Lecture 24 ಕನ್ನಡ ಮಾಧ್ಯಮ 1ನೇ ಮತ್ತು 2ನೇ ನರಸಿಂಹ ವಮ೯

  ಪಲ್ಲವರು 

ಪ್ರಶ್ನೆ 1.  1ನೇ ನರಸಿಂಹ ವಮ೯ ಕ್ರಿ.ಶ 630 - 668 ಬಗ್ಗೆ ತಿಳಿಸಿ


1. 1 ನೇ ಮಹೇಂದ್ರ ವಮ೯ನ ಮಗನಾಗಿದ್ದನು.

2. ಕ್ರಿ.ಶ. 641 ರಲ್ಲಿ ಈತನ ಆಸ್ಥಾನಕ್ಕೆ ಹುಯೆನ್‌ ತ್ಸಾಂಗ್‌ ಭೇಟಿ ನೀಡಿದ್ದನು.

3.ಈತ ತನ್ನ ಆಸ್ಥಾನದಲ್ಲಿ 10,000 ಬೌದ್ದ ಬಿಕ್ಕುಗಳಿಗೆ ಆಶ್ರಯ ನೀಡಿದ್ದನು.

4. ಈತನ ಪ್ರಸಿದ್ದ ದಂಡನಾಯಕ ಪರಂಜ್ಯೋತಿಯ ಸಹಾಯದಿಂದ ಕ್ರಿ.ಶ. 642 ರಲ್ಲಿ ಮಣಿಮಂಗಲಂ ಎಂಬ ಸಹಾಯದಿಂದ ಕ್ರಿ.ಶ 642 ರಲ್ಲಿ ಮಣಿ ಮಂಗಲಂ ಎಂಬ ಕದನದಲ್ಲಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ಕೊಲೆ ಮಾಡಿ ಬಾದಾಮಿಯನ್ನು ವಶಪಡಿಸಿಕೊಂಡು ವಾತಾಪಿ ಕೊಂಡದೇವ ಎಂಬ ಬಿರುದನ್ನು ಧರಿಸಿದನು.

ಈ ವಿಜಯದ ನೆನಪಿಗಾಗಿ ಬಾದಾಮಿಯಲ್ಲಿ ಒಂದು ವಿಜಯ ಸ್ಥಂಭವನ್ನು ಮತ್ತು ಮಲ್ಲಿಕಾಜು೯ನ ದೇವಾಲದ ಮೇಲೆ ಶಾಸನವನ್ನು ಕೆತ್ತಿಸಿದನು.

5. ಈತನ ಕಾಲದಲ್ಲಿ ಶ್ರೀಲಂಕಾದ ಅರಸ ಮಾನವ ವಮ೯ನು ತನ್ನ ಶತ್ರುಗಳಿಂದ ಸಿಂಹಾಸನ ಕಳೆದುಕೊಂಡು ಪಲ್ಲವರ ಸಹಾಯ ಕೇಳಿದನು.ಆಗ 1ನೇ ನರಸಿಂಹವಮ೯

ಮಹಾ ಬಲಿಪುರಂನಿಂದ ತನ್ನ ಪ್ರಬಲವಾದ ನೌಕಾಯಾನದ ಮೂಲಕ ಶ್ರೀಲಂಕಾದ ಮೇಲೆ ದಾಳಿ ಮಾಡಿ ಮಾನವವಮ೯ನ ಶತ್ರುಗಳನ್ನು ನಾಶಮಾಡಿ ಅವನಿಗೆ ಸಿಂಹಾಸನ ದೊರಕಿಸಿ ಕೊಟ್ಟನು.

6. ಈತನಿಗೆ ಮಹಾಬಲ್ಲ ಎಂಬ ಬಿರುದಿತ್ತು

7. ಈತ ಮಾಮಲ್ಲಪುರ ಎಂಬ ನಗರವನ್ನು ನಿಮಿ೯ಸಿದ್ದನು. ಅದೇ ಇಂದಿನ ಮಹಾಬಲಿಪುರಂ ( ತಮಿಳುನಾಡು ಕಾಂಚಿಪುರಂ)

8. ಮಹಾಬಲಿಪುರಂನಲ್ಲಿ 10 ಗುಹೆಗಳು ಮತ್ತು ಒಂದೇ ಶಿಲೆಯನ್ನು ಕೊರೆದು 10 ಮಂಟಪಗಳು,20 ಗುಹೆಗಳು ಮತ್ತು ಒಂದೇ ಶಿಲೆಯಲ್ಲಿಯೇ 8 ಜಗತ್‌ ಪ್ರಸಿದ್ದವಾದ ಕಲ್ಲಿನ ರಥಗಳನ್ನು ನಿಮಿ೯ಸಿದನು.

9. ಇವರ ನಂತರ 2ನೇ ಮಹೇಂದ್ರ ವಮ೯ ಮತ್ತು 1ನೇ ಪರಮೇಶ್ವರ ವಮ೯ರು ಆಡಳಿತ ಮಾಡಿದನು.


 ಪ್ರಶ್ನೆ 2.  2ನೇ ನರಸಿಂಹವಮ೯ ಕ್ರಿ.ಶ 700- 728 ಬಗ್ಗೆ ತಿಳಿಸಿ


1.ರಾಜಸಿಂಹೇಶ್ವರ ಎಂಬ ಬಿರುದು ಹೊಂದಿದ ಈತನ ರಾಜ್ಯ ಶಾಂತಿಯುತವಾಗಿತ್ತು.

2. ಈತ ಚೀನಾ ಮತ್ತು ರೋಮ ಸಾಮ್ರಾಜ್ಯಗಳೊಂದಿಗೆ ವ್ಯಾಪಾರ ಸಂಪಕ೯ ಹೊಂದಿದ್ದನು.

3. ಕಲಾ ಪೋಷಕನಾದ ಈತ ಕಂಚಿಯಲ್ಲಿ ಕೈಲಾಸನಾಥ ದೇವಾಲಯ, ಐರಾವತೇಶ್ವರ ದೇವಾಲಯ, ತಾಳಗಿರೇಶ್ವರ ದೇವಾಲಯ ಮತ್ತು ಮಹಾಬಲಿಪುರಂನ ಕಡಲತೀರದ ದೇವಾಲಯಗಳನ್ನು ನಿಮಿ೯ಸಿದನು.

4. ಇವನ ನಂತರ 2ನೇ ಪರಮೇಶ್ವರ ವಮ೯ನು ಅಡಳಿತ ಮಾಡಿದನು.


 ಪ್ರಶ್ನೆ 3.    ನಂದಿವಮ೯ ಕ್ರ೯ಶ. 730- 795 ಬಗ್ಗೆ ತಿಳಿಸಿ


1. ಈತ ಪಲ್ಲವ ಮನೆತನವನ್ನು ಅತ್ಯಂತ ದೀಘ೯ಕಾಲದವರೆಗೆ ಆಳಿದ ಅರಸ.

2. ಈತ ಕಂಚಿಯಲ್ಲಿ ವೈಕುಂಠ ಪೆರಮಾಳ, ಮುಕ್ತೇಶ್ವರ ವರದರಾಜ ಮತ್ತು ಕೋರಂನ ಕೇಶವ ದೇವಾಲಯಗಳನ್ನು ನಿಮಿ೯ಸಿದನು.

3. ಪಲ್ಲವರ ಕೊನೆಯ ಅರಸ ಅಪರಾಜಿತವಮ೯


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions