - ಗ್ರೀಕರು ಅಥವಾ ಯವನರೆಂದು ಕರೆಯುತ್ತಾರೆ.
2. ಭಾರತಕ್ಕೆ ಬಂದ ಮೊಟ್ಟ ಮೊದಲ ಬ್ಯಾಕ್ಟ್ರೀಯನ್ ದೊರೆ 1ನೇ ಡೆಮಿಟ್ರಿಯೊಸ್ ಈತ ಭಾರತ,ಅಪಘಾನಿಸ್ತಾನ, ತಕ್ಷಶಿಲೆ, ಸಿಂಧ್ ಪೇಶಾವರ್ ಪಂಜಾಬ ಪ್ರಾಂತ್ಯಗಳ ಮೆಲೆ ದಾಳಿ ಮಾಡಿದನು.
3. ಭಾರತಕ್ಕೆ ಬಂದ ಬ್ಯಾಕ್ಟ್ರೀಯನ್ ಪ್ರಸಿದ್ಧ ದೊರೆ ಮೆನಾಂಡರ್ ಈತ ಭಾರತದ ಅಪಘಾನಿಸ್ತಾನ ,ತಕ್ಷಶಿಲೆ ಸಿಂಧ್ ಪೇಶಾವರ್,ಪಂಜಾಬ,ಕಾಥೆವಾಡ ಮತ್ತು ಮಥುರಾಗಳ ಮೇಲೆ ದಾಳಿ ಮಾಡಿದ್ದನು.
4. ಮೆನಾಂಡರ್ ಮತ್ತು ಭಾರತದ ಬೌದ್ಧ ಸನ್ಯಾಸಿ ನಾಗಸೇನ್ ಮಧ್ಯ ನಡೆದ ಒಂದು ಚಚೆ೯ಯ ವಿಷಯವೇ ಮಿಲಿಂದ ಪನ್ಹಾ ಈ ಮಿಲಿಂದ ಪನ್ಹಾ ಎಂಬ ಗ್ರಂಥವನ್ನು ಬೌದ್ಧಧಮ೯ದ 2ನೇ ಪವಿತ್ರ ಗ್ರಂಥವೆಂದು ಕರೆಯುತ್ತಾರೆ.
5. ಬ್ಯಾಕ್ಟ್ರೀಯನ್‌ರ ಕೊನೆಯ ದೊರೆ ಹಮೆ೯ಯಸ್
ಪ್ರಶ್ನೆ 2. ಪಾಥಿ೯ಯನ್ನರು ಬಗ್ಗೆ ತಿಳಿಸಿ
ಭಾರತದ ಮೇಲೆ ದಾಳಿ ಮಾಡಿದ ಪಾಥಿ೯ಯನ್ನರ ಮೊಟ್ಟಮೊದಲ ದೊರೆ ಗೊಂಡೋ ಪೆನೆ೯ಸ್ ಈತನ ಕಾಲದಲ್ಲಿ ಭಾರತಕ್ಕೆ ಬಂದ ಮೊಟ್ಟ ಮೊದಲ ಕ್ರಿಶ್ಚಿಯನ್ ವ್ಯಕ್ತಿ ಸೆಂಟ್ ಥಾಮಸ್
ಪ್ರಶ್ನೆ 3. ಶಕರು ಬಗ್ಗೆ ತಿಳಿಸಿ
1.ಇವರು ಮೂಲತ; ಮಧ್ಯ ಏಷ್ಯಾದ ಯೂಚಿ ಬುಡಕಟ್ಟುನಿಂದ ಹೊರದೂಡಲ್ಪಟ್ಟ ಸಾಯ್ ಜನಾಂಗ. ಸ್ಥಾಪಕ : ಮೌಯೆಸ್
2.ಈ ಮೌಯೆಸ್ ಭಾರತದ ಒಳರಾಜ್ಯಗಳವರೆಗೂ ಸಾಮ್ರಾಜ್ಯ ವಿಸ್ತರಿಸಿ ರಾಜಾಧಿರಾಜ ಎಂಬ ಬಿರುದು ಪಡೆದನು.
3. ಶಕರ ಪ್ರಸಿದ್ದ ಅರಸರು ನಹಪಾಣ ಮತ್ತು ಒಂದನೇ ರುದ್ರಧಾಮನ್
4. ಒಂದನೇ ರುದ್ರಧಾಮನ ಭಾರತ ದೇಶದ ಮೊಟ್ಟ ಮೊದಲ ಶಾಸನವಾದ ಜುನಾಗಡ ಅಥವಾ ಗಿನಾ೯ರ್ ಶಾಸನವನ್ನು ಹೊರಡಿಸಿದನು ( ಸಂಸ್ಕೃತ) ಈ ಶಾಸನದಲ್ಲಿ ರುದ್ರಧಾಮನ ಮಂತ್ರಿ ಸುವಿಶಾಖನು ಸುದಶ೯ನ ಕೆರೆಯನ್ನು ಪುನರ್ ನಿಮಿ೯ಸಿದರ ಬಗ್ಗೆ ಉಲ್ಲೇಖಗಳಿವೆ.
5. ಶಕರ ಕೊನೆಯ ಅರಸ - 3ನೇ ರುದ್ರಸಿಂಹ.
ಪ್ರಶ್ನೆ 4. ಕುಶಾಣರು ಬಗ್ಗೆ ತಿಳಿಸಿ
ಮೌಯ೯ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅತ್ಯಂತ ವಿಶಾಲವಾದ ಸಾಮ್ರಾಜ್ಯ ವಿಸ್ತರಿಸಿದ ಕೀತಿ೯ ಕುಶಾಣರದು, ಇವರು ಮೂಲತ: ಚೀನಾದ ಯೂಚಿ- ಬುಡಕಟ್ಟಿಗೆ ಸೇರಿದ ಜನಾಂಗ ಆರಂಭದಲ್ಲಿ ಯೂ-ಚಿಗಳಲ್ಲಿ ಹುಪ್ಸಿ,ತುಪ್ಪು, ಕುಲಿಶಾಂಗ,ಹಿಲಿಯಾನ್ ಮತ್ತು ಕ್ರಿಷಾಂಗ್ ಎಂಬ 5 ಪಂಗಡಗಳಿದ್ದವು. ಕ್ರಿಷಾಂಗ್ ಪದವೇ ಪ್ರಸಿದ್ದಿಯಾಗಿ ಕುಶಾಣ ಎಂಬ ಹೆಸರು ಪಡೆಯಿತು. ಕ್ರಿಷಾಂಗ ಪಂಗಡದ ನಾಯಕ ಒಂದನೇ ಕುಜಲ ಕಡಫಿಸಸ್ 5 ಪಂಡಗಳನ್ನು ಒಂದುಗೂಡಿಸಿ ಕುಶಾಣ ಮನೆತನದ ಸ್ಥಾಪಕನಾದನು.
ಪ್ರಶ್ನೆ 5. 1ನೇ ಕುಜಲ ಕಢಪಿಸಸ್ ಕ್ರಿ.ಶ. 15 - 65 ಬಗ್ಗೆ ತಿಳಿಸಿ
1. ಈತ ಕುಶಾಣ ಮನೆತನದ ಸ್ಥಾಪಕ
2. ಈತ ಐದು ಪಂಗಡಗಳನ್ನು ಒಂದುಗೂಡಿಸಿದ್ದಕ್ಕಾಗಿ ವಾಂಗ ಎಂಬ ಬಿರುದು ಪಡೆದನು
3.ಇಂಡೋ ಗ್ರೀಕರು ಪಾಥಿ೯ಯನ್ನರು ಮತ್ತು ಶಕರನ್ನು ಸೋಲಿಸಿ ಅಪಘಾನಿಸ್ತಾನ, ತಕ್ಷಶಿಲೆ.ಪೇಶಾವರ, ಸಿಂಧ್ ಮತ್ತು ಪಂಜಾಬ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು.
4.ಪೇಶಾವರ ಅಥವಾ ಪುರುಷಪುರವನ್ನು ತನ್ನರಾಜಧಾನಿಯಾಗಿ ಮಾಡಿಕೊಂಡನು
5. ಈತನ ಸಾಮ್ರಾಜ್ಯವು ಪಷಿ೯ಯಾದಿಂದ ಸಿಂಧೂ ನದಿಯವರೆಗೆ ವಿಸ್ತರಿಸಿತ್ತು.
6. ಚೀನಾ ಮತ್ತು ರೋಮನ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಪಕ೯ ಹೊಂದಿದ್ದನು.
7. ಬೌದ್ಧ ಮತಾವಲಂಬಿಯಾಗಿದ್ದರು ರೋಮನ್ ಮಾದರಿಯಲ್ಲಿ ದಿನಾರ್ ಎಂಬ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು.
8. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದನು.
9. ಈತನಿಗೆ ರಾಜಾದಿರಾಜ ಧಮ೯ಮಹಾರಾಜ ಎಂಬ ಬಿರುದುಗಳಿದ್ದವು.
ಪ್ರಶ್ನೆ 6. 2ನೇ ಕುಜಲ್ ಕಡಫಿಸಸ್ ಕ್ರಿ.ಶ. 65-78 ಬಗ್ಗೆ ತಿಳಿಸಿ
1ನೇ ಕುಜಲ ಕಡಫಿಸಸನ್ ಮಗನಾಗಿದ್ದಾನೆ.
2. ಭಾರದ ಭೂ ಪ್ರದೇಶಗಳನ್ನು ಗೆದ್ದ ಮೊದಲ ಕುಶಾಣರ ಅರಸ.
3. ತಂದೆಗಿಂತಲೂ ವಿಶಾಲವಾದ ಸಾಮ್ರಾಜ್ಯ ಹೊಂದಿದ್ದನು.
4. ಶಿವನ ಆರಾಧಕನಾಗಿದ್ದನು.
5. ಚೀನಾದ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು.
6. ಭಾರತಕ್ಕೆ ಶುದ್ದ ಬಂಗಾರದ ನಾಣ್ಯಗಳನ್ನು ಪರಿಚಯಿಸಿದ ಮೊಟ್ಟ ಮೊದಲ ಅರಸ.
7. ಈತನಿಗೆ ಸಮಗ್ರ ಪ್ರಪಂಚದ ಒಡೆಯ ತ್ರೈಲೋಕೇಶ್ವರ, ರಾಜರ ರಾಜ ಮತ್ತು ಮಹೇಶ್ವರ ಎಂಬ ಬಿರುದುಗಳಿದ್ದವು.