Lecture 27 ಕನ್ನಡ ಮಾಧ್ಯಮ ಒಂದನೇ ರಾಜೆಂದ್ರ ಚೋಳ
ಪ್ರಶ್ನೆ 1. ಒಂದನೇ ರಾಜೆಂದ್ರ ಚೋಳ ಕ್ರಿ.ಶ 1014-1044 ಬಗ್ಗೆ ತಿಳಿಸಿ
1. ರಾಜ - ರಾಜ ಚೋಳನ ಮಗನಾಗಿದ್ದಾನೆ.
2. ಚೋಳ ಸಾಮ್ರಾಜ್ಯದ ಘನತೆ ಮತ್ತು ಗೌರವ ಹೆಚ್ಚಿಸಿದನು.
3. ಕ್ರಿ.ಶ 1018 ರಲ್ಲಿ ಶ್ರೀಲಂಕಾದ ಮೇಲೆ ದಾಳಿ ಮಾಡಿ ಅರಸ 5ನೇ ಮಹೇಂದ್ರನನ್ನು ಸೋಲಿಸಿ ಅವನ ವಶದಲ್ಲಿನ ಪಾಂಡ್ಯರಾಜನ ಕೀರಿಟ ಮತ್ತು ರಾಜ ಮುದ್ರೆಗಳನ್ನು ವಶಪಡಿಸಿಕೊಂಡನು.
4.ಶ್ರೀಲಂಕಾದಲ್ಲಿ ಶಿವ ಮತ್ತು ವಿಷ್ಣು ದೇವಾಲಯಗಳನ್ನು ನಿಮಿ೯ಸಿದನು.
5. ಉತ್ತರ ಗಂಗಾನದಿಯವರೆಗೂ ದಾಳಿಮಾಡಿ ಗಂಗಾ ತೀರದ ಅರಸ ಮಹಿಪಾಲನನ್ನು ಸೋಲಿಸಿ ಗಂಗೈಕೊಂಡ ಎಂಬ ಬಿರುದನ್ನು ಧರಿಸಿದನು.
6. ಈ ವಿಜಯದ ಸವಿನೆನಪಿಗಾಗಿ ಗಂಗೈಕೊಂಡ ಚೋಳಪುರಂ ಎಂಬ ನಗರ ಮತ್ತು ಚೋಳಗಂಗಾ ಎಂಬ ಕೆರೆಯನ್ನು ನಿಮಿ೯ಸಿ ಈ ಕೆರೆಯಲ್ಲಿ ಗಂಗಾ ನದಿಯ ನೀರನ್ನು ಬೆರೆಸಿದನು.
7.ಕ್ರಿ.ಶ. 1025 ರಲ್ಲಿ ಎನ್ನಾಯಿರಾಂ (ದಕ್ಷಿಣದ ಅಕಾ೯ಟಕ ಜಿಲ್ಲೆ ಎಂಬಲ್ಲಿ ಒಂದು ವಿದ್ಯಾ ಕೇಂದ್ರವನ್ನು ಸ್ಥಾಪಿಸಿದನು.
8. ಇದರಲ್ಲಿ 340 ಜನ ವಿದ್ಯಾಥಿ೯ಗಳು ಅಭ್ಯಾಸ ಮಾಡಿತ್ತಿದ್ದರು. ಇವರಿಗೆ ಊಟ,ವಸತಿ ಮತ್ತು ಶಿಕ್ಷಣ ಉಚಿತವಾಗಿ ನೀಡುತ್ತಿದ್ದರು.
9. ಕ್ರಿ.ಶ 1033 ರಲ್ಲಿ ತನ್ನ ಆಸ್ಥಾನದಿಂದ ಚೀನಾ ದೇಶಕ್ಕೆ ರಾಯಬಾರಿಗಳನ್ನು ಕಳುಹಿಸಿದನು.
10. ಇವನಿಗೆ ಪಂಡಿತ ಚೋಳ ಗಂಗೈಕೊಂಡ ಚೋಳ ಮತ್ತು ಕೇದಾರಕೊಂಡ ಚೋಳ ಎಂಬ ಬಿರುದಗಳಿದ್ದವು.
ಪ್ರಶ್ನೆ 2. ಒಂದನೇ ರಾಜಾಧಿರಾಜ ಚೋಳ ಕ್ರಿ.ಶ 1044- 1054 ಬಗ್ಗೆ ತಿಳಿಸಿ
ಒಂದನೇ ರಾಜಾಧಿರಾಜ ಚೋಳ ಮತ್ತು ಕಲ್ಯಾಣಿ ಚಾಲುಕ್ಯರ ದೊರೆ ಸೋಮೇಶ್ವರನ ಮಧ್ಯ
ಕ್ರಿ.ಶ 1054 ರಲ್ಲಿ ಪ್ರಸಿದ್ದವಾದ ಕೊಪ್ಪಂ ಕದನ ನಡೆಯಿತು. ಇದರಲ್ಲಿ ರಾಜಾಧಿರಾಜ ಚೋಳನ ಕೊಲೆಯಾಯಿತು.
ಪ್ರಶ್ನೆ3. ಒಂದನೇ ಕುಲೋತ್ತುಂಗ ಚೋಳ ಕ್ರಿ.ಶ 1070- 1120 ತಿಳಿಸಿ
1. ಈತನ ಕಾಲದಲ್ಲಿ ಶ್ರೀಲಂಕಾವು ಸ್ವತಂತ್ರಗೊಂಡಿತು.
2. ಇವನ ಕಾಲದಲ್ಲಿ ಹೊಯ್ಸಳ ದೊರೆ ವಿಷ್ಣು ವಧ೯ನನುಚೋಳರ ಪ್ರಾಂತಾಧಿಕಾರಿಯಾದ ಆದಿಯಮವನ್ನು ಸೋಲಿಸಿ ನೊಳಂಬವಾಡಿ, ಗಂಗಾವಾಡಿ ಮತ್ತು ಕೊಂಗನಾಡು ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
3. ಈತ ಶೈವ ಪಂಥವನಾಗಿದ್ದು ವೈಷ್ಣವಗುರು ರಾಮಾನುಜಾಚಾಯ೯ರಿಗೆ ಕಿರುಕುಳ ನೀಡಿ ತಮಿಳುನಾಡಿನಿಂದ ಓಡಿಸಿದನು.
4.ರಾಮಾನುಜಾಚಾಯ೯ರಿಗೆ ಕನಾ೯ಟಕದ ಮೇಲು ಕೋಟೆಯಲ್ಲಿ ಆಶ್ರಯ ನೀಡಿದವರು ಹೊಯ್ಸಳರ ದೊರೆ ವಿಷ್ಣುವಧ೯ನ (ಬಿಟ್ಟಿದೇವ)
5. 1ನೇ ಕುಲೋತ್ತುಂಗ ಚೋಳನಿಗೆ ತ್ರಿಭುವನ ಚಕ್ರವತಿ೯ ವಿದಭ೯, ರಾಜಭಯಂಕರ ಎಂಬ ಬಿರುದುಗಳಿದ್ದವು,
6. ಕೊನೆಯ ದೊರೆ - 3ನೇ ರಾಜೇಂದ್ರ ಚೋಳ
ಪ್ರಶ್ನೆ4. ಚೋಳರ ಆಡಳಿತ ಬಗ್ಗೆ ತಿಳಿಸಿ
1. ಅರಸ ಆಡಳಿತದ ಕೇಂದ್ರಬಿಂದು ಆಗಿದ್ದ ಅರಸನಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿತ್ತು.
2. ಮಂತ್ರಿಗಳನ್ನು ಅಮೈಚಾರಿಗಳೆಂದು ಕರೆಯುತ್ತಿದ್ದರು
3.ಆಡಳಿತದ ಅನುಕೂಲಕ್ಕಾಗಿ ರಾಜ್ಯವನ್ನು ಎಂದು ವಿಭಾಗಿಸಿದ್ದರು.
4. ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.
5. ಗ್ರಾಮಗಳಲ್ಲಿ ಗ್ರಾಮ ಸಭೆಗಳು ಅಸ್ತಿತ್ವದಲ್ಲಿದ್ದವು.
6. ಇವರ ಉತ್ತರ ಮೇರೂರ ಶಾಸನ ಗ್ರಾಮಾಡಳಿತವನ್ನು ಕುರಿತು ತಿಳಿಸುತ್ತದೆ.
7. ಚೋಳರು ನೌಕಾಯಾನದಲ್ಲಿ ಪ್ರಬಲರಾಗಿದ್ದರು.
8. ಚೋಳರ ಸೈನ್ಯವು ಅಶ್ವದಳ,ಗಜದಳ, ಕಾಲದಳ ಮತ್ತು ನೌಕಾದಳಗಳಿಂದ ಕೂಡಿತ್ತು.
ಪ್ರಶ್ನೆ 5. ಚೋಳರ ಸಾಹಿತ್ಯ ಬಗ್ಗೆ ತಿಳಿಸಿ
1. ಕಂಬನ - ಕಂಬಿನ ರಾಮಯಣ
2. ಶಿಕ್ಕಿಲಾರ್ - ಪೆರಿಯಾಪುರಾಣ
3. ಜಯಗೊಂಡ - ಕಳಿಂಗತ್ತುಪೆಪ್ಪರಣಿಗಳು
ಪ್ರಶ್ನೆ 6. ಕಲೆ ಮತ್ತು ವಾಸ್ತು ಶಿಲ್ಪ ಬಗ್ಗೆ ತಿಳಿಸಿ
ಚೋಳರು ಕೂಡಾ ದ್ರಾವಿಡ ಶೈಲಿಯ ದೇವಾಲಯಗಳನ್ನೇ ನಿಮಿ೯ಸಿದರು.
ತಂಜಾವೂರು - ಬೃಹದೀಶ್ವರ ದೇವಾಲಯ
ಚೋಳಪುರಂ - ಶಿವದೇವಾಲಯ
ಮಧುರೈ - ಮಿನಾಕ್ಷಿ ದೇವಾಲಯ
ಮತ್ತು ಚಿದಂಬರಂ ದೇವಾಲಯದ ಮೇಲಿನ 18 ಕೈಗಳುಳ್ಳ ನಟರಾಜನ ವಿಗ್ರಹ.