Lecture 29 ಕನ್ನಡ ಮಾಧ್ಯಮ ಗುಲಾಮಿ ಸಂತತಿ
ಪ್ರಶ್ನೆ 1. ಗುಲಾಮಿ ಸಂತತಿ ಕ್ರಿ.ಶ 1206- 1210 ತಿಳಿಸಿ
1.ಕುತ್ಬುದಿನ್ ಐಬಕ್ ಕ್ರಿ.ಶ 1206-1210
1. ಈತ ಗುಲಾಮಿ ಸಂತತಿ ಸ್ಥಾಪಕ
2.ಈತ ಮೂಲತ: ತುಕ೯ ಪಂಗಡಕ್ಕೆ ಸೇರಿದವನಾಗಿದ್ದನು.
3. ಮುಂದೆ ಮಹಮ್ಮದ ಘೊರಿ ಇತನನ್ನು ತನ್ನ ಗುಲಾಮನನ್ನಾಗಿ ಖರೀದಿ ಮಾಡಿದನು.
4. ಐಬಕ್ ಕ್ರಿ.ಶ. 1206 ಜೂನ್ 24 ರಂದುಅಧಿಕಾರಕ್ಕೆ ಬಂದನು.
5. ಬಡವರಿಗೆ ಲಕ್ಷ ಲಕ್ಷ ಗಟ್ಟಲೆ ಹಣವನ್ನು ದಾನವಾಗಿ ನೀಡಿ ಲಾಕ್ ಬಕ್ಷ ಎಂಬ ಬಿರುದನ್ನು ಧರಿಸಿದನು
6. ದೆಹಲಿಯಲ್ಲಿ ಭಾರತ ದೇಶದ ಮೊಟ್ಟಮೊದಲ ಮಸಿದಿಯಾದ ಕುವತು-ಉಲ್- ಇಸ್ಲಾಂ ಎಂಬ ಮಸೀದಿಯನ್ನು ಕಟ್ಟಿಸಿದನು.
7. ಖಾಜಾ - ಕುತ್ಬುದ್ದಿನ್ ಭಕ್ತಿಯಾರ ಖಾಕಿ ಎಂಬ ಸಂತನ ಸ್ಮರಣಾಥ೯ವಾಗಿ ದೆಹಲಿಯಲ್ಲಿ ಕುತುಬ್ ಮಿನಾರ ಎಂಬ ಕಟ್ಟಡಕ್ಕೆ ಅಡಿಪಾಯ ಹಾಕಿದನು.
8.. ಕ್ರಿ.ಶ 1210 ರಲ್ಲಿ ಪೋಲೋ ಅಥವಾ ಚೌಗಾನ ಎಂಬ ಆಟವಾಡುತ್ತಿದ್ದಾಗ ತನ್ನ ಕುದುರೆಯ ಮೇಲಿಂದ ಬಿದ್ದು ಮರಣ ಹೊಂದಿದನು.
ಪ್ರಶ್ನೆ 2. ಇಲ್ತಮಶ್ ಕ್ರಿ.ಶ 1211-1236 ಬಗ್ಗೆ ತಿಳಿಸಿ
1.ಮೂಲತ: ಮಧ್ಯ ಏಷ್ಯಾದ ಇಲ್ಬರಿ ಪಂಗಡಕ್ಕೆ ಸೇರಿದವನಾಗಿದ್ದನು.
2.ಇಲ್ತಮಶ್ ನನ್ನುದೆಹಲಿ ಸುಲಾನರ ನಿಜವಾದ ಸ್ಥಾಪಕನೆಂದು ಕರೆಯುತ್ತಾರೆ.
3. ಕ್ರಿ.ಶ 1216 - 1217 ಕಾಬೂಲಿನ ಮೇಲೆ ದಾಳಿ ಮಾಡಿ ತಾಜುದ್ದೀನ್ ಎಲ್ಡೊಜ್ನನ್ನು ಸೋಲಿಸಿ ಕಾಬೂಲನ್ನು ವಶಪಡಿಸಿಕೊಂಡನು
4. ಕ್ರಿ.ಶ 1221 ರಲ್ಲಿ ಮಂಗೋಲರ ದೊರೆ ಚಂಗೀಸ್ ಖಾನನು ಭಾರತದ ಸಿಂಧೂ ನದಿಯ ದಂಡೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡನು.
5 ಇಲ್ತಮಶ್ ಇತನ ದಾಳಿಯಿಂದ ತನ್ನ ಸಾಮ್ರಾಜ್ಯವನ್ನು ರಕ್ಷಿಸಿ ಕೊಂಡನು.
5.ಕ್ರಿ.ಶ 1229 ರಲ್ಲಿ ಬಾಗ್ದಾದಿನ ಖಲಿಫ ಅಲ್ - ಮಸ್ತ ಸ್ಪಿಯರ್ ಬಿಲ್ಲಾನಿಂದ ಭಾರತದ ಆಳ್ವಿಕೆಗಾಗಿ ವಂಶ ಪಾರಂಪರ್ಯ ಅಡಳಿತದ ಪ್ರಮಾಣ ಪತ್ರವನ್ನು ಪಡೆದನು.
6. ಕ್ರಿ.ಶ 1231 ಕುತುಬ್ ಮಿನಾರ್ ಎಂಬ ಕಟ್ಟಡವನ್ನು ಸಂಪೂಣ೯ವಾಗಿ ಪೂಣ೯ಗಗೊಳಿಸಿದನು.
7. ತನ್ನ ಆಡಳಿತದಲ್ಲಿ 40 ಸರದಾರರ ಅಥವಾ ನೊಬೆಲರ ಒಕ್ಕೂಟವಾದ ಚಹಲ್ಗಾನಿ ಪದ್ದತಿ ಜಾರಿಗೆ ತಂದನು.
8. ಈತನಿಗೆ ಸುಲ್ತಾನ್ - ಇ- ಅಜಂ ಎಂಬ ಬಿರುದಿತ್ತು.
9. ಭಾರತಕ್ಕೆ ಅರೆಬಿಕ್ ಮಾದರಿಯ ಟಂಕಾ ಎಂಬ ಬೆಳ್ಳಿಯ & ಜಿತಲ್ ಎಂಬ ತಾಮ್ರದ ನಾಣ್ಯಗಳನ್ನು ಪರಿಚಯಿಸಿದನು
10.ತನ್ನ ನಾಣ್ಯಗಳ ಮೇಲೆ ಸುಲ್ತಾನ ಖಲೀಫ್ನ ಪ್ರತಿನಿಧಿ ಎಂದು ಪ್ರಕಟಿಸಿದನು.
11. ಅಡಳಿತದ ಅನುಕೂಲಕ್ಕಾಗಿ ರಾಜ್ಯಗಳನ್ನು ಇಕ್ತಾಗಳನ್ನಾಗಿ ವಿಭಾಗಿಸಿ ಇಕ್ತಾದಾರ ಎಂಬ ಅಧಿಕಾರಿಗಳನ್ನು ನೇಮಿಸಿದನು.
ಪ್ರಶ್ನೆ 3. ರಜಿಯಾ ಸುಲ್ತಾನ ಕ್ರಿ.ಶ 1236- 1240 ಬಗ್ಗೆ ತಿಳಿಸಿ
1. ಇಲ್ತಮಶ್ ಮಗಳಾಗಿದ್ದಾಳೆ.
2. ಅಧಿಕಾರಕ್ಕೆ ಬಂದ ಕೂಡಲೆ ತನಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ನೇಮಿಸಿಕೊಂಡಳು
3. ಇವಳು ತನ್ನ ಅಶ್ವಪಡೆಯ ಮುಖ್ಯಸ್ಥನನ್ನಾಗಿ ಜಲಾಲುದ್ದಿನ್- ಯಾಕುತ್ ನೇಮಕ ಮಾಡಿದಳು.
4. ತನಗೆ ತೊಂದರೆ ಕೊಡುತ್ತದ್ದ. ಭಟ್ಟಿಂಡಾದ ಗವನ೯ರ ಅಲ್ತುನಿಯಾನನ್ನು ವಿವಾಹವಾದಳು
5. ದೆಹಲಿಯ ಜನತೆ ಮತ್ತು ಇವಳ ಸಹೋದರರು ಇವಳನ್ನು ಕೊಲೆ ಮಾಡಲು ಸಂಚು ರೂಪಿಸಿದಾಗ ರಜಿಯಾ ಮತ್ತು ಅಲ್ತುನಿಯಾ ದೆಹಲಿಯಿಂದ ಫಲಾಯನ ಗೈಯುತ್ತಿರುವಾಗ ಹಿಂದೂ ದರೋಡೆಕೋರರ ಗುಂಪಿಗೆ ಬಲಿಯಾದರು.
ಪ್ರಶ್ನೆ 4. ಘೀಯಾಸುದ್ದಿನ್ - ಬಲ್ಬನ್ ಕ್ರಿ.ಶ 1266-1287 ತಿಳಿಸಿ
1.ಈತ ಮೂಲತ: ತುಕ೯ಸ್ತಾನದ ಅಲ್ಬರಿ ಪಂಗಡಕ್ಕೆ ಸೇರಿದವನಾಗಿದ್ದನು.
2. ಇವನನ್ನು ದೆಹಲಿಯ ಸುಲ್ತಾನರ ಮರುಸ್ಥಾಪಕನೆಂದು ಕರೆಯುತ್ತಾರೆ.
3.ಇಲ್ತಮಶ್ ಸ್ಥಾಪಿಸಿದ 40 ಸರದಾರರ ಒಕ್ಕೂಟವಾದ ಚಹಲಗಾನಿ ಪದ್ದತಿಯನ್ನು ರದ್ದು ಪಡಿಸಿದನು.
4.. ದವಾನ್ - ಇ - ಅಜ೯ ಎಂಬ ಹೊಸ ಸೈನಿಕ ಇಲಾಖೆಯನ್ನು ಆರಂಭಿಸಿದನು.
5. ತನ್ನ ಅಡಳಿತದಲ್ಲಿ ಜಿಲ್- ಐ- ಜಿಲಾಯಿಯನ್ನು ಮಂಡಿಸಿದನು ( ಸುಲ್ತಾನ ದೇವರ ನೆರಳು ಎಂದಥ೯)
6.ಈತ ದೆಹಲಿಯ ಸುಲ್ತಾನರ ಮೊಟ್ಟಮೊದಲ ನಾಯಿಬ್ (ನಾಯಿಬ್ ಎಂದರೆ ಸುಲ್ತಾನ ಅಸಮಥ೯ನಿದ್ದಾಗ ಕಾಯ೯ ನಿವ೯ಹಿಸುವ ಮಂತ್ರಿ)
7.. ತನ್ನ ಆಡಳಿತದಲ್ಲಿ ಸಿಜ್ಡಾ ಮತ್ತು ಪೈಬೊಸ್ ಎಂಬ ಪದ್ದತಿಗಳನ್ನು ಜಾರಿಗೆ ತಂದನು.
ಸಿಜ್ಜಾ ಎಂದರೆ: ಸುಲ್ತಾನಕಂಡಕೂಡಲೇಎರಡುಮೊಳಕಾಲೂರಿನಮಸ್ಕರಿಸುವುದು.
ಪೈಬೊಸ್ ಎಂದರೆ: ಸುಲ್ತಾನನ ಪಾದಗಳಿಗೆ ಚುಂಬಿಸುವುದು ಎಂದಥ೯.
8. ನವರೋಜ್ ಎಂಬ ಉತ್ಸವವನ್ನು ಜಾರಿಗೆ ತಂದನು
9. ದೆಹಲಿಯಲ್ಲಿ ಕೆಂಪು ಅರಮನೆ ಎಂಬ ಕಟ್ಟಡವನ್ನು ಕಟ್ಟಿಸಿದನು.