Lecture 25 ಕನ್ನಡ ಮಾಧ್ಯಮ ಪಲ್ಲವರ ಆಡಳಿತ

 ಪ್ರಶ್ನೆ 1.  ಪಲ್ಲವರ ಆಡಳಿತ ಬಗ್ಗೆ ತಿಳಿಸಿ


1. ಅರಸ ಆಡಳಿತದ ಕೇಂದ್ರಬಿಂದು ಆಗಿದ್ದನು

2. ಅಂತಿಮ ನ್ಯಾಯಾ ನೀಡುವ ನ್ಯಾಯಾಧೀಶನಾಗಿದ್ದನು

3. ಅರಸನಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿತ್ತು

4. ಮಂತ್ರಿಗಳನ್ನು ಅಮೈಚಾರಿಗಳೆಂದು ಕರೆಯುತ್ತಿದ್ದರು.

5. ಪಲ್ಲವರು ಆಡಳಿತದ ಅನುಕೂಲಕ್ಕಾಗಿ
ರಾಜ್ಯವನ್ನು ಪ್ರಾಂತ್ಯ - ಮಂಡಲ
ನಾಡು - ಜಿಲ್ಲೆ
ಒಳನಾಡು - ತಾಲೂಕು
ಗ್ರಾಮ - ಗ್ರಾಮ(ಹಳ್ಳಿ)
ಎಂದುವಿಭಾಗಿಸಿದ್ದರು.

6. ಗ್ರಾಮಗಳಲ್ಲಿ ಗ್ರಾಮ ಸಭೆಗಳು ಅಸ್ತಿತ್ವದಲ್ಲಿದ್ದವು.

7. ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು

8. ಪಲ್ಲವರು ನೌಕಾಯಾನದಲ್ಲಿ ಪ್ರಬಲರಾಗಿದ್ದರು.

9. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನೌಕಾಯಾನ ಬಳಸಿದವರು ಪಲ್ಲವರು

10. ಪಲ್ಲವರ ಸೈನ್ಯ ಅಶ್ವದಳ, ಗಜದಳ, ರಥದಳ, ನೌಕಾದಳಗಳಿಂದ ಕೂಡಿತ್ತು.

11. ಪಲ್ಲವರು ಬ್ರಾಹ್ಮಣರಿಗೆ ಭೂಮಿಯನ್ನು ದಾನವಾಗಿ ನೀಡುತ್ತಿದ್ದರು.

12.ಪಲ್ಲವರು ಕೃಷಿ ಭೂಮಿಯನ್ನು ರಾಜರ ಭೂಮಿ, ಬ್ರಹ್ಮದ್ಯೇಯ ಭೂಮಿಯನ್ನು ಅಗ್ರಹಾರ ಭೂಮಿಗಳೆಂದು ವಿಭಾಗಿಸಿದ್ದರು.

13. ಮೇಲಿನ ಎರಡು ಭೂಮಿಗಳನ್ನು ಬ್ರಾಹ್ಮಣರಿಗೆ ದಾನವಾಗಿ ನೀಡುತ್ತಿದ್ದರು.


ಪ್ರಶ್ನೆ 2.   ಸಾಹಿತ್ಯ ಬಗ್ಗೆ ತಿಳಿಸಿ

ದಂಡಿ - ದಶಕುಮಾರ ಚರಿತೆ

ಭಾರವಿ - ಕಿರಾತಾಜು೯ನೀಯ ವಿಜಯ

ಭವಭೂತಿ - ಉತ್ತರ ರಾಮ ಚರಿತೆ

1ನೇ ಮಹೇಂದ್ರವಮ೯ - ಮತ್ತು ವಿಲಾಸ ಪ್ರಹಸನ


  ಪ್ರಶ್ನೆ 3.   ಕಲೆ ಮತ್ತು ವಾಸ್ತು ಶಿಲ್ಪ ಬಗ್ಗೆ ತಿಳಿಸಿ


1.ಪಲ್ಲವರು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಶೈಲಿಯ ದೇವಾಲಯಗಳನ್ನು ನಿಮಿ೯ಸಿದರು.
ಉದಾ: ಕಂಚಿ

2.ಕಂಚಿಯನ್ನು ಪಲ್ಲವರ ವಾಸ್ತು ಶಿಲ್ಪದ ತವರು ಮನೆ ಎಂದು ಕರೆಯುತ್ತಾರೆ

3.ಇಲ್ಲಿ 1018 ದೇವಾಲಯಗಳನ್ನು ನಿಮಿ೯ಸಲಾಗಿದೆ.

1) ಕೈಲಾಸನಾಥ ದೇವಾಲಯ
2) ವೈಕುಂಠ ಪೇರುಮಾಳ ದೇವಾಲಯ
3)ಮುಕ್ತೇಶ್ವರ ದೇವಾಲಯ
4) ಕಾಮಾಕ್ಷಿ ದೇವಾಲಯ
5) ವರದರಾಜೇಶ್ವರ ದೇವಾಲಯ
6) ತಾಳಗಿರೇಶ್ವರ ದೇವಾಲಯ
7) ಐರಾವತೇಶ್ವರ ದೇವಾಲಯ

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions