Lecture 26 ಕನ್ನಡ ಮಾಧ್ಯಮ ಚೋಳರು

  ಚೋಳರು  

  ಪ್ರಶ್ನೆ 1.   ವಿಜಯಾಲ ಚೋಳ ಕ್ರಿ.ಶ. 850-871  ಬಗ್ಗೆ ತಿಳಿಸಿ


1. ಈತ ಮೂಲತ: ಪಲ್ಲವರ ಸಾಮಂತನಾಗಿದ್ದನು.

2. ಪಲ್ಲವರು ಮತ್ತು ಪಾಂಡ್ಯರು ಯುದ್ದದಲ್ಲಿ ತೊಡಗಿದಾಗ ಈತ ಪಲ್ಲವರಿಂದ ತಂಜಾವೂರನ್ನು ವಶಪಡಿಸಿಕೊಂಡು ಅದನ್ನುತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡನು

3. ಈತನಿಗೆ ವರಕೇಸರಿ ಮತ್ತು ತಂಜೈಕೊಂಡಚೋಳ ಎಂಬ ಬಿರುದುಗಳಿದ್ದವು.


   ಪ್ರಶ್ನೆ 2.  1ನೇ ಆದಿತ್ಯ ಚೋಳ ಕ್ರಿ.ಶ 871 -907 ಬಗ್ಗೆ ತಿಳಿಸಿ

1. ಈತ ವಿಜಯಾಲ ಚೋಳನ ಮಗನಾಗಿದ್ದಾನೆ.

2. ಈತ ಪಲ್ಲವರ ವಿರುದ್ದ ಸ್ವತಂತ್ರ ಘೋಷಸಿಕೊಂಡ ಮೊದಲ ಚೋಳರ ಅರಸ 

3. ಈತ ಕ್ರಿ.ಶ 893 ರಲ್ಲಿ ಪಲ್ಲವರ ಕೊನೆಯ ಅರಸ ಅಪರಾಜಿತ ವಮ೯ನನ್ನು ಸಂಪೂಣ೯ವಾಗಿ ಸೋಲಿಸಿ ಪಲ್ಲವರಪ್ರದೇಶಗಳನ್ನು ವಶಪಡಿಸಿಕೊಂಡನು.

4. ಈತನಿಗೆ ಕೋದಂಡರಾಮ ಎಂಬ ಬಿರುದಿತ್ತು.


    ಪ್ರಶ್ನೆ 3.  1ನೇ ಪರಾಂತಕ ಕ್ರಿ.ಶ 907- 955 ಬಗ್ಗೆ ತಿಳಿಸಿ


1. ಈತ  ಒಂದನೇ ಆದಿತ್ಯಚೋಳನ ಮಗನಾಗಿದ್ದಾನೆ. ಇವನನ್ನು ದಕ್ಷಿಣ ಭಾರತದಲ್ಲಿ ಚೋಳನ ನಿಜವಾದ ಸ್ಥಾಪಕನೆಂದು ಕರೆಯುತ್ತಾರೆ.

2. ಈತ ಪಾಂಡ್ಯರ ಮೇಲೆ ದಾಳಿ ಮಾಡಿ ಅರಸ ರಾಜ ಸಿಂಹನನ್ನು ಶ್ರೀಲಂಕಾಕ್ಕೆ ಓಡಿ ಹೋಗುವಂತೆ ಮಾಡಿ ಮಧುರೈಯನ್ನು ವಶಪಡಿಸಿಕೊಂಡು ಮಧುರೈಕೊಂಡ
 ಎಂಬ ಬಿರುದನ್ನು ಧರಿಸಿಕೊಂಡನು.

3. ಕ್ರಿ.ಶ 918 ರಲ್ಲಿ ರಾಜಾಸಿಂಹನು ಶ್ರೀಲಂಕಾದ ಸಂಯುಕ್ತ ಸೇನೆಯೊಂದಿಗೆ ಪರಾಂತಕನ ಮೇಲೆ ದಾಳಿ ಮಾಡಿ ವೆಲ್ಲೂರು ಕದನದಲ್ಲಿ ಸೋಲಿಸಿದನು.

4. ರಾಷ್ಟ್ರಕೂಟರ ದೊರೆ 3ನೇ ಕೃಷ್ಣ ಮತ್ತು ಗಂಗರ  ದೊರೆ 2 ನೇ ಭೂತುಗ ಚೋಳರ ಮೇಲೆ ದಾಳಿ ಮಾಡಿದರು.

5. ಕ್ರಿ.ಶ 949 ರಲ್ಲಿ ಪರಾಂತಕ ಮತ್ತು ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣ ಮಧ್ಯ ತೆಕ್ಕೋಳಂ ಎಂಬ ಕದನ ನಡೆಯಿತು. ಇದರಲ್ಲಿ ಪರಾಂತಕ ಸೋತನು. ಪರಾಂತಕನ ಮಗನಾದ ರಾಜಾಧಿತ್ಯನ ಕೊಲೆಯಾಯಿತು.

6. ಕ್ರಿ.ಶ 921 ರಲ್ಲಿ ಚೋಳರ ಸ್ಥಾನಿಕ ಆಡಳಿತದ ಬಗ್ಗೆ (ಗ್ರಾಮಾಡಳಿತ) ತಿಳಿಸುವ ಉತ್ತರ ಮೇರೂರು ಶಾಸನ ಹೊರಡಿಸಿದನು.

7. ಈ ಚಿದಂಬರಂ ದೇವಾಲಯದ ಗೋಡೆಗೆ ಚಿನ್ನದ ಲೇಪನವನ್ನು ಮತ್ತು  ಚಿನ್ನದ ಕಳಸವನ್ನು ಮಾಡಿಸಿದನು. ಇವನ ನಂತರ  
1. ಗಂಗರಾದಿತ್ಯ ಅರಿಚೋಳ
2. 2ನೇ ಆದಿತ್ಯ ಚೋಳ
3. ಉತ್ತಮ ಚೋಳರು ಅಡಳಿತ ಮಾಡಿದರು.

ಪ್ರಶ್ನೆ 4.   ಒಂದನೇ ರಾಜರಾಜ ಚೋಳ ಕ್ರಿ.ಶ 985 - 1014  ಬಗ್ಗೆ ತಿಳಿಸಿ

1. 2ನೇ ಸುಂದರ ಚೋಳ ಮತ್ತು ದಾನವನ್‌ ಮಹಾದೇವಿಯ ಮಗನಾಗಿದ್ದಾನೆ.

2 ಈತ ಚೋಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ದ ದೊರೆ.

3. ಈತ 15 ಜನ ರಾಣಿಯರಿದ್ದರು. ಇತನ ಪಟ್ಟದ ರಾಣಿ ದಂತಿಶಕ್ತಿ ಎಲಾಂಗಿ

4. ಈತ ಶ್ರೀಲಂಕಾದ ರಾಜದಾನಿ ಅನುರಾಧಾಪುರದ ಮೇಲೆ ದಾಳಿ ಮಾಡಿ ಅರಸ 5ನೇ ಸಾಮಂತನನ್ನಾಗಿ ಮಾಡಿಕೊಂಡನು.

5. ತನ್ನ ಪ್ರಬಲವಾದ ನೌಕಾಯಾನದ ಮೂಲಕ ಅಮೀನ ದ್ವೀಪ (ಲಕ್ಷ ದೀಪ) ಮಾಲ್ಡಿವ್ಸ್‌ ದ್ವೀಪ ಮತ್ತು ಅರಬ್ಬಿ ಸಮುದ್ರದ 12,000 ದ್ವೀಪಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.

6. ಕ್ರಿ.ಶ 1000 ರಲ್ಲಿ ದಕ್ವಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ಮಾಪನ ಮಾಡಿಸಿ ಫಲವತ್ತತೆಯ ಅನುಗುಣವಾಗಿ ವಿಭಾಗಿಸಿ ಕಂದಾಯವನ್ನು ನಿಗದಿಪಡಿಸಿದನು.

7. ಕ್ರಿ.ಶ 1009 ರಲ್ಲಿ ಭಾರತ ದೇಶದ ಅತೀ ದೊಡ್ಡ ಅಥವಾ ಅತೀ ಎತ್ತರದ ಶಿಖರ ಹೊಂದಿದ ತಂಜಾವೂರಿನ ಬೃಹದೀಶ್ವರ ಅಥವಾ ರಾಜರಾಜೇಶ್ವರ ಎಂಬ ದೇವಾಲಯವನ್ನು ನಿಮಿ೯ಸಿದನು.

8. ದ್ರಾವಿಡ ಶೈಲಿಯ ಈ ತಂಜಾವೂರಿನ ದೇವಾಲಯ 1987 ರಲ್ಲಿ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿದೆ

9. ಈತನಿಗೆ ಶಿವಪಾದ ಶೇಖರ, ಚೋಳೆಂದ್ರ ಸಿಂಹ ಚೋಳ, ಮುಮ್ಮುಡಿ ಚೋಳದೇವ, ಸಿಂಹಳಾಂತಕ, ಕೇರಳಾಂತಕ ಮತ್ತು ಜಯಗೊಂಡ ಚೋಳ ಎಂಬ ಬಿರುದುಗಳಿದ್ದವು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions